ಸನಾತನ ಹಿಂದೂ ಧರ್ಮದಲ್ಲಿ ಅಶ್ವತವಕ್ಷದ ಮಹತ್ವ

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಭಗವಂತನ ಸೃಷ್ಟಿಯಲ್ಲಿ ಸೃಷ್ಟಿಯಾದ ಎಲ್ಲವನ್ನ ಪೂಜಿಸುವ ಆರಾಧಿಸುವ ನಂಬಿಕೆ ಮತ್ತು ಪದ್ಧತಿ ಈಗಲೂ ಕೂಡ ಇದೆ ಅದು ಎಲ್ಲದರಲ್ಲಿ ಮರಗಳನ್ನು ಕೂಡ ಪೂಜಿಸುತ್ತೇವೆ ಅದರಲ್ಲಿ ಒಂದನ್ನು ವೃಕ್ಷ ರಾಜ ಎಂದು ಕರೆಯುತ್ತೇವೆ ಪೂಜನೀಯವೆಂದು ಕರೆಯಲ್ಪಡುವ ಪ್ರಮುಖ ವೃಕ್ಷವೆಂದರೆ ಅಶ್ವತ್ಥ ಮರ. ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿರುವ ಈ ಮರವನ್ನು ಪೂಜಿಸಿದರೆ ಹಲವು ಸಕಾರಾತ್ಮಕ ಪರಿಣಾಮಗಳು ಉಂಟಾಗುವುದಲ್ಲದೇ, ಕೆಲವೊಂದು ದೋಷಗಳೂ ನಿವಾರಣೆಯಾಗುವುದ.

ಪ್ರತಿ ಹಳ್ಳಿಯ ಮಧ್ಯದಲ್ಲಿ ಪ್ರತಿ ಗ್ರಾಮದಲ್ಲಿಯೂ ಒಂದೊಂದು ಅಶ್ವತ ವೃಕ್ಷ ಹಿಂದೆ ಇರುತ್ತಿತ್ತು ಈಗಲೂ ಕೂಡ ಇದೆ ಹಿರಿಯರು ಅಶ್ವತ ವೃಕ್ಷದ ಮಹತ್ವವನ್ನು ಅರಿತವರಾಗಿದ್ದರು ಅಶ್ವತ ವೃಕ್ಷದ ಕೆಳಗೆ ಕುಳಿತುಕೊಂಡು ಚರ್ಚೆ ಮಾತುಗಳನ್ನ ಆಡುವ ಮುಖಾಂತರ ಅಶ್ವತ ವೃಕ್ಷದ ಲಾಭವನ್ನು ಪಡೆದುಕೊಳ್ಳುತ್ತಿದ್ದರು.


ಅಶ್ವತ್ಥ ಗ್ರಾಮ

 ಧಾರ್ಮಿಕ ಭಾವನೆಯಿಂದ ಪೂಜಿಸುವ, ಆಮ್ಲಜನಕವನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸುವ ಅರಳಿ ಮರವನ್ನ ನೀವಿಲ್ಲಿ ಎಲ್ಲೇ ಹೋದ್ರೂ ನೋಡಬಹುದಾಗಿದೆ. ಹಾಗಾಗಿ ಉತ್ತರ ಕನ್ನಡದ ಕುಮಟಾ ತಾಲೂಕಿನ ಹೆಗಡೆ ಗ್ರಾಮಕ್ಕೆ ಅಶ್ವತ್ಥ ಗ್ರಾಮವೆಂದೇ ಹೆಸರಿದೆ. ಆ ಮಟ್ಟಿಗೆ ಇಲ್ಲಿನ ಹಿರಿಯರು ಅರಳಿ ಮರಗಳನ್ನು ಬೆಳೆಸಿ ಉಳಿಸಿದ್ದಾರೆ. ಈ ಮರಗಳು ಇಂದಿಗೂ ಸೊಂಪಾಗಿದ್ದ ರಸ್ತೆ ಪಕ್ಕದಲ್ಲೇ ಇಂದಿಗೂ ವಿರಾಜಮಾನವಾಗಿ ನಿಂತಂತೆ ಭಾಸವಾಗುತ್ತಿದೆ. 

