ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದರ ಆಧ್ಯಾತ್ಮಿಕ ಮಹತ್ವ ಏನು?
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಮಹತ್ವ ಇದೆ ಹಿನ್ನೆಲೆಗಳು ಇದೆ ಯಾವ ಆಚರಣೆಗಳು ಯಾವ ಹಬ್ಬಗಳು ಕಾರಣವಿಲ್ಲದೆ ಶಾಸ್ತ್ರ ಇಲ್ಲದೆ ಇಲ್ಲ.
ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಮಹತ್ವಗಳು ಇದ್ದೆ ಇದೆ.
ನಮ್ಮಲ್ಲಿ ಕೆಲವು ಮುಖಂಡರೇ ದೀಪಾವಳಿ ಪಟಾಕಿ ಸಿಡಿಸುವುದು ಯಾವ ಶಾಸ್ತ್ರಗಳಲ್ಲಿಯೂ ಹೇಳಿಲ್ಲ , ಇದು ತಪ್ಪು ಎಂದು ಹೇಳುತ್ತಾರೆ.
ಆದರೆ ದೀಪಾವಳಿ ಪಟಾಕಿ ಸಿಡಿಸುವುದು ಶಾಸ್ತ್ರೀಯವಾಗಿದೆ. ಸ್ಕಂದ ಪುರಾಣದಲ್ಲಿ ಸ್ಪಷ್ಟ ಉಲ್ಲೇಖ ಸಿಗುತ್ತದೆ.
ಮಹಾಲಯ ಅಮಾವಾಸ್ಯೆಗಾಗಿ ಭೂಲೋಕಕ್ಕೆ ಬಂದ ಪಿತೃಗಳು ದೀಪಾವಳಿಯ ಸಮಯದಲ್ಲಿ ಮತ್ತೆ ತಮ್ಮ ಲೋಕಕ್ಕೆ ತೆರಳಲು ದಾರಿ ತೋರುವುದಕ್ಕಾಗಿ ಪಟಾಕಿಗಳ ಬಳಕೆಯನ್ನು ಸ್ಕಂದಪುರಾಣದಲ್ಲಿ ತಿಳಿಸಲಾಗಿದೆ.
उल्काहस्ता नराः कुर्युः पितॄणां मार्गदर्शनम्
स्कन्दपुराणम्/खण्डः २ (वैष्णवखण्डः)/कार्तिकमासमाहात्म्यम्/अध्यायः ०९
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ |
ಉಜ್ಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ ||
ಉಲ್ಕಾಹಸ್ತಾ ನರಾಃ ಕುರ್ಯುಃ ಪಿತೃಣಾಂ ಮಾರ್ಗದರ್ಶನಮ್
ಇಲ್ಲಿ ಕೆಲವರು (ಉಲ್ಕಾ ) ಎಂದರೆ " ಕೇವಲ ದೀಪ ಪಟಾಕಿಗಳಲ್ಲ ಎಂದು ಹೇಳುತ್ತಾರೆ. ಆದರೆ ಇದು ಸರಿಯಲ್ಲ. ಉಲ್ಕಾ ಶಬ್ದಕ್ಕೂ ದೀಪ ಶಬ್ದಕ್ಕೂ ವ್ಯತ್ಯಾಸ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿದೆ.
"ಉಲ್ಕಾಪಾತ" ಇತ್ಯಾದಿ ಶಬ್ದಗಳನ್ನು ನಾವು ಕೇಳಿದ್ದೇವೆ. ಉಲ್ಕಾ ಶಬ್ದಕ್ಕೆ ಬೆಂಕಿಯ ಕಿಡಿಗಳಿಂದ ಕೂಡಿದ ದೀಪ ಎಂಬರ್ಥವಿದೆ.
