ಕರಿಬೇವು ಬರೀ ಅಡುಗೆ ಒಗ್ಗರಣೆಗೆ ಸೀಮಿತವಲ್ಲ ವಿಶೇಷ ಆರೋಗ್ಯ ರಕ್ಷಣೆಯನ್ನು ಮಾಡುವ ನೈಸರ್ಗಿಕ ಆಹಾರ ಉತ್ಪನ್ನ ಎಂದರೆ ಕರಿಬೇವಿನ ಎಲೆ. ಇದನ್ನು ಸಮಾನ್ಯವಾಗಿ ಅಡುಗೆಯ ಒಗ್ಗರಣೆಗೆ ಬಳಸುತ್ತೇವೆ. ಇದರಲ್ಲಿರುವ ಸುವಾಸನೆ ಮತ್ತು ಆರೋಗ್ಯಕರ ಅಂಶಗಳು ಆಹಾರದ ರುಚಿ ಹಾಗೂ ಪರಿಮಳವನ್ನು ಬದಲಿಸುತ್ತದೆ.
ಅಷ್ಟೇ ಅಲ್ಲದೇ ಇದರಲ್ಲಿ ಹೆಚ್ಚು ಆರೋಗ್ಯಕರ ಪ್ರಯೋಜಗಳಿವೆ. ಕರಿಬೇವಿನ ಎಲೆಗಳು ಲಿನೂಲ್, ಆಲ್ಫಾ-ಟೆರ್ಪಿನೆನ್, ಮೈರ್ಸೀನ್, ಮಹಾನಿಂಬೈನ್, ಕ್ಯಾರಿಯೊಫಿಲೀನ್, ಮುರಾಯನಾಲ್, ಮತ್ತು ಆಲ್ಫಾ-ಪಿನೆನ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ ಎಂದು ಸಂಶೋಧನೆಗಳು ಹೇಳಿವೆ.
ನಮ್ಮ ಪುರಾತನ ಆಯುರ್ವೇದ ಪದ್ಧತಿಯಲ್ಲಿ ಕೂಡ ಕರಿಬೇವಿನ ಸೊಪ್ಪಿಗೆ ನಮ್ಮ ಆರೋಗ್ಯ ಪಂಡಿತರು ಬಹಳ ಗೌರವದ ಸ್ಥಾನ ನೀಡಿ ಅನೇಕ ಕಾಯಿಲೆಗಳನ್ನು ಗುಣ ಪಡಿಸಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಈಗಲೂ ಸಹ ಇದು ಮುಂದುವರೆದಿದ್ದು ಅನೇಕ ಬಗೆಯ ಸೋಂಕುಗಳು, ಉರಿಯೂತದ ಲಕ್ಷಣಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಮಧುಮೇಹವನ್ನು ನಿಯಂತ್ರಣದಲ್ಲಿಡುವ ಅದ್ಭುತ ಶಕ್ತಿ ಕರಿಬೇವಿನ ಸೊಪ್ಪಿನಲ್ಲಿ ಇದೆ.
ಕರಿಬೇವಿನ ಎಲೆಗಳಲ್ಲಿ ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಕಂಡು ಬರುತ್ತವೆ. ಇದು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3 ರಿಂದ 4 ಕರಿಬೇವಿನ ಎಲೆಗಳನ್ನು ಅಗಿದು ಸೇವಿಸುವುದು ತುಂಬಾ ಪ್ರಯೋಜನಕಾರಿ ಆಗಿದೆ.
ಕ್ಯಾನ್ಸರ್ ದೂರ
ಕರಿಬೇವು ತಿಂದ್ರೆ ಕ್ಯಾನ್ಸರ್ ನಿವಾರಣೆಯಾಗುವುದು, ನಮ್ಮ ದೇಶದಲ್ಲಿ ಪುರುಷರಲ್ಲಿ ಹೆಚ್ಚಾಗಿ ಕಾಡುವಂತ ”ಪ್ರಾಸ್ಪೇಟ್ ಕ್ಯಾನ್ಸರ್” ಅನ್ನು ಕರಿಬೇವು ನಿವಾರಿಸುತ್ತದೆ ಎಂಬುದಾಗಿ ಕೆಲವು ಸಂಶೋಧನೆಗಳಿಂದ ತಿಳಿಯಲಾಗಿದೆ.
