ನಮ್ಮ ಸನಾತನ ಹಿಂದೂ ಧರ್ಮದ ಪುರಾಣಗಳಲ್ಲಿ ಹಾಗೂ ಬೃಹದರಣ್ಯಕ ಉಪನಿಷತ್‌ನಲ್ಲಿ ಹೇಳಿರುವ ಸಪ್ತ ಋಷಿಗಳು ಯಾರು? ಸಪ್ತ ಅಂದರೆ 7.
ನಮ್ಮಲ್ಲಿ ಹೆಚ್ಚಿನವರು ಸಪ್ತ ಋಷಿಗಳ ಹೆಸರನ್ನ ಕೇಳಿರುತ್ತಾರೆ. ಆದರೆ ಸಪ್ತ ಋಷಿಗಳು ಯಾರು..? ಅವರ ಕರ್ತವ್ಯ..? ಏನು ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಸಪ್ತ ಋಷಿಗಳೆಂದರೆ ವೈದಿಕ ಕ್ಷೇತ್ರದ 7 ಶ್ರೇಷ್ಟ ಋಷಿಗಳು. ಅವರು ಯೋಗದ ತಪಸ್ಸಿನ ಶಕ್ತಿಯಿಂದ ದೀರ್ಘಾಯುಷ್ಯವನ್ನು ಹೊಂದಿದವರು. ಈ 7 ಋಷಿಗಳನ್ನು ಅಮರರು ಎನ್ನಲಾಗುತ್ತದೆ. ಭೂಮಿಯ ಮೇಲಿನ ಸಮತೋಲನವನ್ನು ಕಾಪಾಡಿಕೊಳ್ಳಲು, ಮಾನವರಿಗೆ ಮಾರ್ಗದರ್ಶನ ನೀಡಲು, ಭಗವಂತನ ಸಂಕಲ್ಪದಂತೆ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಅವರನ್ನು ಭೂಮಿಯಲ್ಲಿ ನೇಮಿಸುತ್ತಾರೆ. ಬೃಹದರಣ್ಯಕ ಉಪನಿಷತ್‌ನ ಪ್ರಕಾರ, ಪ್ರಸ್ತುತ ಮನ್ವಂತರದ ಸಪ್ತ ಋಷಿಗಳು ಅಥವಾ 7 ಋಷಿಗಳು ಇಲ್ಲಿದ್ದಾರೆ.
ಪ್ರತಿ ಮಹಾಯುಗದಲ್ಲಿಯೂ ಬೇರೆ ಬೇರೆ ಸಪ್ತಋಷಿಗಳು ಬರುತ್ತಾರೆ.
ಹಾಗಾದರೆ ಸಪ್ತ ಋಷಿಗಳ ಬಗ್ಗೆ ತಿಳಿದುಕೊಳ್ಳೋಣ
ಕಶ್ಯಪ ಮಹರ್ಷಿಗಳು
ಕಶ್ಯಪ – ತಂದೆ = ಮರೀಚಿ – ಪತ್ನಿಯರು = ದಿತಿ, ಅದಿತಿ, ಇತ್ಯಾದಿ – ಮಕ್ಕಳು = ಹಿರಣ್ಯಕಶಿಪು, ವಾಮನ, ಇಂದ್ರ, ಇತ್ಯಾದಿ.ಕಶ್ಯಪ ಮಹರ್ಷಿಗಳು ಅತ್ಯಂತ ಜನಪ್ರಿಯ ಹಾಗೂ ಪ್ರಾಚೀನ ಋಷಿಗಲು ಮತ್ತು ಸಪ್ತಋಷಿಗಳಲ್ಲಿ ಒಬ್ಬರಾಗಿದ್ದರು. ಕಶ್ಯಪ ಮಹರ್ಷಿಗಳು ಋಷಿ ಮಾರೀಚಿಯ ಮಗ ಮತ್ತು ಬ್ರಹ್ಮನ ಮೊಮ್ಮಗ. ಕಶ್ಯಪ ಮಹರ್ಷಿಗಳು ದೇವರ, ಅಸುರರ, ನಾಗರ, ಗರುಡರ, ವಾಮನ, ಅಗ್ನಿ, ಆದಿತ್ಯ, ದೈತ್ಯರ, ಆರ್ಯಮಾನ್‌ರ, ಮಿತ್ರ, ಪುಸಾನ, ವರುಣ ಮತ್ತು ಎಲ್ಲಾ ಮಾನವೀಯತೆಯ ತಂದೆ ಎಂದು ಹೇಳಲಾಗುತ್ತದೆ. ಕಶ್ಯಪ ಮಹರ್ಷಿಗಳು ಕಶ್ಯಪ ಸಂಹಿತೆಯ ಲೇಖಕರಾಗಿದ್ದರು. ಬ್ರಹ್ಮನ ಸೃಷ್ಟಿ ಕರ್ತವ್ಯದಲ್ಲಿ ಕಶ್ಯಪನ ಪಾತ್ರ ಮಹತ್ತರವಾದುದ್ದಾಗಿದೆ.
