ನಮ್ಮ ಸನಾತನ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಕಾಲಿನ ಗೆಜ್ಜೆಯೂ ಸಹ ಒಂದು ಹೆಣ್ಣಿನ ಮುತ್ತೈದೆಯ ಸಂಕೇತ ಗೆಜ್ಜೆಯನ್ನು ಕಾಲಿಗೆ ಧರಿಸುವುದರಿಂದದೈವಿಕ ಶಕ್ತಿಗಳು ಆಕರ್ಷಿತವಾಗುತ್ತದೆ ಎಂಬ ನಂಬಿಕೆಯಿದೆ. ಹಾಗೂ ಗೆಜ್ಜೆಯ ಜಲ್ ಜಲ್ ಶಬ್ದಕ್ಕೆ ದುಷ್ಟ ಶಕ್ತಿಗಳು ದೂರವಾಗುತ್ತದೆ ಎನ್ನುವ ನಂಬಿಕೆ ಇದೆ . ಇದು ಪೂರ್ತಿ ವಾತಾವರಣವನ್ನು ಪವಿತ್ರವಾಗಿಸುತ್ತದೆ. ಗೆಜ್ಜೆಯ ಶಬ್ದದಿಂದ ಮನೆಯ ವಾತಾವರಣ ಒಳ್ಳೆದಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಸನಾತನ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಬೆಳ್ಳಿಯು ಒಂದು ಉತ್ತಮ ಮತ್ತು ಪವಿತ್ರವಾದ ಲೋಹವಾಗಿದೆ ಇನ್ನು ವೈಜ್ಞಾನಿಕ ದೃಷ್ಟಿಯಲ್ಲಿ ನಾವು ನೋಡುವುದಾದರೆ, ಬೆಳ್ಳಿಯು ಒಂದು ಅತ್ಯುತ್ತಮ ವಾಹಕವಾಗಿದೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯಲ್ಲಿ ಶುಕ್ರನ ಕಾರಕತ್ವವಿರುತ್ತದೆ, ಶುಕ್ರನು ಸಿರಿಸಂಪತ್ತಿನ ಸಂಕೇತ, ಹಾಗಾಗಿ ಯಾರು ಕಾಲಿಗೆ ಬೆಳ್ಳಿಯ ಹಾಕಿರುತ್ತಾರೋ ಅವರ ಮನೆಯಲ್ಲಿ ಧನಲಕ್ಷ್ಮೀ ನೆಲೆಸುತ್ತಾಳೆ
ಆರೋಗ್ಯದ ದೃಷ್ಟಿಯಿಂದ ನೋಡಿದರು ಸಹ ಬೆಳ್ಳಿಯ ಗೆಜ್ಜೆಯನ್ನು ಹಾಕಿಕೊಳ್ಳುವುದು ತುಂಬಾ ಒಳ್ಳೆಯದು.
ಗೆಜ್ಜೆಯೂ ಸಾಮಾನ್ಯವಾಗಿ ನಡೆಯುವಾಗ ಸದ್ದು ಮಾಡುತ್ತದೆ. ಹಾಗೆಯೇ ಬೆಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಹ ಪ್ರತಿರಕ್ಷೆಯನ್ನು ಹೆಚ್ಚಿಸುತ್ತವೆ.