ಕೊಲ್ಕತ್ತದಲಿರುವ ಭಾರತಿ ವಿಶ್ವವಿದ್ಯಾಲಯದ ಸಂಶೋಧನೆ ತಂಡವೊಂದು ಇತ್ತೀಚಿಗೆ ಕರಿಬೇವಿನಲ್ಲಿ ಕ್ಯಾನ್ಸರ್ ನಿವಾರಕ ಗುಣಗಳಿರುವುದನ್ನು ಕಂಡುಹಿಡಿದಿದೆ. ಇದರ ಎಲೆಗಳಲ್ಲಿ ”ಮಹಾನೈನ್” ಎಂಬ ಪದಾರ್ಥ ಇದ್ದು, ಇದು ಕ್ಯಾನ್ಸರ್ ನಿಯಂತ್ರಣ ಮಾಡಬಲ್ಲದು ಅನ್ನೋದನ್ನ ತಂಡ ತಿಳಿಸಿದೆ. ಇದರಿಂದ ದೇಹಕ್ಕೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಪ್ರತ್ಯೇಕವಾಗಿ ಇದು ಕ್ಯಾನ್ಸರ್ ಕಣಗಳನ್ನು ಮಾತ್ರ ನಿಯಂತ್ರಿಸುತ್ತದೆ. ಮತ್ತೊಂದು ಉಪಯೋಗವೇನೆಂದರೆ ಕರಿಬೇವಿನಲ್ಲಿರುವ ‘ಮಹಾನೈನ್’ ಅಂಶ ಲ್ಯುಕೇಮಿಯ ಎಂಬ ಚರ್ಮ ರೋಗವನ್ನು ಕೂಡ ನಿಯಂತ್ರಿಸುತ್ತದೆ.
ಕರಿಬೇವಿನ ಎಲೆಗಳಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನೀವೂ ತೂಕ ಇಳಿಸುವ ಯೋಚನೆ ಹೊಂದಿದ್ದರೆ, ಕರಿಬೇವಿನ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಪ್ರಯೋಜನಗಳು ಸಿಗುತ್ತವೆ. ಕರಿಬೇವಿನ ಎಲೆಗಳಲ್ಲಿರುವ ರೋಮರನ್ ಈಥೈಲ್ ಅಸಿಟೇಟ್ ಮತ್ತು ಮುಂಬೈನ್ ನಂತಹ ಪ್ರಮುಖ ಅಂಶಗಳು ತೂಕ ನಷ್ಟದ ಜೊತೆಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಕರಿಬೇವು ಕೂದಲು ಉದುರುವುದನ್ನು ತಡೆಯುತ್ತದೆ
ಕೂದಲು ಉದುರುವುದು, ಕೂಡಲು ಸಿಳುವುಕೆ, ಮತ್ತು ಹೊಟ್ಟಿನ ಸಮಸ್ಯೆ ಇದ್ದಲ್ಲಿ ಕರಿಬೇವಿನ ಎಲೆಯ ಪೇಸ್ಟ್ ಅಥವಾ ಎಣ್ಣೆಯ ಜೊತೆ ಲಿಂಬೆ ರಸ ಸೇರಿಸಿ, ತಲೆ ಕೂದಲಿನ ಬುಡದಲ್ಲಿ ಹಚ್ಚುವುದರಿಂದ ತಲೆಯಲ್ಲಿ ಹೊಟ್ಟಿನ ಪ್ರಮಾಣ ಕಡಿಮೆಯಾಗುತ್ತದೆ.
