ಕಾಳು ಮೆಣಸಿನ ಆರೋಗ್ಯ ಪ್ರಯೋಜನಗಳು

ನಾವು ದಿನನಿತ್ಯ ಅಡುಗೆಗೆ ಉಪಯೋಗಿಸುವ ಕಾಳು ಮೆಣಸು ಬರಿ ರುಚಿಗೆ ಮಾತ್ರ ಅಲ್ಲ ಅದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಇದೆ. ಆಯುರ್ವೇದದಲ್ಲಿ ಕಾಳುಮೆಣಸಿಗೆ ತುಂಬಾ ಮಹತ್ವವಿದೆ ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಮೆಣಸನ್ನು ಮರಿಚ, ಶ್ಯಾಮ, ವಲ್ಲಿಜ, ಕೋಲ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.

ಪ್ರಪಂಚದಾದ್ಯಂತ ಸಾಕಷ್ಟು ಅಡುಗೆಗಳ ತಯಾರಿಯಲ್ಲಿ ಪೆಪ್ಪರ್ ಪೌಡರ್ ಬಳಕೆ ಮಾಡುವುದು ನಿಮಗೆ ಗೊತ್ತೇ ಇದೆ.


ಕಾಳು ಮೆಣಸನ್ನು ಅತಿ ಹೆಚ್ಚಾಗಿ ಕೇರಳ ಹಾಗೂ ಕರ್ನಾಟಕದ ಮಲೆನಾಡ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ ಮಲೆನಾಡಿನ ಪ್ರದೇಶಗಳಲ್ಲಿ ರೈತರು ಇದನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯುತ್ತಾರೆ. ಕೃಷಿ ಮಾಡುವಾಗ ಬಳ್ಳಿಯನ್ನು ಒಂದು ಮೀಟರ್ ನಷ್ಟು ಉದ್ದಕ್ಕೆ ಕತ್ತರಿಸಿ ಅಡಿಕೆ ಮರವನ್ನು ಆಧಾರವಾಗಿ ಕೊಟ್ಟು ಬುಡದಲ್ಲಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಮರಗಳ ಮೇಲೆ ಇವು ಬೇಗ ಬೆಳೆಯುತ್ತದೆ. ಆಶ್ರಯ ಮರದ ಕಾಂಡದಿಂದ ಪೋಷಾಕಾಂಶಗಳನ್ನು ಪಡೆದುಕೊಳ್ಳುತ್ತವೆ. ಬಳ್ಳಿಯ ಗಂಟುಗಳಲ್ಲಿ ಬೇರುಗಳು ಬರುತ್ತವೆ. ಇದರ ಎಳೆತಾದ ಎಲೆಗಳ ಸಂಧಿಯಲ್ಲಿ ಗೆರೆಗಳನ್ನು(ಚಿಕ್ಕದಾಗಿ ದಂಟಿನ ರೂಪದಲ್ಲಿರುತ್ತದೆ) ಕಾಣಬಹುದು. ಆ ಗೆರೆಗಳ ಮೇಲೆ ಸೂಕ್ಷ್ಮವಾದ ಹೂವುಗಳು ಮೂಡುತ್ತದೆ. ಅದರಿಂದ ಕಾಯಿಗಳು ಆರಂಭವಾಗುತ್ತದೆ. 

ಕಾಳುಮೆಣಸಿನಲ್ಲಿ ಪೆಪ್ಪರಿನ್ ಅಂಶವಿದೆ ಇದು ಕ್ಯಾನ್ಸರ್ ಗುಣಪಡಿಸುವ ಶಕ್ತಿ ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶವಿದೆ. ಇದರಲ್ಲಿರುವ ರೋಗ ನಿರೋಧಕ ಗುಣ ದೇಹದಲ್ಲಿರುವ ರೋಗಕಾರಕ ಅಂಶಗಳನ್ನು ತೊಲಗಿಸಲು ಸಹಾಯಕವಾಗಿದೆ. ಸಾಮಾನ್ಯವಾಗಿ ಕಂಡುಬರುವ ಉದರ ಸಂಬಂಧಿ ಸಮಸ್ಯೆಗಳಿಗೆ ಕಾಳು ಮೆಣಸಿನಲ್ಲಿರುವ ಪೆಪ್ಪರಿನ್ ಅಂಶ ಔಷಧಿಯಾಗಿದೆ. ಪೆಪ್ಪರಿನ್ ಸೇವನೆಯಿಂದ ಹೈಡ್ರೋಕ್ಲೋರಿಕ್ ಆ್ಯಸಿಡ್ ಸ್ರಾವ ಹೆಚ್ಚಾಗಿ ಆಹಾರದಲ್ಲಿರುವ ಪ್ರೊಟೀನ್ ಗಳು ಶೀಘ್ರವಾಗಿ ಜೀರ್ಣಗೊಳ್ಳುವಂತೆ ಮಾಡಿ ಉದರ ಸಂಬಂಧಿ ಸಮಸ್ಯೆಗಳಿಂದ ದೂರ ಮಾಡುತ್ತದೆ ಹೀಗಾಗಿ ನಮ್ಮ ಆಹಾರದಲ್ಲಿ ಅಗತ್ಯ ಪ್ರಮಾಣದ ಕಾಳುಮೆಣಸು ಇರುವುದು ಉತ್ತಮ.

