ಶ್ರೀ ಮಹಾ ವಿಷ್ಣುವಿನ ದಶಾವತಾರಗಳು

ಭಗವಾನ್ ಮಹಾವಿಷ್ಣುವಿನ ದಶಾವತಾರಗಳು ಲೋಕದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮದ ರಕ್ಷಣೆಗೆ ಧರ್ಮ ಸಂಸ್ಥಾಪನೆಗಾಗಿ ಪ್ರತಿ ಯುಗದಲ್ಲಿಯೂ ಭಗವಂತ ಅವತಾರ ಎತ್ತಿ ಬರುತ್ತಾನೆ ಹಾಗೆ ಭಗವಂತ ಇದುವರೆಗೆ 9 ಅವತಾರಗಳನ್ನ ಎತ್ತಿ ಧರ್ಮದ ರಕ್ಷಣೆಯನ್ನು ಮಾಡಿದ್ದಾನೆ 10ನೇ  
ಕಲ್ಕಿ ಅವತಾರವು ಕಲಿಯುಗದ ಅಂತ್ಯದಲ್ಲಿ ಆಗಲಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಹಾಗೆ ಭಗವದ್ಗೀತೆಯಲ್ಲಿಯೂ ಕೂಡ ಶ್ರೀ ಕೃಷ್ಣ ಇದನ್ನೇ ಹೇಳಿದ್ದಾನೆ

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಬ್ಯುದ್ಧಾನಮ ಧರ್ಮಸ್ಯ ತದಾತ್ಮನಾಮ್ ಸೃಜಾಮ್ಯಹಮ್ || ಪರಿತ್ರಾಣಾಯ ಸಾಧುನಾ ವಿನಾಶಾಯ ಚ ದುಷ್ಕೃತ ತಮ್ ಧರ್ಮಸಂಸ್ಥಾಪನಾಯಾರ್ಥ ಸಂಭವಾಮಿ ಯುಗೇ ಯುಗೇ||

ಇದು ಜಗನ್ನಿಯಾಮಕ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶದಲ್ಲಿನ ಉವಾಚ... ಸೃಷ್ಠಿಯಲ್ಲಿ ಯಾವಾಗ ಅನ್ಯಾಯ, ಅಧರ್ಮಗಳು ಮೇರೆ ಮೀರಿ ಹಿಂಸೆ ಹೆಚ್ಚಾಗುವುದೋ ಆಗ ನಾನು ಧರ್ಮ ರಕ್ಷಣೆಗೆ, ಶಿಷ್ಟರ ಉಳಿವಿಗೆ ಮತ್ತೆ ಅವತಾರ ಎತ್ತಿ ಬರುತ್ತೇನೆಂದು ಹೇಳಿದ್ದಾನೆ.

ಶ್ರೀ ಮಹಾ ವಿಷ್ಣುವಿನ ದಶಾವತಾರಗಳ ಬಗ್ಗೆ ನೋಡೋಣ.


1. ಮತ್ಸ್ಯಾವತಾರದಲ್ಲಿ
ಮತ್ಸ್ಯಾವತಾರದಲ್ಲಿ ವಿಷ್ಣುವು ಅರ್ಧ ಮೀನಿನ ದೇಹವನ್ನು ಹಾಗೂ ಇನ್ನರ್ಧ ಮನುಷ್ಯನ ಅವತಾರ ವನ್ನು ಹೊಂದಿದೆ. ಮತ್ಸ್ಯ ಪುರಾಣದ ಪ್ರಕಾರ, ವಿಷ್ಣು ಅರ್ಧ ಮೀನಿನಾಕಾರವನ್ನು ತಾಳಿ ಮಾನವರ ನಾಯಕನಾದ ಮಹುವಿಗೆ ದೊಡ್ಡ ಪ್ರವಾಹವಾಗುವ ಮಾಹಿತಿಯನ್ನು ನೀಡಿ ಪ್ರವಾಹದಿಂದ ಎಚ್ಚೆತ್ತುಕೊಳ್ಳುವಂತೆ ತಿಳಿಸುತ್ತಾನೆ. ಹಾಗೂ ಪ್ರವಾಹ ಎದುರಾದಾಗ ಮತ್ಸ್ಯ ಅವತಾರದಲ್ಲೇ ವಿಷ್ಣು ಮಹುವಿಗೆ ಜಲಚರ ಜೀವಿಗಳನ್ನು, ವೇದಗಳನ್ನು ಮತ್ತು ಸಸ್ಯಗಳ ಎಲ್ಲಾ ಬೀಜಗಳನ್ನು ರಕ್ಷಿಸಲು ಸಹಕರಿಸುತ್ತಾನೆ.



