ಸನಾತನ ಹಿಂದೂ ಧರ್ಮದಲ್ಲಿ ಹೋಮ, ಹವನ, ಪೂಜೆಯ ಸಮಯದಲ್ಲಿ ಮನೆಗೆ ಮಾವಿನ ಎಲೆಗಳಿಂದ ತೋರಣ ಕಟ್ಟುವುದು ಸಂಪ್ರದಾಯ. ಮನೆಯಲ್ಲಿ ಯಾವುದೇ ಪೂಜೆಯಾಗಲಿ ಅಥವಾ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲಿ, ಅಂತಹ ಶುಭ ಸಂದರ್ಭಗಳಲ್ಲಿ ಹವನವನ್ನು ಮಾಡಲಾಗುತ್ತದೆ. ಮುಖ್ಯ ದ್ವಾರದಲ್ಲೂ ತೋರಣ ಕಟ್ಟುತ್ತಾರೆ.
ಮಾವಿನ ತೋರಣ ಎಂಬುದು ಒಟ್ಟು ಕುಟುಂಬದ ಸಂಕೇತ. ಹಸಿರಾದ ಮಾವಿನ ಎಲೆಗಳನ್ನು ತಂದು ಅದನ್ನು ತೋರಣ ಕಟ್ಟಿ ಮನೆಯ ದ್ವಾರ ಬಾಗಿಲಿಗೆ ಹಾಕುವುದು ಪದ್ಧತಿ. ಈ ಹಸಿರಾದ ಮಾವಿನ ಎಲೆ ಶುಭ ಸೂಚನೆಯ ಸಂಕೇತ.
ಹಬ್ಬ ಹಾಗೂ ಧಾರ್ಮಿಕ ಸಮಾರಂಭ ಕಾರ್ಯಕ್ರಮಗಳು ಅಂದಾಗ ನಾವು ಮೊದಲು ಮಾಡುವ ಕೆಲಸವೇನೆಂದರೆ ಅದು ಮಾವಿನ ತೋರಣವನ್ನು ಕಟ್ಟುವುದು .
ಶಾಸ್ತ್ರದ ಪ್ರಕಾರ ಈ ಮಾವಿನ ತೋರಣಗಳು ಅಲಂಕಾರಕ್ಕೆ ಮಾತ್ರ ಅಲ್ಲ ಆಧ್ಯಾತ್ಮಿಕ ಹಾಗೂ ದೈವಿಕ ಮಹತ್ವಗಳು ತುಂಬಾ ಇದೆ
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಹೆಚ್ಚಾಗಿ ಸಂಪ್ರದಾಯಗಳನ್ನ ಇನ್ನು ಸಹ ಆಚರಣೆಯಲ್ಲಿಟ್ಟಿದ್ದರೆ, ಒಂದೊಂದು ಆಚರಣೆಗಳಿಗೂ ಸಹ ಒಂದೊಂದು ಮಹತ್ವವಿದೆ
ನಮ್ಮಲ್ಲಿ ಹಬ್ಬ ಹರಿದಿನಗಳು ಸಹಜ ಮತ್ತು ಸರ್ವೇ ಸಾಮಾನ್ಯ. ಅದರಂತೆ ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳಾಗಲೀ ಅಥವಾ ಮನೆಗಳಲ್ಲಿ ಮದುವೆ,ಮುಂಜಿ, ನಾಮಕರಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ಕಾರ್ಯಕ್ರಮಗಳ ವಿಧಿ ವಿಧಾನಗಳು ಬೇರೆ ಬೇರೆ ತರಹದ್ದಾದರೂ, ಎಲ್ಲದರಲ್ಲೂ ಸಾಮಾನ್ಯವಾಗಿ ಎದ್ದು ಕಾಣುವ ಒಂದು ಅಂಶವೆಂದರೆ ಮಾವಿನ ತಳಿರು ತೋರಣ. ಅದು ಊರ ಹೆಬ್ಬಾಗಿಲೇ ಆಗಿರಬಹುದು, ದೇವಸ್ಥಾನದ ಮುಖ್ಯಾದ್ವಾರವಾಗಿರಬಹುದು, ಮನೆಯ ಮುಂಬಾಗಿಲಾಗಿರಬಹುದು, ದೇವರ ಕೋಣೆಯ ಬಾಗಿಲಾಗಿರಬಹುದು ಅಥವಾ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮಾವಿನ ತಳಿರು ತೋರಣ ಕಣ್ಣಿಗೆ ಎದ್ದು ಕಾಣುತ್ತಿರುತ್ತದೆ ಮತ್ತು ಅತ್ಯಂತ ಮಹತ್ವವನ್ನು ಪಡೆದಿರುತ್ತದೆ.
