ಉಪನಿಷತ್ ಗಳ ಬಗ್ಗೆ ನಿಮಗೆಷ್ಟು ಗೊತ್ತು.?

ಸನಾತನ ಹಿಂದೂ ಧರ್ಮದ ಜ್ಞಾನದ ಬಂಡಾರ ವೇದಗಳು ಉಪನಿಷತ್ ಗಳು ಹಾಗೂ ಪುರಾಣಗಳು.

ಇಡೀ ವಿಶ್ವಕ್ಕೆ ಭಾರತ ನೀಡಿದ ಜ್ಞಾನದ ಭಂಡಾರ ವೇದಗಳು ಉಪನಿಷತ್ತುಗಳು. 

  ವಿದೇಶಿಗರು ಇವತ್ತು ವೇದ ಮಂತ್ರಗಳ ಪಟನೆ ಮಾಡುತ್ತಾರೆ ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡ್ತಾ ಇದ್ದಾರೆ ವಿಪರ್ಯಾಸ ಏನೆಂದರೆ, ನಮ್ಮಲ್ಲಿ ಎಷ್ಟೋ ಜನರಿಗೆ ಅದರ ಮಹಾತ್ವಗಳೇ ತಿಳಿದಿಲ್ಲ. ಇವತ್ತಿನ ಈ ಲೇಖನದಲ್ಲಿ ಉಪನಿಷತ್ ಗಳ ಬಗ್ಗೆ ತಿಳಿದುಕೊಳ್ಳೋಣ


ಉಪನಿಷತ್ತುಗಳು ವೇದಗಳ ಭಾಗಗಳು. ಉಪನಿಷತ್ತುಗಳನ್ನು 'ವೇದಾಂತ' ಎಂಬ ಹೆಸರಿನಿಂದ ಕರೆಯುವ ವಾಡಿಕೆಯುಂಟು. ಉಪನಿಷತ್ತುಗಳು ಸಾಮಾನ್ಯವಾಗಿ ವೇದಗಳ ಅಂತ್ಯಭಾಗವಾದ್ದರಿಂದಲೂ, ಅಲ್ಲದೆ ಅದಕ್ಕಿಂತ ಪ್ರಧಾನವಾಗಿ ಅವು ವೇದಗಳ ನಿರ್ಣಾಯಕವಾದ ಸಿದ್ದಾಂತ ಭಾಗಗಳಾಗಿರುವುದರಿಂದಲೂ ಅವಕ್ಕೆ ಆ ಹೆಸರು ರೂಢಿಯಲ್ಲಿದೆ.

ವೇದ ವಿಭಾಗಗಳು

ವೇದಗಳಲ್ಲಿ ಬೇರೆ ವಿಷಯಗಳು ಬಂದಿದ್ದರೂ ವೇದಗಳ ಮುಖ್ಯ ತಾತ್ಪರ್ಯವಿರುವುದು ಬ್ರಹ್ಮವಿಷಯದಲ್ಲಿ ಅಥವಾ ಆತ್ಮಜ್ಞಾನದಲ್ಲಿ. ಉಳಿದ ವಿಷಯಗಳು ಗೌಣ ಅಥವಾ ಬ್ರಹ್ಮತತ್ವಜ್ಞಾನಕ್ಕೆ ಸೋಪಾನ.

ವೇದಗಳಲ್ಲಿ ನಾಲ್ಕು ಮುಖ್ಯ ವಿಭಾಗಗಳನ್ನು ಗುರುತಿಸಬಹುದು.

೧. ಸಂಹಿತಾಭಾಗ: 

ಇದು ಮಂತ್ರದ್ರಷ್ಟಾರರೆನಿಸಿದ ಋಷಿಗಳು ಕಂಡ ಮಂತ್ರಗಳ ಸಂಗ್ರಹ, ಬ್ರಹ್ಮಚರ್ಯಾಶ್ರಮಿಗಳ ಅಧ್ಯಯನಕ್ಕೆ ಇದು ಪ್ರಾರಂಭದ ಹಂತ.

