ಮೂಗು ಚುಚ್ಚುವುದು ನಮ್ಮ ಸನಾತನ ಹಿಂದು ಧರ್ಮದಲ್ಲಿ ಭಾರತೀಯ ಸಂಪ್ರದಾಯಗಳಲ್ಲಿ ಒಂದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ವಿವಿಧ ರೀತಿಯ ಕಿವಿಯೋಲೆಗಳು, ಮೂಗುತಿಗಳನ್ನು ಧರಿಸಲು ಇಷ್ಟಪಡುತ್ತಾರೆ. ಮೂಗುತಿ ಆರೋಗ್ಯಕ್ಕೆ ಕೂಡ ಬಹಳಷ್ಟು ಉತ್ತಮವೆಂದು ಆಯುರ್ವೇದ ಕೃತಿಯಾದ ಸುಶ್ರುತ ಸಂಹಿತೆ ಅಲ್ಲಿ ಉಲ್ಲಕ್ಕಿಸಲಾಗಿದೆ.
ಮೂಗುತಿಯು ಮೂಗಿನ ಮೇಲೆ ಧರಿಸುವ ಆಭರಣವಾಗಿದ್ದು, ಇದು ಹೆಣ್ಣಿನ ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರ ಮೂಗಿಗಿಂತ ಅವರು ಧರಿಸುತ್ತಿದ್ದ ಮೂಗುತಿಯ ಗಾತ್ರವೇ ದೊಡ್ಡದಾಗಿರುತ್ತಿತ್ತು. ಕಾಲ ಕಳೆದಂತೆ ಮಹಿಳೆಯರು ಚಿಕ್ಕ ಮೂಗುತಿ ಹಾಕಲು ಶುರು ಮಾಡಿದ್ದರು. ಇದೀಗ ಹಳೆಯ ದೊಡ್ಡ ದೊಡ್ಡ ಮೂಗುತಿಗಳೇ ಟ್ರೆಂಡ್ ಆಗುತ್ತಿವೆ.
ನಮ್ಮ ಶಾಸ್ತ್ರ ಪುರಾಣಗಳ ಪ್ರಕಾರ ಮದುವೆಯಾದ ನಂತರ ಕುಂಕುಮ, ಬಳೆ, ಮಾಂಗಲ್ಯ, ಕಾಲುಂಗುರ ಮೂಗುತಿ ಈ ಐದು ಮುತ್ತುಗಳನ್ನ ಧರಿಸಿದವರು ಮುತೈದೆ ಎಂದು ಕರೆಯುತ್ತಾರೆ. ಸರ್ವೇಶ್ವರಿ ಜಗನ್ಮಾತೆ ಆದಿಶಕ್ತಿ ತಾಯಿ ಪಾರ್ವತಿಯು ಪರಮೇಶ್ವರನನ್ನು ಮದುವೆಯಾದಾಗ ಈ ಐದು ಮುತ್ತುಗಳನ್ನು ಧರಿಸುತ್ತಾರೆ. ಹಾಗೆ ಮದುವೆಯಾದವರು ಈ 5 ಮುತ್ತುಗಳನ್ನು ಧರಿಸುವುದರಿಂದ ಶಿವ ಪಾರ್ವತಿಯರ ಆಶೀರ್ವಾದ ಕೃಪೆ ಹಾಗೂ ವಿಶೇಷವಾಗಿ ತಾಯಿ ಸರ್ವ ಮಂಗಳಯ ಆಶೀರ್ವಾದ ಪತಿ-ಪತ್ನಿಯರ ಮೇಲೆ ಇರುತ್ತದೆ ಎನ್ನುವ ನಂಬಿಕೆ ಇದೆ ಪತಿಯ ಆಯುಷ್ಯವೃದ್ಧಿ ಆಗುತ್ತದೆ ಪತಿಗೆ ಯಾವ ಕೆಡಕು ಎಂದಿಗೂ ಆಗುವುದಿಲ್ಲ ಎನ್ನುವ ನಂಬಿಕೆ ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಇದೆ. ಕುಂಕುಮ, ಬಳೆ, ಮಾಂಗಲ್ಯ, ಕಾಲುಂಗುರ ಮೂಗುತಿ. ಇದು ಬರಿ ಅಲಂಕಾರಕ್ಕೆ ಮಾತ್ರ ಅಲ್ಲ ಧರ್ಮದ ಜಾಗೃತಿಯನ್ನು ಮೂಡಿಸುವ ಹೆಣ್ಣಿನ ಜವಾಬ್ದಾರಿಗಳನ್ನ ಎಚ್ಚರಿಸುವ ಶಕ್ತಿಯೂ ಕೂಡ ಹೌದು .