ವೇದವನ್ನು ಉಪದೇಶ ಮಾಡಿದ ಭಗವಂತನ ವಿಶೇಷ ಅವತಾರ ಅಶ್ವರೂಪ ಹಯಗ್ರೀವ. ಅಶ್ವದ ಹಾಗೆ ಇದ್ದು ವೇದೋಪದೇಶ ಮಾಡಿದ ಭಗವಂತನನ್ನು ‘ಅಶ್ವತ್ಥಃ’ ಎಂದು ಕರೆಯುತ್ತಾರೆ.

ಕೃಷ್ಣ ಹೇಳುತ್ತಾನೆ: “ಸರ್ವ ವೃಕ್ಷಗಳಲ್ಲಿ ಅಶ್ವತ್ಥ ನಾನು” ಎಂದು. ಅಶ್ವತ್ಥಮರ ಇಂದು ಮೇಲ್ನೋಟದಲ್ಲಿ ನೋಡುವವರಿಗೆ ಯಾವುದಕ್ಕೂ ಉಪಯೋಗವಿಲ್ಲದ ಮರ. ಭಗವಂತ ಈ ಮರಕ್ಕೆ ಮಹತ್ವ ಕೊಟ್ಟು ಹೇಳದಿದ್ದರೆ ಈ ಮರದ ಬಗ್ಗೆ ನಮಗೆ ಏನೂ ತಿಳಿದಿರುತ್ತಿರಲಿಲ್ಲ.
ಏಕೆಂದರೆ ಈ ಮರ ನಮಗೆ ತಿನ್ನುವ ಹಣ್ಣನ್ನಾಗಲಿ, ಸುಗಂಧವಾದ ಹೂವನ್ನಾಗಲಿ ಕೊಡುವುದಿಲ್ಲ. ಈ ಮರದಿಂದ ಪೀಠೊಪಕರಣ ಮಾಡಲು ಸಾಧ್ಯವಿಲ್ಲ. ವಿಶಾಲವಾಗಿ ಬೆಳೆದು ತನ್ನ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ನಿಲ್ಲುವ ಈ ಮರ, ಮೇಲ್ನೋಟಕ್ಕೆ ಜನರಿಗೆ ಕಾಟ ಕೊಡುವ ಮರ!

ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷ ಅಶ್ವತ್ಥ” ಎಂದು. ಏಕೆ ಈ ಮರಕ್ಕೆ ಇಷ್ಟು ಪ್ರಾಧಾನ್ಯ ಎನ್ನುವುದು ತಿಳಿಯದೆ ಇಂದು ನಾವು ಅದನ್ನು ಪೂಜಿಸುತ್ತೇವೆ ಅಥವಾ ಇನ್ನು ಕೆಲವರು ನಿರ್ಲಕ್ಷಿಸುತ್ತಾರೆ.

||ಮೂಲತೋ ಬ್ರಹ್ಮ ರೂಪಾಯ, 
ಮಧ್ಯತೋ ವಿಷ್ಣು ರೂಪಿನೆ, 
ಅಗ್ರತೋ ಶಿವ ರೂಪಾಯ 
ವೃಕ್ಷ ರಾಜಯ ತೇ ನಮಃ'||

ಅಶ್ವತ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ವಾಸ ಇದೆ ಎಂದು ಹೇಳುತ್ತಾರೆ.
ವೇದಕಾಲದ ಋಷಿಗಳು ಈ ಪ್ರಪಂಚ ಒಂದು ಅಶ್ವತ್ಥ ಎಂದು ತಿಳಿದು ಹೇಳಿದ್ದಾರೆ” ಎನ್ನುತ್ತಾನೆ ಕೃಷ್ಣ. “ಈ ಪ್ರಪಂಚ ನಶ್ವರ, ಒಂದು ದಿನ ನಾಶವಾಗುವಂತಹದ್ದು” ಎಂದು ಹೇಳಿ, ತಕ್ಷಣ ಕೃಷ್ಣ ಹೇಳುತ್ತಾನೆ-
“ಇದು ಅವ್ಯಯ” ಎಂದು! ಅಂದರೆ ನಾಶವಿಲ್ಲದ್ದು! 