ಮಾವಿನ ತೋರಣ ಕಟ್ಟುವ ಆಧ್ಯಾತ್ಮಿಕ ಮಹತ್ವ
ಮಾವಿಗೆ ವಿಶೇಷವಾದಂತಹ ಒಂದು ಶಕ್ತಿ ಇದೆ ನಾವು ಗಮನಿಸಿರಬಹುದು ಹಬ್ಬ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾವಿನ ತೋರಣ ಕಟ್ಟಿದಾಗ ಒಂದು ರೀತಿಯ ಸಾತ್ವಿಕ ವಾತಾವರಣ ನಿರ್ಮಾಣವಾಗುತ್ತದೆ ದೇವಿಕಾ ಶಕ್ತಿ ಜಾಗೃತಿ ಆದಂತೆ ಅನಿಸುತ್ತದೆ ಮನಸ್ಸು ಒಂದು ರೀತಿ ಸಾಂತತೆಯಿಂದ ಇರುತ್ತದೆ.ಮಾವಿನ ಮರದ ತುಂಡುಗಳನ್ನು ವೇದಕಾಲದಿಂದಲೂ ಸಮಿಧಾ ರೂಪದಲ್ಲಿ ಬಳಸಲಾಗುತ್ತಿದೆ. ಮಾವಿನ ಕಟ್ಟಿಗೆ, ತುಪ್ಪ, ಹವನ ಸಾಮಗ್ರಿ ಇತ್ಯಾದಿಗಳಿಂದ ಹವನ ಮಾಡುವುದರಿಂದ ಪರಿಸರದಲ್ಲಿ ಧನಾತ್ಮಕತೆ ಹೆಚ್ಚುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣದಿಂದ ಋಷಿ ಮುನಿಗಳು ಹೋಮ ಮಾಡುವ ಅಥವಾ ಶುಭ ಕಾರ್ಯ ಮಾಡುವ ಸ್ಥಳಗಳು ಶುದ್ಧವಾಗಿರಲೆಂದು ಹೋಮಕ್ಕೆ ಮಾವಿನ ಕಟ್ಟಿಗೆಗಳನ್ನು ಬಳಸುತ್ತಿದ್ದರು.
ಮಾವಿನ ತೋರಣ ಕಟ್ಟುವುದರಿಂದ ಸಮಾರಂಭ ಕಾರ್ಯಕ್ರಮಗಳಲ್ಲಿ ಇರುವ ಎಲ್ಲರ ಮನಸ್ಸು ಶಾಂತವಾಗಿರುತ್ತದೆ ಹಾಗೂ ಅಲ್ಲಿ ದೈವಿಕ ಶಕ್ತಿ ಜಾಗೃತವಾಗಿ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರುತ್ತದೆ.
ಹಾಗೂ ಸಾತ್ವಿಕ ವಾತಾವರಣ ನಿರ್ಮಾಣವಾಗುತ್ತದೆ ಮಾವಿನ ಎಲೆಯ ಸುವಾಸನೆ ನಮ್ಮಲ್ಲಿನ ಕಾಮಕ್ರೋದ ಮೋಹಗಳನ್ನ ನಾಶ ಮಾಡುತ್ತದೆ ದೈವಿಕ ಭಕ್ತಿ ಜಾಗೃತೆ ಮಾಡುತ್ತದೆ ಯಜ್ಞ ಯಾಗ ಧಾರ್ಮಿಕ ಕಾರ್ಯಕ್ರಮಗಳು ಮಾಡುವಾಗ ನಮ್ಮ ಮನಸ್ಸು ಕೆಟ್ಟ ಯೋಚನೆಗಳು ಮಾಡಬಾರದು ಎಂದು ಹಿಂದಿನ ಕಾಲದಿಂದ ನಮ್ಮ ಪೂರ್ವಜರು ಮಾವಿನ ಎಲೆಯನ್ನು ತೋರಣದ ರೀತಿ ಕಟ್ಟುತ್ತಾ ಬಂದಿದ್ದಾರೆ.
