ಗರುಡ ಪುರಾಣದಲ್ಲಿ ಏನೇನು ತಿಳಿಸಲಾಗಿದೆ.?

ಗರುಡಪುರಾಣ ಅಷ್ಟಾದಶ ಪುರಾಣಗಳಲ್ಲೊಂದು. ಈ ಗ್ರಂಥ ಅತ್ಯಂತ ಪವಿತ್ರ ಮತ್ತು ಪುಣ್ಯದಾಯಕವಾದುದು. ಗರುಡಪುರಾಣ- ಸಾರೋದ್ಧಾರ (ಪ್ರೇತಕಲ್ಪ) ವನ್ನು ಮನೆಯಲ್ಲಿ ಇಡಬಾರದು ಹಾಗೂ ಕೇವಲ ಶ್ರಾದ್ಧಾದಿ ಪ್ರೇತ ಕಾರ್ಯಗಳಲ್ಲಿ ಇದರ ಕಥಾ ಶ್ರವಣ ಮಾಡಬೇಕು - ಎಂಬ ಭ್ರಾಂತಿ ಕೆಲವು ಜನರಲ್ಲಿದೆ. ಈ ತಿಳುವಳಿಕೆ ಅತ್ಯಂತ ಭ್ರಾಮಕ ಮತ್ತು ಅಂಧವಿಶ್ವಾಸಯುಕ್ತ ವಾದುದು.

ಗರುಡ ಪುರಾಣ 19000 ಶ್ಲೋಕಗಳು ಗರುಡ ವಿಷ್ಣುವಿನ ವಾಹನ ಗರುಡನು ಭಗವಾನ್ ವಿಷ್ಣುವಿಗೆ ಜೀವಿಗಳ ಸಾವು, ಯಮಲೋಕ ಯಾತ್ರೆ, ಸ್ವರ್ಗ ನರಕ ಮತ್ತು ಮೋಕ್ಷದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. ಈ ಎಲ್ಲಾ ಪ್ರಶ್ನೆಗಳಿಗೂ ಭಗವಾನ್‌ ವಿಷ್ಣು ವಿವರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ದೀರ್ಘ ಮಾಲೆಯಿಂದ ಗರುಡ ಪುರಾಣವನ್ನು ರಚಿಸಲಾಗಿದೆ.

'ಈ ಗರುಡಪುರಾಣ ಸಾರೋದ್ಧಾರವನ್ನು ಶ್ರವಣ ಮಾಡಿದರೆ ಅಥವಾ ಯಾವುದೇ ರೀತಿಯಲ್ಲಿ ಪಠನೆ ಮಾಡಿದರೆ, ಅಂತಹ ವ್ಯಕ್ತಿ ಯಮರಾಜನ ಭಯಂಕರ ಯಾತನೆಗಳಿಂದ ರಕ್ಷಣೆ ಪಡೆದು, ನಿಷ್ಪಾಪಿಯಾಗಿ ಸ್ವರ್ಗವನ್ನು ಪ್ರಾಪ್ತಿ ಹೊಂದುತ್ತಾನೆ. ಅತ್ಯಂತ ಪವಿತ್ರವಾದ ಈ ಗ್ರಂಥ ಸಮಸ್ತ ಪಾಪಗಳ ವಿನಾಶಕ ಹಾಗೂ ಸಮಸ್ತ ಕಾಮನೆಗಳ ಪೂರಕ ಕೂಡ ಆಗಿದೆ. ಸದಾ ಇದರ ಶ್ರವಣ ಮಾಡುತ್ತಿರಬೇಕು.

ಗರುಡಪುರಾಣ ಸಾರೋದ್ಧಾರದ ಶ್ರವಣರೂಪಿ ಈ ಔರ್ಧ್ವ ದೈಹಿಕ ಕೃತ್ಯ ಪಿತೃಗಳಿಗೆ ಮುಕ್ತಿ ಪ್ರದಾನಿಸುವಂಥದು, ಪುತ್ರವಿಷಯಕ ಅಭಿಲಾಷೆಗಳನ್ನು ಪೂರ್ಣಗೊಳಿಸುವಂಥದು ಹಾಗೂ ಇಹಲೋಕ ಮತ್ತು ಪರಲೋಕದಲ್ಲಿ ಸುಖವನ್ನು ಪ್ರದಾನಿಸುವಂಥದು. ಯಾರು ಈ ಪವಿತ್ರ ಪ್ರೇತಕಲ್ಪದ ಶ್ರವಣ ಮಾಡುತ್ತಾರೋ ಅಥವಾ ಶ್ರವಣ ಮಾಡಿಸುತ್ತಾರೋ, ಅವರಿಬ್ಬರೂ ಪಾಪದಿಂದ ಮುಕ್ತರಾಗಿ ಹೋಗುತ್ತಾರೆ ಮತ್ತು ಅವರಿಗೆಂದೂ ದುರ್ಗತಿ ಪ್ರಾಪ್ತಿಯಾಗುವುದಿಲ್ಲ. ಆದ್ದರಿಂದ, ಸಮಸ್ತ ದುಃಖಗಳನ್ನು ವಿನಾಶ ಮಾಡುವಂಥ ಹಾಗೂ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ - ಈ ಚತುರ್ವಿಧ ಪುರುಷಾರ್ಥಗಳನ್ನು ಪ್ರಾಪ್ತಿ ಮಾಡಿಸುವಂಥ, ಈ ಗರುಡಪುರಾಣ ಪ್ರೇತಕಲ್ಪವನ್ನು ವಿಶೇಷ ಪ್ರಯತ್ನದಿಂದ ಅವಶ್ಯ ಶ್ರವಣ ಮಾಡಬೇಕು.