 ಮಹಾಕಾವ್ಯವಾದ ಮಹಾಭಾರತದಲ್ಲಿ ಅಶ್ವತ್ಥ ಮರಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಕಾಣಬಹುದು. ಅವುಗಳಲ್ಲಿ ಸತಿ ಸಾವಿತ್ರಿಯ ಕಥೆಯೂ ಒಂದು. ಸಾವಿತ್ರಿಯು ವಿವಾಹವಾಗಿ ಒಂದು ವರ್ಷದಲ್ಲಿಯೇ ಅಶ್ವತ್ಥ ಮರದ ಹತ್ತಿರ ಬಳಿ ಸಾವಿತ್ರಿಯ ಪತಿ ಸತ್ಯವಾನನು ಸಾಯುತ್ತಾನೆ. ಆಗ ತನ್ನ ಬುದ್ಧಿವಂತಿಕೆ ಹಾಗೂ ದೃಢವಾದ ದೈವ ಭಕ್ತಿಯ ಮೂಲಕ ಗಂಡನಿಗೆ ಜೀವ ಬರುವಂತೆ ಮಾಡುತ್ತಾಳೆ ಸಾವಿತ್ರಿ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಮಹಿಳೆಯರು ತಮ್ಮ ಸೌಭಾಗ್ಯವನ್ನು ಗಟ್ಟಿಗೊಳಿಸಲು, ಪತಿಯ ಆಯುಷ್ಯದ ವೃದ್ಧಿಗೆ, ಕುಟುಂಬದ ಏಳಿಗೆಗೆ, ಅವಿವಾಹಿತರು ವಿವಾಹ ಆಗಲು, ಕೆಲಸವನ್ನು ಪಡೆದುಕೊಳ್ಳಲು ಹಾಗೂ ಆರೋಗ್ಯ ಸುಧಾರಣೆ ಹೀಗೆ ಅನೇಕ ವಿಷಯಗಳಿಗಾಗಿ ಅಶ್ವತ್ಥ ಮರದ ಪ್ರದಕ್ಷಿಣೆ, ದೀಪ ಬೆಳಗುವುದು, ಪವಿತ್ರ ಧಾರ ಸುತ್ತುವುದು, ವ್ರತ ಕೈಗೊಳ್ಳುವುದು ಹಾಗೂ ಪೂಜೆ ಸಲ್ಲಿಸುವುದರ ಮೂಲಕ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.

ಅಶ್ವತ್ಥ ವೃಕ್ಷದ ಪ್ರದಕ್ಷಣೆ ಹಾಕುವುದರ ಆಧ್ಯಾತ್ಮಿಕ ಲಾಭಗಳು

ಸಾಡೇ ಸಾಥ್ ಶನಿ ದೋಷವನ್ನು ಅಶ್ವತ್ಥ ಮರ ದೂರ ಮಾಡುತ್ತದೆ. ಪ್ರತಿ ಶನಿವಾರ ಬೆಳಿಗ್ಗೆ ಅರಳಿ ಮರದ ಕೆಳಗೆ ಬೆಲ್ಲ ಹಾಗೂ ಸಕ್ಕರೆ ಮಿಶ್ರಿತ ನೀರನ್ನು ಅರ್ಪಿಸಿ. ಧೂಪ ಹಚ್ಚಿ ಅದ್ರ ಜೊತೆಗೆ ಧ್ಯಾನ ಮಾಡಿ. ಸಂಜೆ ಸಾಸಿವೆ ಎಣ್ಣೆಯ ದೀಪವನ್ನು ಅರಳಿ ಮರದ ಕೆಳಗೆ ಹಚ್ಚಿ.

