ವಿಷ್ಣು ಸಹಸ್ರನಾಮದ ಮಹತ್ವ
ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಆಗುವ ಲಾಭಗಳು.
ಪ್ರತಿದಿನ ವಿಷ್ಣು ಸಹಸ್ರನಾಮ ಪಠಣೆ ಮಾಡುವುದರಿಂದ ಮತ್ತು ಶ್ರವಣ ಮಾಡುವುದರಿಂದ ಭಯ ದೂರವಾಗುತ್ತದೆ ಮತ್ತು ಗುರಿಯನ್ನು ಸಾಧಿಸುವ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಮನಸ್ಸು ಏಕಾಗ್ರತೆಯಿಂದ ಇರುತ್ತದೆ. ಒತ್ತಡ ನಿವಾರಣೆಯಾಗುತ್ತದೆ.
ಸಹಸ್ರನಾಮವನ್ನು ನಿತ್ಯ ಪಾರಾಯಣ ಮಾಡುವುದರಿಂದ ದೈಹಿಕ ಮಾನಸಿಕ ಸಮಸ್ಯೆಗಳು ನಮ್ಮಿಂದ ದೂರವಾಗುತ್ತದೆ
ವಿಷ್ಣು ಸಹಸ್ರನಾಮದಲ್ಲಿ ಬರುವ ಪ್ರತಿಯೊಂದು ನಾಮಕ್ಕೂ ನೂರು ಅರ್ಥಗಳು ಇವೆ .
ಇಲ್ಲಿ ಸಹಸ್ರ ಅಂದರೆ ಒಂದು ಸಾವಿರ ಮಾತ್ರ ಅಲ್ಲ ಸಹಸ್ರ ಅಂದರೆ ಸಾವಿರ ಸಾವಿರ ಅದು ಎಷ್ಟು ಸಾವಿರ ಅಂತ ಇಲ್ಲಿಯೂ ಉಲ್ಲೇಖ ಇಲ್ಲ.
ವಿಷ್ಣು ಸಹಸ್ರನಾಮ ಯಾರು ಯಾರಿಗೆ ಹೇಳಿದರು.
ಮಹಾಭಾರತದಲ್ಲಿ
ಕೃಷ್ಣ ಪಾಂಡವರಿಗೆ ಹೇಳುತ್ತಾನೆ ಭೀಷ್ಮ ಪಿತಾಮಹರ ಹತ್ತಿರ ಜಗತ್ತಿಗೆ ಬೇಕಾಗುವಂತಹ ಜ್ಞಾನದ ಬೆಳಕು ಇದೆ ಹೋಗಿ ನೀವು ಅದನ್ನು ಪಡೆದುಕೊಳ್ಳಿ ಎಂದು ಮಹಾಭಾರತದ ಅನುಶಾಸನಪರ್ವದ 135ನೇ ಅಧ್ಯಾಯದಲ್ಲಿ (ಶ್ಲೋಕಗಳು 14 ರಿಂದ 120) ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಮರಣಶಯ್ಯೆಯಲ್ಲಿದ್ದ ಸರಶೈವದ ಮೇಲೆ ಮಲಗಿರುವ ಕುರುವಂಶದ ಯೋಧ ಭೀಷ್ಮಪಿತಾಮಹರು ಯುಧಿಷ್ಠಿರನಿಗೆ ಸ್ತೋತ್ರವನ್ನು ನೀಡಲಾಯಿತು ಯುಧಿಷ್ಠಿರನು ಭೀಷ್ಮಾಚಾರ್ಯರಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಾನೆ: ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಮ್ ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಃ ಶುಭಮ್
