ಸನಾತನ ಹಿಂದೂ ಧರ್ಮದಲ್ಲಿ ಗೋವಿನ ಮಹತ್ವ

ಭಗವಂತನ ಸೃಷ್ಟಿಯಲ್ಲಿ ಸೃಷ್ಟಿಯಾದ ಎಲ್ಲಾ ಜೀವರಾಶಿಯನ್ನು ಹಾಗೂ ಎಲ್ಲವನ್ನೂ ದೇವರಂತೆ ಕಾಣುವ ಏಕೈಕ ಧರ್ಮವೆಂದರೆ ಅದುವೇ ನಮ್ಮ ಸನಾತನ ಹಿಂದೂ ಧರ್ಮ. ಅದರಲ್ಲೂ ಹೆಚ್ಚಾಗಿ, ಗೋವನ್ನು ತಾಯಿಯ ರೂಪವೆಂದು ಪರಿಗಣಿಸಲಾಗುತ್ತದೆ. ಗೋಮಾತೆಯೆಂದು ಸನಾತನ ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ವೇದಗಳಲ್ಲಿ ಹಾಗೂ ಪುರಾಣಗಳಲ್ಲಿ ಹೇಳಿರುವಂತೆ 33 ಕೋಟಿ ದೇವಾನುದೇವರುಗಳು ಗೋವಿನಲ್ಲಿ ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ. ಪ್ರತಿನಿತ್ಯ ಮುಂಜಾನೆ ನಾವು ತುಳಸಿಯನ್ನು ಪೂಜಿಸುವುದರಿಂದ ಹೇಗೆ ಶುಭ ಫಲಗಳನ್ನು ಪಡೆಯುತ್ತೇವೆಯೋ ಹಾಗೇ ಗೋವುಗಳನ್ನು ಪೂಜಿಸುವುದರಿಂದ ಕೂಡ ಜೀವನದಲ್ಲಿ ಸಮೃದ್ಧಿಯನ್ನು ಕಾಣಬಹುದು.
ಗಾವೋ ಹ ಜಜ್ಞರೇ ತಸ್ಮಾತ್' (ಪುರುಷ ಸೂಕ್ತ) ಉಕ್ತಿಯಂತೆ ಗೋವುಗಳು ಆ ಪುರುಷ ರೂಪೀ ಭಗವಂತನಿಂದ ಹುಟ್ಟಿದವು. ಮಾತಾ ರುದ್ರಾಣಾಂ ದುಹಿತಾ ವಸೂನಾಂ ಸ್ವಸಾದಿತ್ಯಾನಾಂ ಅಮೃತಸ್ಯನಾಭಿಃ । ಪ್ರನು ವೋಚಂ ಚಿಕಿತುಪೇ ಜನಾಯ ಮಾ ಗಾಮನಾಗಾಂ ಅದಿತಿಂ ವಧಿಷ್ಟ।

(ಋಕ್ ಸಂಹಿತಾ 8-101-18) 

ಏಕಾದಶರುದ್ರರಿಗೆ ಮಾತೆಯು, ಅಷ್ಟವಸುಗಳಿಗೆ ಪುತ್ರಿಯು, ದ್ವಾದಶಾದಿತ್ಯರಿಗೆ ಸಹೋದರಿಯು, ಅಮೃತಕ್ಕೆ ಉತ್ಪತ್ತಿಸ್ಥಾನಳು, ರೋಗರಹಿತಳು (ಸರ್ವದಾ ಶುದ್ಧಳು) ಗೋಸ್ವರೂಪಿಣಿಯಾಗಿರುವ, ತೇಜೋವಂತೆಯಾದ ಆ ಅದಿತಿದೇವತೆಯನ್ನು ಹಿಂಸೆ ಮಾಡಬೇಡಿರಿ.