ಕರಿಮೆಣಸಿನ ಬಳ್ಳಿ ನೋಡಲು ವೀಳ್ಯದೆಲೆ ಬಳ್ಳಿಯಂತಿರುತ್ತದೆ. ಆದರೆ ಎಲೆ ಸ್ವಲ್ಪ ದಪ್ಪ ಹಾಗೂ ದೊಡ್ಡದಾಗಿರುತ್ತದೆ. ವಿಶೇಷವೆಂದರೆ ಇದರ ಎಲೆ ಹಾಗೂ ಬಳ್ಳಿಯ ಕಾಂಡ ಕೂಡ ತುಂಬಾ ಖಾರವಾಗಿರುತ್ತದೆ. ಹಿಂದಿನವರು ಹಲ್ಲುಜ್ಜಲು ಇದರ ದಂಟನ್ನು ಬಳಸುತ್ತಿದ್ದರು. ಇದು ಹಲ್ಲನ್ನು ಚೊಕ್ಕಟ ಮಾಡುವದರ ಜೊತೆಗೆ ಬಾಯಿಯನ್ನು ಶುದ್ಧವಾಗಿಡುತ್ತದೆ. ಇದರ ದಂಟಿನಿಂದ ಹಲ್ಲುಜ್ಜಿದರೆ ಬಾಯಿಯೆಲ್ಲ ಜುಮು-ಜುಮುಗುಡುತ್ತಿರುತ್ತದೆ. ಟಂಗ್ ಕ್ಲೀನರ್‍ಗಿಂತ ಚೆನ್ನಾಗಿ ಪರಿಣಾಮಕಾರಿಯಾಗಿ ನಾಲಿಗೆಯನ್ನು ತೊಳೆಯುತ್ತದೆ.


ಅಸ್ತಮಾ ಸ್ವಾಶಕೊಶ ಸಮಸ್ಯೆಗೆ ಪರಿಹಾರ

ಕಾಳು ಮೆಣಸಿಗೆ ಚಕ್ಕೆ ಸೇರಿಸಿ ಪುಡಿಮಾಡಿ ಹಾಲಿಗೆ ಹಾಕಿ ಕುದಿಸಿ ಅದನ್ನು ಬೆಳಗ್ಗೆ ಹಾಗೂ ರಾತ್ರಿ ಸೇವಿಸಬೇಕು. ಇದರಿಂದ ಶ್ವಾಸಕೋಶದ ಸಮಸ್ಯೆ ಅಂದರೆ ಅಸ್ತಮಾದ ಸಮಸ್ಯೆ ನಿವಾರಣೆಯಾಗುತ್ತದೆ.

 ಹೊಟ್ಟೆ ಹಸಿವು ಹೆಚ್ಚಿಸುವುದು

ಹೆಚ್ಚಿನವರು ಸಾರು, ರಸಂ ಮಾಡುವಾಗ ಹೆಚ್ಚಿನ ಪ್ರಮಾಣದಲ್ಲಿ ಕಾಳು ಮೆಣಸನ್ನು ಬಳಸುತ್ತಾರೆ. ಇದರಿಂದರಿಂದ ಹಸಿವು ಚೆನ್ನಾಗಿ ಆಗುತ್ತದೆ. ಮಕ್ಕಳಿಗೆ ಒಂದು ಕಾಳು ಮೆಣಸನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ಶುಂಠಿ ರಸ ಸೇರಿಸಿ, ಬೇಕಾದ್ರೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಲು ಕೊಡಿ. ಇದರಿಂದ ಮಕ್ಕಳಲ್ಲಿ ಹಸಿವು ಹೆಚ್ಚಾಗುತ್ತದೆ.