ಕೋ ಧರ್ಮಃ ಸರ್ವ ಧರ್ಮಾಣಾಂ ಭವತಃ ಪರಮೋ ಮತಃ
ಕಿಂ ಜಪಾನ್ ಮುಚ್ಯತೇ ಜನ್ತುಃ ಜನ್ಮಸಂಸಾರಬನ್ಧನಾತ್
ಈ ಜಗತ್ತಿನಲ್ಲಿ ಎಲ್ಲರಿಗೂ ಒಬ್ಬನೇ ಆಶ್ರಯ ಯಾರು? ಜಗತ್ತಿನಲ್ಲೇ ಶ್ರೇಷ್ಠ ದೈವ ಯಾರು? ಯಾರನ್ನು ಸ್ತುತಿಸುವುದರಿಂದ ಒಬ್ಬ ವ್ಯಕ್ತಿಯು ಆನಂದ ಭಯ ಜೀವನವನ್ನು ಪಡೆಯಬಹುದು? ಯಾರನ್ನು ಪೂಜಿಸುವುದರಿಂದ ಒಬ್ಬ ವ್ಯಕ್ತಿಯು ಐಶ್ವರ್ಯವನ್ನು ಸಕಲ ಐಶ್ವರ್ಯಗಳನ್ನು ಪಡೆಯಬಹುದು? ನಿಮ್ಮ ಅಭಿಪ್ರಾಯದಲ್ಲಿ ಎಲ್ಲಾ ಧರ್ಮಗಳಲ್ಲಿ ಶ್ರೇಷ್ಠವಾದ ಧರ್ಮ ಯಾವುದು? ಯಾರ ಹೆಸರನ್ನು ಜಪಿಸುವುದರಿಂದ ಜೀವಿಯು ಸಂಸಾರದ ಬಂಧನಗಳಿಂದ ಮುಕ್ತಿ ಹೊಂದಬಹುದು?
ಯಾರ ಸ್ಮರಣೆ ಮಾಡುವುದರಿಂದ ಜ್ಞಾನದ ಬೆಳಕನ್ನ ಪಡೆಯಬಹುದು?
ಆಗ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮಾಚಾರ್ಯರು ಉತ್ತರಿಸುತ್ತಾರೆ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಮನುಕುಲವು ಎಲ್ಲಾ ದುಃಖಗಳಿಂದ ಮುಕ್ತವಾಗುತ್ತದೆ ಎಂದು ಹೇಳುವ ಮೂಲಕ ಉತ್ತರವನ್ನು ಕೊಡುತ್ತಾರೆ, ಅದು ಸರ್ವವ್ಯಾಪಿಯಾದ ಪರಮಾತ್ಮನಾದ ವಿಷ್ಣುವಿನ ಸಾವಿರ ನಾಮಗಳು, ಎಲ್ಲ ಲೋಕಗಳ ಒಡೆಯನೂ, ಪರಮ ಜ್ಯೋತಿಯೂ, ಬ್ರಹ್ಮಾಂಡದ ಸಾರವೂ ಆಗಿದೆ. ಎಲ್ಲಾ ವಸ್ತುಗಳು ಸಜೀವ ಮತ್ತು ನಿರ್ಜೀವ ಅವನಲ್ಲಿ ವಾಸಿಸುತ್ತವೆ ಮತ್ತು ಅವನು ಪ್ರತಿಯಾಗಿ ಎಲ್ಲಾ ವಸ್ತುವಿನೊಳಗೆ ವಾಸಿಸುತ್ತಾನೆ. ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಹೇಳುತ್ತಾರೆ.