ಗವಾಂ ಮಧ್ಯೆ ಗಾವೋಯತ್ರ ಭೂರಿ ಶೃಂಗಾ ಅಯಾಸಃ |
ಆತ್ರಾಹ ತದುರುಗಾಯಸ್ಕ ವಿಷ್ಟೋಣ ಪರಮಂ ಪದಂ ಅವಭಾತಿಭೂರೇ।

( ಋಕ್ ಸಂಹಿತಾ : 1-154-6)

ಎಲ್ಲಿ ಬಲಿಷ್ಠವಾದ ಕೊಂಬುಗಳುಳ್ಳ ಚುರುಕಾದ ಗೋವುಗಳು ಇವೆಯೋ, ಅಲ್ಲಿ ಗೋವುಗಳ ಮಧ್ಯದಲ್ಲಿ ಮಹಾಗತಿಯನ್ನುಳ್ಳ, ಸ್ತೋತ್ರಪ್ರಿಯನಾದ, ಮಹಾವಿಭೂತಿಯಾದ ಶ್ರೀ ವಿಷ್ಣುವಿನ ಪರಮ ಪದವು ಪ್ರಕಾಶಿಸುತ್ತದೆ.


ತಾಯಿಯನ್ನು ಕೂಗಿ ಕರೆಯುವ ಸಂಸ್ಕೃತ ಶಬ್ದವು ಅಂಬಾ ಎಂದಾಗಿದೆ. ಇಂದು ತಾಯಿಯನ್ನು ಕೂಗಿ ಕರೆಯಲು ಈ ಶಬ್ದವನ್ನು ಉಪಯೋಗಿಸಿ ಭಾರತೀಯ ಸಂಸ್ಕೃತಿಯನ್ನು ಸಾರುವ ಏಕೈಕ ಪ್ರಾಣಿಯೆಂದರೆ ಗೋವು ಮಾತ್ರ ಎಂದು ಹೇಳಿದರೆ

ಗೋಮಾತೆ ಎಲ್ಲಾ ಜೀವಿಗಳ ತಾಯಿ. ಗೋವುಗಳು 33 ಕೋಟಿ ದೇವತೆಗಳ ತಾಯಂದಿರು, ಅದು ಎಲ್ಲಾ ಬ್ರಹ್ಮಾಂಡದಾದ್ಯಂತ ಭೌತಿಕ ಅಸ್ತಿತ್ವದಲ್ಲಿ ಸೃಷ್ಟಿಯನ್ನು ನಿರ್ವಹಿಸುತ್ತದೆ. 


ಗೋಹತ್ಯೆ ಮಾಡುವವನು ಅಥವಾ ಗೋಹತ್ಯೆ ಮಾಡುವವರಿಗೆ ಗೋವುಗಳನ್ನ ಮಾರುವವನು, ಅಧರ್ಮಿ, ಹಾಗೂ ಪಾಪಿಗಳಲ್ಲಿ ಮಹಾ ಪಾಪಿ.
ಗೋವಿನ ಹಾಲು, ಮೊಸರು, ತುಪ್ಪ, ಶಗಣಿ, ಮೂತ್ರ ದ ಮಹತ್ವ ಹಾಗೂ ಲಾಭಗಳು

ದೇವರ ಮನೆಯನ್ನು ಗೋಮಯ (ಗೋವಿನ ಶಗಣಿ) ದಿಂದ ಸಾರಿಸುವುದಿದೆ. ನೆಲವನ್ನು ಕೂಡ ಗೋಮಯದಿಂದ ಸಾರಿಸಿದರೆ ಮಾತ್ರ ಶುದ್ದಿಯು ಏರ್ಪಡುತ್ತದೆ. ಅಂದರೆ ಭೂಮಿಯು ಈ ಗೋವಿನ ಶಗಣಿಯಿಂದ ಪವಿತ್ರವೆನಿಸುತ್ತದೆಯಾದ್ದರಿಂದ ಗೋವಿನ ಮಹಿಮೆ ಅಪಾರ.