ಅತ್ರಿ ಮಹರ್ಷಿಗಳು
ಅತ್ರಿ – ತಂದೆ = ಚತುರ್ ಮುಖ ಬ್ರಹ್ಮ ದೇವ – ಪತ್ನಿ = ಅನುಸೂಯಾ – ಮಕ್ಕಳು = ದತ್ತ, ಸೋಮ, ದೂರ್ವಾಸ.
ಅತ್ರಿ ಮಹರ್ಷಿ ಕೂಡ ಬ್ರಹ್ಮ ದೇವನ ಮಗ ಹಾಗೂ ಮನ್ವಂತರದ ಸಪ್ತ ಋಷಿಗಳಲ್ಲಿ ಒಬ್ಬರು. ಪವಿತ್ರ ದಾರಗಳನ್ನು ಪ್ರತಿಪಾದಿಸಿದ ಋಷಿಗಳಲ್ಲಿ ಇವರೂ ಕೂಡ ಒಬ್ಬರು. ಅನುಸೂಯಾ ಅತ್ರಿ ಮಹರ್ಷಿಗಳ ಪತ್ನಿಯಾಗಿದ್ದಳು. ಅತ್ರಿಯವರನ್ನು ಪವಿತ್ರ ಮಂತ್ರಗಳ ಮಹಾನ್ ಅನ್ವೇಷಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ವನವಾಸದಲ್ಲಿದ್ದ ಶ್ರೀರಾಮನು ಇವರ ಆಶ್ರಮಕ್ಕೆ ಬಂದಾಗ ಅನೇಕ ಧರ್ಮರಹಸ್ಯಗಳನ್ನು ಶ್ರೀರಾಮನಿಗೆ ಬೋಧಿಸಿದ್ದರು. ಅಷ್ಟು ಮಾತ್ರವಲ್ಲ ಕೆಲವು ಕಾಲಗಳವರೆಗೆ ಬ್ರಹ್ಮರ್ಷಿ ಪಟ್ಟದಲ್ಲೂ ಕೂಡ ಕುಳಿತಿದ್ದರು. ಅತ್ರಿ ಮಹರ್ಷಿಗಳು ಅತ್ರಿ ಸಂಹಿತಾ ಮತ್ತು ಅತ್ರಿ ಸ್ಮೃತಿ ಎನ್ನುವ ಎರಡು ಮಹಾನ್ ಕೃತಿಗಳನ್ನು ಬರೆದಿದ್ದರು
ಭರದ್ವಜ ಋಷಿಗಳು
ಭರದ್ವಜ ಋಷಿ- ತಂದೆ = ಗುರು ಬ್ರಹಸ್ಪತಿ – ಪತ್ನಿ = ಸುಶೀಲ – ಮಕ್ಕಳು = ದ್ರೋಣಾಚಾರ್ಯ.