ತಲೆಹೊಟ್ಟನ್ನು ಹೋಗಲಾಡಿಸುತ್ತದೆ 

ತಲೆಹೊಟ್ಟು ವಿರೋಧಿ ಶಾಂಪೂಗಳ ಬದಲು ಕಾಳುಮೆನಸನ್ನು ಬಳಸಿ ನೋಡಿ.ಕಾಳುಮೆಣಸಿನಲ್ಲಿ ಇರುವ ಜೀವವಿರೋಧಿ ಅಂಶ ತಲೆಹೊಟ್ಟು ಹೋಗಲಾಡಿಸಲು ಸಹಕರಿಸುತ್ತದೆ.ಒಂದು ಚಮಚ ಪುಡಿಮಾಡಿದ ಕಾಳುಮೆಣಸನ್ನು ಒಂದು ಲೋಟ ಮೊಸರಿನೊಂದಿಗೆ ಸೇರಿಸಿ ನೆತ್ತಿಗೆ ಹಚ್ಚಿ.ನಂತರ ಅರ್ಧ ಗಂಟೆ ಬಿಟ್ಟು ಕೂದಲನ್ನು ಸರಿಯಾಗಿ ತೊಳೆಯಿರಿ.ಹೆಚ್ಚು ಕಾಳುಮೆಣಸು ಬಳಸಬೇಡಿ ಇದರಿಂದ ತಲೆ ಸುಡುವ ಅನುಭವವಾಗಬಹುದು.

ಮೊಡವೆ ನಿವಾರಣೆಗೆ ಒಳ್ಳೆಯದು

ಅರೇ ಇದೇನಿದು ಕಾಳು ಮೆಣಸು ಖಾರ ಮತ್ತು ಉರಿಯ ಗುಣವನ್ನು ಹೊಂದಿರುತ್ತದೆ. ಇದನ್ನು ಮೊಡವೆಗೆ ಹಚ್ಚಬಹುದಾ, ಎಂದರೆ ಹೌದು. ಕಾಳು ಮೆಣಸಿನಲ್ಲಿರುವ ಆಂಟಿ ಮೈಕ್ರೋವೆಲ್‌ ಗುಣದಿಂದ ಮೊಡವೆಗಳನ್ನು ನಿವಾರಿಸುತ್ತದೆ. ಕಾಳು ಮೆಣಸಿನ ಪುಡಿಯನ್ನು ರೋಸ್‌ ವಾಟರ್‌ ಅಥವಾ ನೀರಿನೊಂದಿಗೆ ಬೆರೆಸಿ ಮೊಡವೆ ಮೇಲೆ ಹಚ್ಚಿದರೆ ಮುಖದ ಮೇಲಿನ ಮೊಡವೆ ನಿವಾರಣೆಯಾಗುತ್ತದೆ.

ಕೂದಲು ಉದುರುವಿಕೆ

ಕೆಲವರಿಗೆ ತಲೆಯ ಮೇಲೆ ಅಲ್ಲಲ್ಲಿ ಕೂದಲು ಉದುರಿ ಪ್ಯಾಚಸ್‌ಗಳು ಕಂಡುಬರುತ್ತವೆ. ಅದನ್ನು ನಿವಾರಿಸಲು ಕಾಳು ಮೆಣಸು ಸಹಕಾರಿಯಾಗಿದೆ. ಕಾಳು ಮೆಣಸನ್ನು ಎಳ್ಳೆಣ್ಣೆ ಮತ್ತು ತ್ರಿಫಲಾ ಪೌಡರ್‌ನ್ನು ಜೊತೆ ಸೇರಿಸಿ ಕೂದಲು ಉದುರಿದ ಜಾಗದಲ್ಲಿ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.