ಗರುಡ ಪುರಾಣದಲ್ಲಿ ಒಟ್ಟು 19 ಸಾವಿರ ಶ್ಲೋಕಗಳಿದ್ದು, ಇದರಲ್ಲಿ ವಿಷ್ಣುವಿನ 24 ಅವತಾರಗಳನ್ನು ಹೇಳಲಾಗಿದೆ. ಇದು ಸೂರ್ಯ, ಚಂದ್ರ ಮತ್ತು ಇತರ ಗ್ರಹಗಳು ಸೇರಿದಂತೆ ಅಲೌಕಿಕ ಪ್ರಪಂಚದ 9 ಶಕ್ತಿಗಳನ್ನು ವಿವರಿಸುತ್ತದೆ.
ಪೂರ್ವ ಖಂಡ - ಇದು ಸುಮಾರು 229 ಸಾಮಾನ್ಯ ಅಧ್ಯಾಯಗಳನ್ನು ಹೊಂದಿದೆ. ಇದು ನಂಬಿಕೆ, ಒಳ್ಳೆಯ ಕಾರ್ಯಗಳು, ನೈತಿಕ ಕಾರ್ಯಗಳು, ದಾನ, ಇತ್ಯಾದಿಗಳಲ್ಲಿ ವ್ಯವಹರಿಸುತ್ತದೆ. ಇದು ನಿಮ್ಮ ಜೀವನವನ್ನು ನಡೆಸುತ್ತಿರುವಾಗ ನೀವು ನಿರ್ವಹಿಸಬೇಕಾದ ಪ್ರದರ್ಶನಗಳನ್ನು ಚರ್ಚಿಸುತ್ತದೆ. ಇದು ರತ್ನಶಾಸ್ತ್ರ ಮತ್ತು ಜ್ಯೋತಿಷ್ಯದ ಒಳನೋಟಗಳನ್ನು ನೀಡುತ್ತದೆ.
ಉತ್ತರ ಖಂಡ ಅಥವಾ ಪ್ರೇತ ಖಂಡ - ಸುಮಾರು 34 ರಿಂದ 49 ಅಧ್ಯಾಯಗಳೊಂದಿಗೆ, ಈ ಖಂಡವು ಸಾವಿನ ನಂತರ ಏನಾಗುತ್ತದೆ ಎಂಬುದನ್ನು ಚರ್ಚಿಸುತ್ತದೆ. ಈ ನಿರ್ದಿಷ್ಟ ವಿಭಾಗವು ಇತರ ಪುರಾಣಗಳಿಂದ ಬಹಳ ಅನನ್ಯ ಮತ್ತು ಆಸಕ್ತಿದಾಯಕವಾಗಿದೆ..

ಮರಣಾ ನಂತರ ಆತ್ಮದ ಪ್ರಯಾಣದಲ್ಲಿ ಆ ತ್ಮವು ಏನೆಲ್ಲಾ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ, ಯಾವ ಲೋಕಕ್ಕೆ ಹೋಗಬಹುದು, ಇದೆಲ್ಲವನ್ನೂ ಗರುಡ ಪುರಾಣವನ್ನು ಕೇಳಿ ತಿಳಿದುಕೊಳುತ್ತಾರೆ.
ಮರಣಾನಂತರ ಮನೆಯಲ್ಲಿ ಗರುಡ ಪುರಾಣವನ್ನು ಪಠಿಸಿದಾಗ, ಸತ್ತವರ ಸಂಬಂಧಿಕರಿಗೆ ಯಾವುದು ಕೆಟ್ಟದು ಮತ್ತು ಯಾವ ರೀತಿಯ ಕಾರ್ಯಗಳು ಮೋಕ್ಷವನ್ನು ನೀಡುತ್ತವೆ ಎಂದು ತಿಳಿಯುತ್ತದೆ, ಇದರಿಂದ ಮರಣಿಸಿದವರು ಮತ್ತು ಅವರ ಕುಟುಂಬದವರಿಗೆ ನಮ್ಮ ಪಿತೃಗಳ ಆತ್ಮಕ್ಕೆ ಶಾಂತಿ ನೀಡಲು ನಾವು ಉತ್ತಮವಾದ ಯಾವ ಕೆಲಸವನ್ನು ಮಾಡಬೇಕೆನ್ನುವುದು ತಿಳಿಯುತ್ತದೆ.

