ದೇವಸ್ಥಾನದಲ್ಲಿ ಪ್ರದಕ್ಷಣೆ ಯಾಕೆ ಹಾಕಬೇಕು ಅದರ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಮಹತ್ವವೇನು.?

ದೇವಸ್ಥಾನದಲ್ಲಿ ಪ್ರದಕ್ಷಣೆ ಯಾಕೆ ಹಾಕಬೇಕು ಅದರ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಮಹತ್ವವೇನು.?
ಪರಿಕ್ರಮ ಅಥವಾ ಪ್ರದಕ್ಷಿಣೆಯು ಮುಖ್ಯ ಎಂದು ಹೇಳಲಾಗುತ್ತದೆ. ನೀವು ದೇವಾಲಯವನ್ನು ಪ್ರವೇಶಿಸಿದ ತಕ್ಷಣ, ನೀವು ಗಂಟೆ ಬಾರಿಸುವ ಮೂಲಕ ಭಗವಂತನನ್ನು ಸ್ತುತಿಸುತ್ತೀರಿ. ಅದರ ನಂತರ, ಭಗವಂತನ ಮುಂದೆ ನಮಸ್ಕರಿಸಿದ ನಂತರ, ಅವನನ್ನು ಯಥಾವತ್ತಾಗಿ ಪೂಜಿಸುತ್ತೀರಿ. ಇದಾದ ನಂತರ ಭಗವಂತ ಅಥವಾ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಲು ಮುಂದಾಗುತ್ತೀರಿ. ಪ್ರದಕ್ಷಿಣೆ ಅಥವಾ ಪರಿಕ್ರಮದ ಉಲ್ಲೇಖವು ಸನಾತನ ಧರ್ಮದ ಪ್ರಮುಖ ವೈದಿಕ ಪಠ್ಯವಾದ ಋಗ್ವೇದದಲ್ಲಿ ಕಂಡುಬರುತ್ತದೆ. ಪರಿಕ್ರಮವನ್ನು ಆರಾಧನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಭಗವಂತನಿಗೆ ಪ್ರದಕ್ಷಿಣೆ ಹಾಕುವುದರಿಂದ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆಯಿದೆ. ಹೆಚ್ಚಾಗಿ ಒಂದು ಬಾರಿ ಅಥವಾ ಮೂರು ಬಾರಿ, ಜನರು ಪ್ರದಕ್ಷಿಣೆಯನ್ನು ಹಾಕುವ ಮೂಲಕ ಪೂಜೆಯನ್ನು ಪೂರ್ಣಗೊಳಿಸುತ್ತಾರೆ ಎಂದು ಪರಿಗಣಿಸುತ್ತಾರೆ. ದೇವರಿಗೆ ಅಥವಾ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಲು ಕೆಲವು ನಿಯಮಗಳು ಮತ್ತು ವಿಧಾನಗಳಿವೆ. ಅಲ್ಲದೆ, ಪ್ರದಕ್ಷಿಣೆಯನ್ನು ಯಾವ ದಿಕ್ಕಿನಿಂದ ಪ್ರಾರಂಭಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಪ್ರದಕ್ಷಿಣೆಯ ದಿಕ್ಕು ದೇವರ ಅನುಗ್ರಹದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಪ್ರದಕ್ಷಿಣೆಯ ನಿಯಮಗಳಾವುವು ನೋಡೋಣ.

ಪುರಾಣಗಳ ಪ್ರಕಾರ ದೇವರಿಗೆ ಹಾಕುವ ಪ್ರದಕ್ಷಿಣೆ ಬಗ್ಗೆ ಹಲವಾರು ಕಥೆಗಳಿವೆ. ಇವುಗಳಲ್ಲಿ ಶಿವ, ಗಣಪತಿ ಮತ್ತು ಕಾರ್ತೀಕೇಯನ ಕಥೆಹೆಚ್ಚು ಪ್ರಸಿದ್ಧಿಯಾಗಿದೆ. ಶಿವ ಒಮ್ಮೆ ತನ್ನ ಇಬ್ಬರು ಪುತ್ರರಾದ ಗಣಪತಿ ಮತ್ತು ಕಾರ್ತಿಕೇಯನನ್ನು ಕರೆದು ವಿಶ್ವಕ್ಕೆ ಪ್ರದಕ್ಷಿಣೆ ಬರುವಂತೆ ತಿಳಿಸುತ್ತಾನೆ. ಆಗ ಕಾರ್ತಿಕೇಯನು ತನ್ನ ವಾಹನ ನವಿಲನ್ನು ಏರಿಕೊಂಡು ವಿಶ್ವ ಪರ್ಯಟನೆಗೆ ಮುಂದಾಗುತ್ತಾನೆ. ಆದರೆ ಗಣಪತಿಯು ಅಲ್ಲೇ ಶಿವನಿಗೆ ಸುತ್ತು ಬರುತ್ತಾನೆ. ಇದು ಮೋಸವಲ್ಲವೇ ಎಂದು ಶಿವ ಕೇಳಿದಾಗ, ನಿಮ್ಮೊಳಗೆ ವಿಶ್ವವೇ ಇದೆ. ಹಾಗಾಗಿ ನಾನು ಹೀಗೆ ಮಾಡಿದೆ ಎನ್ನುತ್ತಾನೆ. ಇದುಪ್ರದಕ್ಷಿಣೆಯ ಬಗ್ಗೆ ಪುರಾಣ ಹೇಳುವಂತಹದ್ದು.

ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕೋದಕ್ಕೆ ವೈಜ್ಞಾನಿಕ ಕಾರಣ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ದೇವಸ್ಥಾನದ ಗೋಪುರದ ಮೇಲೆ ಕುಂಭ ಕಳಸ ಇರುತ್ತದೆ ಅದು ತಾಮ್ರದಿಂದ ಮಾಡಲ್ಪಡುತ್ತದೆ.
ತಾಮ್ರಕ್ಕೆ ವಿಶೇಷವಾದಂತಹ ಒಂದು ಶಕ್ತಿ ಇದೆ. ಉದಾಹರಣೆ ಈಗ ನಾವು ಉಪಯೋಗಿಸುವ ಮೊಬೈಲ್ sim card ಸ್ಯಾಟಲೈಟ್ ಇದೆಲ್ಲದರಲ್ಲೂ ಕೂಡ ಅತಿ ಹೆಚ್ಚು ತಾಮ್ರವನ್ನು ಬಳಸುತ್ತಾರೆ. ದೇವಸ್ಥಾನದ ಮೇಲೆ ಇರುವ ಕುಂಭ ಕಳಸ ಆಕಾಶದಿಂದ ಬರುವಂತಹ ದೈವಿಕ ಚೈತನ್ಯಗಳನ್ನ ತನ್ನತ್ತ ಎಳೆದುಕೊಂಡು ಗರ್ಭಗುಡಿಯ ಸುತ್ತಲೂ ಆಸಕ್ತಿ ಇರುತ್ತದೆ ಆಗ ನಾವು ಪ್ರದಕ್ಷಣೆ ಹಾಕುವುದರಿಂದ ಆಕಾಶದಿಂದ ಬಂದಂತಹ ದೈವಿಕ ಚೈತನ್ಯ ನಮಗೂ ಕೂಡ ಲಾಭವಾಗುತ್ತದೆ.




ಪ್ರದಕ್ಷಣೆ ಆಧ್ಯಾತ್ಮಿಕ ಮಹತ್ವ


ಆದಿ ಪ್ರದಕ್ಷಿಣೆ- ಅತೀ ಹೆಚ್ಚು ಸಣ್ಣ ಹೆಜ್ಜೆಗಳನ್ನು ಇಟ್ಟುಕೊಂಡು ಬರುವ ಪ್ರದಕ್ಷಿಣೆ, ಆದಿ ಪ್ರದಕ್ಷಿಣೆ. ಈ ಸಂದರ್ಭದಲ್ಲಿ ಕಾಲಿನ ಮುಂಭಾಗವೂ ಮತ್ತೊಂದು ಕಾಲಿನ ಹಿಂಭಾಗಕ್ಕೆ ತಾಗುತ್ತಿರಬೇಕು.


ಅಂಗ ಪ್ರದಕ್ಷಿಣೆ- ದೇವಸ್ಥಾನದ ಕೆರೆ ಅಥವಾ ಕೊಳದಲ್ಲಿ ಸ್ನಾನ ಮಾಡಿದ ಬಳಿಕ ಒದ್ದೆ ಬಟ್ಟೆಯಲ್ಲಿ ಮಂತ್ರ ಪಠಿಸುತ್ತಾ ದೇವರಿಗೆ ಪ್ರದಕ್ಷಿಣೆ ಹಾಕುವುದನ್ನು ಅಂಗ ಪ್ರದಕ್ಷಿಣೆ ಎನ್ನುತ್ತೇವೆ.

