ಪಂಚಾಮೃತ ಮಹತ್ವ

ನಮ್ಮ ದೇವಸ್ಥಾನಗಳಲ್ಲಿ ಹಾಗೂ ಮನೆಗಳಲ್ಲಿ ಯಾವುದಾದರೂ ವಿಶೇಷವಾದ ಪೂಜೆ ಇರುವಾಗ ಚರಣಾಮೃತ ಅಥವಾ ಪಂಚಾಮೃತವನ್ನು ನೀಡುತ್ತಾರೆ. ಆದರೆ ನಮ್ಮಲ್ಲಿ ಸಾಕಷ್ಟು ಜನರಿಗೆ ಇದರ ಮಹತ್ವ ಹಾಗೂ ಮಾಡಲು ಕಾರಣವೇನೆಂಬುದು ತಿಳಿದಿಲ್ಲ. ಚರಣಾಮೃತವೆಂದರೆ ಭಗವಂತನ ಚರಣದ ಅಥವಾ ಭಗವಂತನ ಪಾದದಿಂದ ಬಂದ ಅಮೃತವೆಂದು ಹೇಳಲಾಗುತ್ತದೆ. ಯಾಕಂದರೆ ದೇವರಿಗೆ ಅಭಿಷೇಕ ಮಾಡಿದಾಗ ಅದು ದೇವರ ಪಾದದ ಹತ್ತಿರ ಕೆಳಗೆ ಬರುತ್ತದೆ ಅದಕ್ಕೆ ಚರಣಾಮೃತ ಎನ್ನುತ್ತಾರೆ.
 ಪಂಚಾಮೃತವೆಂದರೆ ಹಾಲು, ತುಪ್ಪ, ಸಕ್ಕರೆ, ಮೊಸರು, ಜೇನುತುಪ್ಪ ಈ 5 ವಸ್ತುಗಳನ್ನು ಹಾಕಲಾಗುತ್ತದೆ. ಹಾಗೂ ಇದರಲ್ಲಿ ಕೆಲವೊಮ್ಮೆ ಕೆಲವು ಹಣ್ಣುಗಳನ್ನು ಕೂಡ ಹಾಕಲಾಗುತ್ತದೆ. 
ಸಾಧಾರಣವಾಗಿ ಬಹುತೇಕ ಎಲ್ಲಾ ದೇವಸ್ಥಾನಗಳಿಗೂ ಬೆಳಗ್ಗೆ ಹೋದಾಗ ತೀರ್ಥದ ರೂಪದಲ್ಲಿ ಪಂಚಾಮೃತ ಕೊಟ್ಟು ಅದನ್ನು ಭಕ್ತಿಯಿಂದ ಸೇವಿಸಿದ ನಂತರ ತುಳಸೀ ಮತ್ತು ಪಚ್ಚ ಕರ್ಪೂರ ಹಾಕಿದ ತೀರ್ಥವನ್ನು ಕೊಡುವುದನ್ನು ನಾವು ನೋಡಿದ್ದೇವೆ. ಪ್ರತೀ ದಿನ ದೇವರ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ,ಜೊತೆಗೆ ಬಾಳೆಹಣ್ಣು, ಎಳನೀರು, ನೀರಿನ ಮುಖಾಂತರ ಅಭಿಷೇಕವನ್ನು ಮಾಡಿದ ನಂತರ ಅವೆಲ್ಲವನ್ನೂ ಒಂದು ಶುಭ್ರವಾದ ಬೆಳ್ಳಿ ಇಲ್ಲವೇ ಹಿತ್ತಾಳೆ, ಕಂಚು ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಬಂದ ಭಕ್ತಾದಿಗಳಿಗೆ ತೀರ್ಥದ ರೂಪದಲ್ಲಿ ಕೊಡುವುದನ್ನೇ ಪಂಚಾಮೃತ ತೀರ್ಥ ಎನ್ನುತ್ತೇವೆ. 


