ಭಜನೆಯ ಮಹತ್ವ ಹಾಗೂ ಪ್ರಯೋಜನಗಳು

ಭಜನೆ ಮಹತ್ವ  ಭಜನೆಗಳನ್ನ ನಾವು ನಿತ್ಯ ಯಾಕೆ ಮಾಡಬೇಕು ಹಾಗೂ ಮಾಡುವುದರಿಂದ ಇದರ ಪ್ರಯೋಜನಗಳೇನು.?

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಭಜನೆಗೆ ತುಂಬಾ ಮಹತ್ವವಿದೆ ನಮ್ಮ ಪೂರ್ವಜರು ಅನಾದಿ ಕಾಲದಿಂದಲೂ ಭಜನೆ ಹಾಗೂ ದೇವರ ನಾಮ ಸಂಕೀರ್ತನೆಯನ್ನು ಮಾಡುತ್ತಾ ಬಂದಿದ್ದಾರೆ ಇವತ್ತು ನಾವು ಭಜನೆಯ ಮಹತ್ವಗಳ ಬಗ್ಗೆ ತಿಳಿದುಕೊಳ್ಳೋಣ ಈ ಲೇಖನದಲ್ಲಿ

ಮಹಾಭಾರತದ ವನಪರ್ವ ಅಧ್ಯಾಯ 188,ರಲ್ಲಿ ನಾಲ್ಕು ಯುಗಗಳ ಬಗ್ಗೆ ಹಾಗೂ ಕಲಿಯುಗದ ಬಗ್ಗೆ ಸ್ಪಷ್ಟವಾದ ಉಲ್ಲೇಖವನ್ನು ಕೊಟ್ಟಿದ್ದಾರೆ ಕಲಿಯುಗದಲ್ಲಿ ಮಾನವರು ಯಾಗ ಯಜ್ಞಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಅಷ್ಟರಮಟ್ಟಿಗೆ ಅಧರ್ಮ ಹಾಗೂ ಸ್ವಾರ್ಥಿಗಳು ಇರುತ್ತಾರೆ ಅದಕ್ಕಾಗಿ ಭಗವಂತನನ್ನು  ಒಲಿಸಿಕೊಳ್ಳಲು ಇರುವ ಒಂದೇ ಮಾರ್ಗ ಅದು ಭಕ್ತಿ ಮಾರ್ಗ ಎಂದು ಹೇಳುತ್ತಾರೆ ಭಗವಂತನ ನಾಮ ಸಂಕೀರ್ತನೆ ಮಾಡುವುದೇ ಭಕ್ತಿ ಮಾರ್ಗದ ಭಾಗ ಅದರಲ್ಲಿ ಭಜನೆ ಕೂಡ ಒಂದು.

ವಿಷ್ಣು ಪುರಾಣದಲ್ಲಿ : ಕೃತಯುಗದಲ್ಲಿ ವಿಷ್ಣುವನ್ನು ಧ್ಯಾನಿಸುತ್ತಲೂ, ತ್ರೇತಾಯುಗದಲ್ಲಿ ಯಜ್ಞಗಳಿಂದ ಆರಾಧಿಸುತ್ತಲೂ  ದ್ವಾಪರಯುಗದಲ್ಲಿ ಅರ್ಚಿಸಿ ಪೂಜಿಸುತ್ತಲೂ, ಒಬ್ಬನು ಯಾವ ಫಲವನ್ನು ಮೋಕ್ಷಪರ್ಯಂತ ಹೊಂದಬಹುದೋ ಹೊಂದುವನೋ ಅದೆಲ್ಲವನ್ನು ಕಲಿಯುಗದಲ್ಲಿ ಕೇಶವನನ್ನು ಸಂಕೀರ್ತನೆ ಮಾಡಿದ ಮಾತ್ರದಿಂದಲೇ ಹೊಂದುವನು”. - ”ಹರಿನಾಮ ಸಂಕೀರ್ತನೆಯೇ ಸಾಕು ಎಲ್ಲರ ಪಾಪಸಂಚಯವನ್ನು ಉಪಶಮನಗೊಳಿಸಲು,ಈ ಕಲಿಯುಗದಲಿ ಇದು ಬಿಟ್ಟರೆ ಬೇರೆ ಗತಿಯೇ ಇಲ್ಲ.

ದೇವರ ಸ್ಮರಣೆ ಹಾಗೂ ಸಂಕೀರ್ತನೆ ಅಥವಾ ಭಜನೆ ಇಲ್ಲದೇ ಏನನ್ನೂ ಸಾಧಿಸಲು ಅಸಾಧ್ಯ ಎನ್ನುತ್ತಾರೆ ಮಹಾತ್ಮರು.

