ಹನುಮಾನ್ ಚಾಲೀಸ್ ಮಹತ್ವ

ಶ್ರೀ ರಾಮಚಂದ್ರನ ಪರಮ ಭಕ್ತ ಹನುಮಂತನನ್ನು ಸ್ತುತಿಸುವ 40 ಪದ್ಯ ಚರಣಗಳನ್ನು ʻಹನುಮಾನ್‌ ಚಾಲೀಸಾʼ ಎಂದು ಕರೆಯಲಾಗುತ್ತದೆ. ಶ್ರೀ ರಾಮಚ೦ದ್ರನ ಪರಮಭಕ್ತರಾಗಿದ್ದ ಸಂತಪಟ್ಟ ಪಡೆದ ಕವಿ ಗೋಸ್ವಾಮಿ ತುಳಸೀದಾಸರು ಹನುಮಾನ್ ಚಾಲೀಸಾ ರಚಿಸಿದವರು. ಹನುಮಾನ್ ಚಾಲೀಸಾದಲ್ಲಿ 40 ಪದ್ಯ ಚರಣಗಳಿರುವುದರಿಂದ ಈ ಕಾರಣಕ್ಕಾಗಿಯೇ ಇದರ ಹೆಸರು “ಚಾಲೀಸಾ” ಎ೦ದಾಗಿದೆ.
ಹನುಮಾನ್ ಚಾಲೀಸಾಗೆ ದೈವತ್ವವು ತಳುಕುಹಾಕಿಕೊ೦ಡಿದೆ. ಇದರ ಪಠಣದಿಂದ ಮನುಷ್ಯನು ಎಲ್ಲ ರೀತಿಯ ಸಂಕಷ್ಟಗಳಿಂದ ದೂರವಾಗುತ್ತಾನೆ, ಭಯವನ್ನು ಹೋಗಲಾಡಿಸಿಕೊಂಡು, ದುಃಖಗಳಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. ಮುಖ್ಯವಾಗಿ ಶನಿಕಾಟ ಹೊಂದಿರುವವರು ರಕ್ಷಣೆಯಾಗಿ ಹನುಮಾನ್‌ ಚಾಲೀಸಾ ಓದುತ್ತಾರೆ
ಹನುಮಾನ್‌ ಚಾಲೀಸಾವನ್ನು ಪ್ರತಿನಿತ್ಯ ಪಠಿಸಬೇಕು. ಅದರಲ್ಲೂ, ಶನಿವಾರ ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿ ದೇವನು ಅವರ ಎಲ್ಲಾ ಕಷ್ಟಗಳನ್ನು ತೆಗೆದುಹಾಕುತ್ತಾನೆ. ರಾಮಾಯಣದ ಸಂದರ್ಭದಲ್ಲಿ ಭಗವಾನ್‌ ಹನುಮಂತನು ರಾವಣನಿಂದ ಶನಿಯನ್ನು ರಕ್ಷಿಸುತ್ತಾನೆ. ಆ ಕಾರಣದಿಂದ ಹನುಮಂತನ ಭಕ್ತರಿಗೆ ಯಾವುದೇ ತೊಂದರೆಯನ್ನು ನೀಡುವುದಿಲ್ಲವೆಂದು ಭರವಸೆಯನ್ನು ನೀಡಿರುತ್ತಾನೆ. ಯಾವ ವ್ಯಕ್ತಿ ಶನಿ ದೋಷವನ್ನು, ಸಾಡೇಸಾತಿ ಶನಿ ದೋಷವನ್ನು ಮತ್ತು ಶನಿ ಮಹಾದಶಾ ಸೇರಿದಂತೆ ಶನಿಗೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ತಮ್ಮ ಜೀವನದಲ್ಲಿ ಎದುರಿಸುತ್ತಿದ್ದರೆ ಅವರು ಪ್ರತಿನಿತ್ಯ ಸಾಧ್ಯವಾಗದಿದ್ದರೆ ಮಂಗಳವಾರ ಮತ್ತು ಶನಿವಾರದಂದು ತಪ್ಪದೇ ಹನುಮಾನ್‌ ಚಾಲೀಸಾವನ್ನು ಪಠಿಸಬೇಕು.

ಪ್ರತಿನಿತ್ಯ ಸಾಧ್ಯವಾಗದಿದ್ದರೂ ನಾವು ಮಂಗಳವಾರ ಮತ್ತು ಶನಿವಾರದಂದು ತಪ್ಪದೇ ಹನುಮಾನ್‌ ಚಾಲೀಸಾವನ್ನು ಪಠಿಸಬೇಕು.
ಇದನ್ನು ಸಂತ ತುಳಸೀದಾಸರು ರಚಿಸಿದ ಸಂದರ್ಭದ ಕುರಿತು ಅನೇಕ ಕತೆಗಳಿವೆ. ವಾಲ್ಮೀಕಿ ಮಹರ್ಷಿಯ ಅವತಾರವೆಂದು ತುಳಸೀದಾಸರನ್ನು ಬಣ್ಣಿಸಲಾಗುತ್ತಿದ್ದು, ಹರಿದ್ವಾರದಲ್ಲಿ ಕುಂಭಮೇಳ ನಡೆಯುವ ಸಂದರ್ಭದಲ್ಲಿ ತುಳಸಿದಾಸರು ಸಮಾಧಿ ಸ್ಥಿತಿಯಲ್ಲಿ ಹನುಮಾನ್ ಚಾಲೀಸವನ್ನು ರಚಿಸಿದರೆಂದು ಹೇಳಲಾಗಿದೆ.

