ಸನಾತನ ಹಿಂದೂ ಧರ್ಮ ಕಾರ್ತಿಕ ಮಾಸಕ್ಕೆ ಅದರದ್ದೇ ಆದ ವಿಶೇಷ ಮಹತ್ವವಿದೆ. ಕಾರ್ತಿಕ ತಿಂಗಳಲ್ಲಿ ಮಾಡುವ ಉಪವಾಸ, ತಪ, ಜಪ, ದಾನ, ಸ್ನಾನ ಕ್ಕೆ ಬಹಳ ಮುಖ್ಯವಾಗಿದೆ ಎಂದು ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಒಬ್ಬ ವ್ಯಕ್ತಿಯು ಕಾರ್ತಿಕ ಮಾಸದಲ್ಲಿ ಸಂಯಮದಿಂದ ಜೀವಿಸುತ್ತಿದ್ದರೆ ಮತ್ತು ಕೆಲವು ನಿಯಮಗಳನ್ನು ಪಾಲಿಸಿದರೆ ಅವನು ಮರಣಾ ನಂತರ ಮೋಕ್ಷವನ್ನು ಪಡೆಯುತ್ತಾನೆ. ಕಾರ್ತಿಕ ಮಾಸವು ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವಾದ ಮಾಸವಾಗಿದೆ. ಆದ್ದರಿಂದ ಎಲ್ಲರಿಗೂ ಅಗತ್ಯವಾದ ಕಾರ್ತಿಕ ಮಾಸದಲ್ಲಿ ನಿಯಮಗಳಾವುವು..? ಮತ್ತು ಆ ನಿಯಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಕೂಡ ಶ್ರೀಹರಿ ವಿಷ್ಣು ಮತ್ತು ಮಾ ಲಕ್ಷ್ಮಿಯ ಆಶೀರ್ವಾದ ಪಡೆಯಬಹುದು.
ದೀಪ ಬೆಳಗುವ ಮೂಲಕ ಕತ್ತಲನ್ನು ಕಳೆಯಬೇಕು ಎನ್ನುವ ಚಿಂತನೆಯಲ್ಲಿ ಮೂಡಿ ಬಂದದ್ದೇ ಕಾರ್ತಿಕ ದೀಪೋತ್ಸವ. ಕಾರ್ತಿಕ ಮಾಸ ಎರಡು ರೀತಿಯಲ್ಲಿ ಗಮನ ಸೆಳೆಯುತ್ತೆ. ಒಂದು ಕತ್ತಲು, ಮತ್ತೊಂದು ಸ್ಥಿತಿ. ಕತ್ತಲು ಲಯ ಭಾವವಾದರೆ, ಸ್ಥಿತಿ ಬದುಕಿನ ಗತಿ. ಲಯ ಭಾವವೇ ಶಿವ. ಬದುಕಿನ ಗತಿಯೇ ವಿಷ್ಣು.
ಕಾರ್ತಿಕ ಮಾಸ ಶಿವ ಹಾಗೂ ವಿಷ್ಣುಗೆ ಪ್ರಿಯವಾದ ಮಾಸ. ಹೀಗಾಗಿ ಶಿವ ಮತ್ತು ವಿಷ್ಣು ಭಕ್ತರು ಒಂದುಗೂಡಿ ದೇಗುಲಗಳಲ್ಲಿ , ಮನೆಯ ಮುಂಭಾಗದಲ್ಲಿ ದೀಪಗಳನ್ನು ಬೆಳಗುತ್ತಾರೆ. ಆ ದೀಪದ ಬೆಳಕಿನಲ್ಲೇ ತನ್ಮಯತೆಯನ್ನು ಕಂಡುಕೊಳ್ಳುತ್ತಾರೆ. ಕಾರ್ತಿಕ ಮಾಸ ಹತ್ತು ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತೆ. ಶಿವ ಮತ್ತು ವಿಷ್ಣು ಬೇರೆಯಲ್ಲ.
