ಜನನ ಮತ್ತು ಮರಣ ಹಾಗೂ ಆಧ್ಯಾತ್ಮ ಸಾಧನೆ

ಜನನ ಮತ್ತು ಮರಣ ಹಾಗೂ ಆಧ್ಯಾತ್ಮ ಸಾಧನೆ

1. ಸುಖ ಮತ್ತು ದುಃಖ, ಜನನ ಮತ್ತು ಮರಣ ಸೇರಿದಂತೆ ನಮ್ಮ ಬದುಕಿನ ಸರ್ವ ಕರ್ಮಗಳು ಆ ಭಗವಂತನಿಂದಲೇ ಆಗಲ್ಪಡುವುದು. ನಮ್ಮ ಬದುಕು ಎಂಬುವುದು ದ್ವಂದ್ವ ನೀತಿಯನ್ನು ಹೊಂದಿದ್ದು ಜೀವನದಿ ನಗು ಮತ್ತು ಅಳು ಒಂದರ ನಂತರ ಒಂದು ಬರುತ್ತಾ ಹೋಗುತ್ತದೆ. ಅಂದರೆ, ಸರ್ವ ಜೀವಜಾತುಗಳಿಗೂ ಆನಂದವಿರದ ದುಃಖವಾಗಲೀ ಅಥವಾ ದುಃಖವಿಲ್ಲದ ಸಂತೋಷವಾಗಲೀ ದೊರಕಲಾರದು.

2. ಸುಖ ಮತ್ತು ದುಃಖವು ನಮ್ಮ ಬದುಕಿನಲ್ಲಿ ಹಗಲು ಮತ್ತು ರಾತ್ರಿಯಿದ್ದಂತೆ. ನಮ್ಮ ಬದುಕಿನಲ್ಲಿನ ನಾನಾ ಏರುಪೇರಿನ ಜ್ಞಾನವನ್ನು ಪಡೆದಾಗ ಸುಖ ಮತ್ತು ದುಃಖಗಳೊಳಗಿನ ಬದುಕು ಎಂದೆಂದಿಗೂ ಕಠಿಣವಾಗಲಾರದು. 
3. ಭಗವಂತನಿಗೆ ಶರಣಾದವನಿಗೆ ಸಾವಿನ ಭಯವಿಲ್ಲ ಅವನು ನಿರ್ಭಯನಾಗಿ ಜೀವಿಸುತ್ತಾನೆ 
ಯಾವ ವ್ಯಕ್ತಿ ಜಗತ್ ರಕ್ಷಕನಾದ ಸರ್ವ ಸೃಷ್ಟಿಸುರೂಪಿಯಾದ ಭಗವಂತನಿಗೆ ಶರಣಾಗುತ್ತಾನೋ ಅವನಿಗೆ ಜೀವನದಲ್ಲಿ ಯಾವ ಭಯವೂ ಇರುವುದಿಲ್ಲ ಯಾವ ಆಸೆಯೂ ಇರುವುದಿಲ್ಲ ಆಧ್ಯಾತ್ಮ ಸಾಧನೆ ಮಾಡುವ ವ್ಯಕ್ತಿ ನಿರಂತರವಾಗಿ ಭಗವಂತನ ಸಂಪರ್ಕದಲ್ಲಿ ಇರುತ್ತಾನೆ ಹಾಗೆ ಕರ್ಮದ ಅರಿವು ಕೂಡ ಅವನಿಗೆ ಇರುತ್ತದೆ ಆಧ್ಯಾತ್ಮ ಸಾಧನೆ ಮಾಡಿ ಜನನ ಮರಣ ಚಕ್ರದಿಂದ ಮುಕ್ತಿ ಹೊಂದುವುದೇ ಮೋಕ್ಷ 
ಆದಿ+ಆತ್ಮ=ಆಧ್ಯಾತ್ಮ 
ಆದಿ ಎಂದರೆ ಆದಿಮಾಯಿ ವಿಶ್ವ ಸೃಷ್ಟಿ ಸ್ವರೂಪಿ ಭಗವಂತ ಆತ್ಮ ಭಗವಂತನ ಸೃಷ್ಟಿಸಿರುವಂತದ್ದು 
ಈ ಆತ್ಮ ಶರೀರ ತೇಜಿಸಿದ ಮೇಲೆ ಆದಿಯ ಜೊತೆ ಸೇರಲು ಇರುವ ಮಾರ್ಗವೇ ಆಧ್ಯಾತ್ಮ ಶಾಶ್ವತ ಆನಂದಕ್ಕೆ ಆಧ್ಯಾತ್ಮ ವಂದೇ ಮಾರ್ಗ 
ಹೇಗೆ ಸಪ್ತ ಮೋಡಗಳು ಬಂದಾಗ ಪ್ರಳಯವಾಗುತ್ತದೆಯೋ ಹಾಗೆ ಆಧ್ಯಾತ್ಮ ಸಾಧನೆ ಮಾಡಿದಾಗ ಭಗವಂತನ ಸ್ಮರಣೆ ಮಾಡಿದಾಗ ಮೋಕ್ಷ ದೊರೆಯುತ್ತದೆ.

ಹರಿ ಓಂ ಸರ್ವಂ ಕೃಷ್ಣಾರ್ಪಣಮಸ್ತು 

Comments