ರುದ್ರಾಕ್ಷಿ ಹಾಗೂ ರುದ್ರಾಕ್ಷಿ ಧರಿಸುವುದರ ಮಹತ್ವ

ನಮ್ಮ ಸನಾತನ ಧರ್ಮದಲ್ಲಿ ರುದ್ರಾಕ್ಷಿಗೆ ಹಾಗೂ ರುದ್ರಾಕ್ಷಿ ಹಣ್ಣಿಗೆ ತುಂಬಾ ಮಹತ್ವಗಳು ಇದೆ ರುದ್ರಾಕ್ಷಿ ಹಣ್ಣುಗಳನ್ನು ಹಿಮಾಲಯದಲ್ಲಿ ಸಾಧಕರು ಹಾಗೂ ಮುನಿಗಳು ಸೇವಿಸುತ್ತಾರೆ ಯಾಕಂದರೆ ಇದು ಹಸಿವು ಬಾಯಾರಿಕೆ ನಿಯಂತ್ರಣ ಮಾಡುತ್ತದೆ. ಹಾಗೂ ನಮ್ಮಲ್ಲಿ ಜಪ ಧ್ಯಾನ ಮಾಡುವವರು  ಹೆಚ್ಚಿನವರು ಬಳಸುತ್ತಾರೆ, ಹಾಗೂ ಇನ್ನು ಹೆಚ್ಚಿನವರು ರುದ್ರಾಕ್ಷಿ  ಧರಿಸುತ್ತಾರೆ ರುದ್ರಾಕ್ಷಿ  ಧರಿಸುವುದರ ಮಹತ್ವಗಳೇನು? ಹಾಗೂ ಆಧ್ಯಾತ್ಮ ಕಾರಣಗಳೇನು.?


ಶಿವ ಪುರಾಣದಲ್ಲಿ, ರುದ್ರಾಕ್ಷಿಯ ಮೂಲವನ್ನು ಶಿವನ ಕಣ್ಣೀರು ಎಂದು ವಿವರಿಸಲಾಗಿದೆ  ಪದ್ಮ ಪುರಾಣದಲ್ಲಿ ಶಿವನ ಬೆವರಿನ ಹನಿ ಎಂದು ವಿವರಿಸಲಾಗಿದೆ ಆದರೆ ಎರಡರ ಅರ್ಥ ಏನು ಅಂದರೆ ಇದು ಶಿವನ ದೇಹದ ನೀರು ಎಂದು ಅರ್ಥ.   ರುದ್ರಾಕ್ಷಿಯು ಮಾನಸಿಕ ಮತ್ತು ದೈಹಿಕ ಪ್ರಯೋಜನಗಳನ್ನು ಸಹ ಹೊಂದಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರುದ್ರಾಕ್ಷಿಯು ವ್ಯಕ್ತಿಯ ಮನಸ್ಸನ್ನು ಶಾಂತಗೊಳಿಸಲು ಮಾತ್ರವಲ್ಲದೆ ಅವರ ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 


ವೈಜ್ಞಾನಿಕವಾಗಿಯೂ ಕೂಡ ರುದ್ರಾಕ್ಷಿಯ ಮಹತ್ವಗಳು ಶಕ್ತಿಗಳು ಸಾಬೀತಾಗಿದೆ, ಧರಿಸುವುದರಿಂದ  ಜನ್ಮ ಜನ್ಮದ ಪಾಪಗಳು ನಾಶವಾಗುತ್ತದೆ ಎಂದು ಪದ್ಮ ಪುರಾಣದಲ್ಲಿ ಹೇಳುತ್ತಾರೆ.

ರುದ್ರಾಕ್ಷಿ ಧರಿಸುವುದರಿಂದ  ಆಧ್ಯಾತ್ಮಿಕವಾಗಿ ಇನ್ನು ಹೆಚ್ಚಿನ ಮಹತ್ವವನ್ನು ಹೇಳಿದ್ದಾರೆ ರುದ್ರಾಕ್ಷಿ ಧರಿಸುವುದರಿಂದ  ಭಗವಾನ್ ಶಂಕರ್ ನ ಕೃಪೆ ನಮ್ಮ ಮೇಲೆ ಇರುತ್ತದೆ  ಕ್ರೋಧ ಕಮ್ಮಿಯಾಗುತ್ತದೆ ಅಹಂಕಾರ ನಾಶವಾಗುತ್ತದೆ. 