ದೇವರಿಗೆ "ಪಂಚಾಮೃತ" ಅಭಿಷೇಕದ ಫಲ 

" ಕ್ಷೀರೇಣ ಕ್ಷೀಯತೇ ಪಾಪಂ|
ದಧ್ನಾ ಧನವಿವರ್ಧನಮ್ |
ಆಜ್ಯೇ ನಾಯುಷ್ಯ ಮಾಪ್ನೋತಿ|
ಮಧು ನಾಹಂತಿ ಕಿಲ್ಬಿಷಂ|
ಸುಖಿ ಶರ್ಕರಮು ವಿಂದ್ಯಾತ್|
ಪಂಚಾಮೃತ ಫಲಂ ಸ್ಮೃತಮ್ |
ಪಂಚಾಮೃತೇನ ಸಂಸ್ನಾಪ್ಯ ಪಂಚಪಾತಕ ನಾಶನಮ್ ||
ಎಂದು ಶಾಸ್ತ್ರಗಳಲ್ಲಿ ಹೇಳಿದ್ದಾರೆ..

ತಾತ್ಪರ್ಯ : " ಹಾಲಿನಿಂದ ಅಭಿಷೇಕ ಮಾಡಿದರೆ "ಪಾಪಗಳು ನಿವಾರಣೆಯಾಗುತ್ತದೆ (ಗೋಹತ್ಯಾದೋಷ ನಿವಾರಣೆಯಾಗುತ್ತದೆ)

ಮೊಸರು ಇಂದ ಅಭಿಷೇಕ ಮಾಡಿದರೆ ಧನಸಂಪತ್ತು ಅಧಿಕವಾಗಿ ಶ್ರೀಮಂತರಾಗುತ್ತೀರಿ..!

ತುಪ್ಪ ದಿಂದ ಅಭಿಷೇಕ ಮಾಡಿದರೆ ಆಯಸ್ಸು ಹೆಚ್ಚುವುದು. (ಬ್ರಹ್ಮಹತ್ಯಾದೋಷ ನಿವಾರಣೆಯಾಗುತ್ತದೆ)

ಜೇನುತುಪ್ಪ ದಿಂದ ಅಭಿಷೇಕ ಮಾಡಿದರೆ ಜ್ಞಾನದಿಂದಲೋ, ಅಜ್ಞಾನದಿಂದಲೋ ಮಾಡಿದ ದೋಷಗಳು, (ಮಾತೃಹತ್ಯಾದೋಷ ನಿವಾರಣೆಯಾಗುತ್ತದೆ) ನಿವಾರಣೆಯಾಗುತ್ತದೆ.

ಸಕ್ಕರೆ ಇಂದ ಅಭಿಷೇಕ ಮಾಡಿದರೆ ಸುಖ ಲಭಿಸುವುದು.

ಆದ ಕಾರಣ ದೇವರಿಗೆ ಪ್ರತ್ಯೇಕವಾಗಿಯೇ ಎಲ್ಲಾ ಸಾಮಗ್ರಿಗಳಿಂದ ಅಭಿಷೇಕ ಮಾಡಬೇಕು.

ಎಲ್ಲವನ್ನೂ ಮಿಶ್ರಮಾಡಿ ಅಭಿಷೇಕ ಮಾಡಬಾರದು..! ಬೇರೆ ಬೇರೆಯಾಗಿಯೇ ಹಾಕಿ ಅಭಿಷೇಕ ಮಾಡಬೇಕು.

ದೇವರಿಗೆ ಪಂಚಾಮೃತ ಅಭಿಷೇಕ ಮಾಡುವುದರಿoದ ದೊರೆಯುವ ಫಲ
 ಅಪರಾಧ ಹತ್ತಕ್ಕೆ ಅಭಿಷೇಕ ಉದಕ .ಅಪರಾಧ ನೂರಕ್ಕೆ ಕ್ಷೀರ ಹರಿಗೆ. ಅಪರಾಧ ಸಹಸ್ರಕ್ಕೆ ಹಾಲು ಮೋಸರು ಕಾಣೋ. ಅಪರಾಧ ಲಕ್ಕ್ಷಕ್ಕೆ ಜೇನು‌ ಅಪರಾಧ ಹತ್ತುೆ ಲಕ್ಷಕ್ಕೆ ಬಲುಪರಿ ಕ್ಷೀರ ll
ಅಪರಾಧ ಕ್ಷಮೆಗೆ ಅಚ್ಚ ತೆಂಗಿನ ಹಾಲು. ಅಪರಾಧ ಕೋಟಿಗೆ ಸ್ವಚ್ಛ ಜಲ. ಅಪರಾಧ ಅನಂತ ಕ್ಷಮೆಗೆ ಗಂಧೋದಕ. ಉಪಮೆರಹಿತ ನಮ್ಮ ಪುರಂದರ ವಿಠಲಗೆ ಶಾಂತ ಮನವಯ್ಯ ಶಾಂತವಾಕ್ಯ.l l