2. ಕೂರ್ಮಾವತಾರ
ಕೂರ್ಮ ಎನ್ನುವುದು ವಿಷ್ಣುವಿನ ಅರ್ಧ ಆಮೆ ಮತ್ತು ಅರ್ಧ ಮನುಷ್ಯನ ಅವತಾರವಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಅಮೃತವನ್ನು ಪಡೆಯಲು ಸಮುದ್ರವನ್ನು ಕಡೆಯಬೇಕಾಗಿತ್ತು. ಆಗ ಕ್ಷೀರ ಸಾಗರವನ್ನು ಕಡೆಯಲು ಮಂದಾರ ಪರ್ವತವನ್ನು ಕಡುಗೋಲಾಗಿ ಮಾಡಿಕೊಂಡರು. ಈ ಕಡೆ ದೇವತೆಗಳು ಆಕಡೆ ರಾಕ್ಷಸರು ಸಮುದ್ರ ಮಂಥನ ಮಾಡುತ್ತಿರುವಾಗ ಮಂದಾರ ಪರ್ವತವು ಆಧಾರವಿಲ್ಲದೇ ಸಮುದ್ರಕ್ಕೆ ಕುಸಿಯ ತೊಡಗಿತು. ಆಗ ವಿಷ್ಣುವು ಅಮೃತ ಯಾವತ್ತಿದ್ದರೂ ದೇವತೆಗಳ ಪಾಲಿಗೆ ಸೇರಬೇಕೆಂದು ಅರ್ಧ ಕೂರ್ಮ ಅವತಾರವನ್ನು ತಾಳಿ ಪರ್ವತವನ್ನು ತನ್ನ ಬೆನ್ನ ಮೇಲಿರಿಸಿಕೊಂಡು ದೇವತೆಗಳಿಗೆ ಸಹಾಯ ಮಾಡುತ್ತಾನೆ.


3. ವರಾಹ ಅವತಾರ
ವರಾಹಾವತಾರವು ವಿಷ್ಣುವಿನ ಮೂರನೇ ಅವತಾರ ಮತ್ತು ಮೊದಲನೇ ಯುಗ ಸತ್ಯಯುಗದ ಮೂರನೇ ಅವತಾರ. ಭೂದೇವಿಯ ರಕ್ಷಣೆಗಾಗಿ ಮಹಾ ವಿಷ್ಣುವು ಅವತರಿಸಿದ ಅವತಾರ. ಹಂದಿಯ ರೂಪದಲ್ಲಿ ಕೋರೆಗಳಿಂದ ಭೂದೇವಿಯನ್ನು ರಕ್ಷಿಸಿದನು. ದಾನವನಾದ ಹಿರಣ್ಯಾಕ್ಷ ಅತೀ ದೈವದ್ವೇಷಿ, ಭೂಮಿಯಲ್ಲಿ ಭಗವಂತನನ್ನು ಆರಾಧಿಸವವರೇ ಇರಬಾರದು. ಭೂಮಿಯಿದ್ದರಲ್ಲವೆ? ಭಕ್ತರಿರುವುದು. ಇಡೀ ಭೂಮಿಯನ್ನೇ ಇಲ್ಲದಂತೆ ಮಾಡಿಬಿಟ್ಟರೆ ಭಕ್ತರೇ ಇರುವುದಿಲ್ಲ. ಭಗವಂತನ ಆರಾಧನೆಯೇ ನಡೆಯುವುದು ನಿಂತುಬಿಡುತ್ತದೆ. ಹೀಗೆ ಯೋಚಿಸಿ ಸಮುದ್ರದಡಿಯಲ್ಲಿ ಭೂಮಿಯನ್ನು ಮುಚ್ಚಿಟ್ಟ. ಈ ಸಂದರ್ಭದಲ್ಲಿ ಭೂದೇವಿಯನ್ನು ರಕ್ಷಿಸುವ ಸಲುವಾಗಿ ಹಾಗೂ ದುಷ್ಟನಾಗಿದ್ದ ಹಿರಣ್ಯಾಕ್ಷನ ಸಂಹರಿಸುವ ಸಲುವಾಗಿ ವಿಷ್ಣು ಎತ್ತಿದ ಅವತಾರ ವರಹಾವತಾರ.