ಇಬ್ಬರೂ ಒಂದೇ ಎನ್ನುವ ಸಂದೇಶವನ್ನು ಸಾರುವ ಮಾಸವೇ ಕಾರ್ತಿಕ ಮಾಸ. ಆಷಾಢ ಶುಕ್ಲ ಏಕಾದಶಿಯಂದು ಯೋಗ ನಿದ್ರೆಗೆ ಜಾರುವ ಶ್ರೀಹರಿ ತುಳಸಿ ಹಬ್ಬದಂದು ಅಂದರೆ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಮೇಲೇಳುತ್ತಾನೆ. ಕಾರ್ತಿಕ ಮಾಸದಲ್ಲೇ ಶಿವನಿಂದ ತ್ರಿಪುರಾಸುರನ ವಧೆಯೂ ಆಗುತ್ತೆ. ಇಂತಹ ಪವಿತ್ರ ಮಾಸದಲ್ಲಿ ದೀಪ ಬೆಳಗುವ ಮೂಲಕ ಶಿವ ಹಾಗೂ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು
ಕಾರ್ತೀಕಮಾಸದಲ್ಲಿ ಭಗವಂತನಿಗೆ ದೀಪಗಳನ್ನು ಹಚ್ಚುವುದು ಪ್ರಶಸ್ತವಾಗಿದೆ.ಆಶ್ವಿನ ಮಾಸದ ಪೌರ್ಣಿಮೆಯಿಂದಲೇ ದೀಪವನ್ನು ಹಚ್ಚುವುದು.
ದೀಪದಾನದ ಮಹಿಮೆ:- ಯಾರು ಕಾರ್ತೀಕದಲ್ಲಿ ಭಗವಂತನಿಗೆ ಶುಚಿಯಾಗಿ ಯಾರು ಬೆಳಗುವರೊ ಅವರು ಸಂಸಾರದಿಂದ ಮುಕ್ತರೆಂದೆ ಅರ್ಥ ಆರುತ್ತಿರುವ ದೀಪವನ್ನು ಉಜ್ವಲಗೊಳಿಸುವುದು ,
ಮತ್ತೊಬ್ಬರ ಮನೆಯ ದೀಪವನ್ನು ಹಚ್ಚುವುದು .ಬತ್ತಿಯನ್ನು ದಾನ ಮಾಡುವುದು ಇವೆಲ್ಲವೊ ದಾನಿಯ ಆಜ್ಞಾನವನ್ನು ಪರಿಹರಿಸಿ ಜ್ಞಾನವನ್ನು ನೀಡಲು ಸಹಕಾರಿಯಾಗಿವೆ.
ಪ್ರಾತಃ ಸ್ನಾತ್ವಾ ಶುಚಿರ್ಭೂತ್ವಾ ಯೋ ದದ್ಯಾದ್ ದೀಪಕಂ ಹರೇ |
ಸತು ಮೋಕ್ಷಮವಾಪ್ನೋತಿ ನಾತ್ರ ಕಾರ್ಯ ವಿಚಾರಣಾ ||
ಸಾವಿರದೆಂಟು, ನೊರೆಂಟು ,ಐವತ್ತನಾಲ್ಕು ಇಪ್ಪತ್ತೆಳು ಹೀಗೆ ದೀಪವನ್ನು ಶಕ್ತಿಯಿದ್ದಂತೆ ಬೆಳಗಿಸಬೇಕು.
ಕಾರ್ತೀಕ ಮಾಸದಲ್ಲಿ ಕಮಲಗಳಿಂದ ಪೂಜೆ ,ತುಲಸಿ ,ಮಾಲತೀ,ಮುನಿ ಪುಷ್ಪಗಳಿoದ ಪೂಜಿಸಬೇಕು ಮತ್ತು ದೀಪ ದಾನವನ್ನು ಮಾಡಬೇಕು ಹೀಗೆ ಈ ಐದು ಪವಿತ್ರವಾದವು ದೇವಸ್ಥಾನದ ಗೋಪುರದ ಮೇಲೆ ಆಕಾಶದೀಪವನ್ನು ಭಗವಂತನಿಗೆ ಈ ಕೆಳಗಿನ ಮಂತ್ರದಿoದ ಅರ್ಪಿಸಬೇಕು.
ಆಕಾಶದೀಪೋ ದಾತವ್ಯೋ ಮಾಸಮೆಕo ತು ಕಾರ್ತಿಕೇ |
ಕಾರ್ತಿಕೇ ಶುಕ್ಲ ಪೌರ್ಣಿಮ್ಯಾo ವಿಧಿನೋತ್ಸರರ್ಜಯೇಚ್ಚ ತಂ ||
ಮಹಪ್ರಕಾಶವಾದ ದೊಡ್ಡ ದೀಪವನ್ನು ಕಾರ್ತೀಕ ದಾಮೋದರನಿಗೆ ಅರ್ಪಿಸಬೇಕು.