೨. ಬ್ರಾಹ್ಮಣ ಭಾಗ:

 ಇದು ಗೃಹಸ್ಥಾಶ್ರಮಿಗಳು ಅನುಸರಿಸಬೇಕಾದ ವಿಧಿಗಳ ವಿವರಣೆ. ಇದರಲ್ಲಿ ಹೆಚ್ಚು ಭಾಗ ಯಜ್ಞಯಾಗಾದಿಗಳನ್ನು ಕುರಿತವು. ಸಂಹಿತೆಯ ಮಂತ್ರಗಳು ಇವುಗಳಲ್ಲಿ ವಿನಿಯೋಗಿಸಲ್ಪಡುತ್ತವೆ. ಇದು ಕರ್ಮಕಾಂಡವೆನಿಸುತ್ತದೆ.

೩. ಆರಣ್ಯಕ: 

ಸಂಸಾರದ ನಿಸ್ಸಾರತೆಯನ್ನು ಕಂಡು ನಿರ್ಜನವಾದ ಪ್ರದೇಶಗಳಲ್ಲಿ ಕುಳಿತು ತತ್ವ ವಿಚಾರ ಮಾಡುವ ವಾನಪ್ರಸ್ಥಾಶ್ರಮಿಗಳಿಗೆ ಅನ್ವಯಿಸುವಂತಹದು. ಇದರಲ್ಲಿ ಕರ್ಮಭಾಗವೂ ಸೇರಿರುತ್ತದೆ. ಆದರೆ ಜೀವನದ ಗುರಿಯನ್ನು ಕುರಿತು ಚಿಂತಿಸುವ ಪ್ರಜ್ಞೆ ಮೂಡಿರುತ್ತದೆ.

4. ಉಪನಿಷತ್: ಇದೆ ವೇದಗಳ ಪರಮಸಾರ ಹೊರಟಿರುವುದೇ.

ವೇದಗಳು ಈ ತತ್ವಾನ್ವೇಷಣೆಗಾಗಿ, ಇದನ್ನು ಬ್ರಹ್ಮವಿದ್ಯೆ ಅಥವಾ ಆತ್ಮವಿದ್ಯೆ ಎನ್ನುತ್ತಾರೆ. ಲೋಕದ ಭೋಗಭಾಗ್ಯಗಳ ನಶ್ವರತೆಯನ್ನು ಕಂಡು ಶಾಶ್ವತವಾದ ಪರಮಶಾಂತಿಯನ್ನರಸಿ ಬ್ರಹ್ಮಾಂಡದ ಮೂಲತತ್ವವನ್ನೇ ಕುರಿತಾದ ಜಿಜ್ಞಾಸೆ, ಆ ವಿಜ್ಞಾನವನ್ನರಿಯುವ ಸಾಧನೆ, ಮೋಕ್ಷಪ್ರಾಪ್ತಿ, ಬ್ರಹ್ಮಕ್ಯಾನುಭವ - ಈ ಅಲೌಕಿಕ ವಿಷಯಗಳನ್ನು ಕುರಿತಾದದ್ದು. ಇದನ್ನು ಶ್ರೇಷ್ಠನಾದ, ಪರಮ ಜ್ಞಾನಿಯಾದ ಗುರುವಿನ  ಮೂಲಕವೇ ತಿಳಿಯತಕ್ಕದ್ದು. ಇದು ಅನುಭವಪೂರ್ವಕ ರಹಸ್ಕೋಪದೇಶವಾದ್ದರಿಂದ ಎಷ್ಟೇ ಪಂಡಿತನಾಗಿದ್ದರೂ ಸ್ವತಂತ್ರವಾದ ಉಪನಿಷತ್ತುಗಳ ಅಧ್ಯಯನವು ಶಾಸ್ತ್ರ ಸಮ್ಮತವಲ್ಲ. ಬ್ರಹ್ಮಜ್ಞಾನಕ್ಕಾಗಿ ಉತ್ಕಟೇಚ್ಛೆಯಿಂದ ಗುರುವಿನ ಸಮೀಪಕ್ಕೆ ಬರುವ ಶ್ರದ್ಧಾವಂತ ಜಿಜ್ಞಾಸುವಿಗಲ್ಲದೆ, ಕುತೂಹಲಕ್ಕಾಗಿ ಬರುವವರಿಗೆ ಈ ಬ್ರಹ್ಮವಿದ್ಯೆಯ ಉಪದೇಶ ಮಾಡಬಾರದೆಂದೂ ಶಾಸ್ತ್ರವು ವಿಧಿಸಿದೆ. 

