ಮಹಾಭಾರತದ ಒಂದು ಸಣ್ಣ ಮಾಹಿತಿ

ಮಹಾಭಾರತವೂ ಶ್ರೀಮದ್ರಾಮಾಯಣದಂತೆ ಭಾರತೀಯರ ಧರ್ಮ-ಸಂಸ್ಕೃತಿ-ನಾಗರಿಕತೆಗಳ ಸಮಗ್ರದರ್ಶನವನ್ನು ಮಾಡಿಸಿಕೊಡುವ ಜ್ಞಾನ-ವಿಜ್ಞಾನಮಯವಾದ ಪ್ರದೀಪ ಯೇನ ತ್ವಯಾ ಭಾರತತೈಲಪೂರ್ಣ: ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ || ಇದಂ ತು ತ್ರಿಷು ಲೋಕೇಷು ಮಹಜ್ಞಾನಂ ಪ್ರತಿಷ್ಠಿತಮ್ | ಜ್ಞಾನಂ ವಿಜ್ಞಾನಸಹಿತಂ ಇದಂ ವಕ್ಷಾಮೃಶೇಷತಃ ||

ಧರ್ಮಮಯವಾದ ಸಂಸ್ಕೃತಿಯ ಒಳ-ಹೊರ ರೂಪುಗಳೆರಡನ್ನೂ ತೋರಿಸಿಕೊಡುವ ಪಾರದರ್ಶಕವಾದ ಮಣಿದರ್ಪಣ ; ಆಶೆ, ಆಕಾಂಕ್ಷೆ, ಸಾಧನೆ, ಸಿದ್ದಿಗಳ ಅನುಭವಗಳನ್ನು ಏಕತ್ರ ಸೇರಿಸಿಕೊಂಡಿ ರುವ ಭವ್ಯಭಾಂಡಾಗಾರ ; ಎಲ್ಲ ಪುರುಷಾರ್ಥಗಳ ಕಲ್ಪತರು ; ವೇದ, ವೇದಾಂಗ, ಇತಿಹಾಸ, ಲೋಕವ್ಯವಹಾರ, ಆತ್ಮವ್ಯವಹಾರ, ಎಲ್ಲ ಶಾಸ್ತ್ರಗಳ ಸಾರಸರ್ವಸ್ವವಾಗಿ ಅವುಗಳ ತತ್ವವನ್ನು ಸಂಕ್ಷೇಪವಾಗಿಯೂ ಸವಿಸ್ತರ ವಾಗಿಯೂ ನಿರೂಪಿಸುವ ವಿಶ್ವಕೋಶ.

ವೇದಾ ಯೋಗಃ ಸವಿಜ್ಞಾನೋ ಧರ್ಮೋSರ್ಥ: ಕಾಮ ಏವ ಚ |
ಧರ್ಮಕಾಮಾರ್ಥಯುಕ್ತಾನಿ ಶಾಸ್ತ್ರಾಣಿ ವಿವಿಧಾನಿ ಚ | ಲೋಕಯಾತ್ರಾವಿಧಾನಂ ಚ ಸರ್ವಂ ತತ್ ದೃಷ್ಟವಾನೃಷಿಃ ||
ವಿಸ್ತೀರ್ಯೆತನ್ನ ಹಜ್ಞಾನಮೃಷಿ ಸಂಕ್ಷಿಪ್ತ ಚಾಬ್ರವೀತ್ |
ಇಷ್ಟಂ ಹಿ ವಿದುಷಾಂ ಲೋಕೇ ಸಮಾಸವ್ಯಾಸಧಾರಣಮ್ ।।