ಅತಿ ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುವ ಮರವೆಂದರೆ ಅದು ಅಶ್ವತ ಮರ ದಿನದ 24 ಗಂಟೆ ಆಮ್ಲಜನಕವನ್ನು ಹೊರಬಿಡುವ ಏಕೈಕ ಮರ ಅರಳಿ ಮರ ಎನ್ನಲಾಗಿದೆ. ಇದಕ್ಕೆ ದೇವ ವೃಕ್ಷ ಎಂದೇ ಕರೆಯಲಾಗುತ್ತದ.

ಅಶ್ವತ್ಥಮರದಲ್ಲಿ ಭಗವಂತನು ಹಯಗ್ರೀಯ ರೂಪದಿಂದ ವಿಶೇಷವಾಗಿ ಅಭಿವ್ಯಕ್ತನಾಗಿ ಈ ಮರವು ಉಳಿದೆಲ್ಲಾ ಮರಗಳಿಗಿಂತ ಹೆಚ್ಚು ಯೋಗ್ಯವೆಂದು ತೋರಿಸುತ್ತಾನೆ .

ಅಶ್ವತ್ಥ ವೃಕ್ಷದ ಮಧ್ಯಭಾಗದಲ್ಲಿ ವಿಷ್ಣು, ತುದಿಯಲ್ಲಿ ರುದ್ರ, ಮೂಲಭಾಗದಲ್ಲಿ ಬ್ರಹ್ಮ ದೇವರು ನೆಲೆಸಿರುವರು.

ಅಶ್ವತ್ಥಮರದ ದರ್ಶನ ಪಾಪನಾಶಕ, ಸ್ಪರ್ಶ ಶ್ರೀಕಾರಕ, ಪ್ರದಕ್ಷಿಣೆ ಆಯುಷ್ಯಕಾರಕ ಎಂದು ಪದ್ಮ ಪುರಾಣ ಹೇಳುತ್ತದೆ.

ಪ್ರತಿದಿನ ಈ ವೃಕ್ಷದ ಸ್ಪರ್ಶ ನಿಷಿದ್ಧ ಶನಿವಾರದಂದು ಮಾತ್ರ ಸ್ಪರ್ಶಿಸಬೇಕೆಂದು ಧರ್ಮಶಾಸ್ತ್ರಗಳು ವಿಧಿಸುತ್ತವೆ.

ಸಂಧ್ಯಾಕಾಲದಲ್ಲಿ ಸೂರ್ಯಾಸ್ತವಾದ ಮೇಲೆ ಪ್ರದಕ್ಷಿಣೆ ಮಾಡಬಾರದು ಎಂದು ಪದ್ಮಪುರಾಣ ಹೇಳುತ್ತದೆ

ಏಳು ಪ್ರದಕ್ಷಿಣೆ ಮಾಡಿದರೆ 10,000 ಗೋದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ಬೇರೆ ಯಾವ ವೃಕ್ಷವು ಇಷ್ಟು ಪುಣ್ಯಪ್ರದವಲ್ಲ.

ಅಶ್ವತ್ಥ ಮರವನ್ನು ನೆಟ್ಟರೆ ಮೂರು ಸಂಪಿಗೆ ಮತ್ತು ಎಕ್ಕೆಗಿಡ, ಏಳು ಆಲದಮರ, ಎಂಟು ಬಿಲ್ವಪತ್ರೆಗಿಡ, ಮತ್ತು ನಿಂಬೆಮರ ನೆಟ್ಟಷ್ಟು ಫಲ.

ಜಲಾಶಯ, ನದಿ ಸಮೀಪದಲ್ಲಿ ಅಶ್ವತ್ಥಮರವನ್ನು ನೆಟ್ಟರೆ ಪಿತೃಗಳಿಗೆ ಬಹಳ ತೃಪ್ತಿಯಿಗುತ್ತದೆ. ಅದರ ಎಲೆಗಳು ಪರ್ವಕಾಲದಲ್ಲಿ ನೀರಿನಲ್ಲಿ ಬಿದ್ದಾಗಲೆಲ್ಲಾ ಪಿಂಡ ಸಮಾನವಾಗಿ ಪಿತೃಗಳಿಗೆ ಅಕ್ಷಯಲೋಕಗಳನ್ನು ಕೊಡುತ್ತದೆ.