4. ಅನಾರಸಿಂಹ ಅವತಾರ
ವಿಷ್ಣುವಿನ  ಅವತಾರವಾದ ನರಸಿಂಹ ಅವತಾರದಲ್ಲೂ ಈತ ಅರ್ಧ ಸಿಂಹದ ರೂಪವನ್ನು ಹಾಗೂ ಇನ್ನರ್ಧ ಮನುಷ್ಯನ ರೂಪವನ್ನು ಪಡೆದುಕೊಂಡಿದ್ದಾನೆ. ವಿಷ್ಣು ರಾಜ ಹಿರಣ್ಯ ಕಶ್ಯಪುವನ್ನು ಸಂಹರಿಸಲು ಎತ್ತಿದ ಅವತಾರ ಇದಾಗಿದೆ. ಭೂಮಿಯಲ್ಲಿ ಶಾಂತಿ, ನೆಮ್ಮದಿ, ಸುವ್ಯವಸ್ಥೆ, ಸದಾಚಾರ ಮತ್ತು ಧರ್ಮ ಗಟ್ಟಿಯಾಗಿ ನೆಲೆನಿಲ್ಲಲು ವಿಷ್ಣು ನರಸಿಂಹ ಅವತಾರವನ್ನು ಎತ್ತುತ್ತಾನೆ. ತನ್ನ ಪರಮ ಭಕ್ತನಾದ ಪ್ರಹ್ಲಾದನ ಕೂಗಿಗೆ ಒಗೊಟ್ಟು ಬಂದ ಅವತಾರ ಪುರುಷ ಈತ.

5. ವಾಮನ ಅವತಾರ
ವಾಮನಾವತಾರ ವಿಷ್ಣುವಿನ ಐದನೆಯ ಅವತಾರ ಮತ್ತು ಎರಡನೇ ಯುಗ ತ್ರೇತಾಯುಗದ ಮೊದಲ ಅವತಾರ. ಇಂದ್ರಪದವಿಯ ಮೇಲೆ ಕಣ್ಣಿಟ್ಟಿದ್ದ ದಾನವಾಸುರನಾದ ಬಲಿಚಕ್ರವರ್ತಿಯಿಂದ ಮೂರು ಅಡಿ ಜಾಗವನ್ನು ದಾನವಾಗಿ ಪಡೆದು, ಒಂದು ಅಡಿಯಲ್ಲಿ ಭೂಮಿಯನ್ನೂ ಮತ್ತೊಂದು ಅಡಿಯಲ್ಲಿ ಆಕಾಶವನ್ನೂ ಅಳೆದ ವಾಮನ ಮೂರನೇ ಅಡಿಯನ್ನು ಬಲಿಯ ತಲೆಯಮೇಲಿಟ್ಟು ಪಾತಳಕ್ಕೆ ತುಳಿದ. ಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ.

6. ಪರಶುರಾಮ ಅವತಾರ
ಪರಶುರಾಮ ಅವತಾರದಲ್ಲಿ ಶ್ರೀಮಾನ್ ಮಹಾವಿಷ್ಣು ಪರಶು (ಕೊಡಲಿ) ಹಿಡಿದ ಬ್ರಾಹ್ಮಣ ಯೋಧನಾಗಿ ಅವತರಿಸಿದನು. ಈ ಅವತಾರವು ತ್ರೇತಾಯುಗದಲ್ಲಿ ಆಯಿತು ಎಂದು ಹೇಳಲಾಗುತ್ತದೆ.

