ಕಾಲುಂಗುರ ಧರಿಸುವುದರ ಮಹತ್ವ..?
ಸನಾತನ ಹಿಂದು ಧರ್ಮದಲ್ಲಿ ಸಂಪ್ರದಾಯದ ಪ್ರಕಾರ, ವಿವಾಹವಾದ ಸ್ತ್ರೀಯರು ಧರಿಸುವ ಒಂದೊಂದು ಆಭರಣಕ್ಕೂ ಅದರದ್ದೇ ಆದ ಮಹತ್ವವಿದೆ. ಹಾಗೇ ಈ ಆಭರಣಗಳು ಸೌಭಾಗ್ಯದ ಸಂಕೇತವೂ ಹೌದು. ವಿವಾಹವಾದ ಸ್ತ್ರೀಯರು ಧರಿಸುವ ಆಭರಣಗಳಲ್ಲಿ ಕಾಲುಂಗುರವೂ ಒಂದು. ಮಹಿಳೆಯರು ಕಾಲುಂಗುರ ಧರಿಸುವುದರಿಂದ ಹಿಂದೆ ಹತ್ತಾರು ಲಾಭಗಳಿವೆ ಎನ್ನಲಾಗುತ್ತೆ. ಕಾಲುಂಗುರ ತೊಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಮದುವೆ ಸಂದರ್ಭದಲ್ಲಿ ಸಂಪ್ರದಾಯದ ಭಾಗವಾಗಿ ಪತಿ, ಪತ್ನಿಗೆ ಕಾಲುಂಗುರ ತೊಡಿಸುತ್ತಾನೆ. ಅದು ವಿವಾಹಿತೆ ಅನ್ನೋದರ ಸಂಕೇತ ಕೂಡ ಹೌದು. ಸಾಮಾನ್ಯವಾಗಿ.
ಮಾನವ ದೇಹದಲ್ಲಿ ಪ್ರಾಣ ಅಥವಾ ಜೀವ ಶಕ್ತಿಯು ಸಮತೋಲನಗೊಂಡಾಗ, ವ್ಯಕ್ತಿಯು ಉತ್ತಮ ಆರೋಗ್ಯವನ್ನು ಅನುಭವಿಸುತ್ತಾನೆ. ಈ ಪ್ರಾಣವು ನಮ್ಮ ಕಾಲ್ಬೆರಳುಗಳವರೆಗೂ ಹರಿಯುತ್ತದೆ. ಕಾಲುಂಗುರವನ್ನು ಧರಿಸುವುದರಿಂದ ದೇಹದಲ್ಲಿ ಶಕ್ತಿಯ ಹರಿವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಪ್ರಾಣವನ್ನೂ ಕ್ರಿಯಾಶೀಲವಾಗಿರಿಸುತ್ತದೆ. ಹೀಗಾಗಿ, ಕಾಲುಂಗುರವನ್ನು ಧರಿಸುವುದರಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.
ರಾಮಾಯಣದಲ್ಲಿ ಕಾಲುಂಗುರದ ಉಲ್ಲೇಖ ಇದೆ. ರಾವಣ ಸೀತಾಮಾತೆಯನ್ನು ಅಪಹರಿಸಿದಾಗ ಸೀತೆ ರಾಮನಿಗೆ ಪತ್ತೆ ಹಚ್ಚಲು ಸುಲಭವಾಗಲೆಂದು ತನ್ನ ಕಾಲುಂಗುರವನ್ನು ಎಸೆದಿದ್ದಳಂತೆ. ಅಂದರೆ ಆ ಕಾಲದಿಂದಲೂ ಕಾಲುಂಗುರ ಬಳಕೆಯಲ್ಲಿತ್ತು ಎಂದು ಹೇಳಲಾಗುತ್ತದೆ.
ಕಾಲುಂಗುರ ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡಿರುತ್ತಾರೆ. ಇದನ್ನು ಚಿನ್ನದಿಂದಲೇ ಮಾಡಬಹುದಿತ್ತು. ಆದರೆ ಹಿಂದೂ ಸಂಪ್ರದಾಯದಲ್ಲಿ ಸೊಂಟಕ್ಕಿಂತ ಕೆಳಗೆ ಚಿನ್ನ ಧರಿಸಬಾರದೆಂಬ ನಂಬಿಕೆ ಇದೆ. ಚಿನ್ನ ಲಕ್ಷ್ಮಿ ದೇವಿಯ ಸಂಕೇತ. ಆದುದರಿಂದ ಚಿನ್ನವನ್ನು ಕಾಲಿಗೆ ಹಾಕಲು ಜನರು ಇಷ್ಟ ಪಡೋದಿಲ್ಲ.
ಕಾಲುಂಗುರಗಳು ಬೆಳ್ಳಿಯದ್ದೇ ಆಗಿರಬೇಕು ಏಕೆ?
1)ಬೆಳ್ಳಿ ಎಲ್ಲ ಲೋಹಗಳಿಗಿಂತಲೂ ಹೆಚ್ಚು ಉಷ್ಣವಾಹಕ.
2)ದೇಹದಲ್ಲಿನ ಅಧಿಕ ಉಷ್ಣತೆಯನ್ನು ಬೆಳ್ಳಿ ತಗ್ಗಿಸುತ್ತೆ.
3)ದೇಹದಲ್ಲಿ ರಕ್ತ ಪರಿಚಲನೆ ಸುಲಭವಾಗಿ ಆಗುತ್ತೆ.
