ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು, ಆದರೆ ಅದು ಇಂದು ಕೂಡ ನಮ್ಮ ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ. ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಾಮಬಾಣವಾಗಿದೆ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಾಳೆದಿಂಡಿನಲ್ಲಿ ಮನುಷ್ಯನಿಗೆ ಎದುರಾಗುವ ಮೂತ್ರನಾಳದ ಸೋಂಕನ್ನು ನಿವಾರಣೆ ಮಾಡುವ ಶಕ್ತಿಯಿದೆ. ಏಕೆಂದರೆ ಬಾಳೆಯ ದಿಂಡಿನಲ್ಲಿ ವಿಟಮಿನ್ ' ಬಿ6 ' ಅಂಶ ಮತ್ತು ಪೊಟ್ಯಾಷಿಯಂ ಅಂಶದ ಜೊತೆಗೆ ಡೈ - ಯುರೆಟಿಕ್ ಗುಣ ಲಕ್ಷಣಗಳು ಒಟ್ಟಿಗೆ ಸೇರಿ ಮೂತ್ರನಾಳದ ಸೋಂಕಿನ ವಿರುದ್ಧ ಹೋರಾಡುತ್ತವೆ ಮತ್ತು ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ.
ಒಂದು ಬಾಳೆಯ ಮರ ಮನೆಯ ಪಕ್ಕದಲ್ಲಿದ್ದರೆ ನಾನಾ ರೀತಿಯ ಉಪಯೋಗಗಳು ಇದೆ ಎನ್ನುವುದು ಹಿಂದಿನಿಂದಲೂ ಹಿರಿಯರು ಹೇಳಿಕೊಂಡು ಬಂದಿರುವ ಮಾತು . ಕೇವಲ ಬಾಳೆ ಹಣ್ಣು, ಬಾಳೆ ಎಲೆ ಅಷ್ಟಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಬದಲಿಗೆ, ಬಾಳೆ ಮರದ ದಂಟು ಅಥವಾ ದಿಂಡು ಕೂಡ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಬಾಳೆ ದಿಂಡು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತಕಾರಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಗಾಳಿ ಮಳೆಗೆ ಬಾಳೆ ಮರ ನೆಲಕ್ಕಚ್ಚುವುದು ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಎಲೆ ಮತ್ತು ಬಾಳೆ ಕಾಯಿಯನ್ನು ತುಂಡು ಮಾಡಿ ತೆಗೆದು ಅಡುಗೆ ಕೊಣೆಯಲ್ಲಿ ಇಡುವಂತೆ, ಬಾಳೆ ಮರದ ಮಧ್ಯಭಾಗವನ್ನು ತುಂಡು ಬಾಡಿ ಅಡುಗೆ ಮನೆಗೆ ತನ್ನಿ ಮತ್ತು ಅದನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಬಾಳೆ ಮರದ ಮೇಲೆ ಸೊನೆ ಇರುತ್ತದೆ ಅದನ್ನು ತಿನ್ನುವುದು ಹೇಗೆ ಎನ್ನುವುದು ಹಲವರಿಗೆ ಗೊಂದಲ ಇರಬಹುದು ಆದರೆ ಬಾಳೆ ಮರವನ್ನು ಮಧ್ಯಕ್ಕೆ ಕಡಿದು ಅದರ ಸುರುಳಿಗಳನ್ನು, ಒಳಗಿನ ಬಿಳಿ ಅಂಶ ಕಾಣುವವವರೆಗೆ ಬಿಡಿಸಬೇಕು. ಯಾವಾಗ ಬಿಳಿಯ ದಿಂಡು ಕಾಣುತ್ತದೆ, ಆಗ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಈ ರೀತಿಯ ಬಿಳಿ ಬಣ್ಣದ ಬಾಳೆ ದಿಂಡು ಆರೋಗ್ಯಕರವಾದ ಬಳಕೆಗೆ ಸಾಕ್ಷಿಯಾಗುತ್ತದೆ.