ಭರಧ್ವಜ ಋಷಿಗಳು ವೈಧಿಕ ಕಾಲದ ಶ್ರೇಷ್ಠ ಋಷಿಗಳಲ್ಲೊಬ್ಬರಾಗಿದ್ದರು ಮತ್ತು ಇವರು ಅಂಗೀರಸ ಮುನಿಯವರ ವಂಶಸ್ಥರಾಗಿದ್ದರು. ಭರಧ್ವಜ ಋಷಿಗಳ ತಂದೆ ದೇವಋಷಿ ಬೃಹಸ್ಪತಿ. ಋಷಿ ಭರಧ್ವಜರನ್ನು ಆಯುರ್ವೇದದ ಲೇಖಕ ಎಂದು ಪರಿಗಣಿಸಲಾಗುತ್ತದೆ. ಭರಧ್ವಜ ಋಷಿಗಳು ದ್ರೋಣಾಚಾರ್ಯರ ತಂದೆ ಹಾಗೂ ಇವರ ಆಶ್ರಮವನ್ನು ಇಂದಿಗೂ ನಾವು ಅಲಹಾಬಾದ್‌ನಲ್ಲಿ ನೋಡಬಹುದು. ಭರಧ್ವಜ ಋಷಿಗಳು ದೇವಸ್ತ್ರಗಳ ಹಾಗೂ ಯುದ್ಧ ಕಲೆಯ ಪ್ರವೀಣರಾಗಿದ್ದರು. ಭರಧ್ವಜ ಋಷಿಗಳ ಪತ್ನಿ ಸುಸೀಲಾ ಹಾಗೂ ದೇವವರ್ಣಿನಿ ಎನ್ನುವ ಮಗಳು ಮತ್ತು ಗರ್ಗಾ ಎನ್ನುವ ಮಗನಿದ್ದನು. ದ್ರೋಣಾಚಾರ್ಯರು ಅಪ್ಸರ ಮತ್ತು ಭರಧ್ವಜ ಋಷಿಗಳ ಮಗನಾಗಿದ್ದಾನೆ. ಕೆಲವು ಪುರಾಣಗಳ ಪ್ರಕಾರ, ಭರಧ್ವಜ ಋಷಿಯು ಗಂಗಾ ನದಿಯ ದಡದಲ್ಲಿ ಭರತ ಎನ್ನುವ ರಾಜನಿಗೆ ಸಿಕ್ಕಿದನು. ಅಲ್ಲಿಂದ ಆತನನ್ನು ಭರತ ರಾಜನು ದತ್ತುಮಗನಾಗಿ ಸಾಕಿದನೆಂದು ಹೇಳಲಾಗುತ್ತದೆ.
ವಿಶ್ವಾಮಿತ್ರ ಮುನಿಯು
ವಿಶ್ವಾಮಿತ್ರ – ತಂದೆ = ಗಾಧಿರಾಜ – ಪತ್ನಿ = ಕುಮುಧ್ವತಿ.
ಸಪ್ತ ಋಷಿಗಳಲ್ಲಿ ವಿಶ್ವಾಮಿತ್ರ ಮುನಿಯು ಅತ್ಯಂತ ಪ್ರಸಿದ್ಧ ಋಷಿಯಾಗಿದ್ದರು. ಗಾಯತ್ರಿ ಮಂತ್ರವನ್ನು ಕಂಡುಹಿಡಿದ ವೇದಗಳ ಕಾಲದ ಪ್ರಮುಖ ಋಷಿಮುನಿಗಳಲ್ಲಿ ವಿಶ್ವಾಮಿತ್ರರು ಒಬ್ಬರಾಗಿದ್ದಾರೆ. ಬ್ರಹ್ಮರ್ಷಿಯ ಮಟ್ಟಕ್ಕೆ ಏರಲು ಕೇವಲ ಆತನ ಅರ್ಹತೆ ಮಾತ್ರವಲ್ಲ, ಅದಕ್ಕೆ ಬ್ರಹ್ಮ ದೇವನ ಅನುಮತಿಯೂ ಬೇಕಾಗುತ್ತದೆ. ಆದರೆ ವಿಶ್ವಾಮಿತ್ರರ ವಿಷಯದಲ್ಲಿ ಇದು ಸುಳ್ಳಾಗಿದೆ. ವಿಶ್ವಾಮಿತ್ರರು ಕೇವಲ ತಮ್ಮ ಸ್ವ ಅರ್ಹತೆಯಿಂದ ಬ್ರಹ್ಮರ್ಷಿಗಳಾದವರು.