ಕರಿಬೇವು ಕೂದಲಿನ ಬೆಳವಣಿಗೆಗೆ ಕಾರಣವಾಗಿರುವ ನ್ಯೂಟ್ರಿಕ್ ಮತ್ತು ಪ್ರೊಟೀನ್ ಅಂಶಗಳನ್ನೂ ಹೊಂದಿದ್ದು, ಕೂದಲು ಉದುರುವುದನ್ನು ತಡೆಯುತ್ತದೆ. ಸ್ವಲ್ಪ ಕರಿಬೇವನ್ನು ತೆಗೆದುಕೊಂಡು, ಪೇಸ್ಟಮಾಡಿಕೊಂಡು ಅದಕ್ಕೆ ಮೊಸರು ಸೇರಿಸಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ, ಕೂದಲು ಉದುರುವುದನ್ನು ತಡೆಯಬಹುದು. ಹಾಗು ಇದರಿಂದ ಕೂದಲು ಕೂಡ ಸೊಂಪಾಗಿ ಬೆಳೆಯುತ್ತದೆ.
ಕರಿಬೇವು-ನೆಲ್ಲಿ ಎಣ್ಣೆ
ನೆಲ್ಲಿಕಾಯಿ ಕೂಡ ಕೂದಲ ಆರೈಕೆಗೆ ಅತ್ಯುತ್ತಮ ಔಷಧ. ಅಂಥ ನೆಲ್ಲಿಕಾಯಿ ಮತ್ತು ಕರಿಬೇವನ್ನು ಸೇರಿಸಿ ಎಣ್ಣೆ ಮಾಡಿಟ್ಟುಕೊಂಡು ನೀವು ಕೂದಲಿಗೆ ಮಸಾಜ್ ಮಾಡುತ್ತ ಬಂದರೆ ಖಂಡಿತ ಫಲಿತಾಂಶ ಪಡೆಯುತ್ತೀರಿ. ನಿಮಗೆ ಬೇಕಾದಷ್ಟು ಕೊಬ್ಬರಿ ಎಣ್ಣೆಗೆ ನೆಲ್ಲಿಕಾಯಿ ಪೌಡರ್ ಮತ್ತು ಕರಿಬೇವಿನ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಅದು ಆರಿದ ಮೇಲೆ ಹಚ್ಚಿಕೊಳ್ಳಿ. ನೀವಿದನ್ನು ರಾತ್ರಿ ಮಲಗುವ ಮುನ್ನ ನಿಮ್ಮ ಕೂದಲಿಗೆ ಹಚ್ಚಿಕೊಂಡು, ಮರುದಿನ ಸ್ನಾನ ಮಾಡಬೇಕು
ಕರಿಬೇವು ಅನೇಕ ರೋಗಗಳಿಗೆ ಸಹಕಾರಿಯಾಗಿದೆ
ಕರಿಬೇವಿನ ಕಷಾಯ ಕುಡಿಯುವುದರಿಂದ ದೇಹದಲ್ಲಿ ಉಷ್ಣತೆ ಕಡಿಮೆ ಮಾಡುವುದರ ಮೂಲಕ ಜ್ವರವನ್ನು ಕಡಿಮೆಮಾಡಬಹುದು. ಮತ್ತು ಕರಿಬೇವು ಮೂಗು ಕಟ್ಟುವುದು, ಶ್ವಾಸಕೋಶದ ಸಮಸ್ಯೆ, ಮತ್ತು ಹೃದಯ ರೋಗದ ಸಮಸ್ಯೆಗಳನ್ನೂ ಹೋಗಲಾಡಿಸುತ್ತದೆ.
ಆಲ್ಕೋಹಾಲ್ ಸೇವಿಸುವವರು ಆಹಾರದಲ್ಲಿ ಕರಿಬೇವನ್ನು ಸೇವಿಸುವುದರಿಂದ ಲಿವರ್ ಸಂಬಂಧಿತ ಕಾಯಿಲೆಗಳಿಂದ ದೂರವಿರಬಹುದು.
ಮಧುಮೇಹ
ಕರಿಬೇವಿನ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯಕ. ಕರಿಬೇವಿನ ಎಲೆಗಳಲ್ಲಿ ಇರುವ ಹೈಪೊಗಿ ಸಿಮಿಕ್ ಗುಣಲಕ್ಷಣಗಳು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
Comments