ಸನಾತನ ಹಿಂದೂ ಧರ್ಮದಲ್ಲಿ ಸ್ನಾನಕ್ಕೆ ವಿಶೇಷವಾಗಿ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಹೇಳಲಾಗಿದೆ. ಸ್ನಾನವನ್ನು ಮನುಷ್ಯನ ಸಮೃದ್ಧಿಯ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನಾಲ್ಕು ಬಗೆಯ ಸ್ನಾನಗಳನ್ನು ಉಲ್ಲೇಖಿಸಲಾಗಿದೆ. ಮುನಿ ಸ್ನಾನ, ದೇವ ಸ್ನಾನ, ಮಾನವ ಸ್ನಾನ ಮತ್ತು ರಾಕ್ಷಸಿ ಸ್ನಾನ ಅವುಗಳಲ್ಲಿ ಪ್ರಮುಖವಾಗಿವೆ. ಮುನಿ ಸ್ನಾನ ಎಲ್ಲಕ್ಕಿಂತ ಉತ್ತಮವಾಗಿದೆ. ಮುನಿ ಸ್ನಾನ ಮಾಡುವ ವ್ಯಕ್ತಿಯು ಎಲ್ಲಾ ರೀತಿಯ ಸಂಕೋಲೆಗಳಿಂದ ಮುಕ್ತನಾಗಿರುತ್ತಾನೆ. ಮುನಿ ಸ್ನಾನ ಹಿಂದೂ ಧರ್ಮದ ಅತ್ಯುತ್ತಮ ಸ್ನಾನವೆಂದು ಪರಿಗಣಿಸಲಾಗಿದೆ.
ಯಾವುದೇ ಪಾಪ ಮಾಡಿದರು ಯಾವುದೇ ಕರ್ಮ ಮಾಡಿದರು, ಸುಳ್ಳು ಹೇಳಿದ್ದರೆ ಅಥವಾ ತಪ್ಪಾಗಿ ಪ್ರಮಾಣ ಮಾಡಿದ್ದರೆ, ನೀರು ಆ ಎಲ್ಲಾ ದೋಷಗಳನ್ನು ಪರಿಹಾರ ಮಾಡುತ್ತದೆ ( ಋಗ್ರೇದ, ಮಂಡಲ 10, ಸ್ತೋತ್ರ 9).
ಪುರಾಣಗಳಲ್ಲಿ ಹೇಳಿರುವಂತೆ ಯಾವುದೇ ಧಾರ್ಮಿಕ ಆಧ್ಯಾತ್ಮಿಕ ಕಾರ್ಯಗಳು ಮಾಡುವ ಮೊದಲು ಸ್ನಾನ ಮಾಡಿ ಸುಚಿಯಾಗಬೇಕು ಎಂದು ಹೇಳುತ್ತಾರೆ.
ಸ್ನಾನದ ಪ್ರಕಾರಗಳು
ದೇವ ಸ್ನಾನ
ಸೂರ್ಯೋದಯದ ನಂತರ ಸ್ನಾನ ಮಾಡುವವರೇ ಹೆಚ್ಚು. ಶಾಸ್ತ್ರ ಹೇಳುವಂತೆ ಸೂರ್ಯೋದಯವಾದ ಸಮಯದಲ್ಲಿ ನದಿಯಲ್ಲಿ ಅಥವಾ ಮಂತ್ರ ಪಠಣದೊಂದಿಗೆ ಮಾಡುವ ಸ್ನಾನವೇ ದೇವ ಸ್ನಾನ.
ಬ್ರಹ್ಮ ಸ್ನಾನ
ಪ್ರಾತಃಕಾಲದ ನಾಲ್ಕರಿಂದ ಐದು ಗಂಟೆಯೊಳಗಿನ ಸಮಯವನ್ನು ಬ್ರಾಹ್ಮೀ ಮುಹೂರ್ತವೆನ್ನುತ್ತಾರೆ. ಈ ಸಮಯದಲ್ಲಿ ಭಗವಂತನನ್ನು ಧ್ಯಾನಿಸುತ್ತಾ ಮಾಡುವ ಸ್ನಾನವೇ ಬ್ರಹ್ಮ ಸ್ನಾನ. ಬ್ರಾಹ್ಮೀ ಮೂಹೂರ್ತದಲ್ಲಿ ಮಾಡುವ ಸ್ನಾನದಿಂದ ಇಷ್ಟದೇವರ ವಿಶೇಷವಾದ ಕೃಪೆ ಪ್ರಾಪ್ತವಾಗುವುದಲ್ಲದೇ, ಕಷ್ಟಗಳೆಲ್ಲಾ ನಿವಾರಣೆಯಾಗುತ್ತವೆ.