ವಸಿಷ್ಠರೊಂದಿಗಿನ ವಿಶ್ವಾಮಿತ್ರರ ಹೋರಾಟ ಗಣನೀಯವಾಗಿದೆ. ವಿಶ್ವಾಮಿತ್ರರು ಬ್ರಾಹ್ಮಣರಾಗಿರಲಿಲ್ಲ. ಬದಲಾಗಿ ಇವರು ಕ್ಷತ್ರಿಯ ಧರ್ಮದಲ್ಲಿ ಜನಿಸಿದವರಾಗಿದ್ದರು. ಒಮ್ಮೆ ವಿಶ್ವಾಮಿತ್ರರ ನಡುವೆ ಮತ್ತು ವಸಿಷ್ಠರ ನಡುವೆ ಹೋರಾಟ ನಡೆದಾಗ ವಿಶ್ವಾಮಿತ್ರರು ಇದರಲ್ಲಿ ಸೋಲನ್ನು ಅನುಭವಿಸುತ್ತಾರೆ. ವಸಿಷ್ಠರ ವಿರುದ್ಧದ ಸೋಲಿನಿಂದ ವಿಶ್ವಾಮಿತ್ರರು ತಪಸ್ಸಿನಿಂದ ಪಡೆದ ಶಕ್ತಿಯು ದೈಹಿಕ ಶಕ್ತಿಗಿಂತ ಮಿಗಿಲಾದದ್ದು ಎಂದು ಅರಿತುಕೊಂಡರು. ಆಗ ವಿಶ್ವಾಮಿತ್ರರು ತನ್ನ ರಾಜ್ಯವನ್ನು ದಾನ ಮಾಡಿ ವಸಿಷ್ಢರಿಗಿಂತಲೂ ದೊಡ್ಡ ಋಷಿಯಾಗಬೇಕೆಂದು ಹೊರಡುತ್ತಾರೆ. ಅಂದಿನಿಂದ ಅವರ ವಿಶ್ವಾಮಿತ್ರ ಎನ್ನುವ ಹೆಸರನ್ನು ಪಡೆದರು. ವಿಶ್ವಾಮಿತ್ರರ ಮೂಲ ಹೆಸರು ಕೌಶಿಕ. ಸಾವಿರಾರು ವರ್ಷಗಳ ಕಠಿಣ ತಪಸ್ಸಿನಿಂದ, ಜ್ಞಾನದಿಂದ, ಪ್ರಯೋಗಗಳಿಂದ ಕೊನೆಗೂ ವಿಶ್ವಾಮಿತ್ರರು ಬ್ರಹ್ಮ ಮತ್ತು ವಸಿಷ್ಠರಿಂದ ಬ್ರಹ್ಮರ್ಷಿ ಎನ್ನುವ ಬಿರುದನ್ನು ಪಡೆದುಕೊಂಡರು.
