ರಂಗವಲ್ಲಿ ಅನ್ನೋದು ಸಂಸ್ಕೃತ ಪದ ಕನ್ನಡದಲ್ಲಿ ಎನ್ನುತ್ತಾರೆ ರಂಗ ಎಂದರೆ ಬಣ್ಣ ವಲ್ಲಿ ಎಂದರೆ ಬಳ್ಳಿ ಎಂದು ಅರ್ಥ ಅರವತ್ತನಾಲ್ಕು ಕಲೆಗಳಲ್ಲಿ ಚಿತ್ರಕಲೆಯೂ ಪ್ರಧಾನವಾದುದು.ಇದರ ಒಂದು ಭಾಗವೇ ರಂಗವಲ್ಲಿ. ಇದು ಚಿತ್ರಕಲೆಯ ಬಿಂದುಜ ಎಂಬ ವಿಭಾಗಕ್ಕೆ ಸೇರಿದೆ ನಾಟ್ಯಶಾಸ್ತ್ರ, ರಾಮಾಯಣ, ಭಾಗವತ ಮತ್ತು ಮಹಾಭಾರತದಲ್ಲಿಯೂ ರಂಗೋಲಿ ಚಿತ್ತಾರವನ್ನು ಉಲ್ಲೇಖಿಸಲಾಗಿದೆ.
ರಂಗವಲ್ಲಿ ಕುರಿತು ಒಂದು ಸ್ವಾರಸ್ಯಕರವಾದ ಸಣ್ಣ ಕಥೆಯಿದೆ:
ಒಮ್ಮೆ ಯಮಧರ್ಮರಾಜ ತನ್ನ ಪಾಶವನ್ನ ಹಿಡಿದು,ಕೋಣವನ್ನೇರಿ ಆಯುಷ್ಯ ಮುಗಿದಿದ್ದ ಸಾಧ್ವ್ವಿಯೊಬ್ಬಳ ಪತಿಯ ಪ್ರಾಣಹರಣಕ್ಕಾಗಿ ಭೂಲೋಕಕ್ಕೆ ಸೂರ್ಯೋದಯಕ್ಕೂ ಮುನ್ನವೇ ಬಂದಿದ್ದನಂತೆ.ಸಾಧ್ವಿಯ ಮನೆಯ ಮುಂದೆ ಬರುವಷ್ಟರಲ್ಲಾಗಲೇ ಅವಳು ಎದ್ದು,ತಾನೂ ಶುಭ್ರಗೊಂಡು-ಮನೆಯನ್ನೂ ಶುಭ್ರಗೊಳಿಸಿ ನಯನಮನೋಹರವಾದ ರಂಗವಲ್ಲಿಯಿಂದ ಮನೆಯಂಗಳವನ್ನು ಅಲಂಕರಿಸಿದ್ದಳಂತೆ.ಪ್ರಾಣಹರಣಕ್ಕೆಂದು ಅವರ ಮನೆಗೆ ಬಂದ ಯಮನೂ ಕೂಡ ಆ ರಮಣೀಯವಾದ ರಂಗವಲ್ಲಿಗೆ ಮಾರುಹೋಗಿ ಕೆಲವು ಕಾಲ ತಾನು ಬಂದ ಕಾರ್ಯವನ್ನೇ ಮರೆತನಂತೆ.ವಜ್ರಕಠೋರಿಯಾದ ತನ್ನನ್ನೂ ಕ್ಷಣಕಾಲ ತಡೆಹಿಡಿದ ರಂಗವಲ್ಲಿ ಕೌಶಲ್ಯಕ್ಕೆ ಶರಣಾಗಿ ಸಾಧ್ವಿಯ ಪತಿಯ ಆಯುಷ್ಯವನ್ನು ಹೆಚ್ಚುಪಡಿ ಮಾಡುವುದರ ಜೊತೆಗೆ,ಇನ್ಮುಂದೆ ಯಾರು ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ, ಮನೆಯ ಮುಂದೆ ಶುಭ್ರಗೊಳಿಸಿ,ಚೆಂದದ ರಂಗವಲ್ಲಿ ಹಾಕಿ ದೇವರನ್ನು ಪೂಜಿಸುತ್ತಾರೆಯೋ ಅಂತಹ ಸಾಧ್ವಿಯರ ಪತಿಯ ಪ್ರಾಣವನ್ನು ತಾನು ಕೊಂಡೊಯ್ಯುವುದಿಲ್ಲವೆಂದು ಆಶ್ವಾಸನೆ ನೀಡುತ್ತಾನಂತೆ