ಮುನಿ ಸ್ನಾನ
ಬೆಳಗಿನ ಸಮಯದಲ್ಲಿ ಇನ್ನೂ ಆಕಾಶದಲ್ಲಿ ನಕ್ಷತ್ರಗಳು ಕಾಣುತ್ತಿರುವ ಕಾಲದಲ್ಲಿ ಮಾಡುವ ಸ್ನಾನವನ್ನು ಋಷಿ ಸ್ನಾನವೆಂದು ಹೇಳುತ್ತಾರೆ. ಸೂರ್ಯೋದಕ್ಕೆ ಮೊದಲು ಈ ಸ್ನಾನವನ್ನು ಮಾಡಲಾಗುತ್ತದೆ. ಇದನ್ನು ಮಾನವ ಸ್ನಾನವೆಂದು ಸಹ ಕರೆಯುತ್ತಾರೆ. ಸೂರ್ಯೋದಕ್ಕೂ ಮೊದಲು ಮಾಡುವ ಸ್ನಾನವನ್ನೇ ಸರ್ವಶ್ರೇಷ್ಠ ಸ್ನಾನವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ರಾಕ್ಷಸ ಸ್ನಾನ
ಸೂರ್ಯೋದಯದ ನಂತರ ಆಹಾರಾದಿಗಳನ್ನು ಸೇವಿಸಿದ ನಂತರ ಮಾಡುವ ಸ್ನಾನವೇ ದಾನವ ಸ್ನಾನ. ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ, ಯಾವುದೇ ಆಹಾರ ಅಥವಾ ಪಾನೀಯಗಳನ್ನು ಸೇವಿಸುವುದಕ್ಕಿಂತ ಮೊದಲು ಸ್ನಾನ ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ.
ದೇವ ಸ್ನಾನ, ಋಷಿ ಸ್ನಾನ ಅಥವಾ ಬ್ರಹ್ಮ ಸ್ನಾನಗಳನ್ನೇ ಮಾಡುವುದು ಉತ್ತಮ ಮತ್ತು ಸರ್ವಶ್ರೇಷ್ಠವೆಂದು ಶಾಸ್ತ್ರ ಹೇಳುತ್ತದೆ. ಮುಖ್ಯವಾಗಿ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ಗ್ರಹಣಗಳು ಮತ್ತು ಇತರೇ ಅಶೌಚ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ದಿನ ಸಂಜೆ ಮತ್ತು ರಾತ್ರಿ ಸ್ನಾನವು ನಿಷಿದ್ಧವಾಗಿದೆ.
ಪುರಾಣ ಹಾಗೂ ಶಾಸ್ತ್ರದ ಪ್ರಕಾರ, ಸ್ನಾನ ಮಾಡುವುದರಿಂದ ವ್ಯಕ್ತಿಯ ಮನಸ್ಸು ಮತ್ತು ದೇಹವು ಶುದ್ಧವಾಗುತ್ತದೆ, ವ್ಯಕ್ತಿಯ ದೇಹ ಮತ್ತು ಮನಸ್ಸು ಶುದ್ಧವಾಗಿದ್ದಾಗ ವ್ಯಕ್ತಿಯ ಆಲೋಚನೆಗಳು ಶುದ್ಧವಾಗಿರುತ್ತದೆ ಮತ್ತು ಆಲೋಚನೆಗಳು ಶುದ್ಧವಾಗಿದ್ದಾಗ ವ್ಯಕ್ತಿಯ ಕ್ರಿಯೆಗಳು ಶುದ್ಧವಾಗುತ್ತವೆ ಎಂಬ ನಂಬಿಕೆ ಇದೆ. ಮತ್ತು ಕರ್ಮವನ್ನು ಶುದ್ದೀಕರಿಸಿದಾಗ, ವ್ಯಕ್ತಿಯು ತನ್ನ ಅಭಿವೃದ್ಧಿಯ ಹಾದಿಯತ್ತ ಸಾಗುತ್ತಾನೆ. ಧರ್ಮಗ್ರಂಥಗಳಲ್ಲಿ ಬೆಳಿಗ್ಗೆ ಸ್ನಾನಕ್ಕೆ ನಾಲ್ಕು ಉಪನಾಮಗಳನ್ನು ನೀಡಲಾಗುತ್ತದೆ.