4)ದೇಹದ ಆರೋಗ್ಯ ಹೆಚ್ಚಿಸಲು ಬೆಳ್ಳಿ ಸಹಾಯ ಮಾಡುತ್ತೆ.
5)ಬೆಳ್ಳಿ ಕಾಲುಂಗುರ, ಭೂಮಿಯಿಂದ ಸಿಗುವ ಧ್ರುವ ಶಕ್ತಿಯನ್ನು ದೇಹಕ್ಕೆ ನೀಡುತ್ತೆ.
ಕೆಲ ಪುರಾಣಗಳ ಪ್ರಕಾರ, ಕಾಲುಂಗುರ ಧರಿಸುವುದರಿಂದ ಸ್ತ್ರೀಯರು ಸ್ವೇಚ್ಛಾಚಾರಿಗಳಾಗದೇ ಧರ್ಮ ಪಾಲನೆ ಮಾಡ್ತಾರೆ ಎನ್ನಲಾಗುತ್ತೆ. ಕಾಲುಂಗುರಗಳಿಂದ ಸ್ತ್ರೀಯರ ದೇಹ ಶುದ್ಧಿಯಾಗಿರುತ್ತೆ.
ಕಾಲುಂಗುರಗಳು ಸುತ್ತಲಿನ ಪರಿಸರದ ಕೆಟ್ಟ ಶಕ್ತಿಗಳ ನಿರ್ಮೂಲನೆ ಮಾಡುತ್ತೆ. ಹೆಬ್ಬೆರಳಿನ ಸಮೀಪದ ಬೆರಳು ವಾಯುತತ್ವವನ್ನು ಪ್ರೆರೇಪಿಸುವುದರಿಂದ ಸ್ತ್ರೀಯರಲ್ಲಿನ ಜಾಗೃತ ಶಕ್ತಿ ಹೆಚ್ಚಾಗಿರುತ್ತೆ. ಇದರಿಂದ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳು ಸ್ತ್ರೀಯರ ಕಾಲುಗಳಿಂದ ಅವರ ಶರೀರದಲ್ಲಿ ಪ್ರವೇಶಿಸುವ ಪ್ರಮಾಣ ಕಡಿಮೆ ಆಗುತ್ತೆ ಎನ್ನುತ್ತೆ ನಮ್ಮ ವೈದ್ಯಶಾಸ್ತ್ರ.
ಕಾಲುಂಗುರದಲ್ಲಿ ಮೂರು,ಐದು,ಒಂಬತ್ತು ಸುತ್ತು ಕಾಲುಂಗುರಗಳಿವೆ. ಹಿರಿಯರು ಒಂದೋದು ಸುತ್ತಿನ ಕಾಲುಂಗುರಕ್ಕೂ ಹಿರಿಯರು ಒಂದೊಂದು ಮಹತ್ವ ಹೇಳಿದ್ದಾರೆ. ಕಾಲುಂಗುರ ಎರಡು ಸುತ್ತಿನದ್ದು ಧರಿಸಿದರೆ "ಹರಿ-ಹರ” ಅನುಗ್ರಹವಾಗುತ್ತದೆ.
ಕಾಲುಂಗುರ ಮೂರು ಸುತ್ತಿನದನ್ನು ಧರಿಸಿದರೆ "ತ್ರಿಶಕ್ತಿ" ಹಾಗು ತ್ರಿ ಮೂರ್ತಿಗಳ ಅನುಗ್ರಹವಾಗುತ್ತದೆ.
ಕಾಲುಂಗುರ ಐದು ಸುತ್ತಿನದ್ದು ಧರಿಸಿದರೆ ಪಂಚಮಮ್ " ಕಾರ್ಯ ಸಿದ್ಧಿ” ಅಂದರೆ ಎಲ್ಲಾ ಕಾರ್ಯಗಳು ಜಯವಾಗುತ್ತವೆ.
ಕಾಲುಂಗುರ ಏಳು ಸುತ್ತಿನದ್ದು ಧರಿಸಿದರೆ ಸಪ್ತಪದಿಯ ನೆನಪಿನೊಂದಿಗೆ ದಾಂಪತ್ಯ ಜೀವನದಲ್ಲಿ ಸುಖ- ಸಂತಸ, ನೆಮ್ಮದಿ ಉಂಟಾಗುತ್ತದೆ.
ಕಾಲುಂಗುರ ಎಂಟು ಸುತ್ತಿನದು ಧರಿಸಿದರೆ ಅಷ್ಟಲಕ್ಷಮಿ ಯ ಪರಿಪೂರ್ಣ ಅನುಗ್ರಹವಾಗುತ್ತದೆ.
ಕಾಲುಂಗುರ ಒಂಬತ್ತು ಸುತ್ತಿನದ್ದು ಧರಿಸಿದರೆ ದಾಂಪತ್ಯ ಜೀವನದಲ್ಲಿ ಆನಂದ ಯಶಸ್ಸು ತುಂಬಿ ಉತ್ತಮ ಸಂತತಿ ಭಾಗ್ಯವುಂಟಾಗುತ್ತದೆ.
ಕಾಲುಂಗುರ ಹತ್ತು ಸುತ್ತಿನದ್ದು ಧರಿಸಿದರೆ ಶ್ರೀ ಹರಿಯ ದಶಾವತಾರದ ಅನುಗ್ರಹದೊಂದಿಗೆ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ.
Comments