ತಾಳ ಬೇಕು ತಕ್ಕ ಮೇಳ ಬೇಕು
ತಾಳ ಬೇಕು ತಕ್ಕ ಮೇಳ ಬೇಕು , ಶಾಂತ
ವೇಳೆ ಬೇಕು ಗಾನವನು ಕೇಳ ಬೇಕೆಂಬುವರಿಗೆ
ಯತಿಪ್ರಾಸವಿರ ಬೇಕು
ಗತಿಗೆ ನಿಲ್ಲಿಸ ಬೇಕು
ರತಿಪತಿ ಪಿತನೊಳು
ಅತಿ ಪ್ರೇಮವಿರ ಬೇಕು
ಗಳ ಶುದ್ಧವಿರ ಬೇಕು
ತಿಳಿದು ಪೇಳಲು ಬೇಕು
ಕಳವಳ ಬಿಡ ಬೇಕು
ಕಳೆಮುಖವಿರ ಬೇಕು
ಅರಿದವರಿರಬೇಕು
ಹರುಷ ಹೆಚ್ಚಲು ಬೇಕು
ಪುರಂದರ ವಿಟ್ಠಲನೆ
ಪರದೈವವೆನೆ ಬೇಕು
Comments