ಸ್ನಾನ ಯಾವಾಗ ಮಾಡಬೇಕು ಮತ್ತು ಮಾಡಬಾರದು?..
ಯಾವಾಗಲೂ “ಭುಕ್ತವತ್ಸು ಚ ಗರ್ಹಿತಮ್” ಆಹಾರ ಸೇವನೆಯ ನಂತರ ಸ್ನಾನ ಮಾಡುವುದು ಸರಿಯಲ್ಲ. ಮೊದಲೇ ಸ್ನಾನ ಮಾಡುವುದು ಉತ್ತಮ. ಸ್ನಾನವು ಶರೀರದ ರಕ್ತ ಪರಿಚಲನೆಯನ್ನು ವೃದ್ಧಿಸಿದಾಗ ಜಠರಾಗ್ನಿಯು ಉತ್ತೇಜನಗೊಂಡು ಜೀರ್ಣಕ್ರಿಯೆಯು ಸುಲಲಿತವಾಗುವುದು. ಅದೇ ಆಹಾರ ಸೇವನೆಯ ನಂತರ ಸ್ನಾನ ಮಾಡಿದಾಗ ಸ್ವಾಭಾವಿಕವಾಗಿ ಉಂಟಾಗುವ ರಕ್ತ ಪರಿಚಲನೆಯಲ್ಲಿ, ಸಣ್ಣಮಟ್ಟಿನ ಏರುಪೇರಿನಿಂದ ಜೀರ್ಣಕ್ರಿಯೆಯಲ್ಲೂ ವ್ಯತ್ಯಾಸ ಉಂಟಾಗಬಹುದು. ಈ ಉದ್ದೇಶದಿಂದ ಹೊಟ್ಟೆ ಖಾಲಿ ಇರುವಾಗಲೇ ಸ್ನಾನ ಮಾಡಿ, ನಂತರ ಆಹಾರದ ಸೇವನೆಯನ್ನು ನಮ್ಮ ಹಿರಿಯರು ರೂಢಿಸಿಕೊಂಡಿದ್ದರು. ಇದನ್ನು ಇಂದಿನ ಆಧುನಿಕ ಜಗತ್ತು ಹಲವು ಸಂಶೋಧನೆಗಳ ನಂತರ ಸ್ವೀಕಾರಾರ್ಹ ಎಂದು ಒಪ್ಪಿಕೊಂಡಿದೆ.
ನಮ್ಮ ಹಿರಿಯರು ಕೆಲವೊಂದು ಕಾಯಿಲೆಗಳು ಬಂದಾಗ ಸ್ನಾನ ಮಾಡಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಸಾಮಾನ್ಯವಾಗಿ ಇಂದಿಗೂ ಜ್ವರ ಬಂದಾಗ ಸ್ನಾನ ಮಾಡದೆ ಇರುವವರು ಬಹಳಷ್ಟು ಮಂದಿ ಇದ್ದಾರೆ. ಇದಲ್ಲದೇ ಆಹಾರ ಸೇವನೆಯಾದ ತಕ್ಷಣ, ಅಜೀರ್ಣ, ಹೊಟ್ಟೆಯುಬ್ಬರ, ಅತಿಸಾರ, ಕಣ್ಣು ಅಥವಾ ಕಿವಿ ಸಂಬಂಧಿತ ಕಾಯಿಲೆ ಇದ್ದಾಗಲೂ ಸ್ನಾನ ವರ್ಜ್ಯವೆನಿಸಿದೆ.
ಸ್ನಾನ ಮಾಡುವ ನೀರು ಹೇಗಿರಬೇಕು?