ನಮ್ಮಲ್ಲಿನ ಆಧ್ಯಾತ್ಮಿಕ ಹಾಗೂ ದೈಹಿಕ ಶಕ್ತಿ ಜಾಗೃತವಾಗುತ್ತದೆ. ಹಾಗೂ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.

ರಕ್ತದೊತ್ತಡ ಶುಗರ್ ನಿದ್ರೆ ಸಮಸ್ಯೆ ಆಗಾಗ ಬರುವ ಜ್ವರಗಳು ಇಂಥ ಸಮಸ್ಯೆಗಳು ದೂರವಾಗುತ್ತದೆ. 

ರುದ್ರಾಕ್ಷಿಯನ್ನು ಧರಿಸುವುದರಿಂದ ಈಗಿನ ಜನ್ಮದಲ್ಲಿ ಕಷ್ಟಗಳನ್ನು ಉಂಟುಮಾಡುವ ಹಿಂದಿನ ಜನ್ಮದ ಪಾಪಗಳು ನಾಶವಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆ.  ರುದ್ರಾಕ್ಷಿಯು ಎಲ್ಲಾ ಪಾಪಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಜೀವನದಲ್ಲಿ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.


ರುದ್ರಾಕ್ಷಿಯನ್ನ ಯಾಕೆ ಧರಿಸಬೇಕು ಅದರಿಂದ ಯಾವ ಯಾವ ಫಲಗಳು ಸಿಗುತ್ತದೆ ಅದರ ಮಹತ್ವಗಳೇನು ಅನ್ನೋದನ್ನ ಪದ್ಮ ಪುರಾಣದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ .


ಪದ್ಮಪುರಾಣ ಸೃಷ್ಟಿ-ಖಂಡ ಅಧ್ಯಾಯ-57 ರುದ್ರಾಕ್ಷಿ ಧಾರಣೆ ಮಹತ್ವ 



ಸ್ಪರ್ಶನಾದ್ದಿ ವನಾಪೋಶಿ ಧಾರಣಾನ್ನೊಕ್ಷತಾಂ ಪ್ರಜೇತ್ | ಶಿರಸ್ಯುರಸಿ ಬಾಹೌ ಚ ರುದ್ರಾಕ್ಷಂ ಧಾರಯೇತ್ತು ಯಃ

ಸಚೇಶಾಸನಸನೋ ಲೋಕೇ ಮಖೇ ಸರ್ವತ್ರಗೋಚರಃ : ಯತ್ರ ತಿಷ್ಠತ್ಯಸೌ ವಿಪ್ರಃ ಸದೇಶಃ ಪುಣ್ಯವಾನ್ನವೇತ್

ತಂ ದೃಷ್ಟಾಪ್ಯಥವಾ ಸ್ಪಷ್ಟಾ ನರಃ ಪೂಯೇತ ಕಲ್ಮಷಾತ್ । ಯಜ್ಞಂ ತರ್ಪಣಂ ದಾನಂ ಸ್ನಾನಮರ್ಚಾಪ್ರದಕ್ಷಿಣಂ

ಯಕ್ಕಿಂಚಿತ್ತುರುತೇ ಪುಣ್ಯಂ ನಿಖಿಲಂ ತದನಂತರ | ತೀರ್ಥಾನಾಂ ಚ ಮಹತೀರ್ಥ೦ ರುದ್ರಾಕ್ಷಸ್ಯ ಫಲಂ ದ್ವಿಜಾಃ

ಅವ ಧಾರಣಾದ್ದೇ ಹೇ ಪಾಪಾತ್ರೋತೋಪವರ್ಗಭಾಕ್ | ಗೃಹೀತ್ವಾ ಚಾಕ್ಷಮಾಲಾಂ ಚ ಬಹ್ಮಗ್ರಂಥಿಯುತಾಂ ಶಿವಾಂ

