ಪುದಿನ ಸೊಪ್ಪಿನ ಆರೋಗ್ಯಕರ ಪ್ರಯೋಜನಗಳು

ಹಿಂದಿನ ಕಾಲದಿಂದಲೂ ಪುದೀನಾವನ್ನು ನಮ್ಮ ಆರೋಗ್ಯ ರಕ್ಷಣೆಗಾಗಿ ಬಳಸಲಾಗುತ್ತಿತ್ತು. ಇದನ್ನು ಆಹಾರ ಮತ್ತು ಇತರ ಕೆಲವು ರೂಪದಲ್ಲಿ ಬಳಸಿಕೊಳ್ಳಲಾಗುತ್ತಾ ಇತ್ತು.

ಆಯುರ್ವೇದದಲ್ಲಿ ಪುದಿನಾಗೆ ಅತ್ಯಂತ ಮಹತ್ವದ ಸ್ಥಾನವಿದೆ. ಸ್ವಾದ, ಸೌಂದರ್ಯ ಮತ್ತು ಸುಗಂಧದ ಅತ್ಯುತ್ತಮ ಸಂಗಮ ಪುದಿನದಲ್ಲಿದೆ. ತುಂಬಾ ದಿನಗಳ ತನಕ ಪುದಿನ ಗಿಡ ಬದುಕುತ್ತದೆ. 12 ತಿಂಗಳುಗಳ ಕಾಲ ಯಾವತ್ತೂ ಬೇಕಾದರೂ ಪುದಿನಾವನ್ನು ಬಳಸಬಹುದು ಎಂದು ಆಯುರ್ವೇದ ಹೇಳುತ್ತದೆ. ಯಾಕೆಂದರೆ, ಅಷ್ಟೂ ದಿನ ಅದರಲ್ಲಿ ಸ್ವಾದ ಮತ್ತು ಸುವಾಸನೆ ಹಾಗೇ ಇರುತ್ತದೆ. ಪುದಿನ ಮತ್ತು ಪೆಪ್ಪರ್ ಮಿಂಟ್ ಒಂದೇ ರೀತಿಯದ್ದಾಗಿದ್ದರೂ ಬೇರೆ ಬೇರೆ ಪ್ರಬೇಧಗಳಿಗೆ ಸೇರಿದ್ದಾಗಿವೆ. ಇವತ್ತು ನಾವು ಪುದಿನ ಮತ್ತು ಆದರಿಂದಾಗುವ ಆರೋಗ್ಯ ಲಾಭದ ಬಗ್ಗೆ ತಿಳಿಯೋಣ. 
ಪುದೀನಾವನ್ನು ಇಂಗ್ಲಿಷ್‌ನಲ್ಲಿ ಸ್ಪಿಯರ್‌ಮಿಂಟ್ ಎಂದು ಕರೆಯಲಾಗುತ್ತದೆ. ಇದನ್ನು ಭಾರತೀಯ ಮತ್ತು ಇಟಾಲಿಯನ್ ಅಡುಗೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ.


ಪ್ರತಿರೋಧಕ ಶಕ್ತಿ ಹೆಚ್ಚಿಸುವುದು
ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಪುದೀನಾ ಎಲೆಗಳು ಪ್ರತಿರೊಧಕ ಶಕ್ತಿ ಹೆಚ್ಚಿಸುವುದು. ನೀವು ಸೇವಿಸುವ ಆಹಾರದಲ್ಲಿ ಪುದೀನಾದ ಕೆಲವು ಎಲೆಗಳನ್ನು ಹಾಕಿದರೆ ಒಳ್ಳೆಯ ಫಲಿತಾಂಶ ಸಿಗುವುದು.