ಉಪನಿಷತ್ ಎಂದರೇನು ?

ಸದ್, ಎಂಬ ಧಾತುವಿಗೆ ಹಿಂದೆ 'ಉಪ' ಮತ್ತು 'ನಿ' ಎಂಬ ಉಪಸರ್ಗಗಳೂ, ಮುಂದೆ 'ಕ್ವಿಪ್' ಎಂಬ ಪ್ರತ್ಯಯವೂ ಸೇರಿ ಸಂಸ್ಕೃತದ ಭಾಷಾ ನಿಯಮದ ಪ್ರಕಾರ 'ಉಪನಿಷದ್' ಎಂಬ ಶಬ್ದವು ವ್ಯತ್ಪತ್ತಿಯಾಗಿದೆ. ಇದರ ಯೌಗಿಕಾರ್ಥ - (ಉಪ) ಹತ್ತಿರಕ್ಕೆ ಬಂದು (ನಿ) ಶ್ರದ್ದೆಯಿಂದ ಚೆನ್ನಾಗಿ (ಸದ್) ಕುಳಿತುಕೊಳ್ಳುವುದು. ಶ್ರೀ ಶಂಕರರು 'ಷದ್ ವಿಶರಣ ಗತ್ಯವಸಾದನೇಷು' ಎಂಬ ಧಾತ್ವರ್ಧದಲ್ಲಿ 'ವಿಶರಣೇ' ಎನ್ನುವ ಅರ್ಧದನ್ನನುಸರಿಸಿ ಜನ್ಮಜರಾಮರಣ ರೂಪವಾದ ಸಂಸಾರಕ್ಕೆ ಕಾರಣವಾದ ಅವಿದ್ಯೆಯನ್ನು ನಾಶಮಾಡಿ ಬ್ರಹ್ಮವಿದ್ಯೆಯನ್ನು ತಿಳಿಸುವುದರಿಂದ ಇದು 'ಉಪನಿಷತ್ತು' ಎಂದೆನಿಸುತ್ತದೆ ಎಂಬ ವಿವರಣೆಯನ್ನು ಸೇರಿಸಿರುತ್ತಾರೆ. ಒಟ್ಟಿನಲ್ಲಿ ಜ್ಞಾನಪ್ರಾಪ್ತಿಯನ್ನು ಬಯಸಿ ಬಂದ ಶಿಷ್ಯನು ಶ್ರದ್ಧಾಭಕ್ತಿಗಳಿಂದ ಬ್ರಹ್ಮವಿದ್ಯೆಯ ರಹಸ್ಕೋಪದೇಶ ಪಡೆಯುವುದಕ್ಕಾಗಿ ಗುರುವಿನ ಬಳಿ ಬಂದು ಕುಳಿತುಕೊಳ್ಳುವುದು ಎಂದು ಅರ್ಥವಾಯಿತು. ಇಂತಹ ಬ್ರಹ್ಮವಿದ್ಯೆ ಅಥವಾ ಆತ್ಮವಿದ್ಯೆಯನ್ನು ಬೋಧಿಸುವ ಗ್ರಂಧಕ್ಕೂ 'ಉಪನಿಪತ್ತು' ಎಂಬ ಹೆಸರೇ ಉಳಿಯಿತು. ಆದ್ದರಿಂದ ಉಪನಿಷತ್ತು ಎಂಬ ಶಬ್ದಕ್ಕೆ ಬ್ರಹ್ಮವಿದ್ಯೆ ಎಂಬುದೇ ಮುಖ್ಯವಾದ ಅರ್ಧ. ಬ್ರಹ್ಮದ ಎಂದರೆ ಪರಮಾತ್ಮನ ವಿಷಯಕವಾದದ್ದು ಎಂದು ಬಾವ.

ಉಪನಿಷತ್ತುಗಳ ಸಂಖ್ಯೆ ಇಷ್ಟೇ ಎಂದು ಖಚಿತವಾಗಿ ತಿಳಿದು ಬಂದಿಲ್ಲ. ನೂರೆಂಟರಿಂದ ಒಂದು ಸಾವಿರದ ನೂರ ಎಂಬತ್ತು ಎಂದು ಮೊದಲಾಗಿ ಹೇಳುವವರಿದ್ದಾರೆ. ಇವುಗಳಲ್ಲಿ ಬಹು ಮುಖ್ಯವೆನಿಸಿದವು ಹದಿಮೂರು. 