ಎಲ್ಲರೂ ಭಕ್ತಿಯಿಂದ ಪೂಜಿಸುವ ದೇವರೆಂದರೆ ಅದುವೇ ಶ್ರೀ ಕೃಷ್ಣ. ಶ್ರೀ ಕೃಷ್ಣನನ್ನು 64 ಕಲಾ, ಅಷ್ಟ ಸಿದ್ಧಿಗಳು ಹಾಗೂ 9 ಅವತಾರಗಳೊಂದಿಗೆ ಶ್ರೀ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ತ್ರೇತಾಯುಗದಲ್ಲಿ ವಿಷ್ಣು ರಾಮನ ಅವತಾರವನ್ನು ಮೂರು ಲೋಕವನ್ನು ಕಾಪಾಡಿದನು. ಈತನು ತನ್ನ ತ್ಯಾಗದ ಗುಣದಿಂದ ತ್ರೇತಾಯುಗದಲ್ಲಿ ಸಾಕಷ್ಟು ಘನತೆ, ಗೌರವವನ್ನು ಪಡೆದುಕೊಂಡನು. ಇನ್ನು ದ್ವಾಪರ ಯುಗದಲ್ಲಿ ವಿಷ್ಣು ದೇವಾನುದೇವತೆಗಳ ಒತ್ತಾಯದ ಮೇರೆಗೆ ಕಂಸನನ್ನು ಅಧರ್ಮವನ್ನು ನಾಶ ಮಾಡಿ ಧರ್ಮದ ಸ್ಥಾಪನೆಗಾಗಿ ಶ್ರೀ ಕೃಷ್ಣ ಅವತರಿಸಿದನೆಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ 
 
ಹಾಗೂ ಇಡೀ ಮನುಕುಲದ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಜಗದ್ಗುರು ಭಗವಾನ್ ಶ್ರೀ ಕೃಷ್ಣ ಅರ್ಜುನನಿಗೆ ಉಪದೇಶ ಮಾಡಿದ ಭಗವದ್ಗೀತೆ ಇದೆ ಮಹಾಭಾರತದ ಭೀಷ್ಮಪರ್ವದ 23 ನೇ ಅಧ್ಯಾಯದಿಂದ 40 ನೇ ಅಧ್ಯಾಯದ ನಡುವೆ ಬರುತ್ತದೆ . ಸುಮಾರು 700 ಶ್ಲೋಕಗಳ ಭಗವದ್ಗೀತೆ, ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ಕೆಲವೊಮ್ಮೆ ಯೋಗೋಪನಿಷತ್ ಅಥವಾ ಗೀತೋಪನಿಷತ್ ಪಂಚಮವೇದವೆಂದೂ ಭಗವದ್ಗೀತೆಯನ್ನು ಕರೆಯಲಾಗುತ್ತದೆ.

ಹಾಗೂ ಬಿಸ್ಮಾಚಾರ್ಯರು ಹೇಳಿರುವ ವಿಷ್ಣು ಸಹಸ್ರನಾಮ ಕೂಡ ಇದೇ ಮಹಾಭಾರತದಲ್ಲಿ ಬರುತ್ತದೆ.