ದೇವರನ್ನು ಒಲಿಸಿಕೊಳ್ಳಲು ಜ್ಞಾನಮಾರ್ಗ, ಕರ್ಮಮಾರ್ಗ ಹಾಗೂ ಯೋಗವಾರ್ಗಕ್ಕಿಂತ ಭಕ್ತಿಮಾರ್ಗವೇ ಅತ್ಯುತ್ತಮ ಎನ್ನುವುದು ಜ್ಞಾನಿಗಳಾದ ಪುರಂದರದಾಸ, ಕನಕದಾಸ, ರಾಮಕೃಷ್ಣ ಪರಮಹಂಸ ಸೇರಿದಂತೆ ಹಲವರು ಕಂಡುಕೊಂಡ ಮಾರ್ಗವಾಗಿದೆ.

ನಮ್ಮ ಋಗ್ವೇದದಲ್ಲಿ ಭಕ್ತಿಯ ಮಾರ್ಗ ಹೇಳಿದೆ. ಉಪನಿಷತ್‌ನಲ್ಲಿ ಜ್ಞಾನಮಾರ್ಗ ಹಾಗೂ ತಿಳಿವಳಿಕೆಯ ಮಹತ್ವ ಪಡೆದರೂ ಅನೇಕ ಕಡೆ ಸಾತ್ವಿಕ ಭಕ್ತಿಯ ಉಲ್ಲೇಖವನ್ನೂ ನಾವು ಕಾಣಬಹುದು. ಅಲ್ಲದೆ ನಾರದ ಭಕ್ತಿ ಸೂತ್ರ, ನಾರದ ಭಕ್ತಿ ರಸಾಯನ ಹಾಗೂ ಭಕ್ತಿ ರಸಾಮೃತ ಕೃತಿಗಳಲ್ಲಿ ಭಕ್ತಿಯೇ ಸಂಕೀರ್ತನೆಗೆ ಪ್ರಾಮುಖ್ಯತೆ ಕೊಟ್ಟಿದೆ.

ಭಜನೆ ಮಾಡುವುದರಿಂದ ಭಗವತ್ ಸಾಕ್ಷಾತ್ಕಾರ ಆಗುವುದರ ಜೊತೆಗೆ  ಭಗವಂತ ನಾಮಸ್ಮರಣೆ ನಿರಂತರ ಮಾಡಿದ ಪಲವು ಹಾಗೂ ಭಗವಂತನ ವರವು ಸಿಗುವುದು ಈ ಸ್ವಾರ್ಥದ ಯುಗದಲ್ಲಿ ಭಗವಂತನನ್ನು ನೆನೆಯುವ ಶಕ್ತಿ ಭಗವಂತ ನಮಗೆ ನೀಡಿದ್ದನೆಂದರೆ ಅದಕ್ಕಿಂತ ಪುಣ್ಯ ಬೇರೆ ಯಾವುದೂ ಇಲ್ಲ 

ಸ್ಮರಣೆ ಮಾತ್ರದಲ್ಲಿ ಒಲಿದು ಬರುವನು ಭಗವಂತ ಎಂದು ದಾಸರು ಹೇಳುತ್ತಾರೆ ಭಗವಂತನ ಸ್ಮರಣೆ ಮಾಡಿದವರಿಗೆ ಎಂದು ಕಷ್ಟವನ್ನು ನೀಡಲಾರ ಭಗವಂತ.

ಇನ್ನು ದೇವಸ್ಥಾನಗಳಲ್ಲಿ ಹಾಗೂ ಭಜನಾ ಮಂದಿರಗಳಲ್ಲಿಸಾಮೂಹಿಕ ಭಜನೆ ಹಾಗೂ ದೇವರ  ನಾಮ ಸಂಕೀರ್ತನೆ ಮಾಡುವುದರಿಂದ ಅನೇಕ ಲಾಭಗಳು ಸಿಗುತ್ತದೆ. ಸಾಮೂಹಿಕ ಭಜನೆ ಹಾಗೂ ದೇವರ ನಾಮ ಸಂಕೀರ್ತನೆ ಮಾಡುವುದರಿಂದ ಆ ಗ್ರಾಮ ಮತ್ತು ಆ ಊರ ಸುತ್ತಲೂ ವಾತಾವರಣ ಶುದ್ಧವಾಗುತ್ತದೆ  ನಕರಾತ್ಮಕ ಶಕ್ತಿಗಳ. ಸಮಸ್ಯೆ ದೂರವಾಗುತ್ತದೆ. ಹಾಗೂ ದೇವಸ್ಥಾನದಲ್ಲಿ ಭಜನಾ ಮಂದಿರಗಳಲ್ಲಿ ದೈವಿಕ ಚೈತನ್ಯ ಜಾಗೃತವಾಗಿ ಸಾಕ್ಷಾತ್ ಭಗವಂತ ಅಲ್ಲಿ ನೆಲೆಸುತ್ತಾನೆ ಎಂದು ಹೇಳುತ್ತಾರೆ.