ಪರಶುರಾಮನು ಜಮದಗ್ನಿ ಮಹರ್ಷಿ ಹಾಗು ರೇಣುಕಾದೇವಿಯ ಪುತ್ರನಾಗಿ ಜನಿಸುತ್ತಾನೆ. ಪರಶುರಾಮನು ಜಗತ್ತಿನ ಮೊದಲ ಬ್ರಾಹ್ಮಣ ಯೋಧ. ಅವನು ಶಿವನನ್ನು ಕುರಿತು ತಪಸ್ಸನ್ನು ಆಚರಿಸಿ ಪರಶುವನ್ನು ಪಡೆಯುತ್ತಾನೆ. ಕಾರ್ತ್ಯವೀರ್ಯಾರ್ಜುನ ಎಂಬ ರಾಜನು ತನ್ನ ಸೈನ್ಯದೊಡನೆ ಜಮದಗ್ನಿಯ ಆಶ್ರಮಕ್ಕೆ ಬರುತ್ತಾನೆ. ಜಮದಗ್ನಿ ಮಹರ್ಷಿಯು ರಾಜನ ಇಡೀ ಪರಿವಾರಕ್ಕೆ ಉಪಚಾರವನ್ನು ಮಾಡುತ್ತಾನೆ. ಕಾರ್ತ್ಯವೀರ್ಯಾರ್ಜುನನಿಗೆ ಆಶ್ಚರ್ಯವಾಗುತ್ತದೆ. ಇದರ ರಹಸ್ಯವೇನೆಂದು ಜಮದಗ್ನಿಯನ್ನು ಕೇಳಿದಾಗ, ಜಮದಗ್ನಿಯು ತನ್ನ ಆಶ್ರಮದಲ್ಲಿದ್ದ ಕಾಮಧೇನುವನ್ನು ತೋರಿಸುತ್ತಾನೆ. ಆಗ ಕಾರ್ತ್ಯವೀರ್ಯಾರ್ಜುನನು ಕಾಮಧೇನುವನ್ನು ಅರಮನೆಯ ವಶಕ್ಕೆ ಕೇಳುತ್ತಾನೆ. ಜಮದಗ್ನಿಯು ಒಪ್ಪದಿದ್ದಾಗ, ರಾಜನು ಜಮದಗ್ನಿಯನ್ನು ಇಪ್ಪತ್ತೊಂದು ಬಾರಿ ಬಾಣಗಳಿಂದ ಘಾಸಿಗೊಳಿಸಿ, ಕೊಂದು, ಆಶ್ರಮವನ್ನು ಧ್ವಂಸಗೊಳಿಸಿ ಕಾಮಧೇನುವನ್ನು ಕೊಂಡೊಯ್ಯಲು ಮುಂದಾಗುತ್ತಾನೆ. ಆದರೆ ಕಾಮಧೇನುವು ಕಾರ್ತ್ಯವೀರ್ಯಾರ್ಜುನನಿಗೆ ಸಿಗದೇ ಮಾಯವಾಗುತ್ತದೆ. ಇದರಿಂದ ಕೋಪಗೊಂಡ ಪರಶುರಾಮನು, ಕಾರ್ತ್ಯವೀರ್ಯಾರ್ಜುನನ್ನು ಹಾಗು ಅವನ ಸೈನ್ಯವನ್ನು ಸೋಲಿಸಿ, ಸಂಹರಿಸಿದನು. ಅನಂತರ ಪರಶುರಾಮನು ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನೆಲ್ಲಾ ಸಂಹಾರ ಮಾಡುತ್ತೇನೆಂದು ಶಪಥ ಮಾಡುತ್ತಾನೆ. ಕೊನೆಗೆ ಇಪ್ಪತ್ತೊಂದನೆಯ ಬಾರಿ ಭೂಪ್ರದಕ್ಷಿಣೆ ಮಾಡುವಾಗ ಶ್ರೀರಾಮನನ್ನು ಕಂಡು, ಅವತಾರ ಅಂತ್ಯವಾಯಿತು ಎಂದು ತಿಳಿದು ತಪಸ್ಸನ್ನು ಆಚರಿಸಲು ಮಹೇಂದ್ರಗಿರಿಗೆ ತೆರಳುತ್ತಾನೆ.