108 ಉಪನಿಷತ್‌ಗಳು

ಈಶಾವಾಸ್ಯೋಪನಿಷತ್ = ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್

ಕೇನೋಪನಿಷತ್ = ಸಾಮವೇದಃ, ಮುಖ್ಯ ಉಪನಿಷತ್

ಕಠೋಪನಿಷತ್ = ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್

ಪ್ರಶ್ನೋಪನಿಷತ್ = ಅಥರ್ವವೇದಃ, ಮುಖ್ಯ ಉಪನಿಷತ್

ಮುಂಡಕೋಪನಿಷತ್ = ಅಥರ್ವವೇದಃ, ಮುಖ್ಯ ಉಪನಿಷತ್

ಮಾಂಡೂಕ್ಯೋಪನಿಷತ್ = ಅಥರ್ವವೇದಃ, ಮುಖ್ಯ ಉಪನಿಷತ್

ತೈತ್ತಿರೀಯೋಪನಿಷತ್ = ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್

ಐತರೇಯೋಪನಿಷತ್ = ಋಗ್ವೇದಃ, ಮುಖ್ಯ ಉಪನಿಷತ್

ಛಾಂದೋಗ್ಯೋಪನಿಷತ್ = ಸಾಮವೇದಃ, ಮುಖ್ಯ ಉಪನಿಷತ್

ಬೃಹದಾರಣ್ಯಕೋಪನಿಷತ್ = ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್

ಬ್ರಹ್ಮ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

ಕೈವಲ್ಯ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್

ಜಾಬಾಲ ಉಪನಿಷತ್ (ಯಜುರ್ವೇದ) = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

ಶ್ವೇತಾಶ್ವತರೋಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

ಹಂಸ ಉಪನಿಷತ್ = ಶುಕ್ಲಯಜುರ್ವೇದಃ, ಯೋಗ ಉಪನಿಷತ್

ಆರುಣೇಯ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್

ಗರ್ಭ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

ನಾರಾಯಣ ಉಪನಿಷತ್ = ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್

ಪರಮಹಂಸ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

ಅಮೃತ ಬಿನ್ದೂಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್

ಅಮೃತ ನಾದೋಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್

ಅಥರ್ವ ಶಿರೋಪನಿಷತ್ = ಅಥರ್ವವೇದಃ, ಶೈವ ಉಪನಿಷತ್

ಅಥರ್ವ ಶಿಖೋಪನಿಷತ್ =ಅಥರ್ವವೇದಃ, ಶೈವ ಉಪನಿಷತ್

ಮೈತ್ರಾಯಣಿ ಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್

ಕೌಷೀತಕಿ ಉಪನಿಷತ್ = ಋಗ್ವೇದಃ, ಸಾಮಾನ್ಯ ಉಪನಿಷತ್

ಬೃಹಜ್ಜಾಬಾಲ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್

ನೃಸಿಂಹತಾಪನೀ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

ಕಾಲಾಗ್ನಿರುದ್ರ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್

ಮೈತ್ರೇಯಿ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್

ಸುಬಾಲ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

ಕ್ಷುರಿಕ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್

ಮಾನ್ತ್ರಿಕ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

ಸರ್ವ ಸಾರೋಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

ನಿರಾಲಮ್ಬ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

ಶುಕ ರಹಸ್ಯ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

ವಜ್ರಸೂಚಿ ಉಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್

ತೇಜೋ ಬಿನ್ದು ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

ನಾದ ಬಿನ್ದು ಉಪನಿಷತ್ = ಋಗ್ವೇದಃ, ಯೋಗ ಉಪನಿಷತ್

ಧ್ಯಾನಬಿನ್ದು ಉ ಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್

ಬ್ರಹ್ಮವಿದ್ಯಾ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್

ಯೋಗತತ್ತ್ವ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್

ಆತ್ಮಬೋಧ ಉಪನಿಷತ್ = ಋಗ್ವೇದಃ, ಸಾಮಾನ್ಯ ಉಪನಿಷತ್

ಪರಿವ್ರಾತ್ ಉಪನಿಷತ್ (ನಾರದಪರಿವ್ರಾಜಕ) = ಅಥರ್ವವೇದಃ, ಸಂನ್ಯಾಸ ಉಪನಿಷತ್

ತ್ರಿಷಿಖಿ ಉಪನಿಷತ್ = ಶುಕ್ಲಯಜುರ್ವೇದಃ, ಯೋಗ ಉಪನಿಷತ್

ಸೀತಾ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್

ಯೋಗಚೂಡಾಮಣಿ ಉಪನಿಷತ್ = ಸಾಮವೇದಃ, ಯೋಗ ಉಪನಿಷತ್

ನಿರ್ವಾಣ ಉಪನಿಷತ್ = ಋಗ್ವೇದಃ, ಸಂನ್ಯಾಸ ಉಪನಿಷತ್

ಮಣ್ಡಲಬ್ರಾಹ್ಮಣ ಉಪನಿಷತ್ = ಶುಕ್ಲಯಜುರ್ವೇದಃ, ಯೋಗ ಉಪನಿಷತ್

ದಕ್ಷಿಣಾಮೂರ್ತಿ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್

ಶರಭ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್

ಸ್ಕನ್ದ ಉಪನಿಷತ್ (ತ್ರಿಪಾಡ್ವಿಭೂಟಿ) = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