ಭಜನೆಗಳಲ್ಲಿ ಬೇರೆ ಬೇರೆ ವಿಧದ ಭಜನೆಗಳು ಕೂಡ ಇದೆ.

ಕುಣಿತ ಭಜನೆ ಕುಣಿತ ಭಜನೆ ಮಾಡುವುದರ ಪ್ರಯೋಜನಗಳು


ಕುಣಿತ ಭಜನೆ ಮಾಡುವುದರಿಂದ ದೇಹದ ಆಲಸ್ಯ ಹಾಗೂ ಜಡತ್ವ ದೂರವಾಗುತ್ತದೆ  ಹಾಗೂ ಈಗಿನ ಕಾಲದಲ್ಲಿ ಹೆಚ್ಚಾಗಿ ಜನರನ್ನು ಕಾಡುವ ಸಮಸ್ಯೆ ಬಿಪಿ ಶುಗರ್ ಕುಣಿತ ಭಜನೆ ಮಾಡುವುದರಿಂದ ಬಿಪಿ ಶುಗರ್  ನಿಯಂತ್ರಣಕ್ಕೆ ಬರುತ್ತದೆ.

ಹಾಗೆ ಈಗಿನ ಕಾಲದಲ್ಲಿ ಎಲ್ಲಾ  ವಯಸ್ಕರನ್ನು ಕಾಡುವ ಒಂದು ಸಮಸ್ಯೆ ಅಂದರೆ ಖನ್ನತೆ ಸಮಸ್ಯೆ  ಕುಣಿತ ಭಜನೆ ಮಾಡುವುದರಿಂದ ಈ ಸಮಸ್ಯೆ ದೂರವಾಗುತ್ತದೆ. ತಾಳವನ್ನು ತಟ್ಟುತ್ತಾ ಹೆಜ್ಜೆಗಳನ್ನ ಇಡುತ್ತಾ ಭಗವಂತನ ನಾಮ ಸಂಕೀರ್ತನೆ ಮಾಡುವಾಗ ನರ ನಾಡಿಗಳು ಜಾಗೃತವಾಗಿ ಚುರುಕಾಗುತ್ತದೆ.


ಕುಳಿತು ಭಜನೆ ಮಾಡುವುದರ ಪ್ರಯೋಜನಗಳು.


ಕುಳಿತು ಭಜನೆ ಮಾಡುವುದರಿಂದ ಮಕ್ಕಳಲ್ಲಿ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ ಮಕ್ಕಳಲ್ಲಿ.  ಹಾಗೂ ಸುಖಸನದಲ್ಲಿ ಕುಳಿತುಕೊಳ್ಳುವುದರಿಂದ ಯೋಗಭ್ಯಾಸ ಹಾಗೂ ಅದರ ಜೊತೆಗೆ ವಾಯು ಚಂಡಿನಂತಹ ಸಮಸ್ಯೆಗಳು ದೂರವಾಗುತ್ತದೆ. ತಾಳಗಳ ಸದ್ದಿಗೆ ಮನಸ್ಸು ಜಾಗೃತವಾಗುತ್ತದೆ ಒಂದು ರೀತಿ ಮಾನಸ ಪೂಜೆ ಮಾಡಿದ ಹಾಗೆ ಆಗುತ್ತದೆ.

ಮನೆಯಲ್ಲಿ ಭಜನೆ ಮಾಡುವುದರ ಪ್ರಯೋಜನಗಳು

ಮನೆಯಲ್ಲಿ ನಿತ್ಯ ಸೂರ್ಯಸ್ತದ ನಂತರ ಭಜನೆ ಮಾಡುವುದರಿಂದ   ಮನೆಯ ವಾತಾವರಣ ಶುದ್ಧವಾಗುತ್ತದೆ ಹಾಗೂ ದೈವಿಕ ಶಕ್ತಿ ಜಾಗ್ರತವಾಗುತ್ತದೆ ಹಾಗೂ ನಕರಾತ್ಮಕ ಶಕ್ತಿಗಳ ಉಪಟಳ ದೂರವಾಗುತ್ತದೆ. ತಾಳದ ಸದ್ದಿಗೆ ಮನೆಯಲ್ಲಿ ಒಂದು ರೀತಿ ಶಾಂತಿ ನೆಲೆಸುತ್ತದೆ.