7. ರಾಮ ಅವತಾರ
ರಾಮ ಮಹಾ ವಿಷ್ಣುವಿನ ಏಳನೆಯ ಅವತಾರ ಮತ್ತು ಎರಡನೇ ಯುಗ ತ್ರೇತಾಯುಗದ ಮೂರನೇ ಅವತಾರ. ಏಕಪತ್ನಿ ವ್ರತಸ್ಥನೂ, ಮರ್ಯಾದಾ ಪುರುಷೋತ್ತಮನೂ ಆದ ಶ್ರೀರಾಮನು, ತನ್ನ ಪತ್ನಿಯನ್ನೇ ಅಪಹಿರಿಸದ ದುಷ್ಟ ರಾವಣ ಹಾಗೂ ಆತನ ಸೋದರ ಕುಂಭಕರ್ಣರ ಸಂಹಾರ ಮಾಡಲು ಮತ್ತು ಭೂಮಂಡಲವನ್ನು ಸಂರಕ್ಷಿಸಲು ಎತ್ತಿದ ಅವತಾರವೇ ರಾಮಾವತಾರ. ಶ್ರೀ ರಾಮಚಂದ್ರ ಸೂರ್ಯ ವಂಶದವನು.

ಭಾರತದಲ್ಲಿ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ, ನೀತಿಗಳಿಂದ ಕೂಡಿದ್ದವೆಂದು ತಿಳಿದು ಬರುತ್ತದೆ. ಅಯೋಧ್ಯೆಯ ರಾಜನಾಗಿದ್ದ ದಶರಥನ ನಾಲ್ಕು ಜನ ಮಕ್ಕಳಲ್ಲಿ ಹಿರಿಯನು ರಾಮ. ಆತನ ತಾಯಿ ಕೌಸಲ್ಯ. ಲಕ್ಷ್ಮಣ, ಭರತ, ಶತ್ರುಘ್ನರು ಆತನ ತಮ್ಮಂದಿರು. ಭರತನ ತಾಯಿ ಕೈಕೇಯಿ. ಲಕ್ಷ್ಮಣ ಶತ್ರುಘ್ನರ ತಾಯಿ ಸುಮಿತ್ರೆ. ಸೀತೆ ರಾಮನ ಹೆಂಡತಿ. ರಾಮನಿಗೆ ಲವ ಮತ್ತು ಕುಶ ಎಂಬ ಇಬ್ಬರು ಮಕ್ಕಳು. ರಾಮನ ಜೀವನ ಚರಿತ್ರೆಯನ್ನು ತಿಳಿಸುವ ಮಹಾಕಾವ್ಯವೇ ರಾಮಾಯಣ. ಶ್ರೀರಾಮಚಂದ್ರ ಕ್ರಿ.ಪೂ.5114 ರ ಜನವರಿ 10 ರಂದು ಜನಿಸಿದನು. ಶ್ರೀರಾಮನು ತಂದೆ ಮಾತಿಗೆ ಬೆಲೆ ಕೊಟ್ಟು ಸೀತಾ ಮತ್ತು ಲಕ್ಷ್ಮಣರೊಂದಿಗೆ ವನವಾಸಕ್ಕೆ ಹೋಗುವನು 13 ವರ್ಷಗಳ ವನವಾಸ ನಿರಾತಂಕವಾಗಿ ನಡೆಯುವುದು. ಆದರೆ ಶೂರ್ಪನಕಿ ಎಂಬ ರಾಕ್ಷಸಿ ಬಂದು ಇವರ ನೆಮ್ಮದಿಗೆ ಭಂಗ ತರುತ್ತಾಳೆ. ನಂತರ ಆಕೆಯ ಮೂಗು, ಕಿವಿಯನ್ನು ಲಕ್ಷ್ಮಣ ಕೊಯ್ಯುವನು. ಆಗ ಆಕೆ ತನ್ನ ಅಣ್ಣ ಲಂಕಾಧಿಪತಿ ರಾವಣನಿಗೆ ದೂರು ನೀಡಿ ಸೀತೆಯು ಸುಂದರಿಯೆಂದು ಆಕೆಯನ್ನು ನೀನು ವರಿಸಿದರೆ ಬಹಳ ಚೆಂದವೆಂದು ಹೇಳುವಳು. ಆಗ ರಾವಣ ಮಾಯಾವೇಷ ಧರಿಸಿ ಸೀತೆಯನ್ನು ಅಪಹರಿಸುವನು. ಶ್ರೀರಾಮ- ಲಕ್ಷ್ಮಣರು ಸೀತೆಯನ್ನು ಅರಸುತ್ತಾ ವಾನರರ ಸಹಾಯ ಪಡೆದು, ಶ್ರೀರಾಮನು ರಾವಣನನ್ನು ಸಂಹರಿಸಿದನು. ರಾಮನು ಸೀತಾ, ಲಕ್ಷ್ಮಣ ಸಮೇತನಾಗಿ ಅಯೋಧ್ಯೆಯನ್ನು ಪ್ರವೇಶಿಸಿ, ರಾಜ್ಯವನ್ನು ಆಳಿದನು.