ಅಲರ್ಜಿಗಳು ಮತ್ತು ಹೊಟ್ಟೆಯ ಅಸ್ವಸ್ಥತೆ
ಪುದೀನಾ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಅಲರ್ಜಿಯನ್ನು ಗುಣಪಡಿಸುತ್ತದೆ. ಇದು ಹೊಟ್ಟೆಯ ಸಮಸ್ಯೆಗಳಾದ ಉಬ್ಬುವುದು, ಗ್ಯಾಸ್ ಮತ್ತು ಮುಟ್ಟಿನ ಸೆಳೆತದಿಂದ ಪರಿಹಾರವನ್ನು ನೀಡುತ್ತದೆ.

ಕ್ಯಾನ್ಸರ್ ತಡೆಯುವುದು 
ಪುದೀನಾ ಎಲೆಗಳಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿವೆ. ಈ ಗುಣಗಳಿಂದಾಗಿ ಪುದೀನಾವು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಹೀಗೆ ಮಾಡುವುದರಿಂದ ಕ್ಯಾನ್ಸರ್ ಬರದಂತೆ ತಡೆಯುವುದು. ಪುದೀನಾವನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಸಿದರೆ ಕ್ಯಾನ್ಸರ್ ನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.


ಆಸ್ತಮಾಗೆ ಚಿಕಿತ್ಸೆ
ಪುದೀನಾದಲ್ಲಿರುವ ಮೆಂಥಾಲ್ ಮೂಗಿನ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ದೀರ್ಘಕಾಲದ ಕೆಮ್ಮಿನಿಂದ ಉಂಟಾಗುವ ಕಿರಿಕಿರಿಯಿಂದ ಪರಿಹಾರವನ್ನು ನೀಡುತ್ತದೆ. ಇದು ಕೆಮ್ಮಿಗೆ ಉತ್ತಮ ಪರಿಹಾರವಾಗಿದೆ.


ಹಲ್ಲು ನೋವಿಗೆ
ನಾಲ್ಕೈದು ಪುದಿನ ಎಲೆಗಳನ್ನು ಬಾಯಿಯೊಳಗೆ ಇಟ್ಟು ಚೆನ್ನಾಗಿ ಅಗಿಯಿರಿ. ಹಲ್ಲು ನೋವು, ಒಸಡು ನೋವು ದೂರವಾಗುತ್ತದೆ. 


 ಮುಖದಲ್ಲಿನ ಕಲೆಗಳಿಗೆ
ಪುದಿನ ಸೊಪ್ಪನ್ನು ಚೆನ್ನಾಗಿ ಪುಡಿ ಮಾಡಿ ನೀರಿಗೆ ಹಾಗಿ ಅದರ ಉಗಿ ತೆಗೆದುಕೊಂಡರೆ ಮುಖದಲ್ಲಿ ಕಲೆಗಳು (Spots) ಮಾಯವಾಗುತ್ತವೆ.

ಬಾಯಿಯ ಕೆಟ್ಟ ವಾಸನೆ ತಡೆಯುತ್ತದೆ
ಪುದಿನಾದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರ ಪ್ರಮುಖ ಆರೋಗ್ಯ ಗುಣಗಳಲ್ಲಿ ಒಂದು. ಕೆಲವು ಪುದಿನಾ ಎಲೆಗಳನ್ನು ತೆಗೆದುಕೊಂಡು ಜಗಿಯಿರಿ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
ಶ್ವಾಸಕೋಶದ ರೋಗ ತಡೆಯುವುದು
ನಿಮಗೆ ಕೆಲವೊಮ್ಮೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ ಎಂದಾದರೆ ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ. ಇದರಲ್ಲಿ ರೊಸ್ಮರಿನಿಕ್ ಆಮ್ಲವಿದೆ. ಇದು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾದ್ದು, ಫ್ರೀ ರ್ಯಾಡಿಕಲ್ ಅನ್ನು ತಟಸ್ಥಗೊಳಿಸುವುದು ಮತ್ತು ಉರಿಯೂತದ ರಾಸಾಯನಿಕವನ್ನು ನಿರ್ಬಂಧಿಸುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪುದೀನಾವನ್ನು ಬಳಸಿಕೊಂಡರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುವುದು.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ವಿಟಮಿನ್ ಎ’ ಮತ್ತು ‘ಬೆಟಾ ಕ್ಯಾರೊಟಿನ್’ ಅಂಶದಿಂದ ಸಮೃದ್ಧವಾಗಿರುವ ಪುದಿನಾದ ಸೇವನೆ ಮಾಡಿದರೆ ಕಣ್ಣಿನ ಆರೋಗ್ಯ ಒಳ್ಳೆಯದಾಗಿರುವುದು. ಖಾದ್ಯ, ಸೂಪ್, ಸಲಾಡ್ ಮತ್ತು ಜ್ಯೂಸ್ಗೆ ಪುದೀನಾ ಹಾಕಿದರೆ ಅದರಿಂದ ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ.