“ಉಷ್ಣಾಂಬುನಾ ಅಧಃ ಕಾಯಸ್ಯ ಪರಿಷೇಕೋ ಬಲಾವಹಃ, ತೇನೈವ ತು ಉತ್ತಮಾಂಗಸ್ಯ ಬಲಹೃತ್ ಕೇಶ ಚಕ್ಷುಷಾಮ್”
ಸ್ನಾನ ಮಾಡುವಾಗ ಕುತ್ತಿಗೆಯ ಕೆಳಗಿನ ಭಾಗಕ್ಕೆ ಉಷ್ಣ ಜಲ, ಉತ್ತಮಾಂಗ ಅಥವಾ ಶಿರ ಸ್ನಾನಕ್ಕೆ ತಣ್ಣೀರು ಯಾ ಉಗುರು ಬೆಚ್ಚನೆಯ ನೀರನ್ನು ಉಪಯೋಗಿಸುವುದು ಉತ್ತಮ. ಅತಿ ಉಷ್ಣ ಅಥವಾ ಅತಿ ಶೀತಲ ಜಲದ ಪ್ರಯೋಗ ನಿಷಿದ್ಧ. ಅಧಃ ಕಾಯಕ್ಕೆ ಉಷ್ಣ ಜಲದಿಂದಾಗಿ ಶಕ್ತಿ ದೊರೆಯುವುದು. ಆದರೆ ಶಿರಸ್ನಾನಕ್ಕೆ ಬಿಸಿನೀರನ್ನು ಬಳಕೆ ಮಾಡಿದಲ್ಲಿ ಕ್ರಮೇಣ ಕೂದಲು ಮತ್ತು ಕಣ್ಣಿನ ಸಮಸ್ಯೆ ಉಂಟಾಗಬಹುದೆಂದು ಹೇಳಲಾಗಿದೆ.
ಸರಿಯಾದ ಕ್ರಮದಲ್ಲಿ ಸ್ನಾನ ಮಾಡುವುದರಿಂದ ಶರೀರಕ್ಕುಂಟಾಗುವ ಲಾಭಗಳಾವುವು? ಅಷ್ಟಾಂಗ ಹೃದಯದಲ್ಲಿ ಸ್ನಾನದ ಮಹತ್ವವನ್ನು ಹೀಗೆ ವರ್ಣಿಸಲಾಗಿದೆ.
” ದೀಪನಂ ವೃಷ್ಯಮಾಯುಷ್ಯಂ ಸ್ನಾನಮೂರ್ಜಾಬಲಪ್ರದಮ್ |
ಕಂಡೂ ಮಲ ಶ್ರಮ ಸ್ವೇದ ತಂದ್ರಾ ತೃಟ್ ದಾಹ ಪಾಪ್ಮಜಿತ್ ||”
ಸ್ನಾನ ಮಾಡುವುದರಿಂದ ಜಠರಾಗ್ನಿಯು ಉತ್ತೇಜನಗೊಳ್ಳುತ್ತದೆ. ಶರೀರದಲ್ಲಿನ ಬೆವರು, ಕೊಳೆ, ತುರಿಕೆ, ದುರ್ಗಂಧ ಇತ್ಯಾದಿ ಕಶ್ಮಲಗಳನ್ನು ಇಲ್ಲವಾಗಿಸಿ ಸುಖನಿದ್ರೆ ಮತ್ತು ಉತ್ತಮ ಬಲವನ್ನು ನೀಡುತ್ತದೆ. ಶಾರೀರಿಕ ಶುಚಿಯು ಮನಸ್ಸಿಗೂ ಹಿತವನ್ನುಂಟು ಮಾಡುವುದರಿಂದ ಹೃದಯದ ಕಾರ್ಯಕ್ಷಮತೆಯೂ ವೃದ್ಧಿಸುತ್ತದೆ.
ಹೆಣ್ಣು ಮಕ್ಕಳಿಗೆ ತಲೆ ಸ್ನಾನ ವಿಚಾರ .......
ಮೊದಲನೆಯದಾಗಿ ಹೆಣ್ಣು ಮಕ್ಕಳು ತಲೆ ಸ್ನಾನಮಾಡುವಾಗ ಎಣ್ಣೆ ಹಚ್ಚಿಕೊಳ್ಳದೆ ಮಾಡಬಾರದು .ಅದು ಅಶುಭ ಅಶೌಚ ಬಂದಾಗ ಮಾತ್ರ ಹಾಗೆ ಮಾಡಬೇಕು..