ಗೌತಮ ಮಹರ್ಷಿಗಳು
ಗೌತಮ – ತಂದೆ = ಮಹಾರಾಜ ರಹೋಗಣ – ಪತ್ನಿ = ಅಹಲ್ಯಾ – ಮಕ್ಕಳು = ವಾಮದೇವ,
ಮಹರ್ಷಿ ಗೌತಮರು ಸಪ್ತ ಋಷಿಗಳಲ್ಲಿ ಒಬ್ಬರು ಹಾಗೂ ಇವರು ಅಂಗೀರಸ ವಂಶಕ್ಕೆ ಸೇರಿದವರಾಗಿದ್ದರು. ಗೌತಮ ಮಹರ್ಷಿಗಳು ಗವತಮ ಧರ್ಮ ಸೂತ್ರವನ್ನು, ಋಗ್ವೇದದ ಮತ್ತು ಸಾಮವೇದದ ಮಂತ್ರಗಳನ್ನು ಬರೆದಿದ್ದಾರೆ. ಗೌತಮ ಮುನಿಗಳು ಬ್ರಹ್ಮ ದೇವನ ಮಗಳಾದ ಅಹಲ್ಯಾಳನ್ನು ವಿವಾಹವಾಗುತ್ತಾರೆ. ಬ್ರಹ್ಮನು ಸೂಕ್ತ ಸಮಯದಲ್ಲಿ ಯಾರು ಭೂಮಿಯನ್ನು ಸುತ್ತುತ್ತಾರೋ ಅವರಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುವುದಾಗಿ ಘೋಷಿಸುತ್ತಾನೆ. ಆಗ ಎಲ್ಲಾ ಋಷಿ, ಮುನಿಗಳು ಷರತ್ತನ್ನು ಗೆಲ್ಲಲು ಮುಂದಾಗುತ್ತಾರೆ ಆದರೆ ಗೌತಮ ಮಹರ್ಷಿಗಳು ಒಂದು ದೈವಿಕ ಹಸುವಿನ ಸುತ್ತಲೂ ಸುತ್ತುತ್ತಾರೆ. ಆಗ ಅವರ ಬುದ್ಧಿವಂತಿಕೆಯನ್ನು ಹಾಗೂ ಷರತ್ತಿನಲ್ಲಿ ಗೆಲುವನ್ನು ನೋಡಿದ ಬ್ರಹ್ಮನು ತನ್ನ ಪುತ್ರಿ ಅಹಲ್ಯಾಳನ್ನು ಗೌತಮ ಮುನಿಗಳಿಗೆ ವಿವಾಹ ಮಾಡಿಕೊಡುತ್ತಾರೆ. ಗೌತಮ ಋಷಿ ಅಹಂಕಾರವಿಲ್ಲದ ವ್ಯಕ್ತಿ. ದೇಶದಲ್ಲಿ ಬರಗಾಲ ಬಂದಾಗ ಅವರು ಮಳೆಗಾಗಿ ವರುಣ ದೇವನನ್ನು ಕಠಿಣ ಧ್ಯಾನದ ಮೂಲಕ ಒಲಿಸಿಕೊಂಡು ಜನರನ್ನು ಬರಗಾಲದಿಂದ ಮುಕ್ತಿಗೊಳಿಸಿದವರು.
ಜಮದಗ್ನಿ
ಜಮದಗ್ನಿ – ತಂದೆ = ಭೃಗು – ಹೆಂಡತಿ = ರೇಣುಕಾ – ಮಕ್ಕಳು = ಪರಶುರಾಮ
ಜಮದಗ್ನಿಯು ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ತಂದೆ.ಜಮದಗ್ನಿ ಋಷಿಯು ಬ್ರಹ್ಮನು ಸೃಷ್ಟಿಸಿದ ಪ್ರಜಾಪತಿಗಳಲ್ಲಿ ಒಬ್ಬರಾದ ಭೃಗು ಮಹರ್ಷಿಯ ವಂಶಸ್ಥರು.ರೇಣುಕಾ ಜಮದಗ್ನಿಯ ಪತ್ನಿ.ರೇಣುಕೆಯು ತನ್ನ ಪಾತಿವ್ರತ್ಯದ ಶಕ್ತಿಯಿಂದ ಮರಳಿನಲ್ಲಿ ಮಡಿಕೆಯನ್ನು ಮಾಡಿಕೊಂಡು,
ಜಮದಗ್ನಿಗಳ ಪೂಜಾದಿಗಳಿಗೆ ನಿರನ್ನು ತರುತ್ತಿದ್ದಳು.ಒಮ್ಮೆ ಕೊಳದಿಂದ ನೀರನ್ನು ತರಲು ಹೋದಾಗ ರಾಸಕ್ರೀಡೆ ಆಡುತ್ತಿದ್ದ ಗಂಧರ್ವ ದಂಪತಿಗಳನ್ನು ನೋಡಿ ಆಕೆಯ ಮನಸ್ಸು ವಿಚಲಿತಗೊಂಡು ಗಂಧರ್ವರತ್ತ ಆಕರ್ಷಿತವಾಗುತ್ತದೆ. ಇದರಿಂದಾಗಿ ಆಕೆಯ ಕೈಯಲ್ಲಿದ್ದ ಮರಳಿನ ಮಡಕೆಯು ಕರಗಿ ನೀರು ತರಲಾಗಲಿಲ್ಲ.ಇದನ್ನು ತನ್ನ ಧ್ಯಾನ ಶಕ್ತಿಯಿಂದ ಅರಿತ ಜಮದಗ್ನಿಯು ತನ್ನ ಮಕ್ಕಳನ್ನು ಕರೆದು ತಾಯಿಯನ್ನು ಕೊಲ್ಲಲು ಹೇಳಿದರು.