ಮೂಗು ಕಟ್ಟಿರುವುದನ್ನು ತೆರವುಗೊಳಿಸುತ್ತದೆ
 ಹಲವು ಕಾರಣಗಳಿಂದ ಮೂಗು ಕಟ್ಟುತ್ತದೆ. ವಾಸ್ತವವಾಗಿ ಇದೊಂದು ದೇಹದ ರಕ್ಷಣಾ ವ್ಯವಸ್ಥೆ. ಇದಕ್ಕಾಗಿ ಪುದಿನ ಚಹಾ ಎಲೆಗಳನ್ನು ಕುದಿಯುವ ನೀರಿಗೆ ಹಾಕಿ, ಈ ನೀರಿನಿಂದ ಹೊರಬರುವ ಹಬೆಯನ್ನು ಮೂಗಿನ ಮೂಲಕ ಎಳೆದುಕೊಳ್ಳಿ. ಮುಚ್ಚಿದ್ದ ಹೊಳ್ಳೆ ನಿಧಾನವಾಗಿ ತೆರೆಯಲು ಪ್ರಾರಂಭವಾಗುತ್ತದೆ.

ಗಾಯಗಳನ್ನು ಗುಣಪಡಿಸುತ್ತದೆ
ಪುದೀನಾ ಉರಿಯೂತವನ್ನು ದೂರ ಮಾಡುವ ಗುಣಗಳನ್ನು ಹೊಂದಿದೆ. ಚರ್ಮದ ಮೇಲಿನ ಕಲೆ, ಸೊಳ್ಳೆ ಮತ್ತು ತುರಿಕೆಯನ್ನು ನಿವಾರಿಸುತ್ತಾರೆ. ಇದಕ್ಕಾಗಿ ನೀವು ಪುದೀನಾ ಎಲೆಗಳ ರಸವನ್ನು ಬಾಧಿತ ಜಾಗಕ್ಕೆ ಹಚ್ಚಬೇಕು. ಇದು ಗಾಯವನ್ನು ಗುಣಪಡಿಸುತ್ತವೆ. ಅಲ್ಲದೆ ಗಾಯದಿಂದ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಪುದೀನಾ ಸಹಾಯ ಮಾಡುತ್ತದೆ

ಚರ್ಮದ ಹೊಳಪು ಹೆಚ್ಚಿಸುತ್ತದೆ
ಪುದೀನಾ ಎಲೆಗಳು ನಂಜುನಿರೋಧಕ ಗುಣಗಳನ್ನು ಹೊಂದಿವೆ. ಇವು ಕಪ್ಪು ಕಲೆಗಳು ಮತ್ತು ದದ್ದುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪುದೀನಾ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಪುದೀನಾ ಎಲೆಗಳನ್ನು ಚರ್ಮದ ಹೊಳಪು ಹೆಚ್ಚಿಸಲು ಬಳಸಲಾಗುತ್ತದೆ.


ಇಷ್ಟೆಲ್ಲ ಆರೋಗ್ಯಕರ ಲಾಭವಿರುವ ಪುದಿನವನ್ನು ದಿನನಿತ್ಯ ಸೇವಿಸಿ ಆರೋಗ್ಯವನ್ನು ರಚಿಸಿಕೊಳ್ಳೋಣ




Comments