ಗೋವಿನ ಹಾಲು, ಮೊಸರು, ತುಪ್ಪ, ಶಗಣಿ, ಮೂತ್ರ ಇವುಗಳ ಸಮೂಹಕ್ಕೆ ಪಂಚಗವ್ಯ ವೆಂದು ಹೆಸರು. ಇದನ್ನು ಮಂತ್ರಸಹಿತವಾಗಿ ಯೋಗ್ಯ ಪ್ರಮಾಣದಲ್ಲಿ ಸೇರಿಸಿ ಸೇವಿಸಿದಾಗ ಅದು ಮಾನವನಿಗೆ ದೇಹ ಶುದ್ಧಿಯನ್ನು ತಂದುಕೊಟ್ಟು ಎಲ್ಲ ಪಾಪಗಳನ್ನು ನಾಶಪಡಿಸುತ್ತದೆ

ಗೋಮೂತ್ರವು ಜಠರಾಗ್ನಿಯನ್ನು ಉದ್ದೀಪನಗೊಳಿಸಿ ಅಗ್ನಿ ಮಾಂದ್ಯ ದೋಷವನ್ನು ಕಳೆಯುತ್ತದೆ. ಗೋಮಯವು ಕ್ರಿಮಿನಾಶಕವೆನಿಸಿದೆ. ಗೋಷ್ಕೃತ (ತುಪ್ಪ) ವು ಬುದ್ದಿ ಶಕ್ತಿಗೂ, ಜ್ಞಾನಶಕ್ತಿಗೂ ಉಪಯುಕ್ತವೆನಿಸಿ ಆಯುರ್ವಧ್ರಕವಾಗಿದೆ. ಗೋಕ್ಷೀರ (ಹಾಲು)ವನ್ನು ಶಿಶುಗಳಿಗೆ ಹಾಕುತ್ತಾರೆ. ಅದು ಸುಲಭವಾಗಿ ಜೀರ್ಣವಾಗುತ್ತದೆ. ಗೋಮಯದಿಂದ ಬಯೋಗ್ಯಾಸ್ ಉತ್ಪತ್ತಿ ಮಾಡಿ ದೀಪ, ಅಡಿಗೆಗಳನ್ನು ಮಾಡಬಹುದಾಗಿದೆ.

ಗೋಮೂತ್ರಕ್ಕೆ ವಿಶೇಷವಾದ ಶಕ್ತಿಯು ಇದೆ ಕ್ಯಾನ್ಸರ್ ನಂತಹ ರೋಗಗಳು ಕೂಡ ವಾಸಿಯಾಗುತ್ತದೆ ಎಂದು. ಸಂಶೋಧನೆಯಲ್ಲಿ ಸಾಬೀತಾಗಿದೆ.

ಆಯುರ್ವೇದವೆಂದರೆ ನಮ್ಮ ಪ್ರಾಚೀನ ವೈದ್ಯಕೀಯಶಾಸ್ತ್ರ. ಆಯುರ್ವೇದದ ದೃಷ್ಟಿಯಲ್ಲಿ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವೊಂದಷ್ಟೇ ಅಲ್ಲ ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವೂ ಕೂಡ.ಮನುಷ್ಯನ ಸಾಧನೆಗೆ ಆರೋಗ್ಯವೇ ಮೂಲ. ಆಯುರ್ವೇದದಲ್ಲಿ ಗೋವಿನ ಮಹತ್ವ ಹಾಗೂ ಗೋಉತ್ಪನ್ನಗಳಿಗಿರುವ ಪ್ರಾಮುಖ್ಯತೆಯನ್ನು ವಿವರವಾಗಿ ತಿಳಿಸಲಾಗಿದೆ.ಗೋವಿನಿಂದ ಸಿಗುವ ಪಂಚಪವಿತ್ರ ವಸ್ತುಗಳೇ ಪಂಚಗವ್ಯ. ಅವು-ಹಾಲು,ಮೊಸರು,ತುಪ್ಪ,ಗೋಮಯ ಹಾಗೂ ಗೋಮೂತ್ರ ಈ ಐದೂ ಪವಿತ್ರ ವಸ್ತುಗಳಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ.

ನಿತ್ಯ ನಾವು ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವನೆ ಮಾಡುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿಗಳು ಹೆಚ್ಚಾಗುತ್ತದೆ ಹಾಗೂ ಪಿತ್ತ ಕಫ ವಾತ ಇಂತಹ ಸಮಸ್ಯೆಗಳು ಕೂಡ ದೂರವಾಗುತ್ತದೆ.