ಅಶ್ವತ್ ಮರದ ಔಷಧೀಯ ಗುಣಗಳು.?
ಅಸ್ತಮಾ ಸೇರಿದಂತೆ ಇತರ ಉಸಿರಾಟದ ಸಮಸ್ಯೆಗಳಿಗೆ ರಾಮಬಾಣ:
ನೀವು ಅಸ್ತಮಾ ಮತ್ತು ಇತರೆ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅರಳಿ ಮರಗಳ ಸಹಾಯದಿಂದ ಮನೆಮದ್ದುಗಳನ್ನು ಸಿದ್ಧಪಡಿಸಿಕೊಳ್ಳಬಹುದು.ನೀವು ಮಾಡಬೇಕಾಗಿರುವುದು ಮರದ ತೊಗಟೆಯ ಒಳ ಭಾಗವನ್ನು ತೆಗೆದು ಒಣಗಿಸಿ. ಅದರ ನಂತರ ಆ ಒಣಗಿದ ಭಾಗದ ಪುಡಿಯನ್ನು ತಯಾರಿಸಿ ಅದನ್ನು ನೀರಿನೊಂದಿಗೆ ಔಷಧಿಯಾಗಿ ತೆಗೆದುಕೊಳ್ಳಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಅನೇಕ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಬಹುದು.

ಅರಳಿ ಮರದ ತೊಗಟೆಯು ಬಾಯಿಹುಣ್ಣು, ಆಮಶಂಕೆ, ಮೇಹರೋಗಗಳಿಗೆ ಔಷಧವಾಗಿದೆ. ಎಲೆಯ ಬೂದಿಯನ್ನು ಸುಟ್ಟಗಾಯಕ್ಕೆ ಎಣ್ಣೆಯೊಂದಿಗೆ ಲೇಪನ ಮಾಡುತ್ತಾರೆ. ಒಣ ಎಲೆಯ ನಾರಿನಿಂದ ದೇಹದ ಮೇಲೆ ಸುಂದರ ಚಿತ್ರಗಳನ್ನು ಬರೆಯುತ್ತಾರೆ. ಇದರ ತೊಗಟೆಯ ಕಷಾಯವನ್ನು ಕಜ್ಜಿ ಹುಣ್ಣುಗಳಿಗೆ ಔಷಧವಾಗಿ ಬಳಸುವುದುಂಟು. ಅರಳಿಮರಗಳನ್ನು ತೋಟಗಳಲ್ಲೂ, ದೇವಸ್ಥಾನಗಳ ಪರಿಸರದಲ್ಲೂ ಹೆದ್ದಾರಿಯ ಇಬ್ಬದಿಗಳಲ್ಲೂ ನೆರಳಿಗಾಗಿ ಬೆಳೆಸುತ್ತಾರೆ.

ಎಳೆಯ ಅರಳೀ ಎಲೆಗಳಿಗೆ ಹಸುವಿನ ತುಪ್ಪವನ್ನು ಸವರಿ, ಬಿಸಿ ಮಾಡಿ, ಗಾಯಗಳು ಮಾಗಿ, ಒಡೆಯುವುವು ಮತ್ತು ಕೀವು ಸುರಿದು ಹೋಗಿ ಬಹುಬೇಗನೆ ವಾಸಿಯಾಗುವುವು. ಸುಟ್ಟು ಗಾಯಗಳಿಗೆ ಅರಳೀಮರದ ತೊಗಟೆಯ ನಯವಾದ ಚೂರ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಹಚ್ಚುವುದು. ಅಥವಾ ಅರಳೀ ಮರದ ಎಲೆಗಳನ್ನು ಸುಟ್ಟು ಭಸ್ಮ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಲೇಪಿಸುವುದು.


Comments