ಯಜ್ಜಪ್ತಂ ಚ ಕೃತಂ ದಾನಂ ಸ್ತೋತ್ರಮಂತ್ರಂ ಸುರಾರ್ಚನಂ । ಸತ್ವಂ ಚಾಕ್ಷಯತಾ ಮೇತಿ ಪಾಪಂ ಚ ಕ್ಷಯತಾಂ ವ್ರಜೇತ್||

ರುದ್ರಾಕ್ಷಿಯನ್ನು ಮುಟ್ಟುವುದರಿಂದ , ಧರಿಸುವುದ ರಿಂದ ಮೋಕ್ಷವನ್ನೂ ಹೊಂದುತ್ತಾನೆ. ತಲೆ, ಎದೆ, ತೋಳುಗಳಲ್ಲಿ ರುದ್ರಾಕ್ಷಿಯನ್ನು ಧರಿಸಿದವನು ಈಶ್ವರನಿಗೆ ಸಮನು ಎಲ್ಲಾ ಪೂಜೆಗಳಲ್ಲಿಯೂ ಶ್ರೇಷ್ಠನು. ಈ ಇಂಥವರು ಇರುವ ಸ್ಥಳವೇ ಪುಣ್ಯಪ್ರದವಾದ ದೇಶವು.

ರುದ್ರಾಕ್ಷಿಯನ್ನು ಧರಿಸಿದವರನ್ನು  ಮುಟ್ಟಿದರೂ, ನೋಡಿದರೂ, ಪಾಪಗಳೆಲ್ಲವೂ ಪರಿಹಾರವಾಗುತ್ತವೆ. ರುದ್ರಾಕ್ಷವನ್ನು ಹಾಕಿಕೊಂಡು ಜಪಮಾಡಿದರೆ, ತರ್ಪಣ ದಾನ, ಸ್ನಾನ, ಪೂಜೆ, ನಮಸ್ಕಾರ ಇವುಗಳನ್ನ ಮಾಡಿದರೆ, ಇನ್ನೂ ಯಾವ ಪುಣ್ಯ ಕೆಲಸವನ್ನು ಮಾಡಿದರೂ ಕೂಡ ಬಹು ಫಲ ಸಿಗುವುದು. 

ರುದ್ರಾ ಕ್ಷಿಯ ಫಲವು, ತೀರ್ಥಗಳೊಳಗೆಲ್ಲ ಉತ್ತಮವಾದ ತೀರ್ಥವು ಇದನ್ನು ಧರಿಸುವುದ ರಿಂದ ಪಾಪವನ್ನು ಕಳೆದುಕೊಂಡು ಮೋಕ್ಷವನ್ನು ಹೊಂದುವನು. ಬ್ರಹ್ಮಗಂಟಿನಿಂದ ಕೂಡಿದ ಅಕ್ಷಮಾಲೆಯನ್ನು ಹಿಡಿದು ಮಾಡಿದ ಜಪ, ದಾನ ಸ್ತೋತ್ರ, ಮಂತ್ರ, ದೇವತಾರ್ಚನೆ ಇವೆಲ್ಲವೂ ಅಕ್ಷಯವಾಗುತ್ತವೆ ಪಾಪವು ನಾಶವಾಗುತ್ತದೆ.


ಇನ್ನೂ ರುದ್ರಾಕ್ಷಿ ಹೇಗೆ ಸೃಷ್ಟಿಯಾಯಿತು ಅನ್ನೋದರ ಬಗ್ಗೆ ಅನೇಕ ಕಥೆಗಳನ್ನ ಹೇಳುತ್ತಾರೆ ಆದರೆ ಪದ್ಮಪುರಾಣದಲ್ಲಿ ಒಂದು ಕಥೆಯನ್ನು ಹೇಳುತ್ತಾರೆ.