ಕಾರ್ತಿಕಮಾಸವೂ ದೀಪದಾನಕ್ಕೆ ಪ್ರಸಿದ್ದವಾಗಿದೆ. ಪಿತೃಗಳೂ ಕೂಡ
ಕಾರ್ತೀಕಮಾಸದಲ್ಲಿ ದೇವ ದೇವನಿಗೆ ದೀಪವನ್ನು ಬೆಳಗುವ ಕುಲದೀಪಕ ಮಗನಿಗಾಗಿ ಕಾಯುತ್ತಿರುವರು.
ಭವಿಷ್ಯತಿ ಕುಲೇsಸ್ಮಾಕಂ ಪಿತೃಭಕ್ತಃ ಸುಪುತ್ರಕಃ |
ಕಾರ್ತಿಕೇ ದೀಪದಾನೇನ ಯಸ್ತೋಷಯತಿ ಕೇಶವಂ ||
ಕಾರ್ತೀಕದಲ್ಲಿ ತುಪ್ಪದ ದೀಪ, ತೈಲ ದೀಪ, ಆಕಾಶದೀಪ ಇವುಗಳನ್ನು ದೇವರಿಗೆ ಅರ್ಪಿಸಿದವನು ಸ್ವರ್ಗದಲ್ಲಿ ಸುಖಿಸುವನು .ಮೂವತ್ತು ದಿನಗಳು ದೀಪವನ್ನು ಬೆಳಗಬೇಕು .ಸಾಧ್ಯವಿಲ್ಲಡಿದ್ದರೆ ಕಡೆಯ ಐದು ದಿನಗಳಾದರೂ ದೀಪವನ್ನು ಬೆಳಗಬೇಕು . ದೀಪವನ್ನು ಬೆಳಗಲು ಶಕ್ತಿಯಿಲ್ಲದಿದ್ದರೆ ಬೇರೆಯವರು ಹಚ್ಚಿರುವ ದೀಪದ ಕರಿಯನ್ನು ತೆಗೆದು ಉಜ್ವಲಗೊಳಿಸುವುದು ದೀಪವು ಗಳಿಗೆ ಆರದಂತೆ ರಕ್ಷಿಸುವುದರಿಂದಲೂ ಅಕ್ಷಯ ಪುಣ್ಯವಿದೆ.
ದೀಪಮಾರೋಪಯೇತ್ಸಾಯಂ ಕಾರ್ತಿಕೇ ಪ್ರತಿ ವಾಸರಮ್
ನಿವೇದ್ಯ ಪಾಯಸನ್ನಂ ಚ ಸಿದ್ಧಿ ಮಿಷ್ಟಾಮವಾಫ್ನುಯಾತ್
ಕಾರ್ತೀಕಮಾಸದಲ್ಲಿ ಪ್ರತಿನಿತ್ಯವೂ ಪ್ರಾತಃಕಾಲ-ಸಾಯಂಕಾಲ ವಿಶೇಷವಾಗಿ ದೀಪಗಳಿಂದ ತುಳಸಿಯನ್ನು ಉಪಚರಿಸಬೇಕು .ಸಾಯಂಕಾಲ ವಿಶೇಷವಾಗಿ ದೀಪಾರಾಧನೆಯನ್ನು ಮಾಡಬೇಕು.(ತುಪ್ಪದ ದೀಪ ಶ್ರೇಷ್ಠ ಸಾಧ್ಯವಾಗದಿದ್ದಲ್ಲಿ ಎಳ್ಳೆಣ್ಣೆಯಿಂದಲಾದರು ದೀಪವನ್ನು ಬೆಳಗಿಸಬೇಕು)ಪ್ರತಿನಿತ್ಯ ತಪ್ಪದೇ ಇದನ್ನು ವ್ರತವಾಗಿ ಸ್ವೀಕರಿಸಬೇಕು ಮತ್ತು ದೇವರಿಗೆ ನಿವೇದಿಸಿದ ಪಾಯಸಾನ್ನವನ್ನು ಪ್ರತಿ ನಿತ್ಯ ತುಳಸಿಗೆ ನಿವೇದಿಸಬೇಕು ಹೀಗೆ ಕಾರ್ತೀಕಮಾಸದಲ್ಲಿ ತುಳಸಿಗೆ ಪ್ರತಿನಿತ್ಯವೂ ದೀಪಾರಾಧನೆ ಮತ್ತು ಪಾಯಸಾನ್ನದ ನೈವೈದ್ಯದಿಂದ ಇಷ್ಟಾರ್ಥಗಳು ಸಿದ್ಧಿಸುವುವು .