ಗೋವುಗಳು ಎಬ್ಬಿಸುವ ಧೂಳಿಯ ಕಾಲವು ಗೋಧೂಳಿ ಲಗ್ನ ಎನಿಸಿ ಅದು ಪ್ರಶಸ್ತ ಕಾಲವಾಗಿದೆ. ಗೋಧೂಳಿಯಲ್ಲಿ ಹಾಯ್ದು ಬರುವಿಕೆಯು ವಾಯವ್ಯಸ್ನಾನ ವೆನಿಸಿ ಪವಿತ್ರಸ್ನಾನವಾಗಿದೆ. ಗೋಮೂತ್ರ ಸ್ನಾನವು ಗಂಗಾ ಸದೃಶ ಸ್ನಾನವಾಗಿದೆ. ಇದರಿಂದ ಹತ್ತು ಜನ್ಮಗಳ ಪಾಪವು ನಾಶವಾಗುತ್ತದೆ. ಕಪಿಲಾ ಗೋವಿನ ಪ್ರದಕ್ಷಿಣೆಯು ಭೂಪ್ರದಕ್ಷಿಣೆಯ ಪುಣ್ಯದೊರಕಿಸಿಕೊಡುತ್ತದೆ. ಗೋವಿನ ಜೊತೆ ವಾಸ ಭಗವಂತನಿಗೆ ಅತಿ ಪ್ರೀತಿಕರವೆನಿಸಿದೆ. ಗೋವಿನ ಮೈಮೇಲೆ ಕೈಯಾಡಿಸಿ, ಅದರ ಮೈ ತುರಿಸಿದರೆ ತೀರ್ಥಯಾತ್ರೆ ಮಾಡಿದ ಫಲ ಬರುತ್ತದೆ.

ಗೋವು ಗಳಿಂದ ಯಾವಾಗಲೂ ಎಲ್ಲಾ ರೀತಿಯ ಲೋಕಕಲ್ಯಾಣದ ಕಾರ್ಯಗಳೇ ಆಗೋದು ಈ ಕಾರಣಕ್ಕಾಗಿ ಅವು ಯಾವಾಗಲೂ ಪೂಜಿಸಲ್ಪಡುತ್ತವೆ. ಗೋಮಾತೆ ತಾನು ಹುಲ್ಲು ತಿಂದು ನಮಗೆ ಶುದ್ಧವಾದ ಅಮೃತದಂತಹ ಹಾಲನ್ನು ನೀಡುತ್ತಾಳೆ ತಮ್ಮ ಹಾಲಿನಿಂದ ಭೂಮಂಡಲದ ಜೀವಿಗಳನ್ನು ಪೋಷಿಸುತ್ತವೆ.

ಶ್ರೀಮದ್ ಭಾಗವತದಲ್ಲಿ, ಅಧ್ಯಾಯ 5, ಶ್ಲೋಕ 14 
ದುಷ್ಟರು ಮತ್ತು ಸೊಕ್ಕಿನವರು ಯಾವುದೇ ಪಶ್ಚಾತ್ತಾಪ ಅಥವಾ ಶಿಕ್ಷೆಯ ಭಯವಿಲ್ಲದೆ ಪ್ರಾಣಿಗಳನ್ನು ಕೊಲ್ಲುತ್ತಾರೆ. ಅದೇ ಪ್ರಾಣಿಗಳು ಮುಂದಿನ ಜನ್ಮದಲ್ಲಿ ಅವರನ್ನು ಕೊಲ್ಲುತ್ತದೆ ಎಂದು.