ಒಮ್ಮೆ ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನು ಏರ್ಪಡಿಸಿದ್ದ ಹನ್ನೆರಡು ವರ್ಷಗಳ ಸತ್ರದಲ್ಲಿ ವಿಶ್ರಾಂತಿಪಡೆಯುತ್ತಿದ್ದ ಬ್ರಹ್ಮರ್ಷಿಗಳ ಮಧ್ಯೆ ಲೋಮಹರ್ಷಣನ ಮಗ ಸೂತ ಪೌರಾಣಿಕ ಉಗ್ರಶ್ರವನು ವಿನಯಾವನತನಾಗಿ ಆಗಮಿಸಿದನು. ಅವನು ಆಶ್ರಮವನ್ನು ತಲುಪಿದೊಡನೆಯೇ ನೈಮಿಷಾರಣ್ಯವಾಸಿ ತಪಸ್ವಿಗಳೆಲ್ಲರೂ ರೋಮಾಂಚಕ ಕಥೆಗಳನ್ನು ಕೇಳಲು ಅವನನ್ನು ಸುತ್ತುವರೆದರು. ಪರಸ್ಪರರನ್ನು ಅಭಿವಂದಿಸಿ, ಎಲ್ಲರೂ ಕುಳಿತುಕೊಂಡ ನಂತರ ಋಷಿಗಳಲ್ಲಿಯೇ ಒಬ್ಬನು ಕಥೆಗಳನ್ನು ಪ್ರಸ್ತಾವಿಸುತ್ತಾ ''ಸೌತಿ! ನೀನು ಎಲ್ಲಿಂದ ಬರುತ್ತಿರುವೆ?'' ಎಂದು ಪ್ರಶ್ನಿಸಿದನು. ಅವನಿಗೆ ಉತ್ತರ ಸುತ್ತ ಸೂತನು ಹೇಳಿದನು: “ನಾನು ರಾಜಾ ಪರೀಕ್ಷಿತನ ಮಗ ಮಹಾತ್ಮ ರಾಜರ್ಷಿ ಜನಮೇಜಯನ ಸರ್ಪಯಾಗದಲ್ಲಿ ವ್ಯಾಸ ಕೃಷ್ಣಪಾಯನನು ರಚಿಸಿದ ವಿವಿಧ ಕಥೆಗಳನ್ನೂ ವಿಚಿತ್ರಾರ್ಥಗಳನ್ನೂ ಕೂಡಿದ ಪುಣ್ಯಕಾರಕ ಮಹಾಭಾರತ ಕಥೆಯನ್ನು ವೈಶಂಪಾಯನನು ವಿಧಿವತ್ತಾಗಿ ಹೇಳಿದುದನ್ನು ಕೇಳಿದೆ. ನಂತರ ಹಲವಾರು ತೀರ್ಥಕ್ಷೇತ್ರಗಳನ್ನು ಸುತ್ತಾಡಿ, ಹಿಂದೆ ಕುರು-ಪಾಂಡವರು ಮತ್ತು ಸರ್ವ ರಾಜರು ಯುದ್ಧಮಾಡಿದ ಸಮಂತಪಂಚಕ ಎಂಬ ಹೆಸರಿನ ಪುಣ್ಯ ಪ್ರದೇಶಕ್ಕೆ ಹೋದೆ. ಅಲ್ಲಿಂದ ನಾನು ಈ ಯಜ್ಞದಲ್ಲಿ ಭಾಗವಹಿಸಿರುವ ನಿಮ್ಮೆಲ್ಲರನ್ನೂ ಕಾಣಲು ಬಂದೆ. ದ್ವಿಜರೇ! ಸ್ನಾನ-ಜಪ-ಅಗ್ನಿಹೋತ್ರಗಳನ್ನು ಮುಗಿಸಿ ಕುಳಿತಿರುವ ನಿಮಗೆ ನಾನು ಏನು ಹೇಳಲಿ? ಧರ್ಮಸಂಗತಿಗಳನ್ನೊಡಗೂಡಿದ ಪುರಾಣ ಕಥೆಗಳನ್ನು ಹೇಳಲೇ? ಅಥವಾ ಮಹಾತ್ಮ ಋಷಿ-ನರರೇಂದ್ರರ ವೃತ್ತಾಂತಗಳನ್ನು ಹೇಳಲೇ?" ಋಷಿಗಳು ಮಹಾಭಾರತ ಇತಿಹಾಸವನ್ನು ಕೇಳಲು ಬಯಸುತ್ತೇವೆ ಎನ್ನಲು ಸೂತನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದನು.ಸೂತನು ಹೇಳಿದನು: "ಆದ್ಯ, ಪುರುಷ, ಈಶ, ಪುರುಹೂತ, ಪುರುಷ್ಣುತ, ಋತ, ಏಕಾಕ್ಷರ, ಬ್ರಹ್ಮ, ವ್ಯಕ್ತಾವೃಕ್ತ ಸನಾತನ, ಅಸಚ್ಚ ಸಚ್ಚಿ, ವಿಶ್ವ, ಸದಸತ, ವರಮ, ಪರಾವರಗಳ ಸೃಷ್ಟ, ಪುರಾಣ, ಪರಮ, ಅವ್ಯಯ, ವರೇಣ್ಯ, ಅನಘ, ಶುಚಿ ಮಂಗಲಗಳಲ್ಲಿ ಮಂಗಲಕರ, ವಿಷ್ಣು, ಚರಾಚರಗಳ ಗುರು, ಹರಿ ಹೃಷಿಕೇಶನಿಗೆ ನಮಸ್ಕರಿಸಿ ಮಹರ್ಷಿ ವ್ಯಾಸನ ಅತಿ ಶ್ರೇಷ್ಠ ಕೃತಿಯೆಂದಿನಿಸಿಕೊಂಡಿರುವ ಮಹಾಭಾರತ ಕಥೆಯನ್ನು ಹೇಳಲು ಪ್ರಾರಂಭಿಸುತ್ತೇನೆ. ಋಷಿ ಪರಾಶರ ಮತ್ತು ಸತ್ಯವತಿ ಯರ ಮಗ ಕೃಷ್ಣಪಾಯನನು ತಾಯಿ ಮತ್ತು ಗಂಗೆ ಯ ಮಗ ಧರ್ಮಾತ್ಮ ಭೀಷ್ಮ ನ ಸೂಚನೆಯಂತೆ ವಿಚಿತ್ರವೀರ್ಯ ನ ಪತ್ನಿಯರಲ್ಲಿ ಧೃತರಾಷ್ಟ್ರ, ಪಾಂಡು ಮತ್ತು ವಿದುರ ರೆಂಬ ಮೂವರು ಪುತ್ರರಿಗೆ ಜನ್ಮವಿತ್ತು ತಪಸ್ಸಿಗೋಸ್ಕರ ತನ್ನ ಆಶ್ರಮಕ್ಕೆ ತೆರಳಿದನು. ತನ್ನ ಮಕ್ಕಳು ವೃದ್ಧರಾಗಿ ಪರಮಗತಿಯನ್ನು ಹೊಂದಿದ ಬಳಿಕ ಆ ಮಹಾನೃಷಿಯು ಭಾರತವನ್ನು ತನ್ನ ಮನಸ್ಸಿನ ಅಂತರಾಳದಲ್ಲಿಯೇ ರಚಿಸಿ ಶಿಷ್ಯರಿಗೆ ಇದನ್ನು ಹೇಗೆ ಕಲಿಸಲಿ ಎಂದು ಚಿಂತಿಸಿದನು. ಅವನ ಆ ಚಿಂತನೆಯನ್ನು ಮನಗಂಡ ಲೋಕಗುರು ಸ್ವಯಂ ಭಗವಾನ್ ಬ್ರಹ್ಮ ನು ಲೋಕ ಕಲ್ಯಾಣಾರ್ಥವಾಗಿ ಅವನ ಆನೆಯನ್ನು ಈಡೇರಿಸಲು ಅಲ್ಲಿಗೆ ಆಗಮಿಸಿದನು. ಅವನನ್ನು ನೋಡಿ ವಿಸ್ಮಿತನಾದ ದೈಪಾಯನನು ಕೈಜೋಡಿಸಿ ನಮಸ್ಕರಿಸಿ, ಉತ್ತಮ ಆಸನವನ್ನು ನೀಡಿ, ಪ್ರದಕ್ಷಿಣೆ ಮಾಡಿ, ಅವನ ಬಳಿ ನಿಂತುಕೊಂಡನು. ಪ್ರೀತಿಯ ಮಂದಹಾಸವನ್ನು ಬೀರುತ್ತಿದ್ದ ಬ್ರಹ್ಮನಿಂದ ಅನುಜ್ಞೆವಡೆದ ಅವನೂ ಕೂಡ ಅಸನದಲ್ಲಿ ಕುಳಿತುಕೊಂಡು ಹೇಳಿದನು: ''ಭಗವನ್! ನಾನು ಪರಮಪೂಜಿತ ಕಾವ್ಯವೊಂದನ್ನು ರಚಿಸಿದ್ದೇನೆ. ಇದರಲ್ಲಿ ವೇದಗಳ, ವೇದಾಂಗಗಳಾದ ಉಪನಿಷತ್ತುಗಳ ಮತ್ತು ಇತರ ರಹಸ್ಯಗಳನ್ನು ವಿಸ್ತಾರವಾಗಿ ಅಳವಡಿಸಿದ್ದೇನೆ. ಇತಿಹಾಸ ಪುರಾಣಗಳೂ ಸೇರಿರುವ ಇದರಲ್ಲಿ ಭೂತ. ವರ್ತಮಾನ ಮತ್ತು ಭವಿಷ್ಯ ಈ ಮೂರೂ ಕಾಲಗಳ ಮಿಶ್ರಣವಿದೆ. ಇದರಲ್ಲಿ ವೃದ್ದಾಪ್ಯ, ಮೃತ್ತು, ಭಯ, ವ್ಯಾದಿಗಳ ಭಾವಾಭಾವ ನಿಶ್ಚಯವಿದೆ ಮತ್ತು ವಿವಿಧ ಕಾಲ-ಧರ್ಮ-ಆಶ್ರಮಗಳ ಲಕ್ಷಣಗಳೂ ಇವೆ. ಇದರಲ್ಲಿ ನ್ಯಾಯ, ಶಿಕ್ಷೆ, ಚಿಕಿತ್ಸೆ, ದಾನಗಳ ವಿವರಗಳು, ಪಶುಪತಿ, ದೇವತೆಗಳು ಮತ್ತು ಮನುಷ್ಯರ ಜನ್ಮಕಾರಣಗಳೂ ಇವೆ. ಪುಣ್ಯತೀರ್ಥ ಪ್ರದೇಶಗಳ, ನದಿ-ಪರ್ವತವನ-ಸಾಗರಗಳ ಕೀರ್ತನೆಯೂ ಇದರಲ್ಲಿದೆ. ದಿವ್ಯಪುರಗಳ ನಿರ್ಮಾಣ-ರಚನೆ, ಯುದ್ಧ ಕೌಶಲ, ಲೋಕಯಾತ್ರೆಗೆ ಅನುಕೂಲವಾಗುವಂಥವುಗಳು ಮತ್ತು ಹೀಗೆ ಸರ್ವವಸ್ತುಗಳ ಪ್ರತಿಪಾದನೆಯನ್ನೂ ಇದರಲ್ಲಿ ಮಾಡಿದ್ದೇನೆ, ಆದರೆ ಭುವಿಯಲ್ಲಿ ಇದನ್ನು ಬರೆಯುವವರು ಯಾರು ಎನ್ನುವುದು ತಿಳಿಯದಾಗಿದೆ!''