8. ಕೃಷ್ಣ ಅವತಾರ
ಮಹಾ ವಿಷ್ಣುವಿನ ಎಂಟನೇ ಅವತಾರ ಕೃಷ್ಣ ಅವತಾರ ಇದು ಮಹಾ ವಿಷ್ಣುವಿನ ಸಂಪೂರ್ಣ ಅವತಾರ ಎಂದು ಹೇಳುತ್ತಾರೆ ಮಥುರಾ ನಗರದ ಅತ್ಯಂತ ಕ್ರೂರ ರಾಜ ಕಂಸ ಹಾಗೂ ಅಧರ್ಮೀಯರನ್ನು ನಾಶಪಡಿಸಲೆಂದೇ ಮಹಾವಿಷ್ಣು ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅವತಾರವೆತ್ತಿದ ಅಂತಾ ಪುರಾಣಗಳು ಹೇಳುತ್ತವೆ. ದ್ವಾಪರಯುಗದಲ್ಲಿ, ಉಗ್ರಸೇನನ ಮಗ ಕಂಸ, ತನ್ನ ತಂಗಿ ದೇವಕಿ ಹಾಗೂ ಆತನ ಪತಿ ವಸುದೇವನನ್ನು ಬಂಧನದಲ್ಲಿಟ್ಟಿರ್ತಾನೆ. ತಂಗಿ ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಮಗುವಿನಿಂದ ತನಗೆ ಮೃತ್ಯುವಾಗಲಿದೆ ಅನ್ನೋದನ್ನು ತಿಳಿದ ಕಂಸ, ದೇವಕಿ ಹಾಗೂ ವಸುದೇವನನ್ನು ಕಾರಾಗೃಹದಲ್ಲಿರಿಸ್ತಾನೆ.