ಮನು-ಸಂಹಿತಾ, ಅಧ್ಯಾಯ 4, ಶ್ಲೋಕ 162 
 ಒಬ್ಬ ಗುರು, ಒಬ್ಬ ಶಿಕ್ಷಕ, ತಂದೆ, ತಾಯಿ, ಒಬ್ಬ ಬ್ರಾಹ್ಮಣ, ಗೋವು ಮತ್ತು ಯೋಗಿ ಎಲ್ಲರನ್ನೂ ಎಂದಿಗೂ ಕೊಲ್ಲಬಾರದು.

|| ಓಂ ಸರ್ವ ದೇವಮಯೆ ದೇವಿ ಲೋಕಾನಾಮ್ ಶುಭ ನಂದಿನಿ ಮಾತೃ ಮಾಭಿಷಿತ ಸಫಲ ಪುರೋ ನಂಧಿನಿ||

ಈ ಮಂತ್ರವನ್ನು 3 ಭಾರಿ ಹೇಳಿ ಗೋವಿನ ಮೈ ಸ್ಪರ್ಶ ಮಾಡುತ್ತ ಈ ಒಂದು ಮಂತ್ರವನ್ನು ಹೇಳಬೇಕು ಗೋಮಾತೆ ಅನುಗ್ರಹದಿಂದ ನಿಮಗೆ ಯಾವುದೇ ರೀತಿ ಸಂಕಷ್ಟ ಇದ್ದರೂ ಕೂಡ ಅವೆಲ್ಲವೂ ನಿವಾರಣೆಯಾಗುತ್ತದೆ ಮಾಡುವ ಪ್ರತಿಯೊಂದು ಕೆಲಸದಲ್ಲಿ ಒಳ್ಳೆ ಯಶಸ್ಸನ್ನು ಪಡೆದುಕೊಳ್ಳಬಹುದು ಗೋಮಾತೆಯನ್ನು ಪೂಜಿಸಿ ಹಸುವಿಗೆ ಪ್ರೀತಿಯಿಂದ ಆಹಾರ ತಿನ್ನಲು ಕೊಡುವುದರಿಂದ ಸಾಕಷ್ಟು ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಗೋವು ಎಲ್ಲ ಪ್ರಾಣಿಗಳಲ್ಲಿ ಶ್ರೇಷ್ಠ ಏಕೆ ?

ಪೂರ್ವ ಕಾಲದಲ್ಲಿ ಗೋವುಗಳ ಸೃಷ್ಟಿಯಾದ ನಂತರ ಅವೆಲ್ಲವೂ ಸೇರಿ ಒಂದು ಲಕ್ಷ ವರ್ಷಗಳ ಪರ್ಯಂತವಾಗಿ ಬಹಳ ದುಷ್ಕರವಾದ ತಪಸ್ಸನ್ನು ಮಾಡಿದವು. ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠತ್ವವನ್ನು ಪಡೆಯಬೇಕೆಂಬುದೇ ಆ 1 ತಪಸ್ಸಿನ ಉದ್ದೇಶವಾಗಿತ್ತು .

ಲೋಕದಲ್ಲಿ ಪ್ರಚಲಿತವಾಗಿರುವ ಎಲ್ಲ ವಿಧವಾದ ದಕ್ಷಿಣಾವಸ್ತುಗಳಲ್ಲಿ ನಾವೇ ಶ್ರೇಷ್ಠರೆಂದು ಪರಿಗಣಿತರಾಗಬೇಕು. ನಾವು ಯಾವುದೇ ದೋಷದಿಂದ ಲಿಪ್ತರಾಗಬಾರದು

ನಮ್ಮ ಶಗಣಿಯನ್ನು ಶರೀರಕ್ಕೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಜನರು ಪವಿತ್ರರಾಗಬೇಕು. ದೇವತೆಗಳು ಮತ್ತು ಮನುಷ್ಯರೂ ಪವಿತ್ರತೆಗಾಗಿ ಗೋಮಯವನ್ನು ಉಪಯೋಗಿಸಬೇಕು.

ಹಾಗೆಯೇ ಸ್ಥಾವರ ಜಂಗಮ ಪ್ರಾಣಿಗಳೆಲ್ಲವೂ ಗೋಮಯದಿಂದ ಪರಿಶುದ್ಧರಾಗಬೇಕು. ನಮ್ಮನ್ನು ಸತ್ಪಾತ್ರರಲ್ಲಿ ದಾನ ಮಾಡುವವರು ನಮ್ಮ ಲೋಕಗಳಿಗೆ (ಗೋಲೋಕಗಳಿಗೆ) ಹೋಗುವಂತಾಗಬೇಕು.

