ಸನಾತನ ಹಿಂದೂ ಧರ್ಮದಲ್ಲಿ ಮಹಿಳೆಯರು ಕೈಗೆ ಬಳೆ, ಕಾಲಿಗೆ ಗೆಜ್ಜೆ, ಕಾಲ್ಬೆರಳಿಗೆ ಉಂಗುರ, ಕಿವಿಗೆ ಓಲೆ, ಮೂಗಿಗೆ ನತ್ತು ಇವುಗಳನ್ನೆಲ್ಲ ಧರಿಸಬೇಕು ಎಂಬುದು ಕೇವಲ ಅಲಂಕಾರಕ್ಕೆ ಅಲ್ಲ. ಅಥವಾ ಇವು ಬರೀ ಸಂಪ್ರದಾಯ ಅಥವಾ ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳೂ ಅಲ್ಲ. ಇವುಗಳ ಹಿಂದೆ ಪ್ರತಿಯೊಂದಕ್ಕೂ ಶರೀರಶಾಸ್ತ್ರ, ಆರೋಗ್ಯ ಹಾಗೂ ವೈಜ್ಞಾನಿಕ ಕಾರಣಗಳು ಕೂಡ ಇದೆ.
ಸನಾತನ ಹಿಂದೂ ಧರ್ಮದ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳಿಗೆ ಬಳೆಗಳೇ ಭೂಷಣ. ಅವುಗಳಿಗೆ ಬಹು ಮುಖ್ಯವಾದ ಸ್ಥಾನವಿದೆ. ಪ್ರತಿ ಹಬ್ಬ ಹರಿದಿನಕ್ಕೆ . ಶುಭ ಸಮಾರಂಭಕ್ಕೆ ಕಳೆಗಟ್ಟುವುದೇ ಬಳೆಗಳ ಶಬ್ದದಿಂದ. ಅಲ್ಲದೇ ಗಾಜಿನ ಬಳೆಗಳೆಂದರೆ ನಾಜೂಕಾಗಿ ಬಳಸಬೇಕು. ಒಡೆಯದಂತೆ ಒಂದೆಡೆ ಎತ್ತಿಡಬೇಕು. ಅಷ್ಟು ಸಮಯ ನಮ್ಮ ಹೆಣ್ಣುಮಕ್ಕಳಿಗಂತೂ ಇರುವುದಿಲ್ಲ. ಕೈ ಬಳೆ ಗಲ್ಲೆಂದರೆ ಅದು ಹೆಣ್ತನದ ಸಂಕೇತ. ಅನತಿ ದೂರದಲ್ಲಿದ್ದರೂ ಬಳೆಯ ಸದ್ದು ಕೇಳಿಸಿದರೆ ಸಾಕ್ಷಾತ್ ಶಕ್ತಿಯೇ ಬರುತ್ತಿದ್ದಾರೆ ಅಂತ ಅನಿಸುತ್ತದೆ.
ಸಿಟಿಯಲ್ಲಿ ಗಾಜಿನ ಬಳೆಗಳನ್ನು ತೊಟ್ಟರೆ ಹಳ್ಳಿ ಗುಗ್ಗು ಎಂದು ಛೇಡಿಸುತ್ತಾರೆಂಬ ಕಾರಣಕ್ಕಾಗೇ ಹಳ್ಳಿಯಿಂದ ಉದ್ಯೋಗ ಅರಸಿ ಬಂದ ಎಷ್ಟೊ ಹುಡುಗಿಯರು ಬಳೆಗಳಿಂದ ಮಾರು ದೂರ ಸರಿಯುತ್ತಾರೆ.