ನಂತರ ಸತ್ಯವತೀ ಸುತ ವ್ಯಾಸನು ಗಣಪತಿ ಹೇರಂಬನ್ನು ಸ್ಮರಿಸಿದನು. ಸ್ಮರಣಮಾತ್ರದಲ್ಲಿ ಭಕ್ತರು ಎಣಿಸಿದುದನ್ನು ಪೂರೈಸುವ ವಿಶ್ವೇಶ ಗಣೇಶನು ಅಲ್ಲಿಗೆ ಆಗಮಿಸಿದನು. ಅವನನ್ನು ಕುಳ್ಳಿರಿಸಿ ಪೂಜಿಸಿದ ನಂತರ ವ್ಯಾಸನು ಅವನಿಗೆ “ಗಣನಾಯಕ! ನನ್ನ ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಹೇಳುವ ಈ ಭಾರತದ ಲೇಖಕನಾಗು!" ಎಂದು ಕೇಳಿಕೊಂಡನು, ಅದಕ್ಕೆ ವಿಶ್ಲೇಶನು ಹೇಳಿದನು: "ಬರೆಯುವಾಗ ಒಂದು ಕ್ಷಣವೂ ವಿರಾಮವಿಲ್ಲದಂತಾದರೆ ಮಾತ್ರ ನಾನು ಇದರ ಲೇಖಕನಾಗಬಲ್ಲಿ!", ಅದಕ್ಕೆ ವ್ಯಾಸನು "ಅರ್ಥಮಾಡಿಕೊಳ್ಳದೇ ಏನನ್ನೂ ಬರೆಯಬಾರದು!" ಎಂದು ಉತ್ತರಿಸಲು, ಗಣೇಶನು ಓಂಕಾರದೊಂದಿಗೆ ಭಾರತದ ಲೇಖಕನಾದನು. ಆಗ ಮುನಿಯು ಕುತೂಹಲದಿಂದ ಶ್ಲೋಕಗಳ ಗಂಟು-ಗಂಟು ಹಾಕಿ ನಿಗೂಢಗಳನ್ನು ರಚಿಸಿದನು. ಸರ್ವಜ್ಞ ಗಣೇಶನೂ ಕೂಡ ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಿದ್ದನು. ಆ ಸಮಯದಲ್ಲಿ ವ್ಯಾಸನು ಇತರ ಅನೇಕ ಶ್ಲೋಕಗಳನ್ನು ರಚಿಸುತ್ತಿದ್ದನು. ಅಂಥಹ ಸುಮಾರು ೮,೮೦೦ ಶ್ಲೋಕಕೂಟಗಳ ಗುಟ್ಟು ಇದೂವರೆಗೆ ಸುದೃಢವಾಗಿಯೇ ಇದ್ದು ಅವುಗಳ ಗೂಢಾರ್ಥಗಳನ್ನು ಭೇದಿಸಲು ಯಾರಿಗೂ ಸಾಧ್ಯವಿಲ್ಲವಾಗಿದೆ.