ಆದರೆ ಯಾವ ಮಕ್ಕಳು ಮಾತೃಹತ್ಯೆ,
ಸ್ತ್ರೀಹತ್ಯೆ ಮಹಾಪಾತಕವೆಂದು ತಾಯಿಯನ್ನು ಕೊಲ್ಲಲು ಒಪ್ಪುವುದಿಲ್ಲ.ಆಗ ಜಮದಗ್ನಿಯ ಮಕ್ಕಳಲ್ಲಿ ಒಬ್ಬನಾದ ಪರಶುರಾಮನು ತಂದೆಯ ಮಾತಿಗೆ ಬೆಲೆಕೊಟ್ಟು ತಾಯಿಯ ಶಿರಚ್ಛೇದ ಮಾಡಿದನು.ಜಮದಗ್ನಿಯು ತನ್ನ ಉಳಿದ ಮಕ್ಕಳು ತನ್ನ ಮಾತನ್ನು ನಿರಾಕರಿಸಿದರೆಂದು ಮಕ್ಕಳನ್ನೇ ತಪಶ್ಯಕ್ತಿಯಿಂದ ಭಸ್ಮ ಮಾಡಿ,ಜಮದಗ್ನಿಯ ಪಿತೃಭಕ್ತಿಗೆ ಮೆಚ್ಚಿ ವರವನ್ನು ಕೇಳು ಎಂದಾಗ,
"ತನ್ನ ಸೋದರರು ಜೀವತಳೆಯಲಿ, ತಾಯಿಯು ಬದುಕಲಿ,
ಮತ್ತು ಅವರೆಲ್ಲರಿಗೆ ಈಗಿನ ಯಾವ ಪ್ರಸಂಗವೂ ನೆನಪಿಗೆ ಬಾರದಿರಲಿ" ಎಂದು ವರ ಕೇಳಿದನು.
ಜಮದಗ್ನಿಯ ತಥಾಸ್ತು ಎಂದು ಮೃತರಾದವರೆಲ್ಲ ಜೀವ ತಳೆದು ನಿಂತರು.
ತನ್ನ ಜಾಣತನದಿಂದ ತಾಯಿಯನ್ನು ಬದುಕಿಸುವಂತೆ ವರಕೇಳಿ ಸ್ತ್ರೀಹತ್ಯೆ,ಮಾತೃಹತ್ಯೆ,ಬ್ರಹ್ಮಹತ್ಯೆಯ ಪಾತಕಗಳಿಂದ ಮುಕ್ತನಾದನು.
21 ಸಾರಿ ಭೂಪ್ರದಕ್ಷಿಣೆ ಮಾಡಿ,
ದುಷ್ಟ ಕ್ಷತ್ರಿಯರನ್ನೆಲ್ಲ ಸಂಹರಿಸಿ,
ಜಯಿಸಿದ ಭೂಮಿಯನ್ನು ಕಶ್ಯಪ ಮಹರ್ಷಿಗೆ ದಾನ ಮಾಡಿ,ತನಗೆ ನೆಲೆ ನಿಲ್ಲಲೆಂದು ಸಮುದ್ರರಾಜನಿಂದ ಭೂಮಿಯನ್ನು ಕೇಳಿದಾಗ,
ಸಮುದ್ರರಾಜನನು ದಕ್ಷಿಣಕನ್ನಡದ ದಡದಿಂದ ಕೇರಳದವರೆಗೂ ಹಿಂದೆಸರಿದು ಭೂಮಿಯನ್ನು ಕೊಟ್ಟನು.