ಬಾಳೆ ದಿಂಡನ್ನು ಚೆನ್ನಾಗಿ ತೊಳೆದು ಕತ್ತರಿಸಿ ರಾತ್ರಿ ಬೇಯಿಸಿಡಬೇಕು ಬೆಳಿಗ್ಗೆ ಎದ್ದ ತಕ್ಷಣ ಅದಕ್ಕೆ ಬೆಲ್ಲವನ್ನ ಸೇರಿಸಿ ಚೆನ್ನಾಗಿ ರುಬ್ಬಿ ಒಂದು ಗ್ಲಾಸ್ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕಿಡ್ನಿ ಕಲ್ಲು ಕರಗಿ ಹೋಗುತ್ತದೆ
ಬಾಳೆ ದಿಂಡು ಮತ್ತು ಆರೋಗ್ಯ
ಬಾಳೆ ದಿಂಡಿನ ಪಲ್ಯ:
ಸಾಮಾನ್ಯವಾಗಿ ಬಾಳೆ ದಿಂಡಿನ ಪಲ್ಯವನ್ನು ವರ್ಷಕ್ಕೆ ಎರಡುಬಾರಿಯಾದರು ತಿನ್ನಲೇ ಬೇಕು ಎನ್ನುವ ಮಾತು ಇದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡುವ ಪಲ್ಯ. ಪಲ್ಯವನ್ನು ಮಾಡಿ ತಿನ್ನುವುದರಿಂದ ಹೊಟ್ಟೆ ಭಾಗಕ್ಕೆ ತುಂಬಾ ಒಳಿತು. ಉಗುರು ತಿನ್ನುವ ಅಭ್ಯಾಸ ಇರುವವರು ಇದನ್ನು ತಿನ್ನಲೇ ಬೇಕು ಮತ್ತು ಹೊಟ್ಟೆ ನೋವು, ಮಲಬದ್ಧತೆ, ಹೊಟ್ಟೆಯಲ್ಲಿನ ಕಲ್ಮಶ ಅಥವಾ ಹೊಟ್ಟೆಯಲ್ಲಿ ಕೂದಲು ಸೇರಿಕೊಂಡಿದ್ದರೆ ಇದು ಎಲ್ಲವನ್ನು ಶುದ್ಧ ಮಾಡುತ್ತದೆ. ಇನ್ನು ಬಾಳೆ ನಾರಿನಾಂಶವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಕೂಡ ಸಹಕಾರಿಯಾಗಿದೆ. ಆ ಮೂಲಕ ಹೊಟ್ಟೆ ಉಬ್ಬರಿಸುವುದು ಸೇರಿ ಇನ್ನಿತರ ಕಾಯಿಲೆಯಿಂದ ನಮ್ಮನ್ನು ರಕ್ಷಿಸಲು ಬಾಳೆ ದಿಂಡು ಸಹಕಾರಿಯಾಗಿದೆ.
ಬಾಳೆ ದಿಂಡಿನ ಜ್ಯೂಸ್:
ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು, ಆದರೆ ಅದು ಇಂದು ಕೂಡ ನಮ್ಮ ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ. ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಾಮಬಾಣವಾಗಿದೆ. ಬಾಳೆ ದಿಂಡನ್ನು ಬಿಡಿಸಿ ರುಬ್ಬಿ ಅದರ ರಸವನ್ನು ತೆಗೆದು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಮಾಯವಾಗುತ್ತದೆ. ರಕ್ತಹೀನತೆಯನ್ನು ಕೂಡ ಇದು ದೂರ ಮಾಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ವಿಟಮಿನ್ ಬಿ 6 ಕೂಡ ಹೇರಳವಾಗಿದೆ. ಅಲ್ಲದೆ ಇದರಲ್ಲಿ ಫೈಬರ್ ಅಂಶವು ಕೂಡ ಇದೆ.
ಅಸಿಡಿಟಿ ಇದ್ದರೆ ಹೊಂದಿರುವವರು ಒಂದು ಕಪ್ ಬಾಳೆಯ ದಿಂಡಿನ ರಸ ಕುಡಿಯಿರಿ
ಅತಿಯಾದ ಹುಲಿ ತೇಗು, ಬಾಯಿಯಲ್ಲಿ ನೀರೂರುವುದು, ಎಷ್ಟೇ ನೀರು ಕುಡಿದರೂ ಶಮನವಾಗದ ಹೊಟ್ಟೆಯುರಿ, ಹೊಟ್ಟೆ ಹಸಿವಾಗದೆ ಇರುವುದು ಮತ್ತು ಎದೆಯಲ್ಲಿ ಸದಾ ಒತ್ತಿದಂತೆ ಆಗುವುದು ಈ ಸಮಸ್ಯೆಯ ಬಹು ಮುಖ್ಯ ಲಕ್ಷಣಗಳು. ಯಾರಿಗಾದರೂ ಈ ರೀತಿಯ ವಿಪರೀತ ಗ್ಯಾಸ್ಟಿಕ್ ಸಮಸ್ಯೆ ಇದ್ದರೆ ಅಂತಹವರು ಬಾಳೆಯ ಹಣ್ಣನ್ನು ಅಥವಾ ಬಾಳೆಯ ದಿಂಡಿನ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಎದೆಯುರಿ, ಹೊಟ್ಟೆ ಉರಿ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಹ ಬಗೆಹರಿಸುತ್ತದೆ