ಗರುಡ ಪುರಾಣವು ನಮಗೆ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ. ಸತ್ಕರ್ಮ ಮತ್ತು ದಯೆಯಿಂದ ಮಾತ್ರ ಮೋಕ್ಷ ಮತ್ತು ಮುಕ್ತಿ ದೊರೆಯುತ್ತದೆ ಎಂಬುದು ನಮಗೆ ಅರ್ಥವಾಗುವಂತೆ ಮಾಡುತ್ತದೆ.

ಗರುಡ ಪುರಾಣದಲ್ಲಿ, ವ್ಯಕ್ತಿಯ ಕರ್ಮಗಳ ಆಧಾರದ ಮೇಲೆ, ವಿವಿಧ ನರಕಗಳನ್ನು ಶಿಕ್ಷೆಯಾಗಿ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ಯಾವ ವಿಷಯಗಳು ವ್ಯಕ್ತಿಯನ್ನು ಮೋಕ್ಷದ ಕಡೆಗೆ ಕೊಂಡೊಯ್ಯುತ್ತವೆ ಎನ್ನುವುದಕ್ಕೆ ಭಗವಾನ್ ವಿಷ್ಣುವು ಉತ್ತರವನ್ನು ನೀಡಿದ್ದಾನೆ.

ಗರುಡ ಪುರಾಣದಲ್ಲಿ ನಮ್ಮ ಜೀವನದ ಬಗ್ಗೆ ಅನೇಕ ನಿಗೂಢ ವಿಷಯಗಳನ್ನು ಹೇಳಲಾಗಿದೆ. ಒಬ್ಬ ವ್ಯಕ್ತಿಯು ತಿಳಿದಿರಬೇಕಾದ ಬಗ್ಗೆ. ಆತ್ಮಜ್ಞಾನದ ಚರ್ಚೆಯು ಗರುಡ ಪುರಾಣದ ಮುಖ್ಯ ವಿಷಯವಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಸಾವಿರ ಶ್ಲೋಕಗಳಲ್ಲಿ ಜ್ಞಾನ, ಧರ್ಮ, ನೀತಿ, ರಹಸ್ಯ, ಪ್ರಾಯೋಗಿಕ ಜೀವನ, ಸ್ವಯಂ, ಸ್ವರ್ಗ, ನರಕ ಮತ್ತು ಇತರ ಲೋಕಗಳ ವಿವರಣೆಯು ಗರುಡ ಪುರಾಣದಲ್ಲಿ ಕಂಡುಬರುತ್ತದೆ.

ಇದರಲ್ಲಿ ಭಕ್ತಿ, ಜ್ಞಾನ, ವೈರಾಗ್ಯ, ಪುಣ್ಯ, ನಿಸ್ವಾರ್ಥ ಕಾರ್ಯಗಳ ಮಹಿಮೆಯಿಂದ ಶ್ರೀಸಾಮಾನ್ಯನ ತ್ಯಾಗ, ದಾನ, ತಪಸ್ಸು, ತೀರ್ಥಯಾತ್ರೆ ಮುಂತಾದ ಶುಭ ಕಾರ್ಯಗಳಲ್ಲಿ ಪಾಲ್ಗುಳ್ಳುವುದರ ಅನೇಕ ವಿಶ್ವಾತ್ಮಕ ಮತ್ತು ಪಾರಮಾರ್ಥಿಕ ಫಲಗಳ ಬಗ್ಗೆ ವಿವರಿಸಲಾಗಿದೆ. ಸತ್ತವರು ಮತ್ತು ಅವರ ಕುಟುಂಬದವರು ಈ ಎಲ್ಲಾ ವಿಷಯಗಳನ್ನು ತಿಳಿದುಕೊಂಡರೆ ಅವರ ಜೀವನವನ್ನು ಸುಂದರಗೊಳಿಸಬಹುದು.

ಗರುಡ ಪುರಾಣವನ್ನು ಪಾರಾಯಣ ಮಾಡುವುದರಿಂದ ಹಾಗೂ ಶ್ರವಣ ಮಾಡುವುದರಿಂದ ಎಲ್ಲಾ ಪಾಪಗಳಿಂದ ಮುಕ್ತಿ ಹೊಂದಿ. ಜನನ ಮರಣ ಚಕ್ರದಿಂದ ಮುಕ್ತಿ ಹೊಂದಬಹುದು. ಹಾಗೂ ಭಯಂಕರ ಯಮ ಯಾತನೆಗಳಿಂದ ರಕ್ಷಣೆ ಪಡೆಯಬಹುದು.

Comments