ಮಹಾಭಾರತದ ಆದಿಪರ್ವದಲ್ಲಿ ಗರುಡನ ಕಥೆಯನ್ನು ತಿಳಿಸುವಾಗ
अभूतपूर्वं संग्रामे तदा देवासुरेऽपि च।
ववुर्वाताः सनिर्घाताः पेतुरुल्काः सहस्रशः।।
ಅಭೂತಪೂರ್ವವಾದ ದೇವಾಸುರರ ಸಂಗ್ರಾಮದಲ್ಲಿ ಅನೇಕ ಉಲ್ಕೆಗಳು ಭೂಮಿಯಲ್ಲಿ ಬಿದ್ದವು ಎಂದು ತಿಳಿಸುವಲ್ಲಿ ನೀಲಕಂಠವ್ಯಾಖ್ಯಾನದಲ್ಲಿ
उल्काः वन्हिविस्फुलिङ्गसंघाः
ಉಲ್ಕೆಗಳೆಂದರೆ "ಬೆಂಕಿಯ ಕಿಡಿಗಳ ಸಂಘ" ಎಂದು ತಿಳಿಸಲಾಗಿದೆ.
ಅದೇ ರೀತಿಯಾಗಿ ಸಾಮಾನ್ಯ ದೀಪಕ್ಕೆ ಶಬ್ದವಿರುವದಿಲ್ಲ , ಆದರೆ ಉಲ್ಕೆಯು ಶಬ್ದ ಮಾಡುವದು ಎಂದು ಹರಿವಂಶದಲ್ಲಿ ತಿಳಿಸುತ್ತಾರೆ
उल्का निर्घातनादेन पपात धरणीतले
ಹೀಗೆ ಸಾಮಾನ್ಯ ದೀಪಕ್ಕೂ ಮತ್ತು ಉಲ್ಕೆಗೂ ವ್ಯತ್ಯಾಸವಿದೆ. ಹಾಗಾಗಿ ಸ್ಕಂದ ಪುರಾಣದಲ್ಲಿ "ಉಲ್ಕಾಹಸ್ತಾ ನರಾಃ ಕುರ್ಯುಃ ಪಿತೃಣಾಂ ಮಾರ್ಗದರ್ಶನಂ" ಎಂಬುದಕ್ಕೆ ಶಬ್ದವನ್ನು ಮಾಡುವ , ಬೆಂಕಿಯ ಕಿಡಿಗಳನ್ನು ಹೊರಸೂಸುವ ದೀಪಗಳಿಂದ ಪಿತೃಗಳಿಗೆ ಮಾರ್ಗ ತೋರಿಸಬೇಕು ಎಂದರ್ಥ.
ವನವಾಸ ಮುಗಿಸಿ ಶ್ರೀರಾಮ ಅಯೋಧ್ಯೆಗೆ ಬಂದಾಗ ಪ್ರಜೆಗಳು ಪಟಾಕಿ ಹಚ್ಚಿ ಸಂಭ್ರಮಿಸಿ ಸ್ವಾಗತಿಸುವ ದಿನವೇ ದಿಪಾವಳಿ ಎಂಬ ಕಥೆ ಕೂಡ ಪ್ರಚಲಿತದಲ್ಲಿದೆ. ಹೀಗೆ ಪುರಾಣ, ವೇದ ಕಾಲದಿಂದಲೂ ದೀಪಾವಳಿ ಸಮಯದಲ್ಲಿ ಪಟಾಕಿ ಹಚ್ಚುವುದಕ್ಕೆ ಪ್ರಾಶಸ್ತ್ಯ, ಪದ್ಧತಿಯಿದೆ. ಸಂಭ್ರಮ, ಗೆಲುವಿನ ಸಂಕೇತವನ್ನು ಪಟಾಕಿ ಹಚ್ಚುವ ಮೂಲಕ ವ್ಯಕ್ತಪಡಿಸುವ ಪದ್ಧತಿ ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ನಮ್ಮಲ್ಲಿ ಪಟಾಕಿಯನ್ನು ಕಾಮನ ಹುಣ್ಣಿಮೆ, ದಸರಾ ಸಂದರ್ಭ ಮತ್ತು ದೀಪಾವಳಿ ಸಮಯದಲ್ಲಿ ನಾಲ್ಕೈದು ದಿನ ಬಹಳ ದೊಡ್ಡ ಮಟ್ಟದಲ್ಲಿ ಹಚ್ಚುತ್ತಾರೆ.