ಕ್ಷೀರ ಸ್ನಾನo ಪ್ರಕುರ್ವೀತ ಯೇ ನರಾ ಮಮ ಮೂರ್ಧನಿ ಶತಾಶ್ವಮೇಧಜo ಪುಣ್ಯo ಬಿoದುನ ಸ್ಮೃತo 
ಭಗವoತ ಹೇಳುತ್ತಾನೆ .ಯಾವ ಮನುಷ್ಯನು ನನ್ನ ಶಿರಸ್ಸಿನಲ್ಲಿ ಹಾಲಿನಿoದ ಅಭಿಷೇಕ ಮಾಡುವನೋ ,ಅವನು ಒಂದೂoದು ಬಿoಧುವಿಗೂ ನೂರು ಅಶ್ವಮೇಧಯಾಗಗಳ ಪುಣ್ಯವನ್ನು
 ಹೊoದುತ್ತಾನೆ 
ಕೆಳಗೆ ನೀರುಪಣೆ ಮಾಡುವ ಶ್ಲೋಕ ಗಳ ಅರ್ಥವನ್ನೆ ದಾಸರಾಯರು ಇಲ್ಲಿ ತಿಳಿಸಿದ್ದಾರೆ 

ದಶಪರಾಧo ತೋಯೇನ ಕ್ಷೀರೇಣ ಕ್ಷಮತೇ ಶತo ಸಹಸ್ರo ಕ್ಷಮತೇ ದಧ್ನಾ , ಘೃತೇನ ಕ್ಷಮತೇsಯುತo.
ಮಧುನ ಕ್ಷಮತೇ ಲಕ್ಷo ಇಕ್ಷುಣಾ ದಶಲಕ್ಷಕo ನಾರಿಕೇಳಾoಬುನಾ ಕೋಟಿo ಅನಂತo ಗಂಧವಾರಿಣಾ.
                             ಸ್ಕಂದ ಪುರಾಣ

ನೀರಿನಿoದ ಅಭಿಷೇಕ ಮಾಡುವವನ ಹತ್ತು ಅಪರಾಧಗಳನ್ನು ಶ್ರೀಹರಿಯು ಮನ್ನಿಸುವನು .ಹಾಲಿನಿoದ ಅಭಿಷೇಕ ಮಾಡುವವನ ನೂರು ಆಪರಾಧಗಳನ್ನು, ,ಮೊಸರಿನಿoದ ಅಭಿಷೇಕ ಮಾಡುವವನ ಸಾವಿರ ಅಪರಾಧಗಳನ್ನು ,ತುಪ್ಪದಿoದ ಅಭಿಷೇಕ ಮಾಡುವವನ ಹತ್ತುಸಾವಿರ ಅಪರಾಧಗಳನ್ನು ,ಜೇನುತುಪ್ಪದಿoದ ಅಭಿಷೇಕ ಮಾಡುವವನ ಲಕ್ಷ ಅಪರಾಧಗಳನ್ನು , ಕಬ್ಬಿನ ಹಾಲಿನಿoದ ಅಭಿಷೇಕ ಮಾಡುವವನ ಹತ್ತು ಲಕ್ಷ ಅಪರಾಧಗಳನ್ನು ,ಎಳನೀರಿನಿoದ ಅಭಿಷೇಕ ಮಾಡುವವನ ಕೋಟಿ ಅಪರಾಧಗಳನ್ನು ,ಗಂಧೋಧಕದಿoದ ಅಭಿಷೇಕ ಮಾಡುವವನ ಅನಂತ ಅಪರಾಧಗಳನ್ನು ಶ್ರೀಹರಿಯು ಮನ್ನಿಸುವನು(ಕ್ಷಮಿಸುವನು).