ಮಹಾಭಾರತ ಮಹತ್ತಾದ ಅರ್ಥದ ಭಾರವಿರುವ ಗ್ರಂಥ. ಅದು ಮನೋವೈಜ್ಞಾನಿಕವಾಗಿ ನಮ್ಮ ಮನಸ್ಸಿಗೆ ತರಬೇತಿ ಕೊಡುವ ಗ್ರಂಥ. ಪ್ರತಿಯೊಬ್ಬ ಮನುಷ್ಯನ ಒಳಗೆ ನಡೆಯುವ ಜೀವನ್ಮಲ್ಯಗಳನ್ನು ಹೇಳುವ ಗ್ರಂಥ. ಇದು ನ್ಯಾಯ- ಅನ್ಯಾಯ, ಧರ್ಮ-ಅಧರ್ಮ, ಒಳ್ಳೆಯತನ-ಕೆಟ್ಟತನಗಳ ನಡುವೆ ನಡೆಯುವ ಹೋರಾಟವನ್ನು ತಿಳಿಸುವ ಗ್ರಂಥ. ಮಹಾಭಾರತದಲ್ಲಿ ಬರುವ ಪಾಂಡವರ ಏಳು ಪಾತ್ರಗಳು ಒಬ್ಬ ಮನುಷ್ಯನಲ್ಲಿರಬೇಕಾದ ಹದಿನೆಂಟು ಗುಣಗಳನ್ನು ಪ್ರತಿನಿಧಿಸುತ್ತವೆ.