ಇನ್ನು ರಕ್ತ ಪರಿಚಲನೆ ಸುಧಾರಿಸಲು ಯಾವಾಗಲೂ ಕಾಲಿಗೆ ಗೆಜ್ಜೆ ಧರಿಸಿ. ಇದರಿಂದ ಪಾದಗಳ ಅಥವಾ ಕಾಲಿನ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ. ಒಂದೇ ಕಡೆ ನಿಂತು ಅಥವಾ ಕುಳಿತು ಕೆಲಸ ಮಾಡುವಾಗಲೂ ಸ್ವಲ್ಪ ಆಯಾಸ ಕಂಡುಬಂದು ಕಾಲು ನೋವಿನ ಸಮಸ್ಯೆ ಉಂಟಾಗುತ್ತದೆ. ಅಂತಹವರು ನಿಯಮಿತವಾಗಿ ಬೆಳ್ಳಿ ಗೆಜ್ಜೆಗಳನ್ನು ಧರಿಸುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಬೆಳ್ಳಿ ಗೆಜ್ಜೆಯನ್ನು ಹೆಣ್ಣು ಮಕ್ಕಳ ಕಾಲಿಗೆ ಹಾಕಿಕೊಂಡು ಮನೆಯಲ್ಲಿ ಓಡಾಡುವುದರಿಂದ ಆ ಲಯಬದ್ಧವಾದ ಶಬ್ದಕ್ಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೋಗಿ ಮನೆಯಲ್ಲಿ ಧನಾತ್ಮಕ ಶಕ್ತಿಯು ನೆಲೆಯೂರುತ್ತದೆ, ಅಷ್ಟೆ ಅಲ್ಲದೆ ವೈಜ್ಞಾನಿಕ ವಾಗಿ ಬೆಳ್ಳಿಯು ಒಂದು ಉತ್ತಮ ರೋಗ ನಿರೋದಕ ಶಕ್ತಿ ಹೊಂದಿರುತ್ತದೆ ಮತ್ತು ಉಷ್ಣವನ್ನು ಹೀರಿಕೊಂಡು ದೇಹವನ್ನು ಸಮಶೀತೋಷ್ಣದಲ್ಲಿ ಇಡುವುದರಲ್ಲಿ ಸಹಾಕರಿಯಾಗುತ್ತದೆ,ಹಾಗೆಯೇ ಬೆಳ್ಳಿಯು ಹೆಣ್ಣು ಮಕ್ಕಳ ದೇಹವು ಸುಕ್ಕುಗಟ್ಟುವುದನ್ನು ತಡೆಯುವುದಲ್ಲದೆ ಅವರ ದೇಹದ ಅಂದವನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ ನಮ್ಮಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ತಪ್ಪದೇ ಕಾಲಿಗೆ ಗೆಜ್ಜೆಯನ್ನು ಹಾಕುತ್ತಾರೆ, ಆದರೆ ಬದಲಾದ ಇತ್ತೀಚಿನ ಆಧುನಿಕ ಯುಗದಲ್ಲಿ ನಮ್ಮ ಹೆಣ್ಣು ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ಕಾಲಿಗೆ ಗೆಜ್ಜೆ ಹಾಕುವುದನ್ನು ಮರೆತಿದ್ದಾರೆ. ಕಾಲಿಗೆ ಗೆಜ್ಜೆ ಹಾಕುವುದರಿಂದ ಕಾಲು ಕಪ್ಪಾಗುವುದ ಅಂತಲೋ ಕಾಲಿಗೆ ಬಾರವಾಗುವುದು ಅಂತಲೋ ಅವರು ಗೆಜ್ಜೆಯನ್ನು ಹಾಕಲು ಇಷ್ಟ ಪಡುತ್ತಿಲ್ಲ, ಆದರೇ ನಮ್ಮ ಹಿಂದೂ ಸನಾತನ ಧರ್ಮದ ಸಂಸ್ಕೃತಿಯ ಮಹತ್ವ ಹಿಂದೂ ಸಂಸ್ಕೃತಿಯಲ್ಲಿರುವ ಮತ್ತು ನಮ್ಮ ಹಿಂದೂ ಧರ್ಮ ಶಾಸ್ತ್ರದಲ್ಲಿ ಸ್ಪಷ್ಟಪಡಿಸಲಾಗಿರುವ ಎಲ್ಲಾ ಆಚರಣೆಗಳ ಹಿಂದೆಯೂ ಸಹ ಅನೇಕ ವೈಜ್ಞಾನಿಕ ಕಾರಣಗಳು ಇದ್ದೇ ಇವೆ
Comments