ಪ್ರತಿ ಹಬ್ಬ, ಹಾಗೂ ಧಾರ್ಮಿಕ ಆಚರಣೆಗಳಲ್ಲಿ ರಂಗೋಲಿಯನ್ನು ಬಿಡಿಸಲಾಗುತ್ತದೆ. ಈ ಎಲ್ಲಾ ಆಚರಣೆಗಳು ದೇವತಾ ತತ್ವಕ್ಕೆ ಸಂಬಂಧಿಸಿರುವುದರಿಂದ ರಂಗೋಲಿ ಹಾಕಿದರೆ ಶುಭವೆಂದು ಹೇಳಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಆಯಾ ಆಚರಣೆಗೆ ಸಂಬಂಧಿಸಿದ ದೈವಿಕ ತತ್ವವು ವಾತಾವರಣದಲ್ಲಿ ಹೆಚ್ಚಾಗಿರುತ್ತದೆ. ಆ ದೇವತೆಯನ್ನು ಧಾರ್ಮಿಕ ಆಚರಣೆಯನ್ನು ಮಾಡುವ ಸ್ಥಳಕ್ಕೆ ಆಕರ್ಷಿಸಲು ರಂಗೋಲಿಯನ್ನು ಹಾಕಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ದೇವತಾ ಶಕ್ತಿಯನ್ನು ಆಕರ್ಷಿಸಲು ಆಯಾ ದೇವತೆಗಳಿಗೆ ಸಂಬಂಧಿಸಿದ, ದೇವತೆಗಳನ್ನು ಹೆಚ್ಚು ಆಕರ್ಷಿಸುವ ರಂಗೋಲಿಯನ್ನು ಬಿಡಿಸಿದರೆ, ಪ್ರತಿಯೊಬ್ಬರೂ ಕೂಡಾ ಹೆಚ್ಚಿನ ಆಧ್ಯಾತ್ಮಿಕ ಪ್ರಯೋಜನವನ್ನು ಪಡೆಯುತ್ತಾರೆಂದು ಹೇಳಲಾಗು
ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಅದರಲ್ಲಿ ತರಂಗದಂತೆ ಹರಿದಿರುವ ರೇಖೆಗಳು ಮನೆಯನ್ನು ಪ್ರವೇಶಿಸುವವನ ಮನಸ್ಸನ್ನು ಶಾಂತಗೊಳಿಸುತ್ತವೆ. ಅವು ಮೆದುಳಿನ ಮೇಲೆ ಪ್ರಭಾವ ಬೀರಿ ಸಂತೋಷದ ನರಗಳನ್ನು ಪ್ರಚೋದಿಸುತ್ತವೆ. ಆಗ ಮನೆಗೆ ಬರುವ ಅತಿಥಿ ಖುಷಿ ಖುಷಿಯಾಗಿರುತ್ತಾನೆ. ರಂಗೋಲಿಯ ವಿವಿಧ ಆಕಾರಗಳು ಮನಸ್ಸಿನ ಮೇಲೆ ಬೇರೆ ಬೇರೆಯದೇ ರೀತಿಯ ಪರಿಣಾಮವನ್ನು ಬೀರುತ್ತವೆ. ಅದರಲ್ಲಿರುವ ಬಣ್ಣಗಳಿಗೂ ಹೀಗೆ ಪ್ರಭಾವ ಬೀರುವ ಶಕ್ತಿಯಿದೆ. ಒಟ್ಟಾರೆ, ಮೆದುಳಿನ ನರಗಳನ್ನು ಪ್ರಚೋದಿಸುವ ಮೂಲಕ ಸುಂದರ ಭಾವನೆಗಳನ್ನು ಉದ್ದೀಪಿಸುವುದು ರಂಗೋಲಿಯ ಮೂಲ ಉದ್ದೇಶ.