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತಿ ಮುಖ್ಯ. ಇದಕ್ಕೆ ಬಾಳೆ ದಿಂಡು ಪುಷ್ಠಿ ನೀಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ರೋಗನಿರೋಧಕ ಶಕ್ತಿ ಇದೆ. ಅಲ್ಲದೆ ಬಾಳೆ ದಿಂಡನ್ನು ಸೇವಿಸುವುದರಿಂದ ತೂಕವನ್ನು ಸಮತೋಲನಗೊಳಿಸಬಹುದು. ಇದು ಮೈಯಲ್ಲಿನ ಕೊಬ್ಬಿನಾಂಶವನ್ನು ದೂರ ಮಾಡಿ ಆರೋಗ್ಯಯುಕ್ತ ಜೀವನ ನಡೆಸಲು ಸಹಕಾರಿಯಾಗಿದೆ. 100 ಗ್ರಾಮ್ ಬಾಳೆ ದಿಂಡಿನಲ್ಲಿ 13 ಕ್ಯಾಲೋರಿ, 2 ಗ್ರಾಮಿನಷ್ಟು ಕಾರ್ಬೋಹೈಡ್ರೇಟ್ಸ್, ಒಂದು ಗ್ರಾಮ್ನಷ್ಟು ಡಯೇಟ್ರಿ ಫೈಬರ್ ಇರುತ್ತದೆ. ಇದು ಚರ್ಮ ಮತ್ತು ಕೂದಲಿಗೆ ಕೂಡ ಒಳ್ಳೆಯದು.
ಇನ್ನು ಬಾಳೆ ಹೂವಿನಿಂದಲೂ ಪಲ್ಯ,ಚಟ್ನಿ,ತಂಬುಳಿ ಹೀಗೆ ಹಲವಾರು ರೆಸಿಪಿಗಳಿಂದ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇನ್ನು ಇದರ ಎಲೆಯಂತೂ ಆರೋಗ್ಯಕರವೆಂದು ಪ್ರತೀತಿಯೇ ಇದೆ.
ದೇಹದಲ್ಲಿ ಕಬ್ಬಿಣ ಅಂಶದ ವಿಪರೀತ ಕೊರತೆಯನ್ನು ನೀಗಿಸುತ್ತದೆ
ಸಾಮಾನ್ಯವಾಗಿ ಯಾರಾದರೂ ನೋಡಲು ತೀರಾ ಸಣ್ಣಗಿದ್ದರೆ ಅವರು ಕಬ್ಬಿಣ ಅಂಶದ ಕೊರತೆಯಿಂದ ಬಳಲುತ್ತಿರಬಹುದು ಎಂದು ಊಹಿಸಿಕೊಳ್ಳಬಹುದು. ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಉಂಟಾದರೆ ಮನುಷ್ಯನ ಪ್ರತಿ ನಿತ್ಯದ ಚಟುವಟಿಕೆಗಳಿಗೆ ಬಹಳ ತೊಂದರೆ ಉಂಟು ಮಾಡುತ್ತದೆ. ಅಂತಹವರು ಸಮತೋಲನ ಕಾಪಾಡಿಕೊಳ್ಳಲು ಕಬ್ಬಿಣ ಅಂಶ ಹೆಚ್ಚಿರುವ ಆಹಾರಗಳ ಅಂದರೆ ಹಸಿರು ಎಲೆ ತರಕಾರಿಗಳು, ಬೀನ್ಸ್, ಕಾಳುಗಳು, ದ್ವಿದಳ ಧಾನ್ಯಗಳ ಸೇವನೆ ಮಾಡಬೇಕಾಗುತ್ತದೆ. ಆದರೆ ಬಾಳೆದಿಂಡಿನ ರಸದಲ್ಲಿ ಕೂಡ ಯಥೇಚ್ಛವಾಗಿ ಕಬ್ಬಿಣ ಮತ್ತು ವಿಟಮಿನ್ ' ಬಿ6 ' ಅಂಶ ಇರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಅಂಶದ ಮಟ್ಟವನ್ನು ಹೆಚ್ಚು ಮಾಡುತ್ತದೆ ಮತ್ತು ಬಾಳೆ ದಿಂಡು ಒಂದೇ ಮೇಲಿನ ಎಲ್ಲಾ ರೀತಿಯ ಆಹಾರ ಪದಾರ್ಥ ಗಳಿಗೆ ಸೆಡ್ಡು ಹೊಡೆಯಬಲ್ಲುದು. ಆದ್ದರಿಂದ ಇದು ಅನೀಮಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ ಸಹಾಯ ಮಾಡುತ್ತದೆ.
Comments