ಅದ್ವೈತ ವೇದಾಂತದ ಆದಿ ಶಂಕರರು ಭಜ ಗೋವಿಂದಂ ೨೪ . ೨೭ ನೇ ಶ್ಲೋಕದಲ್ಲಿ ಗೀತೆ ಮತ್ತು ವಿಷ್ಣುಸಹಸ್ರನಾಮಗಳನ್ನು ಪಠಿಸಬೇಕು ಮತ್ತು ಲಕ್ಷ್ಮೀ ಭಗವಂತನಾದ ವಿಷ್ಣುವಿನ ರೂಪವನ್ನು ಯಾವಾಗಲೂ ಧ್ಯಾನಿಸಬೇಕು ಎಂದು ಹೇಳಿದರು. ಸಹಸ್ರನಾಮವನ್ನು ಪಠಿಸಿದವರಿಗೆ ಸಕಲ ಉದಾತ್ತ ಪುಣ್ಯಗಳನ್ನು ದಯಪಾಲಿಸುತ್ತದೆ ಎಂದರು. ೨೫
ರಾಮಾನುಜಾಚಾರ್ಯರ ಅನುಯಾಯಿಗಳಾದ ಪರಾಶರ ಭಟ್ಟರು ವಿಷ್ಣುಸಹಸ್ರನಾಮವು ಎಲ್ಲ ಪಾಪಗಳನ್ನು ನಿವಾರಿಸುತ್ತದೆ ಮತ್ತು ಅದಕ್ಕೆ ಸಮಾನರು ಯಾರೂ ಇಲ್ಲ ಎಂದು ಹೇಳಿದ್ದರು ೨೫
ದ್ವೈತ ತತ್ವದ ಪ್ರತಿಪಾದಕರಾದ ಮಧ್ವಾಚಾರ್ಯರು, ಸಹಸ್ರನಾಮವು ಮಹಾಭಾರತದ ಸಾರವಾಗಿದೆ, ಇದು ಶಾಸ್ತ್ರಗಳ ಸಾರವಾಗಿದೆ ಮತ್ತು ಸಹಸ್ರನಾಮದ ಪ್ರತಿಯೊಂದು ಪದಕ್ಕೂ ೧೦೦ ಅರ್ಥಗಳಿವೆ ಎಂದು ಹೇಳಿದರು.
ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡುವುದು ಹೇಗೆ.
ವಿಷ್ಣು ಸಹಸ್ರನಾಮವನ್ನು ಸೂರ್ಯೋದಯದ ಸಮಯದಲ್ಲಿ ಮತ್ತು ಸೂರ್ಯಸ್ತದ ನಂತರ ಪಠಿಸಿದರೆ ಒಳ್ಳೆಯದು ಅಂತ ಕೆಲವು ಹಿರಿಯರು ಹೇಳುತ್ತಾರೆ.
ಆದರೆ ಶಾಸ್ತ್ರ ನಿಯಮದ ಪ್ರಕಾರ ವಿಷ್ಣು ಸಹಸ್ರನಾಮವನ್ನು ದಿನದ ಎಲ್ಲಾ ಸಮಯದಲ್ಲಿಯೂ ಪಾರಾಯಣ ಮಾಡಬಹುದು ಅಂತ ಹೇಳುತ್ತಾರೆ.
ಪಠಣೆ ಮಾಡುವಾಗ ಮನಸ್ಸು ಹಾಗೂ ದೇಹದ ಶುದ್ಧತೆಯ ಕಡೆಗೆ ಗಮನಹರಿಸಬೇಕು.
ಹಾಗೂ ಬರೀ ನೆಲದ ಮೇಲೆ ಕುಳಿತು ಪಟನೆ ಮಾಡಬಾರದು
ಮಣೆ ಅಥವಾ ಮ್ಯಾಟ್ ಅಥವಾ ಮಡಿ ಮೇಲೆ ಕುಳಿತು ಪಟನೆ ಮಾಡಬೇಕು.
ಯಾವುದೇ ಉಪಾಸನೆ ಅಥವಾ ನಾಮಸ್ಮರಣೆ ಜಪ ಹಾಗೂ ಮಂತ್ರ ಪಠಣೆ ಆಧ್ಯಾತ್ಮ ಸಾಧನೆ ಮಾಡುವಾಗ ದೇಹದ ಭಾಗವು ನೇರವಾಗಿ ನೆಲಕ್ಕೆ ಸ್ಪರ್ಶವಾಗಬಾರದು.
ವಿಷ್ಣು ಸಹಸ್ರನಾಮ ಸೂತ್ರ ಪಾರಾಯಣ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
Comments