||ದ್ವಿಜಾ ಉವಾಚ||

ರುದ್ರಾಕ್ಷಸ್ತು ಕುತೋ ಜಾತಃ ಕುತೋ ವಾ ಮೇಧ್ಯ ತಾಂ ಗತಃ | ಕಿಮರ್ಥ೦ ಸ್ಥಾವರೋ ಭೂಮೌ ಕೇನೈವ ಚ ಪ್ರಚಾರಿತಃ


॥ ವ್ಯಾಸ ಉವಾಚ |

ಪುರಾ ಕೃತಯುಗೇ ವಿಪ್ರಾಃ ತ್ರಿಪುರೋ ನಾಮ ದಾನವಃ । ಸುರಾಣಾಂ ಚ ವಧಂ ಕೃತ್ವಾ ಅಂತರಿಕ್ಷಪುರೇ ಹಿ ಸಃ

ಪ್ರಣಾಶೇ ಸರ್ವಲೋಕಾನಾಂ ಸ್ಥಿತೋ ಶೋ ಬ್ರಹ್ಮವರೇಣ ಚ । ಶುಶ್ರಾವ ಶಂಕರೋ ಭೀಮಂ ದೇವೈರೀಶೋ ನಿವೇದಿತಂ

ತತೋಜಜಗವಮಾಸಜ್ಯ ಬಾಣಮಂತಕಸನ್ನಿಭಂ । ಧೃತ್ವಾ ತಂ ಚ ಜಘಾನಾಥ ದೃಷ್ಟಂ ದಿವೇನ ಚಕ್ಷುಷಾ||

ಅರ್ಥ 

ರುದ್ರಾಕ್ಷಿಯ ಒಂದೊಂದು ಬೀಜವೂ ಒಂದೊಂದು ದೇವತೆಯು. ಅದನ್ನು ಮೈಯಲ್ಲಿ ಧರಿಸಿದವನು ದೇವತಾಶ್ರೇಷ್ಠನಾ ಗುತ್ತಾನೆ.

 ಬ್ರಾಹ್ಮಣನು ಹೇಳಿದನು. ರುದ್ರಾಕ್ಷಿಯು ಎಲ್ಲಿ ಹುಟ್ಟಿತು ? ಅದು ಹೇಗೆ ಪವಿತ್ರವಾಯಿತು ? ಅದೇಕೆ ಜಡವಾಯಿತು ? ಅದನ್ನು ಪ್ರಸಿದ್ಧಿ ಮಾಡಿದವ  ಯಾರು ?


ವ್ಯಾಸನು ಹೇಳಿದನು.

ಎಲೈ ಬ್ರಾಹ್ಮಣ! ಪೂರ್ವದಲ್ಲಿ ಕೃತ ಯುಗದಲ್ಲಿ ತ್ರಿಪುರನೆಂಬ ದಾನವನು ದೇವತೆಗಳಿಗೆ ಉಪಟಲ ಮಾಡಿ  ಬ್ರಹ್ಮನ ವರದಿಂದ ಅಂತರಕ್ಷಾದಲ್ಲಿ ಒಂದು ಪಟ್ಟಣವನ್ನು ಕಟ್ಟಿ ಲೋಕಗಳನ್ನು ನಾಶಮಾಡುತ್ತಿದ್ದನು. ಅದನ್ನು ದೇವತೆಗಳು ಶಂಕರನಿಗೆ ಹೇಳಿದರು.

ಆಗ ಶಿವನು ಧನುಸ್ಸಿನಲ್ಲಿ ಉಗ್ರವಾದ ಬಾಣವನ್ನು ಸೇರಿಸಿ ಆ ಪಟ್ಟಣ ವನ್ನು ದಿವ್ಯ ಚಕ್ಷುಸ್ಸಿನಿಂದ ತಿಳಿದು ನಾಶಪಡಿಸಿದನು.