ಮಾವಿನ ತೋರಣ ಕಟ್ಟುವ ವೈಜ್ಞಾನಿಕ ಕಾರಣ.
ಮರವನ್ನು ಸುಟ್ಟಾಗ ಅದರಿಂದ ಉತ್ಪತ್ತಿಯಾಗುವ ಅನಿಲ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ರೋಗಾಣುಗಳನ್ನು ಕೊಂದು ಪರಿಸರವನ್ನು ಶುದ್ಧಗೊಳಿಸುತ್ತದೆ ಎಂಬುದು ವೈಜ್ಞಾನಿಕ ಹೇಳಿಕೆ.ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುಭ ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ ಮಂಟಪದ ಸುತ್ತಮುತ್ತಲೂ ತೋರಣ ಕಟ್ಟುವ ಸಂಪ್ರದಾಯವಿದೆ. ಅದರಲ್ಲೂ ಮಾವಿನ ಎಲೆಯನ್ನೇ ತೋರಣವನ್ನಾಗಿ ಏಕೆ ಕಟ್ಟುತ್ತಾರೆಂದರೆ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳಸುತ್ತೇವೆ.
ಹಾಗೆಯೇ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ ಬೇವಿನ ಸೊಪ್ಪಿನ ಎಲೆ ಅಥವಾ ಟೊಂಗೆಗಳನ್ನು ಸಿಕ್ಕಿಸುವುದರಿಂದ, ಮಾವು ಮತ್ತು ಬೇವಿನ ಎಲೆಯಲ್ಲಿ ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ, ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.
ಹೀಗೆ ನಾವು ಅನುಸರಿಸುವ ಪ್ರತಿಯೊಂದು ಧಾರ್ಮಿಕ ವಿಧಿವಿಧಾನಗಳ ಅಥವಾ ಪದ್ದತಿಗಳ ಮೂಲ ಆಶಯ ವೈಜ್ಞಾನಿಕ ಪ್ರಯೋಜನಗಳೇ ಆಗಿರುತ್ತವೆ. ನಮಗೆ ಅವುಗಳ ಕುರಿತಾಗಿ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಮೂಢನಂಬಿಕೆ ಎಂದು ತಿಳಿದು ಸರಿಯಾಗಿ ಆಚರಿಸದೇ ಹಬ್ಬ ಹರಿದಿನಗಳ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗದಿರುವುದು ನಿಜಕ್ಕೂ ನಮ್ಮ ದೌರ್ಭಾಗ್ಯವೇ ಸರಿ.
ನಮ್ಮ ಪೂರ್ವಜರು ಪ್ರಕೃತಿಯಲ್ಲಿ ಸಿಗುವ ಎಲೆಗಳು ಹೂಗಳಿಂದ ತೋರಣವನ್ನು ಕಟ್ಟಿ ಅಲಂಕರಿಸುತ್ತಿದ್ದರು.
ಆದರೆ ಈಗಿನ ಕಾಲದಲ್ಲಿ ಪ್ಲಾಸ್ಟಿಕ್ ತೋರಣಗಳನ್ನು ತಂದು ಬಾಗಿಲಿಗೆ ಅಲಂಕರಿಸಿ ಆಡಂಬರದ ಆಚರಣೆಯ ರೀತಿ ಮಾಡಿ ಧಾರ್ಮಿಕ ಮಹತ್ವವನ್ನು ಮರಿತ ಇದ್ದಾರೆ.
ದಯವಿಟ್ಟು ನಮ್ಮ ಪೂರ್ವಜರು ಮಾಡುತ್ತಿದ್ದಂತಹ ಆಚರಣೆಗಳನ್ನು ಮಾಡೋಣ ಅದರಿಂದ ದೈಹಿಕ ಮಾನಸಿಕ ಹಾಗೂ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಪ್ಲಾಸ್ಟಿಕ್ ಮರದಿಂದಲೇ ಆದರೂ ಅದೇ ಪ್ಲಾಸ್ಟಿಕ್ ಪ್ರಕೃತಿಯನ್ನು ನಾಶ ಮಾಡುತ್ತದೆ ಇದು ನಮಗೆಲ್ಲರಿಗೂ ಗೊತ್ತಿರುವಂತಹ ವಿಷಯ ಪ್ಲಾಸ್ಟಿಕ್ ಉಪಯೋಗವನ್ನ ಆದಷ್ಟು ಕಮ್ಮಿ ಮಾಡೋಣ.
Comments