ಇಂಥ ತಪಸ್ಸಿನಿಂದ ಸಂತುಷ್ಟರಾದ ಬ್ರಹ್ಮದೇವರು ಪ್ರತ್ಯಕ್ಷರಾದರು. ಗೋವುಗಳಿಗೆ ನಿಮ್ಮ ಆಶಯದಂತೆ ಎಲ್ಲವೂ ನೆರವೇರಲಿ, ನೀವು ಸಮಸ್ತ ಲೋಕಗಳನ್ನು ಉದ್ಧರಿಸಿರಿ ಎಂದು ವರವಿತ್ತರು.

ತಮ್ಮ ಸಮಸ್ತ ಕಾಮನೆಗಳೂ ಬ್ರಹ್ಮದೇವರಿತ್ತ ವರದಿಂದ ಲಭಿಸಿದ ನಂತರ ಗೋವುಗಳು ತಪಸ್ಸಿನಿಂದ ನಿವೃತ್ತವಾದವು.

(1) ಶತಂ ವರ್ಷ ಸಹಸ್ರಾಣಾಂ ತಪಸ್ತಪ್ತಂ ಸುದುಷ್ಕರಮ್ | ಗೋಭಿಃ ಪೂರ್ವಂ ವಿಸೃಷ್ಟಾಭಿರ್ಗಚ್ಚೇಮ ಶ್ರೇಷ್ಠತಾಮಿತಿ |

(ಮಹಾಭಾರತ)

(2) ಲೋಕೇಶಸ್ಮಿನ್ ದಕ್ಷಿಣಾನಾಂ ಚ ಸರ್ವಾಸಾಂ ವಯಮುತ್ತಮಾಃ | ಭವೇಮ ನ ಚ ಲಿಪ್ರೇಮ ದೋಷೇಣೇತಿ ಪರಂತಪ ||

( ಮಹಾಭಾರತ)

(3) ಅಸ್ಮತ್ ಪುರೀಪಸ್ನಾನೇನ ಜನಃ ಪೂಯೇತ ಸರ್ವದಾ । ಶಕೃತಾ ಚ ಪವಿತ್ರಾರ್ಥಂ ಕುರ್ವಿರನ್ ದೇವ ಮಾನುಷಾಃ ||

(ಮಹಾಭಾರತ)

(4) ತಥಾ ಸರ್ವಾಣಿ ಭೂತಾನಿ ಸ್ಥಾವರಾಣಿ ಚರಾಣಿಚ | ಪ್ರದಾತಾರಶ್ಚ ಲೋಕಾನ್ನೋ ಗಚ್ಛೇಯುರಿತಿ ಮಾನದ ||

ಆದುದರಿಂದ ಗೋವುಗಳನ್ನು ಪ್ರಾತಃಕಾಲದಲ್ಲಿ ನಮಸ್ಕರಿಸಬೇಕು. ತತ್ಪಲವಾಗಿ ಮನುಷ್ಯನು ಪುಷ್ಟಿಯನ್ನು ಹೊಂದುತ್ತಾನೆ

ಆ ನಂತರದಲ್ಲಿ ಗೋವುಗಳು ಬ್ರಹ್ಮನ ವರದಿಂದಾಗಿ ಸಂಪೂರ್ಣ ಜಗತ್ತಿಗೆ ಆಶ್ರಯ ಭೂತಗಳಾದವು. ಆದುದರಿಂದ ಮಹಾಭಾಗ್ಯಶಾಲಿಗಳಾದ ಗೋವುಗಳು ಪರಮಪವಿತ್ರವೆಂದು ಹೇಳುತ್ತಾರೆ. ಮತ್ತು ಗೋವುಗಳು ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠ ಹಾಗೂ ವಂದನೀಯಗಳೂ ಆದವು.

ಗೋದಾನದ ಮಹತ್ವ 

ಮನುಷ್ಯನು ಮಾಡಿದ ಎಲ್ಲಾ ಪಾಪಗಳಿಂದ ಮುಕ್ತಿ ಹೊಂದಲು ಒಂದೇ ಪರಿಹಾರ ಅದು ಗೋದಾನ.