(ಬಳೆ ಹಾಗೂ ಕಾಲುಂಗುರದ ಬಗ್ಗೆ ನಾವು ಹಿಂದಿನ ಲೇಖನದಲ್ಲಿ ಹೇಳಿದ್ದೆವು, ಅದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)
ಸತ್ಯಭಾಮೆ ಸೇವಕಿಗೆ ಮೂಗುತಿ ನೀಡಿದ ಕಥೆ
ಒಮ್ಮೆ ಸತ್ಯಭಾಮೆಯು ತನ್ನ ಸೇವಕಿಯನ್ನು ಕೃಷ್ಣನ ಬಳಿಗೆ ರಾಯಭಾರಕ್ಕಾಗಿ ಕಳಿಸಲು ನಿರ್ಧರಿಸುತ್ತಾಳೆ. ಆದರೆ ಸೇವಕಿಯು ಅದನ್ನು ಮಾಡಲು ಒಪ್ಪುವುದಿಲ್ಲ. ಒಡವೆಗಳನ್ನು ನೀಡುವುದಾಗಿ ಸತ್ಯಭಾಮೆ ಆಸೆ ಆ ಸೇವಕಿಗೆ ಆಸೆ ತೋರಿಸುತ್ತಾಳೆ ಆ ಸೇವಕಿ ಒಪ್ಪುವುದಿಲ್ಲ. ಸತ್ಯಭಾಮೆ, ನೀನು ರಾಯಭಾರಿಯಾಗಿ ಹೋಗಲು ನಿನಗೆ ಏನು ಬೇಕು ಎಂದು ಕೇಳುತ್ತಾಳೆ. ಆಗ ಆ ಸೇವಕಿ ತನಗೆ ಮೂಗುತಿ ಬೇಕು ಎನ್ನುತ್ತಾಳೆ. ಸತ್ಯಭಾಮೆಯು ಅದನ್ನು ನೀಡಿದಾಗ ಸೇವಕಿಯು ಶ್ರೀ ಕೃಷ್ಣನ ಬಳಿ ರಾಯಭಾರಿಯಾಗಿ ಹೋಗುತ್ತಾಳೆ.
ಇದು ಸಂಪ್ರದಾಯವಾಗಿದ್ದರೂ ಮೂಗು ಚುಚ್ಚುವುದರಿಂದ ಕೆಲವು ಅನನುಕೂಲಗಳೂ ಇವೆ.
ಮೂಗುತಿ ಮಹಿಳೆಯರ ಶ್ವಾಸಮಾರ್ಗವನ್ನು ರಕ್ಷಿಸುತ್ತದೆ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ. ಮೂಗಿನ ಸುತ್ತಲಿನ ವಾಯುಮಂಡಲವೂ ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹ ಪ್ರವೇಶಿಸಲು ಸುಲಭವಾಗುತ್ತದೆ.
ಇದಲ್ಲದೆ, ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವುಗಳೂ ಕೂಡ ಕಡಿಮೆಯಾಗುತ್ತದೆ. ಇದೇ ಕಾರಣಕ್ಕಾಗಿಯೇ ಯುವತಿಯರು ಋತುಮತಿಯಾದ ಬಳಿಕ ಅವರಿಗೆ ಮೂಗು ಚುಚ್ಚಿಸುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಮೂಗುತಿಯನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಇದಕ್ಕೆ ಕಾರಣ, ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಗಂಗಳಿಗೆ ಸಂಬಂಧಿಸಿದ ನರವು ಮೂಗಿನ ಎಡಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ. ಇದೇ ಕಾರಣದಿಂದಾಗಿ ಮೂಗುತಿಯನ್ನು ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಜೊತೆಗೆ ಇದು ಮಹಿಳೆಯರ ಹೆರಿಗೆ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ.
ಕೆಲವರು ಹೇಳುತ್ತಾರೆ ಮೂಗುತಿ ಇದು ಮಧ್ಯಪ್ರಾಚ್ಯ ಸಂಪ್ರದಾಯ ಇದು ಅಲ್ಲಿಂದ ಭಾರತಕ್ಕೆ ಬಂತು ಎಂದು ಹೇಳುತ್ತಾರೆ. ಆದರೆ ಇದು ಶುದ್ಧ ಸುಳ್ಳು ಸನಾತನ ಧರ್ಮದ ಯಾವ ಸಂಪ್ರದಾಯವು ಯಾವ ದೇಶದಿಂದಲೂ ಬಂದಿರುವಂಥದ್ದು ಅಲ್ಲ.
ನಮ್ಮ ಭಾರತೀಯ ಪರಂಪರೆಯಲ್ಲಿ ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಯುಗಯುಗಗಳಿಂದ ಬಳೆ ಕಾಲುಂಗುರ ಮೂಗುತಿ ಮಾಂಗಲ್ಯ ಧರಿಸುತ್ತಾ ಬಂದಿದ್ದಾರೆ ಸ್ತ್ರೀಯರನ್ನ ಮುತೈದೆ ಮಹಿಳೆಯರನ್ನು ನಮ್ಮಲ್ಲಿ ದುರ್ಗೆಗೆ ಹೋಲಿಸುತ್ತಾರೆ. ಪೂಜಿಸಿ ಹಾಗೂ ಗೌರವಿಸುತ್ತಾ ಬಂದಿದ್ದಾರೆ ಯುಗಯುಗಗಳಿಂದ.
ದೇವಿಯ ಆರಾಧನೆ ಪದ್ದತಿಯ ಬಗ್ಗೆ ನಮಗೆ ಎಲ್ಲರಿಗೂ ಗೊತ್ತೇ ಇದೆ ಯುಗಯುಗಗಳಿಂದ ನಾವು ದೇವಿಯನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ ಅದರಲ್ಲಿ ನಮ್ಮ ಎಲ್ಲಾ ಹಿಂದೂ ದೇವತೆಗಳು ಮೂಗುತಿ ಮಾಂಗಲ್ಯ ಬಳೆ ಕಾಲುಂಗುರವನ್ನು ಧರಿಸುತ್ತಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖ ಇದೆ.
Comments