ಪರಶುರಾಮರು ದಕ್ಷಿಣಕನ್ನಡದ ಕರಾವಳಿಯಲ್ಲಿ ನೆಲೆಸಿ ಅಲ್ಲಿಯೇ ತಪೋಮಗ್ನರಾದರು.
ಇದರಿಂದಾಗಿಯೇ ಕರಾವಳಿ ತೀರದ ಭೂಮಿಗೆ ಪರಶುರಾಮಕ್ಷೇತ್ರ ಎಂಬ ಹೆಸರು ಬಂದಿತು.
ಈಗಲೂ ಪರಶುರಾಮರು ಅಲ್ಲಿ ತಪಸ್ಸು ಮಾಡುತ್ತದ್ದಾರೆಂಬ ನಂಬಿಕೆ ಇದೆ.
ವಶಿಷ್ಠ ಮುನಿಗಳು
ವಶಿಷ್ಠ – ತಂದೆ = ಚತುರ್ ಮುಖ ಬ್ರಹ್ಮ ದೇವ – ಪತ್ನಿ = ಅರುಂದತಿ – ಮಕ್ಕಳು = ಶಕ್ತಿ.
ವಸಿಷ್ಠ ಋಷಿಗಳು ವಸಿಷ್ಠ ಋಷಿಗಳು ಬ್ರಹ್ಮದೇವರ ಮಾನಸಪುತ್ರರಲ್ಲಿ ಒಬ್ಬರು. ಕಶ್ಯಪ ಋಷಿಗಳು ಮತ್ತು ಅದಿತಿ ದೇವಿಯರಲ್ಲಿ ಮಿತ್ರ ಮತ್ತು ವರುಣ ಎಂಬ ಅವಳಿ ದೇವತೆಗಳು ಜನಿಸಿದರು, ಈ ಮಿತ್ರ ವರುಣ ದೇವತೆಗಳಿಗೆ ದೈವೀಕರೀತಿಯಿಂದ ಊರ್ವಶಿಯ ಕಾರಣದಿಂದ ಜನಿಸಿದ ಮಕ್ಕಳೇ ಕ್ರಮವಾಗಿ ಅಗಸ್ಯ ಋಷಿಗಳು ಮತ್ತು ವಸಿಷ್ಠ ಋಷಿಗಳು.
ವಸಿಷ್ಠರ ಪತ್ನಿ ಅರುಂಧತಿ. ಕರ್ದಮ ಪ್ರಜಾಪತಿ ದೇವಹೂತಿಯ ಮಗಳು, ಕಪಿಲ ನಾಮಕ ಪರಮಾತ್ಮನ ಸಹೋದರಿ. ವಸಿಷ್ಠ ಮತ್ತು ಅರುಂಧತಿ ದಂಪತಿಗಳಿಗೆ ಅನೇಕ ಜನ ಮಕ್ಕಳಿದ್ದರು. ಇವರಲ್ಲಿ ಅತ್ಯಂತ ಪ್ರಸಿದ್ಧರಾದವರು ಶಕ್ತಿ ಋಷಿಗಳು.