ಸಾವಿರ ಗೋವುಗಳನ್ನು ಹೊಂದಿದವನು ನೂರು ಗೋವುಗಳನ್ನು ದಾನಕೊಡಬೇಕು !.

ಎಲ್ಲ ಶಾಸ್ತ್ರಮಯವಾದುದು ಗೀತೆ. ಎಲ್ಲ ಪಾಪಗಳನ್ನು ಕಳೆಯುವವನು ಶ್ರೀಹರಿ, ಎಲ್ಲ ಸಂಪತ್ತುಗಳಲ್ಲಿ ಶ್ರೇಷ್ಠವಾದುದು ಜ್ಞಾನ ಸಂಪತ್ತು. ಎಲ್ಲ 2 ದಾನಗಳಲ್ಲಿ 'ಗೋದಾನ' ಮುಖ್ಯವಾದುದು ".

ಎಂತಹ ಘೋರ ಪಾಪಗಳನ್ನು ಮಾಡಿದ್ದರೂ, ಗೋದಾನವು ಆ ಎಲ್ಲ ಪಾಪಗಳಿಂದ ಪಾರು ಮಾಡುತ್ತದೆ. ಯಾರು ಭಕ್ತಿಯಿಂದ ಒಂದು ಗೋವನ್ನಾದರೂ ಖರೀದಿಸಿ ಯೋಗ್ಯರಿಗೆ (ಸತ್ಪಾತ್ರರಿಗೆ) ದಾನ ಮಾಡುವರೋ ಅವರು ಆ ಗೋವಿನಲ್ಲಿ ಎಷ್ಟು ಕೂದಲುಗಳಿವೆಯೋ ಅಷ್ಟು ಗೋವುಗಳ ದಾನದ ಫಲವನ್ನು ಹೊಂದುತ್ತಾರೆ.

ದಾನ ಮಾಡುವುದರಿಂದ ಪೂತಾತ್ಮನಾಗಲು ಇಚ್ಛಿಸುವವನು. ಯಾವಾಗಲೂ ವಿಶೇಷವಾಗಿ ಗೋದಾನವನ್ನು ಮಾಡಬೇಕು ".

1 ಶತಂ ಸಹಸ್ರಗುರ್ದದ್ಯಾತ್ ಸರ್ವೆ ಸಮಫಲಾಃ ಸ್ಮೃತಾಃ ||

(ಧರ್ಮಮಯೂಖ)

2 ಸರ್ವಶಾಸ್ತ್ರಮಯೀ ಗೀತಾ ಸರ್ವಪಾಪಹರೋ ಹರಿ: | ಸರ್ವ ಸಂಪನ್ನ ಯಂ ಜ್ಞಾನಂ ದಾನೇ ಗೋದಾನಮೇವತತ್ ||

3 ಯಾನಿ ಕಾನಿ ಚ ದುರ್ಗಾಣಿ ದುಷ್ಕೃತಾನಿ ಕೃತಾನಿ ಚ । ತರಂತಿ ಜೈವ ಪಾಸ್ಥಾನಂ ಧೇನುಂ ಯೇ ದದತಿ ಪ್ರಭೋ ॥ ಏಕೇನೈವ ಚ ಭಕ್ತನ ಯಃ ಕ್ರೀತ್ವಾ ಗಾಂ ಪ್ರಯಚ್ಛತಿ । ಯಾವಂತಿ ತಸ್ಮಾ ರೋಮಾಣಿ ಸಂಭವಂತಿ ಶತಕ್ರತೋ । ತಾವತ್ ಪ್ರದಾನಾತ್ ಸ ಗವಾಂ ಫಲಮಾಪೋತಿ ಶಾಶ್ವತಮ್ ।।
ದಾನೇನ ಯಃ ಪ್ರಯತೋ ಭೂತ್ಸದೈವ ವಿಶೇಷತೋ ಗೋಪ್ರದಾನಂ ಚ ಕುರ್ಯಾತ್ ॥ 

(ಮಹಾಭಾರತ )

ಪ್ರತಿದಿನ ನಾವು ಗೋಪೂಜೆ ಮಾಡುವುದರಿಂದ ಜನ್ಮ ಜನ್ಮದ ಎಲ್ಲಾ ಪಾಪಗಳು ಕೂಡ ನಾಶವಾಗುತ್ತದೆ. ಎಲ್ಲಾ ದೇವರು ದೇವತೆಗಳ ಕೃಪೆಯು ಕೂಡ ನಮ್ಮ ಮೇಲೆ ಸದಾ ಇರುತ್ತದೆ.

