ಸೂರ್ಯನು ಕತ್ತಲೆಯನ್ನು ಹೋಗಲಾಡಿಸುವಂತೆ ಶ್ರೀರಾಮ ತಾರಕ ಮಂತ್ರ ಜಪವು ಮನದ ಕತ್ತಲೆ, ಜೀವನದ ಅಜ್ಞಾನವನ್ನು ಹೋಗಲಾಡಿಸುವಂತಹುದು. ಅಂತಹ ಶಕ್ತಿ ಶ್ರೀರಾಮ ತಾರಕ ಮಂತ್ರ ದಲ್ಲಿ ಇದೆ
ಇದಕ್ಕೆ ಯಾವುದೇ ನಿರ್ದಿಷ್ಟ ಸಮಯ, ದಿನ, ವರ್ಷ ಎಂದು ಯೋಚಿಸದೇ ಜಪಿಸಬಹುದು ಯಾವುದೇ ಆಹಾರ ಪದ್ಧತಿಯ ನಿಯಮ ನಿರ್ಬಂಧಗಳು ಕೂಡ ಇರುವುದಿಲ್ಲ, ಲಿಖಿತ ಜಪ ಆಚರಿಸಬಹುದು.
ಅದಕ್ಕೇ ಪುರಂದರದಾಸರು, ರಾಮ ಮಂತ್ರವ ಜಪಿಸೋ, ಹೇ ಮನುಜ.. ಆ ಮಂತ್ರ ಈ ಮಂತ್ರ ಜಪಿಸಿ ಕೆಡಲುಬೇಡ, ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ.
ಸಾಮಾನ್ಯವಾಗಿ ಎಲ್ಲರೂ ಮಹಾವಿಷ್ಣುವಿನ ಅನುಗ್ರಹವನ್ನು ಪಡೆಯಲು ವಿಷ್ಣುವಿನ ಸಹಸ್ರನಾಮವನ್ನು ಪಠಿಸುತ್ತಾರೆ, ಆದರೆ ಈ ವಿಷ್ಣುಸಹಸ್ರನಾಮವನ್ನು ಅಷ್ಟು ಸುಲಭವಾಗಿ ಎಲ್ಲರೂ ಸಹ ಹೇಳಲು ಅಥವಾ ಪಠಿಸಲು ಸಾಧ್ಯವಿಲ್ಲ. ಆದ್ದರಿಂದ ವಿಷ್ಣುವಿನ ಭಕ್ತರು ವಿಷ್ಣುವಿನ ಅನುಗ್ರಹವನ್ನು ಪಡೆಯಲು ಬೇರೆ ಮಾರ್ಗವನ್ನು ಯಾವುದು ಇದೆ.
ಪಾರ್ವತಿಯು ಶಿವನ ಬಳಿ ಕೇಳಿದಾಗ ಶಿವನು ಪಾರ್ವತಿಗೆ ಈ ರೀತಿ ಉತ್ತರಿಸುತ್ತಾನೆ, ನಾನು ಶ್ರೀರಾಮನ ಪದವನ್ನು ಮೂರು ಬಾರಿ ಹೇಳಿಕೊಂಡು ಸಂತೋಷಪಡುತ್ತೇನೆ, ವಿಷ್ಣುವಿನ ಸಹಸ್ರನಾಮವನ್ನು ಜಪಿಸಲು ಸಾಧ್ಯವಾಗದಿದ್ದರೆ ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು ಅದು ವಿಷ್ಣು ಸಹಸ್ರನಾಮಕ್ಕೆ ಸಮವಾಗುತ್ತದೆ ಹಾಗೂ ಎಲ್ಲಾ ಕಷ್ಟಗಳನ್ನು ಕಳೆಯಲು ಇದು ಸುಲಭ ಮಾರ್ಗ ಎಂದು ಶಿವನು ಪಾರ್ವತಿಗೆ ಹೇಳುತ್ತಾನೆ,
