ನಮ್ಮ ಸನಾತನ ಹಿಂದೂ ಧರ್ಮದಲ್ಲಿ ನಮ್ಮ ಶಾಸ್ತ್ರ ಪುರಾಣಗಳ ಪ್ರಕಾರ ಮದುವೆಯಾದ ನಂತರ ಕುಂಕುಮ, ಬಳೆ, ಮಾಂಗಲ್ಯ, ಕಾಲುಂಗುರ ಮೂಗುತಿ ಈ ಐದು ಮುತ್ತುಗಳನ್ನ ಧರಿಸಿದವರು ಮುತೈದೆ ಎಂದು ಕರೆಯುತ್ತಾರೆ. ಸರ್ವೇಶ್ವರಿ ಜಗನ್ಮಾತೆ ಆದಿಶಕ್ತಿ ತಾಯಿ ಪಾರ್ವತಿಯು ಪರಮೇಶ್ವರನನ್ನು ಮದುವೆಯಾದಾಗ ಈ ಐದು ಮುತ್ತುಗಳನ್ನು ಧರಿಸುತ್ತಾರೆ. ಹಾಗೆ ಮದುವೆಯಾದವರು ಈ 5 ಮುತ್ತುಗಳನ್ನು ಧರಿಸುವುದರಿಂದ ಶಿವ ಪಾರ್ವತಿಯರ ಆಶೀರ್ವಾದ ಕೃಪೆ ಹಾಗೂ ವಿಶೇಷವಾಗಿ ತಾಯಿ ಸರ್ವ ಮಂಗಳಯ ಆಶೀರ್ವಾದ ಪತಿ-ಪತ್ನಿಯರ ಮೇಲೆ ಇರುತ್ತದೆ ಎನ್ನುವ ನಂಬಿಕೆ ಇದೆ.
ಕುಂಕುಮ, ಬಳೆ, ಮಾಂಗಲ್ಯ, ಕಾಲುಂಗುರ ಮೂಗುತಿ. ಇದು ಬರಿ ಅಲಂಕಾರಕ್ಕೆ ಮಾತ್ರ ಅಲ್ಲ ಧರ್ಮದ ಜಾಗೃತಿಯನ್ನು ಮೂಡಿಸುವ ಹೆಣ್ಣಿನ ಜವಾಬ್ದಾರಿಗಳನ್ನ ಎಚ್ಚರಿಸುವ ಶಕ್ತಿಯೂ ಕೂಡ ಹೌದು .
ಮಾಂಗಲ್ಯವನ್ನು ಧರಿಸುವುದು ಕೇವಲ ಪ್ರದರ್ಶನಕಲ್ಲ, ಇದಕ್ಕೊಂದು ವಿಶೇಷವಾದ ಹಿನ್ನೆಲೆ ಇದೆ. ವರನು ಮದುವೆಯ ಸಮಯದಲ್ಲಿ ಕಟ್ಟುವ ಕರಿಮಣಿ ಸರಕ್ಕೆ ವಿಶೇಷವಾದ ಮಹತ್ವವಿದೆ. ಮಂಗಳಸೂತ್ರ, ತಾಳಿ, ಕರಿಮಣಿ ಗೃಹಿಣಿಯರಿಗೆ ವಿಶೇಷವಾದದ್ದು. ಮಾಂಗಲ್ಯ ಹಾಗೂ ಕರಿಮಣಿ ಸರದ ವಿಶೇಷತೆಯನ್ನು ತಿಳಿದುಕೊಳ್ಳೋಣ ಬನ್ನಿ. ಜ್ಯೋತಿಷಿಗಳ ಮುಖಾಂತರ ಉತ್ತಮವಾದ ಮೂಹೂರ್ತವನ್ನು ತಿಳಿದುಕೊಂಡು ಮಂತ್ರಘೋಷಗಳೊಂದಿಗೆ ಮಂಗಳವಾದ್ಯದಿಂದ ಶಾಸ್ತ್ರಬದ್ಧವಾಗಿ ಜರುಗುವ ವಿವಾಹದಲ್ಲಿ ಮಾಂಗಲ್ಯಧಾರಣೆಯೇ ಅಂತಿಮ ದೈವಿಕ ಸಂಸ್ಕಾರ. ಮಾಂಗಲ್ಯಧಾರಣೆಯು ಅತ್ಯಂತ ಪ್ರಮುಖವಾದದ್ದು. ಪತಿ-ಪತ್ನಿಯ ದೀರ್ಘಾಯುಷ್ಯಕ್ಕಾಗಿ ಮಾಂಗಲ್ಯವನ್ನು ಕಟ್ಟಲಾಗುತ್ತದೆ. ಶಿವ ಪಾರ್ವತಿಯ ಕಲ್ಯಾಣದ ನಂತರ ಜಗತ್ತಿಗೆ ಮಾಂಗಲ್ಯಧಾರಣೆ ಸಂಪ್ರದಾಯ ಬಂದಿತು.
ಮಂಗಳಸೂತ್ರ ಎಂಬ ಪದದ ಅರ್ಥ ಶುಭ ಮತ್ತು ಸೂತ್ರ ಎಂದರೆ ದಾರ - ಶುಭದಾರ. ಮಂಗಳಸೂತ್ರ ಎಂದರೆ ಆತ್ಮಗಳನ್ನು ಒಂದುಗೂಡಿಸುವ ಶುಭ ದಾರ. ವರನು ತಮ್ಮ ಪವಿತ್ರ ವಿವಾಹದ ದಿನದಂದು ವಧುವಿನ ಕುತ್ತಿಗೆಗೆ ಶುಭ ದಾರವನ್ನು ಕಟ್ಟುತ್ತಾನೆ, ಅವರ ಸಂಬಂಧವು ಶುಭದಾರದಂತೆ ಶುಭವಾಗಿರುತ್ತದೆ ಎನ್ನಲಾಗುತ್ತದೆ.