 ಚರಣಾಮೃತ ಪಂಚಾಮೃತದ ಸೇವನೆಯಿಂದ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ಪಂಚಾಮೃತದಲ್ಲಿರುವ ಪಂಚವಸ್ತುಗಳು ಈ ತತ್ವವನ್ನು ತಿಳಿಸುತ್ತವೆ.. ಹಾಲು ಶುದ್ಧತೆ ಹಾಗೂ ಧಾರ್ಮಿಕತೆಯ ದ್ಯೋತಕವಾಗಿದೆ.ಮೊಸರು ಸಮೃದ್ಧಿ ಹಾಗೂ ಸಂತಾನದ ಪ್ರತೀಕವಾಗಿದೆ. ಮಧು (ಜೇನುತುಪ್ಪ) ಮಧುರವಾದ ಮಾತು ಹಾಗೂ ಏಕತೆಯನ್ನು ಸಮರ್ಥಿಸುತ್ತದೆ.ಸಕ್ಕರೆ ಅಥವಾ ಬೆಲ್ಲ ಮಾಧುರ್ಯ ಹಾಗೂ ಆನಂದವನ್ನು ತಿಳಿಸುತ್ತದೆ.ತುಪ್ಪ ಜ್ಞಾನ ಹಾಗೂ ವಿಜಯವನ್ನು ಸಮರ್ಥಿಸುತ್ತದೆ.


ಈಗಿನ ಕಾಲದಲ್ಲಿ ಹೆಚ್ಚಾಗಿ ಬೆಳಿಗ್ಗೆ ಎದ್ದ ತಕ್ಷಣ ಗ್ಯಾಸ್ ಟ್ರಬಲ್ ಟ್ಯಾಬ್ಲೆಟ್ ಬಿಪಿ ಶುಗರ್ ಟ್ಯಾಬ್ಲೆಟ್ ತಿನ್ನುತ್ತಾರೆ.
ಆದರೆ ನಮ್ಮ ಪೂರ್ವಜರು ನೂರಾರು ವರ್ಷಗಳ ತನಕ ಆರೋಗ್ಯವಾಗಿ ಬದುಕುತ್ತಿದ್ದರು ಯಾವುದೇ ಸಮಸ್ಯೆಗಳು ರೋಗ ರುಜಿನಗಳು ಅವರನ್ನು ಕಾಡುತ್ತಿರಲಿಲ್ಲ. ಯಾಕೆಂದರೆ ಪೂರ್ವಜರು ನಿತ್ಯ ಬೆಳಿಗ್ಗೆ ಆದ ತಕ್ಷಣ ಶುಚಿಯಾಗಿ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಣೆಗಳನ್ನ ಹಾಕಿ ಅಲ್ಲಿ ಪಂಚಾಮೃತ ಹಾಗೂ ತೀರ್ಥವನ್ನು ಕುಡಿದು ಬರುತ್ತಿದ್ದರು. ನಂತರ ಅಲ್ಲಿಂದ ಮನೆಗೆ ಬಂದು ತಿಂಡಿಗಳನ್ನು ತಿಂದು ತಮ್ಮ ನಿತ್ಯ ಕಾರ್ಯ ಕೆಲಸಗಳಿಗೆ ಹೋಗುತ್ತಿದ್ದರು.

ದೇವಸ್ಥಾನ ನಮ್ಮ ಧಾರ್ಮಿಕ ಕೇಂದ್ರವು ಹೌದು ಹಾಗೂ ನಮಗೆ ಒಂದು ರೀತಿಯಲ್ಲಿ ಆರೋಗ್ಯ ಕೇಂದ್ರವು ಹೌದು ಇದು ಯಾಕೆ ಅಂದರೆ ದೇವಸ್ಥಾನದಲ್ಲಿ ಕೊಡುವ ತೀರ್ಥ ಪ್ರಸಾದ ಇದರಲ್ಲಿ ಆಯುರ್ವೇದಿಕ ಶಕ್ತಿಗಳು ಇರುತ್ತದೆ ಇದರಿಂದ ರೋಗಗಳು ನಮ್ಮನ್ನು ಅಷ್ಟಾಗಿ ಕಾಡುವುದಿಲ್ಲ.
ನಾವು ದೇವಸ್ಥಾನದಲ್ಲಿ ಮಾಡುವ ಪ್ರತಿಕ್ರಿಯೆಯು ಅದು ನಮಸ್ಕಾರ ಆಗಿರಬಹುದು ಪ್ರದಕ್ಷಣೆ ಆಗಿರಬಹುದು ತೀರ್ಥ ಸೇವನೆ ಆಗಿರಬಹುದು ಪಂಚಾಮೃತವನ್ನು ಕುಡಿಯುವುದು ಇವೆಲ್ಲವೂ ನಾವು ಮಾಡುವುದರಿಂದ ನಮಗೆ ದೈಹಿಕ ಶಕ್ತಿ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತದೆ.