ವೇದಮಂತ್ರ ದ್ರಷ್ಟಾರ ಋಷಿಗಳಲ್ಲಿ ವಸಿಷ್ಠರು ಅಗ್ರಗಣ್ಯರಾಗಿದ್ದ ರೆ. ಋಗ್ವದದ ಅನೇಕ ಸೂಕ್ತಗಳಿಗೆ ವಸಿಷ್ಠ ಮಹರ್ಷಿಗಳು ದ್ರಷ್ಟಾರರಾಗಿದ್ದಾರೆ. ಸೂರ್ಯವಂಶದ ರಾಜಗುರುಗಳಾಗಿದ್ದವರು ಈ ವಸಿಷ್ಠ ಮಹರ್ಷಿಗಳು, ಮುಂದೆ ಇದೇ ಸೂರ್ಯವಂಶದ ಇಕ್ಷಾಕು ಕುಲದಲ್ಲಿ ಸ್ವಯಂ ಭಗವಂತನೇ ಶ್ರೀರಾಮಚಂದ್ರನಾಗ ೆ ಅವತಾರ ಮಾಡಿದಾಗ ಲೋಕ ನಿಯಮಕ್ಕೆ ಅನುಗುಣವಾಗಿ, ಸಾಕ್ಷಾತ್ ಶ್ರೀರಾಮಚಂದ್ರ ದೇವರಿಗೂ ಮಾರ್ಗದರ್ಶಕರಾಗಿದ ದವರು ಈ ವಸಿಷ್ಠ ಮಹರ್ಷಿಗಳು, ಧಿಗ್ನಲಂ ಕ್ಷತ್ರಿಯಬಲಂ ಬ್ರಹ್ಮ ತೇಜೋ ಬಲಂ ಬಲಂ - ಸರ್ವ ರೀತಿಯಿಂದಲೂ ವಸಿಷ್ಠರನ್ನು ಸೋಲಿಸಲು ಪ್ರಯತ್ನಿಸಿ ಕೊನೆಗೂ ಸಾಧ್ಯವಾಗದೆ ನಂತರ ವಿಶ್ವಾಮಿತ್ರರ ಬಾಯಿಂದ ಬಂದ ಮಾತಿದು. ಇದರಿಂದಲೇ ವಸಿಷ್ಠರ ಅನುಷ್ಠಾನ, ತಪಸ್ಸಾಮರ್ಥ್ಯಗಳು ಯಾವ ಮಟ್ಟದಲ್ಲಿ ಇದ್ದವೆಂದು ಊಹಿಸಬಹುದು.
ವಸಿಷ್ಠ ಮಹರ್ಷಿಗಳು ಅನೇಕ ಗ್ರಂಥಗಳನ್ನು ಕೂಡ ರಚಿಸಿದ್ದಾರೆ. ಅವುಗಳಲ್ಲಿ ಯೋಗವಾಸಿಷ್ಠ, ವಸಿಷ್ಠ ಸ್ಮೃತಿ, ವಸಿಷ್ಠ ಕಲ್ಪ, ವಸಿಷ್ಠ ಧರ್ಮಸೂತ್ರ ವಸಿಷ್ಠ ಶಿಕ್ಷಾ, ವಸಿಷ್ಠ ಸಂಹಿತಾ ಮುಂತಾದವುಗಳು ಪ್ರಧಾನ ಗ್ರಂಥಗಳಾಗಿವೆ.
ವಸಿಷ್ಠ ಮಹರ್ಷಿಗಳಿಂದ ಬಂದ ಗೋತ್ರವೇ ವಸಿಷ್ಠ ಗೊತ್ರ, ಹೀಗೆ ಗೋತ್ರ ಪ್ರವರ್ತಕರಾಗಿಯೂ ವಸಿಷ್ಠ ಮಹರ್ಷಿಗಳು ಪ್ರಸಿದ್ಧರಾಗಿದ್ದ ಾರೆ. ವಸಿಷ್ಠ ಅರುಂಧತಿಯರದ್ದು ಆದರ್ಶ ದಾಂಪತ್ಯ, ಅದಕ್ಕಾಗಿ ಇಂದಿಗೂ ನೂತನ ವಧೂವರರು ವಸಿಷ್ಠ ಅರುಂಧತಿ ನಕ್ಷತ್ರಗಳನ್ನು ದರ್ಶಿಸಿ ಆಶೀರ್ವಾದ ಪಡೆದುಕೊಳ್ಳುವ ಸಂಪ್ರದಾಯ ಬೆಳೆದು ಬಂದಿದೆ.
.
Comments