ತುಳಸಿ ಪೂಜೆಯ ಮಹತ್ವ
ಕಾರ್ತಿಕ ಮಾಸವನ್ನು ಅತ್ಯಂತ ಪ್ರಮುಖ ಮಾಸವೆಂದು ಪರಿಗಣಿಸಲಾಗಿದೆ. ಪುರಾಣಗಳ ಪ್ರಕಾರ, ಈ ತಿಂಗಳು ಒಬ್ಬ ವ್ಯಕ್ತಿಗೆ ಸತ್ಯ, ಧರ್ಮ, ಕರ್ಮ ಮತ್ತು ಮೋಕ್ಷವನ್ನು ಒದಗಿಸುತ್ತದೆ. ಈ ಮಾಸದಲ್ಲಿ ತುಳಸಿ ಪೂಜೆ ಅತ್ಯಂತ ಮಂಗಳಕರ. ಇದು ಯಾವುದೇ ಪಾಪಗಳನ್ನು ನಿವಾರಿಸುತ್ತದೆ ಮತ್ತು ಒಬ್ಬ ವ್ಯಕ್ತಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಕಾರ್ತಿಕ ಮಾಸದಲ್ಲಿ ತುಳಸಿ ಗಿಡ ಮತ್ತು ವಿಷ್ಣುವಿನ ಬಳಿ ದೀಪಗಳನ್ನು ಹಚ್ಚುವುದರಿಂದ ವ್ಯಕ್ತಿಯು ಅನೇಕ ಪ್ರಯೋಜನಗಳನ್ನು ಪಡೆಯುತ್ತಾನೆ. ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯು ಅನೇಕ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ.
ತುಳಸಿ ಸಸ್ಯವು ಆಧ್ಯಾತ್ಮಿಕ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ತುಳಸಿಯನ್ನು ಪ್ರತಿಯೊಂದು ಧಾರ್ಮಿಕ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ ತುಳಸಿ ಇಲ್ಲದ ಪೂಜೆ ಅಪೂರ್ಣ ಎಂದು ಹೇಳುತ್ತಾರೆ. ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವೈಷ್ಣವ ತತ್ವಗಳ ಪ್ರಕಾರ, ತುಳಸಿ ವಿವಾಹ ಮತ್ತು ತುಳಸಿ ಪೂಜೆಯನ್ನು ಪ್ರಮುಖ ಹಬ್ಬಗಳೆಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿಯು ಕಾರ್ತಿಕ ಮಾಸದಲ್ಲಿ ಬೇಗನೆ ಏಳಬೇಕು ಮತ್ತು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಬೇಕು. ಈ ನೀರನ್ನು ತುಳಸಿ ಗಿಡಕ್ಕೆ ಸುರಿಯಬೇಕು. ಸಂಜೆ ತುಳಸಿ ಗಿಡದ ಸುತ್ತಲೂ ದೀಪಗಳನ್ನು ಹಚ್ಚುತ್ತಾರೆ. ಇದನ್ನು ಕಾರ್ತಿಕ ಮಾಸದಲ್ಲಿ ಪ್ರತಿದಿನ ಮಾಡಬೇಕು. ಕಾರ್ತಿಕ ಮಾಸದ ಪೂರ್ಣಿಮೆಯಂದು ದೀಪಗಳನ್ನು ದಾನ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.
,ಎಳ್ಳೆಣ್ಣೆ-ತುಪ್ಪದ ದೀಪ ಹಚ್ಚುವುದರ ಫಲಗಳು
ಕಣ್ಣುಗಳಿಗೆ ಆಹ್ಲಾದತೆ ಉಂಟಾಗುತ್ತೆ.
-ದೃಷ್ಟಿ ದೋಷಗಳು ದೂರವಾಗುತ್ತವೆ.
-ಚಳಿಯ ವಾತಾವರಣದಿಂದ ಕಾಡುವ ಶ್ವಾಸಕೋಶ ವ್ಯಾಧಿಗಳು ದೂರವಾಗುತ್ತವೆ.
-ಚಳಿಗಾಲದಲ್ಲಿ ಹೆಚ್ಚುವ ಕ್ರಿಮಿಕೀಟಗಳು ನಶಿಸುತ್ತವೆ.
Comments