ತಾಮ್ರದ ಪಾತ್ರೆಯಲ್ಲಿ ಚರಣಾಮೃತ ಹಾಕಿಡುವುದರಿಂದ ಅದು ಔಷಧೀಯ ಗುಣವನ್ನು ಹೊಂದುತ್ತದೆ. ತಾಮ್ರದ ವಸ್ತುವಿನಲ್ಲಿ ಔಷಧೀಯ ಗುಣವಿರುವುದರಿಂದ ಇದು ಚರಣಾಮೃತ ನೀರಿಗೆ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಒದಗಿಸುತ್ತದೆ. ತಾಮ್ರದ ಪಾತ್ರೆಗೆ ನೀರನ್ನು ಹಾಗೂ ತುಳಸಿ ಎಲೆಗಳನ್ನು ಹಾಕಿಡಲಾಗುತ್ತದೆ. ನಾವು ದೇವಾಲಯಗಳಲ್ಲಿ ಅಥವಾ ಮನೆಯ ದೇವರ ಕೋಣೆಯಲ್ಲಿ ತುಳಸಿ ಮಿಶ್ರ ನೀರನ್ನು ತಾಮ್ರದ ಪಾತ್ರೆಯಲ್ಲಿ ಇಟ್ಟಿರುವುದನ್ನು ನೋಡಬಹುದು.

ನಮ್ಮಲ್ಲಿ ಹೆಚ್ಚಿನವರು ದೇವಸ್ಥಾನಗಳಿಗೆ ಹೋದಾಗ ಅಲ್ಲಿ ಕೊಟ್ಟ 
ಚರಣಾಮೃತ ತೀರ್ಥ ವನ್ನು ತಲೆ ಮೇಲೆ ಹಾಕಿಕೊಳ್ಳುತ್ತಾರೆ ಹೀಗೆ ಯಾವತ್ತು ಮಾಡಬಾರದು ಎಂದು ಹಿರಿಯವರು ಹಾಗೂ ಶಾಸ್ತ್ರಿಗಳಲ್ಲಿ ಹೇಳಿದ್ದಾರೆ .
ಚರಣಾಮೃತ ದಲ್ಲಿ ತುಳಸಿಯ ಹಾಗೂ ಪಚ್ಚ ಕರ್ಪೂರ ಹಾಗೂ ತಾಮ್ರದ ಆಯುರ್ವೇದಿಕ ಶಕ್ತಿಗಳು ಇರುತ್ತದೆ ಇದು ನಮ್ಮ ದೈಹಿಕ ಬಲವನ್ನ ಹೆಚ್ಚಿಸುತ್ತದೆ.
ಹಾಗೂ ಇದರಲ್ಲಿನ ಆಧ್ಯಾತ್ಮಿಕ ಶಕ್ತಿ ನಮ್ಮಲ್ಲಿ ಇರುವ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಿಗೊಳಿಸುತ್ತದೆ. ಇಂತಹ ಪವಿತ್ರ ತೀರ್ಥವನ್ನು ನಾವು ತಲೆ ಮೇಲೆ ಹಾಕಿ ಹಾಳು ಮಾಡುವುದು ಎಷ್ಟು ಸರಿ.? 
ತಲೆ ಮೇಲೆ ಹಾಕಿಕೊಳ್ಳುವುದರಿಂದ ನಮಗೆ ಯಾವುದೇ ಲಾಭವು ಸಿಗೋದಿಲ್ಲ.


Comments