ವ್ಯತಿಪಾತ ,ವೈದೃತಿ ಯೋಗ ವಿದ್ದಾಗ ಕಾರಣ ವಿಲ್ಲದೆ ತಲೆ ಸ್ನಾನವನ್ನು ಮಾಡಬಾರದು..
ಶ್ರಾದ್ಧದ ದಿನ ಹೆಣ್ಣುಮಕ್ಕಳು ತಲೆ ಸ್ನಾನ ಮಾಡಬಾರದು
ಬುಧವಾರ ,ಶತಬಿಷ ನಕ್ಷತ್ರವಿದ್ದಾಗ , ಮಘಾ ನಕ್ಷತ್ರ ವಿದ್ದಾಗ ಅಭ್ಯಂಗ ಮಾಡುವ ಸ್ತ್ರೀಯು ಪತಿ ಘಾತುಕಳಾಗುವಳು..
ಮನೆಯಲ್ಲಿ ಮಂಗಲಕಾರ್ಯ , ವಿಜಯೋತ್ಸವ, ವಿಜಯದಶಮಿ , ದಿಪಾವಳಿ , ಸೌಭಾಗ್ಯವ್ರತ ಗಳಿದ್ದಾಗ ಯಾವದೇ ದಿನವನ್ನು ತಿಥಿ ನೋಡಬೇಡಿ ಆ ದಿನ ಅಭ್ಯಂಗ ಸ್ನಾನ ( ತಲೆ ಸ್ನಾನ) ಮಾಡಬಹುದು ....
ಇನ್ನು ಕೆಲವು ದಿನ ತಲೆ ಸ್ನಾನ ಅವಶ್ಯವಿದ್ದಾಗ ಹೀಗಿದೆ ಪರಿಹಾರ
ರವಿವಾರ ಮಾಡುವದಿದ್ದಲ್ಲಿ ಎಣ್ಣೆಯಲ್ಲಿ ಪುಷ್ಪವನ್ನು ಹಾಕಿ ಮಾಡಬೇಕು..
ಕುಜವಾರ ಮಾಡಬೇಕಾದಲ್ಲಿ... ತುಳಸಿಕಟ್ಟೆಯಲ್ಲಿರುವ ಮೃತ್ತಿಕೆಯನ್ನು ಚಿಟಿಕೆ ಎಣ್ಣೆಯಲ್ಲಿ ಹಾಕಿ ಮಾಡಿದರೆ ದೋಷವಿಲ್ಲ
ಶುಕ್ರವಾರ ತಲೆ ಸ್ನಾನ ಮಾಡಬೇಕಾದಲ್ಲಿ ಎಣ್ಣೆಯಲ್ಲಿ ಗೋಮಯ ( ಸೆಗಣಿ) ಹಾಕಿ ಮಾಡಿದಲ್ಲಿ ದೋಷವಿಲ್ಲ...
ದ್ವಾದಶಿ ದಿನ , ಮತ್ತು ಅಮವಾಸ್ಯೆ ಮುತ್ತೈದೆಯರು ಅಭ್ಯಂಗ ಸ್ನಾನ ಮಾಡಬಾರದು..
ಕೆಲವರು ಪ್ರತಿದಿನ ತಲೆ ಸ್ನಾನದ ನೇಮವನ್ನು ಹಿಡಿದವರಿಗೆ ಯಾವದೇ ದೋಷವಿಲ್ಲ...
ಹಬ್ಬ ಸೌಭಾಗ್ಯ ವ್ರತಗಳಲ್ಲಿ ಅಭ್ಯಂಗ ಸ್ನಾನ ( ತಲೆ ಸ್ನಾನ) ಮಾಡುವಾಗ ಹೆಣ್ಣು ತಲೆಗೆ ಎಣ್ಣೆ ಹಾಕಿ ನಂತರ ಚಿಟಿಗೆ ಅರಿಷಿಣ ಎಣ್ಣೆಯಲ್ಲಿ ಹಚ್ಚಿಕೊಂಡು ಸ್ನಾನಮಾಡಬೇಕು
Comments