ಪತಿಯ ತನ್ನ ದೀರ್ಘಾಯುಷ್ಯಕ್ಕಾಗಿ ಪತ್ನಿಯ ಕುತ್ತಿಗೆಯಲ್ಲಿ ಈ ಮಂಗಲಸೂತ್ರ ಧರಿಸುವುದು ಎಂದು ಜಗದ್ಗುರುಗಳಾದ ಆದಿ ಶಂಕರಾಚಾರ್ಯರು ಸಹ ತಮ್ಮ ಸೌಂದರ್ಯ ಲಹರಿ ಕೃತಿಯಲ್ಲಿ ತಿಳಿಸಿದ್ದಾರೆ
ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ, ಶಿವನು ಪಾರ್ವತಿಗೆ ಮಂಗಲ ಸೂತ್ರವನ್ನು ಕಟ್ಟಿದನೆಂದಿದೆ.
ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿವೆ.
ವಿವಾಹಿತ ಮಹಿಳೆಯರ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಳ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ.
ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿ ಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ.
ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿ ಕೊಳ್ಳುತ್ತದೆ.
ವೈಜ್ಞಾನಿಕ ಕಾರಣಗಳು
ಮಂಗಳಸೂತ್ರದ ಮಧ್ಯದಲ್ಲಿ “ತಾಳಿ” ಇರುತ್ತದೆ. ಅದು ಗುಂಡಾಗಿದ್ದು ಅದರ ಮೇಲೆ ಯಾವುದೇ ಡಿಸೈನ್ ಇರುವುದಿಲ್ಲ. ಈ ರೀತಿ ಇರುವುದಕ್ಕೂ ಕಾರಣವಿದೆ. ತಾಳಿ ಗುಂಡಾಗಿರುವುದರಿಂದ ಜ್ಞಾನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಮನಸ್ಸಿನ್ನಾಲ್ಲಾಗುವ ಉದ್ವೇಗ ತರಂಗಗಳನ್ನು ನಿಯಂತ್ರಿಸುವ ಶಕ್ತಿ ಇರುತ್ತದೆ. ಬೇರೆ ಯಾವುದೇ ಆಕಾರಗಳಿಗೆ ಈ ಶಕ್ತಿ ಇರುವುದಿಲ್ಲ. ತಾಳಿಯ ಆಕಾರವು ಸಾತ್ವಿಕ ಗುಣವನ್ನು ವೃದ್ಧಿಸುತ್ತದೆ.
ಮಂಗಲಸೂತ್ರದ ಮೂರು ಗಂಟಿನ ಮಹತ್ವ.
ಮೂರು ಗಂಟುಗಳ ಬಂಧನದಿಂದ ಒಂದಾದ ಯುವಜೋಡಿ ಒಟ್ಟಾಗಿ ನೂರು ವರ್ಷಗಳ ಕಾಲ ಬಾಳ ಬೇಕೆಂದು ಪಂಡಿತರು, ಹಿರಿಯರು ಆಶೀರ್ವದಿಸುತ್ತಾರೆ. ಹಾಗಾದ್ರೆ ಆ ಮೂರು ಗಂಟಿನ ಅರ್ಥವೇನೆಂಬುದು ಇಲ್ಲಿದೆ ನೋಡಿ.
ಧರ್ಮೇಚ - ಅಂದರೆ ಧರ್ಮವನ್ನು ನನ್ನ ಮಡದಿಯೊಂದಿಗೆ ಆಚರಿಸುತ್ತೇನೆ .
ಅರ್ಥೇಚ – ಅಂದರೆ ಧನವನ್ನು ನನ್ನ ಮಡದಿಯೊಂದಿಗೆ ಅನುಭವಿಸುತ್ತೇನೆ.
ಕಾಮೇಚ - ಅಂದರೆ ಕೋರಿಕೆಗಳನ್ನು ನನ್ನ ಮಡದಿಯೊಂದಿಗೆ ಹಂಚಿಕೊಳ್ಳುತ್ತೇನೆ.
ಹಾಗೆ ಮಾಂಗಲ್ಯ ಸರವನ್ನ ಇಷ್ಟ ಬಂದ ಹಾಗೆ ತೆಗೆಯುವಂತಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ದಿನ ಸಂದರ್ಭ ಸಮಯ ಎಲ್ಲವೂ ಮುಖ್ಯವಾಗಿರುತ್ತದೆ. ಈಗಿನ ಕಾಲದಲ್ಲಿ ಕೆಲವರು ಸಮಯ ಸಂದರ್ಭ ತಿಳಿಯದೆ ಮಾಂಗಲ್ಯವನ್ನ ತೆಗೆದು ಇಡುತ್ತಾರೆ ಹೀಗೆ ಮಾಡುವುದು ದೋಷ ಎಂದು ಶಾಸ್ತ್ರ ಹೇಳುತ್ತದೆ.
ಮೂಗುತಿ ಮಾಂಗಲ್ಯ ಕಾಲುಂಗುರ ಕುಂಕುಮ ಬಳೆ ಇವುಗಳನ್ನ ಧರಿಸೋಕು ನಿಯಮಗಳಿವೆ ತೆಗೆಯೋಕೂ ನಿಯಮಗಳಿವೆ
ಸನಾತನ ಧರ್ಮದ ಪ್ರತಿಯೊಂದು ಆಚರಣೆಗಳಿಗೂ ಕೂಡ ಅದರದ್ದೇ ಆದ ಮಹತ್ವಗಳು ಇದ್ದೆ ಇರುತ್ತದೆ.
Comments