ದೇವಕಿ ಹಾಗೂ ವಸುದೇವನನ್ನು ಜನಿಸುವ ಎಲ್ಲಾ 7 ಮಕ್ಕಳನ್ನು ಕಂಸ ನಿರ್ದಯೆಯಿಂದ ಹತ್ಯೆ ಮಾಡ್ತಾನೆ. ನಂತರ ಈ ದಂಪತಿಗೆ ಭಗವಂತ ಮಹಾವಿಷ್ಣುವೇ ಶ್ರೀಕೃಷ್ಣನಾಗಿ ಎಂಟನೆಯ ಮಗುವಿನ ರೂಪದಲ್ಲಿ ಜನಿಸ್ತಾನೆ. ವಸುದೇವ ಆಗತಾನೇ ಜನಿಸಿದ ತನ್ನ ನವಜಾತ ಶಿಶು ಶ್ರೀಕೃಷ್ಣನನ್ನು ಕಂಸನಿಂದ ರಕ್ಷಿಸಲೇಬೇಕೆಂದು ನಿರ್ಧರಿಸ್ತಾನೆ.
ನಂತರ ವಸುದೇವ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು, ನಡುರಾತ್ರಿಯ ವೇಳೆ ಗುಟ್ಟಾಗಿ ಕಾರಾಗೃಹದಿಂದ ತಪ್ಪಿಸಿಕೊಂಡು ಮಳೆಯ ಮಧ್ಯೆಯೇ ನೆರೆಯ ರಾಜ್ಯ ಗೋಕುಲಕ್ಕೆ ತಲುಪುತ್ತಾನೆ.
ಗೋಕುಲದಲ್ಲಿ ವಸುದೇವನ ಸ್ನೇಹಿತನಾದ ನಂದಗೋಪ ಹಾಗೂ ಆತನ ಪತ್ನಿ ಯಶೋದೆಯ ಮಗುವಿದ್ದ ಜಾಗದಲ್ಲಿ ಕೃಷ್ಣನನ್ನು ಇಟ್ಟು ಆತನ ಮಗುವನ್ನು ಹೊತ್ತು ಕಾರಾಗೃಹಕ್ಕೆ ತರ್ತಾನೆ.
ಕಂಸ ಆ ಮಗುವನ್ನು ಕಂಡು ತನ್ನ ತಂಗಿ ದೇವಕಿಯ ಎಂಟನೆಯ ಮಗುವೆಂದು ಭಾವಿಸಿ ಅದನ್ನು ಕೊಲ್ಲಲು ಯತ್ನಿಸ್ತಾನೆ. ಅಷ್ಟರಲ್ಲೇ ಒಂದು ಪವಾಡ ನಡೆದುಹೋಗುತ್ತೆ. ಆ ಪವಾಡ ಏನಂದ್ರೆ, ಆ ಮಗು ಮತನಾಡುತ್ತೆ. ಕಂಸನನ್ನು ಕಂಡು, ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಾಳಿದ್ದಾನೆ ಅಂತಾ ಹೇಳಿ ಅದೃಷ್ಯವಾಗುತ್ತೆ.

ಶ್ರೀಕೃಷ್ಣನಿಂದ ಕಂಸ ಸಂಹಾರ: ನಂತರ ಕಂಸ ಆ ಎಂಟನೆಯ ಮಗುವನ್ನು ಹುಡುಕಾಡಲು ಯತ್ನಿಸ್ತಾನೆ. ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳುಹಿಸ್ತ್ತಾನೆ. ಆದ್ರೆ ಕೃಷ್ಣನನ್ನು ಕೊಲ್ಲಲಾಗುವುದಿಲ್ಲ. ಕೆಲ ವರ್ಷಗಳ ನಂತರ, ಕೃಷ್ಣ ಬೆಳೆದು ದೊಡ್ಡವನಾದ ಮೇಲೆ ತನ್ನ ಅಣ್ಣ ಬಲರಾಮನೊಂದಿಗೆ ಮರಳಿ ಮಥುರಾ ನಗರಕ್ಕೆ ಬರ್ತಾನೆ.

ಅಲ್ಲಿ ಕಂಸನ ಅಟ್ಟಹಾಸಗಳನ್ನು ಮನಗಾಣುತ್ತಾನೆ. ಮಥುರಾ ನಗರದಲ್ಲಿ ನಡೆಯುವ ಮಲ್ಲಯುದ್ಧದಲ್ಲಿ ಕಂಸ ಮತ್ತು ಚಾಣೂರರನ್ನು ಶ್ರೀಕೃಷ್ಣ ಸಂಹಾರ ಮಾಡ್ತ್ತಾನೆ. ಮಹಾಭಾರತದ ಪ್ರಕಾರ, ಭಗವಾನ್‌ ಶ್ರೀಕೃಷ್ಣ ಯಮುನಾ ನದಿಯ ತೀರದಲ್ಲಿದ್ದು ಎಲ್ಲರಿಗೂ ತೊಂದರೆ ನೀಡ್ತಿದ್ದ ಕಾಳಿಂಗ ಸರ್ಪವನ್ನು ವಧೆ ಮಾಡ್ತಾನೆ.