ಇನ್ನು ವೈಜ್ಞಾನಿಕ ಮಹತ್ವವನ್ನು ತಿಳಿಯುವುದಾದರೆ
ಹಿಂದಿನ ಕಾಲದಲ್ಲಿ ಮಳೆ ಬೆಳೆ ಎಲ್ಲವೂ ಕಾಲಕ್ಕೆ ಸರಿಯಾಗಿ ಆಗುತ್ತಿತ್ತು ಹಾಗೆ ಕೃಷಿ ಚಟುವಟಿಕೆಗಳು ಎಲ್ಲಾ ಕಡೆಗಳಲ್ಲಿಯೂ ಒಂದೇ ಸಮಯದಲ್ಲಿ ಮಾಡುತ್ತಿದ್ದರು.
ಮಳೆಗಾಲ ಮುಗಿಯುವ ಸಮಯವಾಗಿದ್ದರಿಂದ ನಮ್ಮ ಪೂರ್ವಜರು ದೀಪಾವಳಿ ಸಮಯದಲ್ಲಿ ಬೆಳೆಗಳನ್ನು ಕಟಾವು ಮಾಡುತ್ತಿದ್ದರು ಆ ಸಮಯದಲ್ಲಿ ರಾತ್ರಿ ಹೊತ್ತಿಗೆ ಕಾಡಿನ ಪ್ರಾಣಿಗಳು ಬಂದು ಕಟಾವ್ ಮಾಡಿದ ಬೆಳೆಗಳನ್ನು ಹಾನಿ ಮಾಡುತ್ತಿದ್ದವು ಅದಕ್ಕಾಗಿ ಈ ಸಮಯದಲ್ಲಿ ಪಟಾಕಿಯನ್ನು ಸಿಡಿಸಿ ಪ್ರಾಣಿಗಳಿಗೆ ತೊಂದರೆ ಆಗದಂತೆ ಅವುಗಳನ್ನು ಓಡಿಸುತ್ತಿದ್ದರು ಪ್ರಾಣಿಗಳು ಪಟಾಕಿ ಶಬ್ದಕ್ಕೆ ಹೆದರಿ ಓಡುತ್ತಿದ್ದವು.
ನಮ್ಮ ಪೂರ್ವಜರು ಪ್ರಕೃತಿಗೆ ಹಾನಿಯಾಗದಂತೆ ಯಾವುದೇ ಪ್ರಾಣಿ-ಪಕ್ಷಿಗಳಿಗೂ ತೊಂದರೆ ಆಗದಂತೆ ನಮ್ಮ ಪೂರ್ವಜರು ತಾವೇ ಪಟಾಕಿಗಳನ್ನ ತಯಾರು ಮಾಡಿ ಸುಡುತ್ತಿದ್ದರು.
ಆದರೆ ಈಗ ಹಣದ ಆಸೆಗಾಗಿ ಕೆಮಿಕಲ್ ಗಳನ್ನ ಮಿಶ್ರಣ ಮಾಡಿ ಪಟಾಕಿಗಳನ್ನ ತಯಾರಿಸುತ್ತಾರೆ ಕೆಮಿಕಲ್ ಮಿಸ್ರಿತ ಪಟಾಕಿಗಳನ್ನ ನಾವು ಹೊಡೆಯುವುದರಿಂದ ನಮ್ಮ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀಳುತ್ತದೆ ಹಾಗೂ ಪ್ರಾಣಿ ಪಕ್ಷಿಗಳ ಆರೋಗ್ಯದ ಮೇಲೂ ಕೂಡ ಕೆಟ್ಟ ಪರಿಣಾಮ ಬೀಳುತ್ತದೆ.
ಪರಿಸರ ಸ್ನೇಹಿ ಹಸಿರು ಪಟಾಕಿಯನ್ನು ಸಿಡಿಸುವುದರ ಮುಖಾಂತರ ದೀಪಾವಳಿಯನ್ನ ಆಚರಿಸೋಣ.
ಕೆಮಿಕಲ್ ಬರಿತಾ ಮಾಲಿನ್ಯವನ್ನು ಹಾಳು ಮಾಡುವ ಪಟಾಕಿಗಳಿಂದ ದೂರ ಇರೋಣ.
Comments