ಸ ಪಪಾತ ಮಹೀಷ್ಟೇ ಮಹೋವ ಚ್ಯುತೋ ದಿವಃ | ಘಟನವ್ಯಾಕುಲಾದ್ರಮ್ರದ್ರಾಕ್ಷಿತಿತಾಃ ಶ್ವೇದಬಂದವಃ॥

ತತ್ರಾಶುಬಿಂದುತೋ ಜಾತೋ ಮಹಾರುದ್ರಾಕ್ಷ ಕಃ ಕ್ಷಿತ್ | ಅವ ಚ ಫಲಂ ಜೀವಾ ನ ಜಾನಂತ್ಯತಿಗುಹ್ಯತಃ ತತಃ ಕೈಲಾಸಶಿಖರೇ ದೇವದೇವಂ ಮಹೇಶ್ವರಂ । ಪ್ರಣಮ್ಯ ಶಿರಸಾ ಭೂಮೌ ಸ್ಕಂದೋ ವಚನಮಬ್ರವೀತ್

ಅರ್ಥ:

ಆಗ ಆ ಪಟ್ಟಣವು ಅಂತರಿಕ್ಷದಿಂದ ದೊಡ್ಡಕೊಳ್ಳಿಯಂತೆ ಕೆಳಕ್ಕೆ ಬಿದ್ದಿತು. ಆಗ ರುದ್ರನ ದೇಹದಿಂದ ಬೆವರಿನ ಹನಿಗಳು ಬಿದ್ದು ವು.

ಆ ಬಿದ್ದ ಬೆವರಿನ ಹನಿಗಳಿಂದ ರುದ್ರಾಕ್ಷಿಗಳು ಹುಟ್ಟಿದುವು. 

ರುದ್ರಾಕ್ಷಿಗಳಲ್ಲಿ  1 ಮುಖದಿಂದ 21 ಮುಖಗಳ ತನಕ ಇವೆ ಎಲ್ಲಾ ರುದ್ರಾಕ್ಷಿಗಳು ಕೂಡ ಶ್ರೇಷ್ಠವೇ ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ  ಒಂದೊಂದು ಮುಖದ ರುದ್ರಾಕ್ಷಿಗೆ ಒಂದೊಂದು ಮಹತ್ವವನ್ನು ಹೇಳುತ್ತಾರೆ. ಆದರೆ ಇದರಲ್ಲಿ ,ಏಕಮುಖ ,ದ್ವಿಮುಖಿ ರುದ್ರಾಕ್ಷಿ,ತ್ರಿಮುಖಿ ರುದ್ರಾಕ್ಷಿ,ಚತುರ್ಮುಖ ರುದ್ರಾಕ್ಷಿ,ಪಂಚ ಮುಖ ರುದ್ರಾಕ್ಷಿ, ಈ 5 ಮುಖದ ರುದ್ರಾಕ್ಷಿಗಳಿಗೆ ಹೆಚ್ಚಿನ ಮಹತ್ವವನ್ನ ಆಧ್ಯಾತ್ಮದಲ್ಲಿ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೊಟ್ಟಿದ್ದಾರೆ.


ಪದ್ಮ ಪುರಾಣದ ಪ್ರಕಾರ ಯಾವ ಯಾವ ಸಮಯದಲ್ಲಿ ಧರಿಸಬಾರದು.


ಸೂತಕ, ಸವಸಮಸ್ಕಾರ, ಮಾಂಸಹಾರ ಸೇವನೆ, ಮಧ್ಯಪಾನ,

ಹಾಗೂ ಲೈಂಗಿಕ ಕ್ರಿಯೆ, ಇಂಥಾ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸಬಾರದು ಎಂದು ಪದ್ಮ ಪುರಾಣ ಹೇಳುತ್ತದೆ,

ರುದ್ರಾಕ್ಷಿಯ ಬಗ್ಗೆ ಇನ್ನು ಹೆಚ್ಚು ಆಧ್ಯಾತ್ಮಿಕ ಮಹತ್ವಗಳನ್ನು ತಿಳಿಯಲು ಪದ್ಮಪುರಾಣ ಸೃಷ್ಟಿ-ಖಂಡ

ಅಧ್ಯಾಯ-57 ರುದ್ರಾಕ್ಷಿ ಧಾರಣೆ ಮಹತ್ವ  ಹಾಗೂ

 ಶಿವ ಪುರಾಣವನ್ನ  ಓದಿ 






Comments