ಮಹಾನಾರಾಯಣ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

ಅದ್ವಯತಾರಕ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

ರಾಮರಹಸ್ಯ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

ರಾಮತಾಪಣಿ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

ವಾಸುದೇವ ಉಪನಿಷತ್ = ಸಾಮವೇದಃ, ವೈಷ್ಣವ ಉಪನಿಷತ್

ಮುದ್ಗಲ ಉಪನಿಷತ್ = ಋಗ್ವೇದಃ, ಸಾಮಾನ್ಯ ಉಪನಿಷತ್

ಶಾಣ್ಡಿಲ್ಯ ಉಪನಿಷತ್ = ಅಥರ್ವವೇದಃ, ಯೋಗ ಉಪನಿಷತ್

ಪೈಂಗಲ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

ಭಿಕ್ಷುಕ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

ಮಹತ್ ಉಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್

ಶಾರೀರಕ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

ಯೋಗಶಿಖಾ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್

ತುರೀಯಾತೀತ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

ಸಂನ್ಯಾಸ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್

ಪರಮಹಂಸ ಪರಿವ್ರಾಜಕ ಉಪನಿಷತ್ = ಅಥರ್ವವೇದಃ, ಸಂನ್ಯಾಸ ಉಪನಿಷತ್

ಅಕ್ಷಮಾಲಿಕ ಉಪನಿಷತ್ = ಋಗ್ವೇದಃ, ಶೈವ ಉಪನಿಷತ್

ಅವ್ಯಕ್ತ ಉಪನಿಷತ್ = ಸಾಮವೇದಃ, ವೈಷ್ಣವ ಉಪನಿಷತ್

ಏಕಾಕ್ಷರ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

ಅನ್ನಪೂರ್ಣ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್

ಸೂರ್ಯ ಉಪನಿಷತ್ = ಅಥರ್ವವೇದಃ, ಸಾಮಾನ್ಯ ಉಪನಿಷತ್

ಅಕ್ಷಿ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

ಅಧ್ಯಾತ್ಮಾ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

ಕುಣ್ಡಿಕ ಉಪನಿಷತ್ = ಸಾಮವೇದಃ, ಸಂನ್ಯಾಸ ಉಪನಿಷತ್

ಸಾವಿತ್ರೀ ಉಪನಿಷತ್ = ಸಾಮವೇದಃ, ಸಾಮಾನ್ಯ ಉಪನಿಷತ್

ಆತ್ಮಾ ಉಪನಿಷತ್ = ಅಥರ್ವವೇದಃ, ಸಾಮಾನ್ಯ ಉಪನಿಷತ್

ಪಾಶುಪತ ಉಪನಿಷತ್ = ಅಥರ್ವವೇದಃ, ಯೋಗ ಉಪನಿಷತ್

ಪರಬ್ರಹ್ಮ ಉಪನಿಷತ್ = ಅಥರ್ವವೇದಃ, ಸಂನ್ಯಾಸ ಉಪನಿಷತ್

ಅವಧೂತ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

ತ್ರಿಪುರಾತಪನಿ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್

ದೇವಿ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್

ತ್ರಿಪುರ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್

ಕಠರುದ್ರ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