ಕೊಲೆಸ್ಟ್ರಾಲ್ ಸಮಸ್ಯೆ 

ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳಿಂದ ಹೃದಯಾಘಾತ ಉಂಟಾಗಬಹುದು. ಕಾಳು ಮೆಣಸು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದು ಪೊಟ್ಯಾಸಿಯಮ್ ಅನ್ನು ಒಳಗೊಂಡಿರುತ್ತದೆ, ಇದು ಹೃದಯ ಬಡಿತ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಾಳು ಮೆಣಸು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ

ಜೀರ್ಣಕ್ರಿಯೆಗೆ ಸಹಕರಿಸುತ್ತದೆ ಕಾಳುಮೆಣಸು ಅಥವಾ ಕರಿ ಮೆಣಸಿನಲ್ಲಿ ಇರುವ  ಅಂಶ ಜೀರ್ಣಕ್ರಿಯೆ ಹೆಚ್ಚಲು ಸಹಾಯಕ.ಇದು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ.ಇದು ಪ್ರೋಟಿನ್ ಮತ್ತಿತರ ಅಂಶಗಳನ್ನು ಹೀರಿಕೊಳ್ಳಲು ಸಹಕರಿಸುತ್ತದೆ.ಸರಿಯಾಗಿ ಜೀರ್ಣ ಆಗದಿದ್ದಾಗ ವಾಯು, ಅಜೀರ್ಣ, ಭೇದಿ, ಮಲಬದ್ಧತೆ ಮತ್ತು ಆಮ್ಲೀಯತೆ ಆಗುವುದನ್ನು ಇದರಿಂದ ತಡೆಯಬಹುದು.ಹೈಡ್ರೋಕ್ಲೋರಿಕ್ ಆಮ್ಲ ಇವುಗಳನ್ನು ತಡೆಯುವಲ್ಲಿ ಸಹಕರಿಸುತ್ತದೆ.ಜೀರ್ಣ ಕ್ರಿಯೆಯನ್ನು ಸುಗಮವಾಗಿಸಲು ಖಾದ್ಯಗಳಿಗೆ ಒಂದು ಚಮಚ ಕಾಳುಮೆಣಸಿನ ಪುಡಿಯನ್ನು ಬಳಸಿ.ಇದು ಅಡುಗೆಗೆ ಫ್ಲೇವರ್ ನೀಡುವುದರ ಜೊತೆಗೆ ನಿಮ್ಮ ಹೊಟ್ಟೆಯನ್ನೂ ಸರಿಯಾಗಿ ಇಡುತ್ತದೆ.

ಖಿನ್ನತೆ ಸಮಸ್ಯೆ

ಇನ್ನು  ಖಿನ್ನತೆಯು ಪ್ರಪಂಚದಾದ್ಯಂತ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಹಸಿ ಕರಿಮೆಣಸು ಜಗಿಯುವುದರಿಂದ ಮೆದುಳಿಗೆ ಚಿತ್ತ ಪ್ರಚೋದಿಸುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದು ನಿಮ್ಮ ಮನಸ್ಸನ್ನು ಶಾಂತವಾಗಿ ಮತ್ತು ಹಿತವಾಗಿಡುತ್ತದೆ. ಇದರಿಂದ ಖಿನ್ನತೆಯಿಂದ ದೂರವಾಗಬಹುದು.

ಕೈ ಕಾಲು ಮೂಳೆಗಳ ಹಳೆ ನೋವುಗಳಿಗೆ ರಾಮಬಾಣ ಕಾಳುಮೆಣಸು

ಹಳೆಯ ನೋವುಗಳು ನಮ್ಮನ್ನು ಆಗಾಗ ಕಾಡುತ್ತಿರುತ್ತದೆ  ಬಿದ್ದಿರೋದು ಎಕ್ಸಿಡೆಂಟ್ ಆಗಿರೋದು ಈ ರೀತಿಯ ಸಮಸ್ಯೆಗಳು ನಮ್ಮನ್ನ ಕೆಲವು ವರ್ಷಗಳ ನಂತರ ನಮ್ಮನ್ನು ಕಾಡುತ್ತಿರುತ್ತದೆ  ಈ ಸಮಸ್ಯೆಗಳಿಗೆ ಕಾಳು ಮೆಣಸು ಒಂದು ದಿವ್ಯ ಔಷಧಿ ಎಂದು ಹೇಳಬಹುದು.

ಕಾಳುಮೆಣಸನ್ನ ಚೆನ್ನಾಗಿ ಪುಡಿ ಮಾಡಿ ಪೌಡರ್ ಮಾಡಿ ನಾಟಿ ಕೋಳಿ ಮೊಟ್ಟೆಯ ಬಿಳಿ ಬಣ್ಣದ ಲೋಳಿ ಇದರ ಜೊತೆ ಸೇರಿಸಿ ಲೇಪನ ಮಾಡಿ ಹಚ್ಚಿದರೆ ನೋವುಗಳು ಗುಣವಾಗುತ್ತದೆ



Comments