ಬಳೆಗಳನ್ನು ಧರಿಸುವುದರ ವೈಜ್ಞಾನಿಕ ಕಾರಣಗಳು
ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ,
ಯಾವ ಮಹಿಳೆಯು ತನ್ನ ಕೈಗಳಲ್ಲಿ ಬಳೆಗಳನ್ನು ಧರಿಸಿರುತ್ತಾಳೋ ಅವಳ ಆರೋಗ್ಯ ಯಾವಾಗಲೂ ಉತ್ತಮವಾಗಿರುತ್ತದೆ. ಏಕೆಂದರೆ ಬಳೆಗಳನ್ನು ಧರಿಸುವುದರಿಂದ ಉಸಿರಾಟ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಬಳೆಗಳನ್ನು ಧರಿಸುವುದರಿಂದ ಮಾನಸಿಕ ಸಮತೋಲನವನ್ನು ಸುಧಾರಿಸುತ್ತದೆ ಮತ್ತು ಇದರಿಂದಾಗಿ ಮಹಿಳೆಯರು ಕಡಿಮೆ ಆಯಾಸವನ್ನು ಅನುಭವಿಸುತ್ತಾರೆ. ವಿಜ್ಞಾನದ ಪ್ರಕಾರ, ಮಣಿಕಟ್ಟಿನ ಕೆಳಗಿನಿಂದ 6 ಇಂಚುಗಳವರೆಗೆ ಆಕ್ಯುಪ್ರೆಶರ್ ಪಾಯಿಂಟ್‌ಗಳಿರುತ್ತವೆ ಅವುಗಳ ಮೇಲಿನ ಒತ್ತಡದಿಂದಾಗಿ ದೇಹವು ಆರೋಗ್ಯಕರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ತಮ್ಮ ಕೈಯಲ್ಲಿ ಬಳೆಗಳನ್ನು ಧರಿಸುವ ಮೂಲಕ ಯಾವಾಗಲೂ ಹೆಚ್ಚು ಶಕ್ತಿಯನ್ನು ಪಡೆದುಕೊಳ್ಳುತ್ತಾರೆ ಎಂದು ವಿಜ್ಞಾನ ಹೇಳುತ್ತದೆ.
ಬಳೆಗಳನ್ನ ಧರಿಸುವುದರ ಆಧ್ಯಾತ್ಮ ಮಹತ್ವ.
ಮಹಿಳೆಯರು ಎರಡೂ ಕೈಗಳಲ್ಲಿ ಬಳೆಗಳನ್ನು ಧರಿಸುತ್ತಾರೆ. ಆದರೆ ಧಾರ್ಮಿಕ ದೃಷ್ಟಿಕೋನದಿಂದ, ಮಹಿಳೆಯರು ತಮ್ಮ ಕೈಯಲ್ಲಿ ಬಳೆಗಳನ್ನು ಧರಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ. ವಿವಾಹಿತ ಮಹಿಳೆಯರು ಬಳೆಗಳನ್ನು ಧರಿಸುವುದರಿಂದ ಗಂಡನ ಆಯಸ್ಸು ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಇನ್ನು ಬಳೆಗಳನ್ನು ಧರಿಸುವುದರಿಂದ ಬಳೆಗಳ ಸದ್ದಿಗೆ ಮನೆಯಲ್ಲಿ ದಾರಿದ್ರ ನಾಶವಾಗುತ್ತದೆ ಹಾಗೂ ದುಷ್ಟ ಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ ಎನ್ನುವ ನಂಬಿಕೆ ಇದೆ.
ಶಾಸ್ತ್ರದ ಪ್ರಕಾರ, ಬಳೆಗಳ ನಾದದಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನವು ಹೆಚ್ಚಾಗುತ್ತದೆ ಎಂದು ಕೂಡ ಉಲ್ಲೇಖಿಸಲಾಗಿದೆ.
ತಾಯಿ ಸರ್ವೇಶ್ವರಿ ಆದಿಶಕ್ತಿಗೆ ಪ್ರಿಯವಾದ ವಸ್ತುಗಳಲ್ಲಿ ಬಳಗೆ ತುಂಬಾ ಮಹತ್ವವಿದೆ ಬಳೆಗಳನ್ನ ಧರಿಸುವುದರಿಂದ ತಾಯಿ ದುರ್ಗೆಯ ಕೃಪೆ ನಮ್ಮ ಮೇಲೆ ಸದಾ ಇರುತ್ತದೆ ಎಂದು ನಂಬುತ್ತಾರೆ.