ಭಾವನ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್

ರುದ್ರ ಹೃದಯ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್

ಯೋಗ ಕುಣ್ಡಲಿನಿ ಉಪನಿಷತ್ = ಕೃಷ್ಣಯಜುರ್ವೇದಃ, ಯೋಗ ಉಪನಿಷತ್

ಭಸ್ಮ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್

ರುದ್ರಾಕ್ಷ ಉಪನಿಷತ್ = ಸಾಮವೇದಃ, ಶೈವ ಉಪನಿಷತ್

ಗಣಪತಿ ಉಪನಿಷತ್ = ಅಥರ್ವವೇದಃ, ಶೈವ ಉಪನಿಷತ್

ದರ್ಶನ ಉಪನಿಷತ್ = ಸಾಮವೇದಃ, ಯೋಗ ಉಪನಿಷತ್

ತಾರಸಾರ ಉಪನಿಷತ್ = ಶುಕ್ಲಯಜುರ್ವೇದಃ, ವೈಷ್ಣವ ಉಪನಿಷತ್

ಮಹಾವಾಕ್ಯ ಉಪನಿಷತ್ = ಅಥರ್ವವೇದಃ, ಯೋಗ ಉಪನಿಷತ್

ಪಞ್ಚ ಬ್ರಹ್ಮ ಉಪನಿಷತ್ = ಕೃಷ್ಣಯಜುರ್ವೇದಃ, ಶೈವ ಉಪನಿಷತ್

ಪ್ರಾಣಾಗ್ನಿ ಹೋತ್ರ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

ಗೋಪಾಲ ತಪಣಿ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

ಕೃಷ್ಣ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

ಯಾಜ್ಞವಲ್ಕ್ಯ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

ವರಾಹ ಉಪನಿಷತ್ = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

ಶಾತ್ಯಾಯನಿ ಉಪನಿಷತ್ = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

ಹಯಗ್ರೀವ ಉಪನಿಷತ್ (೧೦೦) = ಅಥರ್ವವೇದಃ, ವೈಷ್ಣವ ಉಪನಿಷತ್

ದತ್ತಾತ್ರೇಯ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

ಗಾರುಡ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

ಕಲಿ ಸಣ್ಟಾರಣ ಉಪನಿಷತ್ = ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್

ಜಾಬಾಲ ಉಪನಿಷತ್ (ಸಾಮವೇದ) = ಸಾಮವೇದಃ, ಶೈವ ಉಪನಿಷತ್

ಸೌಭಾಗ್ಯ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್

ಸರಸ್ವತೀ ರಹಸ್ಯ ಉಪನಿಷತ್ = ಕೃಷ್ಣಯಜುರ್ವೇದಃ, ಶಾಕ್ತ ಉಪನಿಷತ್

ಬಹ್ವೃಚ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್

ಮುಕ್ತಿಕ ಉಪನಿಷತ್ (೧೦೮) = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್


13 ಪ್ರಧಾನ ಉಪನಿಷತ್‌ಗಳು

1.ಐತರೇಯೋಪನಿಷತ್

2.ಬೃಹದಾರಣ್ಯಕ ಉಪನಿಷತ್

3.ತೈತ್ತಿರೀಯೋಪನಿಷತ್

4.ಛಾಂದೋಗ್ಯೋಪನಿಷತ್

5.ಕೇನೋಪನಿಷತ್

6.ಈಶಾವಾಸ್ಯೋಪನಿಷತ್

7.ಶ್ವೇತಾಶ್ವತರೋಪನಿಷತ್

8.ಕಠೋಪನಿಷತ್

9.ಮುಂಡಕೋಪನಿಷತ್

10.ಮಾಂಡೂಕ್ಯೋಪನಿಷತ್

11.ಪ್ರಶ್ನೋಪನಿಷತ್

12ಮೈತ್ರಾಯಣೀಯೋಪನಿಷತ್


ಇದಿಷ್ಟು ಉಪನಿಷತ್ತುಗಳ ಬಗ್ಗೆ ಮಾಹಿತಿ

ಪುರಾಣ ಗ್ರಂಥಗಳಿಂದ ಸಂಗ್ರಹಿಸಿದ ಮಾಹಿತಿ 

Comments