ಭಜನೆ ಮಾಡುವಾಗ ಚಪ್ಪಾಳೆ ತಟ್ಟುವುದರ ಪ್ರಯೋಜನಗಳು. 


ಭಜನೆ ಮಾಡುವಾಗ ಚಪ್ಪಾಳೆ ತಟ್ಟುವ ಆಧ್ಯಾತ್ಮ ಮಹತ್ವ ಏನೆಂದರೆ ಎರಡು ಕೈಗಳನ್ನು ಸೇರಿಸಿ ಚಪ್ಪಾಳೆ ತಟ್ಟುವುದರಿಂದ ಮನಸ್ಸು ಜಾಗೃತವಾಗಿ ಏಕ ಮನಸ್ಸಿನ ಸ್ಥಿತಿಯಲ್ಲಿ ಭಗವಂತನನ್ನ ನಾವು ಆರಾಧಿಸುತ್ತೇವೆ ಎಂದು ಹೇಳುತ್ತಾರೆ.

ಹಾಗೂ ವೈಜ್ಞಾನಿಕ ಕಾರಣಗಳು

ಚಪ್ಪಾಳೆ ವಿಶ್ವದ ಅತ್ಯುತ್ತಮ ಮತ್ತು ಸರಳವಾದ ಸಹಯೋಗ ಯೋಗವಾಗಿದೆ. ಮತ್ತು ಚಪ್ಪಾಳೆ ನಿಯಮಿತವಾಗಿ ತಟ್ಟುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. 

ಆಕ್ಯುಪ್ರೆಷರ್‌ ಸಿದ್ಧಾಂತದ ಪ್ರಕಾರ, ಮನುಷ್ಯನ ಕೈಯಲ್ಲಿ ಆತನ ಸಂಪೂರ್ಣ ಅಂಗದ ಭಾಗಗಳು ಮತ್ತು ಪ್ರತ್ಯಂಗದ ಒತ್ತಡದ ಬಿಂದುಗಳು ಇರುತ್ತದೆ. ಅದರ ಮುಖಾಂತರ ರಕ್ತ ಮತ್ತು ಆಮ್ಲಜನಕವು ಮನುಷ್ಯನ ದೇಹದ ಆಯಾ ಭಾಗವನ್ನು ತಲುಪುತ್ತದೆ. ಹಾಗೂ ದೇಹದಲ್ಲಿನ ರೋಗವು ದೂರಾಗುತ್ತದೆ. 

ಪ್ರತಿದಿನ 2 ನಿಮಿಷಗಳ ಕಾಲ ಚಪ್ಪಾಳೆಯನ್ನು ನಿಯಮಿತವಾಗಿ ತಟ್ಟುವುದರಿಂದ ಅನೇಕ ಪ್ರಯೋಜನಗಳು ಇವೆ ಅದಕ್ಕಾಗಿ ಹಿರಿಯವರು ಭಜನೆ ಮಾಡುವಾಗ ದೇವರ ಕೀರ್ತನೆ ಮಾಡುವಾಗ ಚಪ್ಪಾಳೆಯನ್ನು ತಟ್ಟುವುದು.

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಗೂ ಒಂದೊಂದು ಮಹತ್ವ ಇದ್ದೇ ಇರುತ್ತದೆ

ನೋಡಿ ಭಜನೆಯಲ್ಲಿ ಎಷ್ಟೊಂದು ಮಹತ್ವಗಳು ಇದೆ ಭಜನೆ ಮಾಡುವುದರಿಂದ ಎಷ್ಟು ಪ್ರಯೋಜನಗಳು ಇದೆ ಎಂದು.

ನಮ್ಮ ಪೂರ್ವಜರು ಹೇಳಿದ ಮಾರ್ಗದಲ್ಲಿ ಹೋದರೆ ಸಂತೋಷ ಆನಂದ ನೆಮ್ಮದಿ ಎಲ್ಲವೂ ಕೂಡ ನಮಗೆ ಸಿಗುತ್ತದೆ.

ದಿನನಿತ್ಯ ಮನೆಯಲ್ಲಿ ನಾವು ಭಜನೆ ಮಾಡಲು ಪ್ರಯತ್ನಿಸೋಣ ಹಾಗೂ ಮಕ್ಕಳ ಕೈಯಲ್ಲಿ ಭಜನೆಯನ್ನು ಮಾಡಿಸೋಣ.

Comments