ದೇಶಹಿತಕ್ಕಾಗಿ ಗೋರಕ್ಷಣೆ

ಗೋವಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಭಾರತೀಯ ಸಂಸ್ಕೃತಿಯಲ್ಲಿ ನಿತ್ಯ ಪಠನೀಯವಾದ ಒಂದು ಶ್ಲೋಕ ಹೀಗಿದೆ.

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ । ಲೋಕಾಃ ಸಮಸ್ತಾಃ ಸುಖಿನೋ ಭವಂತು ||

ಈ ಪ್ರಾರ್ಥನಾ ಸ್ತೋತ್ರದಲ್ಲಿ ನಮ್ಮ ಋಷಿಮುನಿಗಳು ಎರಡು ಪೂಜನೀಯ ವಿಷಯಗಳನ್ನು ಗುರುತಿಸಿದ್ದಾರೆ. ಒಂದು ಗೋಮಾತೆ, ಇನ್ನೊಂದು ಬ್ರಾಹ್ಮಣ. ಇಬ್ಬರಿಗೂ ನಿತ್ಯದಲ್ಲಿ ಶುಭಕೋರುವದು, ಲೋಕದಲ್ಲಿ ಯ ಎಲ್ಲ ಜನರು ಸುಖಗಳಾಗಿರಲಿ ಎಂಬುದು ಇಲ್ಲಿನ ಮುಖ್ಯ ಆಶಯ.

ನಮ್ಮಲ್ಲಿ ಆಗುವ ಗೋ ಸೇವೆಗಳನ್ನು ನಿತ್ಯ ನಿರಂತರವಾಗಿ ಮಾಡುವ. ಅದು ಸಂಘಟನಾತ್ಮಕವಾಗಿಯೂ ಆಗಬಹುದು ಅಥವಾ ವೈಯಕ್ತಿಕವಾಗಿಯೂ ಕೂಡ ಆಗಬಹುದು.
ಗೋವುಗಳಿಗೆ ಹಿಂಸೆ ಕೊಡಬೇಡಿ, ಹಿಮ್ಸೆ ಕೊಟ್ಟು ಪಾಪವನ್ನು ಸುತ್ತಿಕೊಳ್ಳಬೇಡಿ ಗೋವುಗಳ ಸೇವೆಯನ್ನು ಮಾಡಿ ಪಾಪಗಳನ್ನ ಕಳೆದುಕೊಳ್ಳಿ

ಮಾನವನ ಮನದ ಭಾವನೆಗೆ ಸ್ಪಂದಿಸುವ ಗೋವು ಅದ್ಭುತ ಡಾಕ್ಟರ್


ಗೋವಿನ ಮಹಿಮೆ ಹಾಗೂ ಇನ್ನೂ ಹೆಚ್ಚಿನ ಮಹತ್ವಗಳನ್ನು ತಿಳಿದುಕೊಳ್ಳಲು. 
ಶ್ರೀನಿವಾಸ ಎಸ್. ಮಠದ ಇವರು ಬರೆದ 
ಭಾರತೀಯ ಸಂಸ್ಕೃತಿಯಲ್ಲಿ ಗೋವು ಎನ್ನುವ ಈ ಪುಸ್ತಕವನ್ನು ಓದಿ ಗೋವಿನ ಬಗ್ಗೆ ಸಂಪೂರ್ಣ ಹಾಗೂ ಗೋವಿನ ಆಧ್ಯಾತ್ಮಿಕ ಮಹತ್ವ  ಮಾಹಿತಿ ಈ ಪುಸ್ತಕದಲ್ಲಿ ಇದೆ.








Comments