ನೂರಾಒಂದು ಸುಳ್ಳು ಹೇಳಿದ ನಂತರ ತನ್ನ ಸುದರ್ಶನ ಚಕ್ರದಿಂದ ಶಿಶುಪಾಲನ ಸಂಹಾರ ಮಾಡ್ತಾನೆ. ರಾಕ್ಷಸ ಜರಾಸಂಧನ ವಧೆಯಲ್ಲೂ ಕೃಷ್ಣನ ಪಾತ್ರ ಮಹತ್ವದ್ದಾಗಿದೆ. ಇದಿಷ್ಟೇ ಅಲ್ಲದೇ ಶ್ರೀಕೃಷ್ಣ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಆಕೆಗೆ ವಸ್ತ್ರವನ್ನು ನೀಡುತ್ತಾನೆ.

ಇನ್ನು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ, ಅರ್ಜುನನ ಸಾರಥಿಯಾಗಿ ಶ್ರೀಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿ, ಆತನಿಗೆ ಭಗವದ್ಗೀತೆ ಬೋಧನೆ ಮಾಡಿ ಜೀವನದ ಮೌಲ್ಯಗಳನ್ನು ತಿಳಿಸ್ತಾನೆ. ದುಷ್ಟರನ್ನು ಸಂಹರಿಸಲು ಮಹತ್ವದ ಪಾತ್ರ ವಹಿಸ್ತಾನೆ.

9. ಬುದ್ಧ ಅವತಾರ
ಸಿದ್ಧಾರ್ಥ ನಾಗಿ ಜನಿಸಿದ್ದ ಗೌತಮ ಬುದ್ಧ ದಿನಗಳು ಕಳೆದಂತೆ ಸಂಸಾರ, ಸರ್ವಸ್ವವನ್ನು ತೊರೆದು ಜ್ಞಾನವನ್ನು ಹುಡುಕಿಕೊಂಡು ಹೊರಡುತ್ತಾನೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಈತ ಸರ್ವಜ್ಞಾನಿ. ಬೌದ್ಧ ಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧ, ಜನರು ತಮ್ಮ ದುಃಖವನ್ನು ಕೊನೆಗೊಳಿಸಿಕೊಳ್ಳಲು 8 ಮಾರ್ಗವನ್ನು ಸೂಚಿಸಿದ್ದಾರೆ

10. ಕಲ್ಕಿ ಅವತಾರ
ಶ್ರೀ ಕಲ್ಕಿ ಅವತಾರದಲ್ಲಿ ಶ್ರೀಮಾನ್ ಮಹಾವಿಷ್ಣುವು ಬಿಳಿ ಕುದುರೆಯ ಮೇಲೆ ಬಿಚ್ಚುಗತ್ತಿ ಹಿಡಿದ ಮಹಾಯೋಧನಾಗಿ ಅವತರಿಸುತ್ತಾನೆ. ಈ ಅವತಾರವು ಕಲಿಯುಗದ ಕೊನೆಯಲ್ಲಿ ಆಗುತ್ತದೆ ಎಂದು ನಂಬಲಾಗಿದೆ.

ಇದು ಶ್ರೀಮಾನ್ ಮಹಾವಿಷ್ಣುವಿನ ಕೊನೆಯ ಅವತಾರವಾಗಲಿದೆ ಎಂದು ನಂಬಲಾಗಿದೆ. ಕಲ್ಕಿಯು ಕಲಿಯುಗದ ಅಂತ್ಯ, ಅನ್ಯಾಯ ಅಕ್ರಮದ ನಾಶ ಹಾಗು ಧರ್ಮದ ಉದ್ದಾರ ಮಾಡುತ್ತಾನೆಂದು ನಂಬಲಾಗಿದೆ.

Comments