ಹಾಗೆ ಎಷ್ಟು ಬಳೆಯನ್ನು ಕೈಗೆ ಇಡಬೇಕು ಹಾಗೂ ಯಾವ ದಿನ ಇಡಬೇಕು ಎನ್ನುವುದು ಕೂಡ ಶಾಸ್ತ್ರದಲ್ಲಿ ಹೇಳುತ್ತಾರೆ.
ಶುಕ್ರವಾರ ಹಾಗೂ ಮಂಗಳವಾರ ಕೈಗೆ ಬಳೆಗಳನ್ನು ಇಟ್ಟರೆ ಒಳ್ಳೆಯದು ಎಂದು ಶಾಸ್ತ್ರ ಹೇಳುತ್ತದೆ.
ಹಾಗೆ ಎಷ್ಟು ಬಳೆಗಳನ್ನ ಇಡಬೇಕು ಎಂದರೆ ಸಮ ಸಂಖ್ಯೆಯಲ್ಲಿ ಇಡಬಾರದು, ಬೆಸ ಸಂಖ್ಯೆಯಲ್ಲಿ ಬಳೆಗಳನ್ನ ಇಡಬೇಕು ಎಂದು ಹೇಳುತ್ತಾರೆ.
ಹಾಗೆ ಒಂದು ಕೈಗೆ ಮಾತ್ರ ಬಳೆಯನ್ನು ಹಾಕಿಕೊಳ್ಳುವುದು ಅಶುಭ ಎಂದು ಹೇಳುತ್ತಾರೆ.
ಬಳೆಗಳನ್ನ ಎರಡೂ ಕೈಗಳಿಗೂ ಹಾಕಬೇಕು ಎಂದು ಶಾಸ್ತ್ರ ಹೇಳುತ್ತದೆ.
ಹಾಗೆಯೇ ಗರ್ಭಿಣಿ ಮಹಿಳೆಯರಿಗೆ ಶ್ರೀಮಂತ ಮಾಡುವ ಸಮಯದಲ್ಲಿ ಅವರ ಕೈ ತುಂಬ ಗಾಜಿನ ಬಳೆಗಳನ್ನು ಧರಿಸುತ್ತಾರೆ ಯಾಕೆ ಗೊತ್ತೇ ಗಾಜಿನ ಬಳೆಗಳ ಶಬ್ದ ಬೆಳೆಯುತ್ತಿರುವ ಭ್ರೂಣಕ್ಕೆ ಸಂಗೀತದ ಹಾಗೆ ಕೇಳಿಸುತ್ತದೆ ಹಾಗೆ ಭ್ರೂಣದಲ್ಲಿರುವ ಮಗುವು ತನ್ನ ತಾಯಿಯನ್ನು ಗುರುತಿಸಲು ಇದು ಕೂಡ ನೆರವಾಗುತ್ತದೆ
ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಕ್ಕೂ ಒಂದೊಂದು ಮಹತ್ವವಿರುತ್ತದೆ. ಆದರೆ ನಾವು ಈಗ ಈ ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡು ಶಾಸ್ತ್ರ ಸಂಪ್ರದಾಯದಿಂದ ದೂರ ಉಳಿತಾ ಇದ್ದೇವೆ.
ಏನೇ ಆಗಲಿ ಶಾಸ್ತ್ರ ಸಂಪ್ರದಾಯವನ್ನ ಮರೆಯುವುದು ಬೇಡ ನಿತ್ಯ ಆಚರಣೆ ನಿತ್ಯ ಧರ್ಮ ಆಚರಣೆ ಇದು ನಮ್ಮ ಜೀವನ ಶೈಲಿ.
Comments