ಧರ್ಮರಾಜ - ಧರ್ಮ

 ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ. . ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ . ನಕುಲ-ಸಹದೇವ - ಶೀಲ ಮತ್ತು ವಿನಯ
ಬ್ರೌಪದಿ - ವೇದವಿದ್ಯೆ
ಶ್ರೀಕೃಷ್ಣ - ವೇದವೇದ್ಯ

ಈ ಗ್ರಂಥದ ಆಕಾರವೂ ನಿಸ್ಸಮಾಭ್ಯಧಿಕವಾಗಿದೆ. ಇಷ್ಟು ದೊಡ್ಡ ಗ್ರಂಥವು ಪ್ರಪಂಚದಲ್ಲೇ ಬೇರಾವುದೂ ಇಲ್ಲ. ಈಗಿನ ರೂಪದಲ್ಲಿ ಇದರ ಶ್ಲೋಕಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಹೆಚ್ಚಾಗಿದೆ. ಅಧ್ಯಾಯಗಳ ಸಂಖ್ಯೆ 2,109, ಇದರ 18 ಪರ್ವಗಳೂ ಮತ್ತು ಅವಾಂತರಪರ್ವಗಳೂ ಒಂದೊಂದೂ ಉದ್ಭಂಥದಂತಿವೆ. ಶ್ರೀಕೃಷ್ಣನ ವಂಶವನ್ನೂ, ಕಥೆಯನ್ನೂ ಹೇಳುವ ಹರಿವಂಶವೆಂಬ ಮೂರು ಪರ್ವಗಳುಳ್ಳ ಖಿಲಗ್ರಂಥವು ಇದರ ಒಂದು ಸಣ್ಣಭಾಗ




Comments