ಕೇರಳದಲ್ಲಿ ನಡೆಯುವ ಓಣಂ ಹಬ್ಬಕ್ಕೆ ವಿಶೇಷವಾಗಿ ಹೂವುಗಳಿಂದ ಮಾಡಿದ ಪೂಕಳಂ ನಿಂದ ಸ್ವಾಗತಿಸುತ್ತಾರೆ. ಓಣಂ ಎಂದರೆ ಅಂದು ವಾಮನನನ್ನು ಹೂವುಗಳ ರಂಗೋಲಿ ಮಾಡಿ ಸ್ವಾಗತ ಕೋರುವ ಹಬ್ಬವಾಗಿ ವಿಶೇಷತೆ ಪಡೆದಿದೆ.
ರಂಗವಲ್ಲಿಯನ್ನು ಎಲ್ಲಿ ಯಾವಾಗ ಹಾಕಬೇಕು
ರಂಗೋಲಿಯನ್ನು ಸಾಮಾನ್ಯವಾಗಿ ಮಣ್ಣಿನ ನೆಲಕ್ಕೆ ಸೆಗಣಿ ಸಾರಿಸಿ ಹಾಕಬೇಕು , ಈಗಿನ ಕಾಲದಲ್ಲಿ ಟೈಲ್ಸ್ ನೆಲದ ಮೇಲೆಯೂ ಕೂಡ ಹಾಕುತ್ತಾರೆ . ಯಾರಿಗಾದರೂ ಆರತಿ ಮಾಡುವಾಗ, ಕುಳ್ಳಿರಿಸುವ ಮರದ ಮಣೆಯ ಸುತ್ತಲೂ ರಂಗೋಲಿಯನ್ನು ಹಾಕಬಹುದು. ಜೊತೆಗೆ ಮಣೆಯ ಮುಂದೆಯೂ ರಂಗೋಲಿ ಹಾಕಬಹುದು.
ರಂಗೋಲಿಯನ್ನು ಬರೆಯುವಾಗ ಒಬ್ಬೊಬ್ಬರು ಒಂದೊಂದು ವಸ್ತುವನ್ನು ಬಳಸುತ್ತಾರೆ. ರಂಗೋಲಿ ಹಿಟ್ಟು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ರಂಗೋಲಿಯ ಮಹತ್ವ ಹೆಚ್ಚು. ಜೊತೆಗೆ ರಂಗೋಲಿ ಬರೆಯಲು ಬಳಸುವ ವಸ್ತುವೂ ಮುಖ್ಯ.
ಹಿಂದೆಲ್ಲಾ ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಬರೆಯುತ್ತಿದ್ದರು. ಕಾರಣ ಇಷ್ಟೇ. ಅಕ್ಕಿ ಹಿಟ್ಟಿನಿಂದ ರಂಗೋಲಿ ಬರೆದರೆ ಮನೆಯ ಮುಂಭಾಗ ಸುಂದರವಾಗಿ ಕಾಣುವುದಲ್ಲದೆ ಅಂಗಳದಲ್ಲಿ ಇರುವ ಸಣ್ಣ ಸಣ್ಣ ಕ್ರಿಮಿಗಳಿಗೆ ಈ ಅಕ್ಕಿ ಹಿಟ್ಟು ಆಹಾರವಾಗಲಿ ಎಂಬ ಸದುದ್ದೇಶ ಇದರ ಹಿಂದೆ ಇತ್ತು.
ವೈಜ್ಞಾನಿಕವಾಗಿ ಹೇಳುವುದಾದರೆ ರಂಗವಲ್ಲಿ ಬಿಡಿಸುವಾಗ ಇಡುವ ಸಮವಾದ ಚುಕ್ಕಿ,ನಿಯಮಿತವಾದ ಚಿತ್ರಗಳು ನೋಡುಗರ ಕಣ್ಣಿನ ನರಗಳ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆಯಂತೆ.
Comments