ಯಾರು ಈ ಒಂದು ಮಂತ್ರವನ್ನು ಮೂರು ಬಾರಿ ಪಠಿಸುತ್ತಾರೆ ಅವರಿಗೆ ವಿಷ್ಣುವಿನ ಅನುಗ್ರಹದ ಜೊತೆಗೆ ನನ್ನ ಅನುಗ್ರಹವು ಸಿಗುತ್ತದೆ ಎಂದು ಶಿವನು ಪಾರ್ವತಿಗೆ ಹೇಳುತ್ತಾನೆ. ಆ ಮಂತ್ರ ಯಾವುದೆಂದರೆ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೆ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ. ಹೇಳಿ ಶ್ರೀರಾಮ ಜಯರಾಮ ಜಯ ಜಯ ರಾಮ” ಮೂರು ಬಾರಿ ಜಪಿಸಿದರೆ ಸಾಕು ಅದು ವಿಷ್ಣುವಿನ ಸಹಸ್ರನಾಮಕೆ ಸಮವಾಗುತ್ತದೆ. ಈ ಒಂದು
ಮಂತ್ರವನ್ನು ಯಾರು ಪ್ರತಿದಿನ ಪಠಿಸುತ್ತಾರೋ ಅವರಿಗೆ ವಿಷ್ಣುವಿನ ಜೊತೆ ಶಿವನ ಅನುಗ್ರಹವು ಸಹ ಆಗುತ್ತದೆ ಎಂದು ಶಿವನು ಸ್ವತಹ ಪಾರ್ವತಿಗೆ ಹೇಳುತ್ತಾನೆ ಪದ್ಮಪುರಾಣದಲ್ಲಿಯೂ ಸಹ ಶಿವನು ಪಾರ್ವತಿಗೆ ಈ ರಹಸ್ಯವನ್ನು ಹೇಳಿರುವ ಬಗ್ಗೆ ಉಲ್ಲೇಖಗಳಿವೆ, ಶ್ರೀರಾಮನನ್ನು ಪಠಿಸಿದರೆ ಸಕಲ ಸಂಕಷ್ಟವು ಕಳೆಯುತ್ತದೆ ಎಂದು ಎಷ್ಟು ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ನಿಮ್ಮ ಜೀವನದಲ್ಲಿ ಎಲ್ಲಾ.
ಸಂತ ತುಳಸೀದಾಸರು ಹೇಳುತ್ತಾರೆ: ಯಾವಾಗ ನೀನು ರಾಮ ನಾಮವನ್ನು ನಿನ್ನ ನಾಲಗೆಯ ತುದಿಯಲ್ಲಿಡುವೆಯೋ, ಆಗ ನೀನು ನಿನ್ನ ಒಳಗೆ ಮತ್ತು ಹೊರಗೆ ದೇದೀಪ್ಯವಾದ ಜ್ಯೋತಿಯನ್ನು ಕಾಣುವೆ.
ವಿಶ್ವಕಲ್ಯಾಣಕ್ಕಾಗಿ ತಾರಕ ಮಂತ್ರ “ಶ್ರೀರಾಮ ಜಯರಾಮ ಜಯ ಜಯ ರಾಮ”
ಮಂತ್ರದ ಅನುವಾದ:
ಭಗವಾನ್ ರಾಮನ ಗೆಲುವನ್ನು ಈ ಮಂತ್ರ ಸೂಚಿಸುತ್ತದೆ.
ಈ ತಾರಕ ಮಂತ್ರದಲ್ಲಿ ಶ್ರೀ ಎಂದರೆ ಶಕ್ತಿ ಅಥವಾ ಸೀತೆ ದೇವಿ.
ರಾ ಎಂದರೆ ನಮ್ಮ ಕರ್ಮವನ್ನು ಸುಡುವ ಬೆಂಕಿಯನ್ನು ಸೂಚಿಸುತ್ತದೆ.
ಮಾ ಎಂಬುದು ನೀರು, ಅಂದರೆ ಎಲ್ಲಾ ತಿಳುವಳಿಕೆಯನ್ನು ಹಾದುಹೋಗುವ ಶಾಂತಿ.
ಜಯ ಎಂದರೆ ಆತ್ಮದ ಜಯ.
ಮಂತ್ರದ ಪೂರ್ಣ ಅರ್ಥವು ದೇವನ ಶಕ್ತಿಯಿಂದ ಆತನ ಜಯ ಎಂದರ್ಥ.
ರಾಮ ತಾರಕ ಮಂತ್ರವನ್ನು ದಿನದಲ್ಲಿ ನಿಮಗೆ ಪಠಿಸಲು ಸಾಧ್ಯವಾಗುತ್ತಧೋ ಅಷ್ಟು ಪಠಿಸಿ
ಜೈ ಶ್ರೀ ರಾಮ್
Comments