ಮೊಣಕಾಲಿನ ಪ್ರದಕ್ಷಿಣೆ- ಮೊಣಕಾಲಿನಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದು. ಇದರ ಹೊರತಾಗಿ ಅಶ್ವತ್ಥ ಮರ ಮತ್ತು ತುಳಸಿ ಗಿಡಕ್ಕೆ ಪ್ರದಕ್ಷಿಣೆ ಹಾಕುವುದು ತುಂಬಾ ಪವಿತ್ರವೆಂದು ನಂಬಲಾಗಿದೆ.

ದೇವಸ್ಥಾನಗಳ ಸುತ್ತ ಧನಾತ್ಮಕ ಹಾಗೂ ಆಯಸ್ಕಾಂತೀಯ ಶಕ್ತಿ ಇರುತ್ತೆ. ನಾವು ಭಗವಂತನಿಗೆ ಪ್ರದಕ್ಷಿಣೆ ಹಾಕೋದ್ರಿಂದ ನಮ್ಮ ಮೇಲೆ ಧನಾತ್ಮಕ ಶಕ್ತಿ ಪ್ರವಹಿಸಿ ಋಣಾತ್ಮಕ ಶಕ್ತಿ ದೂರವಾಗುತ್ತೆ ಅಂತಾ ಪುರಾಣಗಳು ಹೇಳುತ್ತವೆ. ಭಗವಂತನಿಗೆ ಪ್ರದಕ್ಷಿಣೆ ಹಾಕೋದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅದೇನಂದ್ರೆ, ನಮ್ಮ ಮನಸ್ಸಿನ ಮೇಲೆ ಹಿಡಿತ ಬರಲಿದೆ. ಮನಸ್ಸಿನ ನೆಮ್ಮದಿ ಹೆಚ್ಚಾಗುತ್ತೆ ಹಾಗೂ ಆರೋಗ್ಯ ಸುಧಾರಿಸುತ್ತೆ ಅಂತಾ ಹೇಳಲಾಗುತ್ತೆ.

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ?
ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ.
ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ.

ಪ್ರದಕ್ಷಿಣೆಯ ಮಾರ್ಗವು ಅಲ್ಲಿಂದ ಆರಂಭವಾಗುತ್ತದೆ. ಪ್ರದಕ್ಷಿಣೆ ಹಾಕುವಾಗ ಹರಿನಾಳದಿಂದ ಆರಂಭಿಸಿ ತಮ್ಮ ಎಡಬದಿಯಿಂದ ಹರಿನಾಳದ ಇನ್ನೊಂದು ಬದಿಯವರೆಗೆ ಹೋಗಬೇಕು.

ನಂತರ ಹರಿನಾಳವನ್ನು ದಾಟದೇ ಹಿಂತಿರುಗಿ ಪುನಃ ಹರಿನಾಳದ ಮೊದಲ ಬದಿಯವರೆಗೆ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು.


ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರು ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆ ಅರ್ಥ.
ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಬಾರಿ ಮಾಡಿದರೆ ಏನು ಫಲ ಎಂಬುದನ್ನು ತಿಳಿಯೋಣ.

ದೇವಸ್ಥಾನದಲ್ಲಿ 5 ಬಾರಿ ಪ್ರದಕ್ಷಿಣೆ ಮಾಡಿದರೆ ಜಯ ಸಿಗುತ್ತದೆ.

7ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಶತ್ರುಗಳನ್ನು ಪರಜಯ ಮಾಡಬಹುದು.

9 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನಪ್ರಾಪ್ತಿಯಾಗುತ್ತದೆ.

  ನಾಗದೇವತೆಯ ಪೂಜೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?
11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ದಿಯಾಗುತ್ತದೆ.

ದೇವಸ್ಥಾನಕ್ಕೆ 13 ಬಾರಿ ಪ್ರದಕ್ಷಿಣೆ ಹಾಕಿದರೆ ಪ್ರಾರ್ಥನೆ ಸಿದ್ದಿಯಾಗುತ್ತದೆ.

15 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿಯಾಗುತ್ತದೆ.

17 ಬಾರಿ ಪ್ರದಕ್ಷಿಣೆ ಮಾಡಿದರೆ ಧನ ವೃದ್ದಿಯಾಗುತ್ತದೆ.

19 ಬಾರಿ ಪ್ರದಕ್ಷಿಸಿದರೆ ರೋಗ ನಿವಾರಣೆಯಾಗುತ್ತದೆ.

ದೇವಸ್ಥಾನಕ್ಕೆ ಬೆಳಗಿನ ಜಾವ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆಯಾಗುತ್ತದೆ.

ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ.

ಸಂಜೆ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರವಾಗುತ್ತದೆ.

ರಾತ್ರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಸಿದ್ದಿಯಾಗುತ್ತದೆ.


Comments