ಇನ್ನೊಂದು ಕತೆಯ ಪ್ರಕಾರ ತಮ್ಮ ಮಾತು ಕೇಳದ ತುಳಸೀದಾಸರನ್ನು ದೊರೆ ಅಕ್ಬರ್‌ ಬಂಧಿಸಿಟ್ಟಿದ್ದ. ಈ ಸಂದರ್ಭದಲ್ಲಿ ಅವರು ಹನುಮಾನ್‌ ಚಾಲೀಸಾ ರಚಿಸಿದರು. ಇದರ ರಚನೆ ಪೂರ್ಣವಾಗುತ್ತಿದ್ದಂತೆಯೇ ವಾನರ ಸೇನೆ ಅಕ್ಬರನ ಅರಮನೆಗೆ ದಾಳಿ ನಡೆಸಿತ್ತು. ಇದರಿಂದ ಹೆದರಿದ ಅಕ್ಬರ್‌ ತುಳಸೀದಾಸರನ್ನು ಬಿಡುಗಡೆ ಮಾಡಿ ಕ್ಷಮೆಯಾಚಿಸಿದ.

ಪಠಣದಿಂದ ಪ್ರಯೋಜನವೇನು?

 ಇದು ದೇಹ ಮತ್ತು ಮನಸ್ಸು ಎರಡರ ಮೇಲೆ ಶುದ್ಧೀಕರಿಸುವ ಪರಿಣಾಮವನ್ನು ಹೊಂದಿದೆ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುತ್ತದೆ, ಇದು ಜೀವನದಲ್ಲಿ ಎಲ್ಲಾ ಅಪಾಯಗಳಿಂದ ಪಾರುಮಾಡುತ್ತದೆ ಮತ್ತು ಆಧ್ಯಾತ್ಮಿಕ ಜ್ಞಾನ ಗಳಿಕೆಗೆ ಸಹಾಯ ಮಾಡುತ್ತದೆ ಮತ್ತು ಜೀವನದಲ್ಲಿ ವಿಶ್ವಾಸ ಹೆಚ್ಚುತ್ತದೆ, ಉದ್ಯೋಗ ಸಂದರ್ಶನಗಳಿಗೆ ಹೋಗುವಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ತುಳಸಿದಾಸರು ಹೇಳಿರುವಂತೆ ಹನುಮಾನ್ ಚಾಲೀಸಾವನ್ನು ಪಠಿಸುವವರೆಲ್ಲರಿಗೂ ಹನುಮಂತನ ಅನಂತ ಅನುಗ್ರಹ ಪ್ರಾಪ್ತಿಯಾಗುತ್ತದೆ. ದಿವ್ಯವಾದ ಹನುಮಾನ್ ಚಾಲೀಸಾವು ಬಹಳ ಶಕ್ತಿಶಾಲಿಯಾಗಿದೆ. ಇದರ ಪಠಣದಿಂದ ನಿಮ್ಮೆಲ್ಲ ಮನೋಕಾಮನೆಗಳು ಈಡೇರುತ್ತವೆ.
ಭೀತಿಯನ್ನು ಎದುರಿಸುವವರು ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಋಣಾತ್ಮಕ ಶಕ್ತಿಗಳನ್ನು ದೂರ ಮಾಡಿಕೊಳ್ಳಬಹುದು.
ಭೂತ ಪ್ರೇತ ತೊಂದರೆಗಳಿಂದ ರಕ್ಷಣೆ ಮಾಡಿಕೊಳ್ಳಬಹುದು. ಇದರಿಂದ ರಾತ್ರಿ ಸುಖ ನಿದ್ರೆ ಸಾಧ್ಯವಾಗುತ್ತದೆ. ನಿದ್ರೆಯಲ್ಲಿ ಹೆದರುವ ಮಕ್ಕಳು ಕೂಡ ಹನುಮಾನ್ ಚಾಲೀಸಾವನ್ನು ತಪ್ಪದೇ ಪಠಿಸಬೇಕು .

ಯಾವಾಗ ಓದಬೇಕು?

ಶಾಸ್ತ್ರ ಪ್ರಕಾರ ಹನುಮಾನ್ ಚಾಲೀಸಾವನ್ನು ದಿನಕ್ಕೆ 100 ಬಾರಿ ಪಠಿಸಬೇಕು. ನಿಮ್ಮ ಬಳಿ ಅಷ್ಟು ಬಾರಿ ಪಠಿಸಲು ಸಮಯವಿಲ್ಲದೇ ಇದ್ದರೆ ಕನಿಷ್ಠ 7, 11 ಅಥವಾ 21 ಬಾರಿ ಪಠಿಸಿಸಬಹುದು. ಹನುಮಾನ್‌ ಚಾಲೀಸಾ ಪಠಿಸುವ ಮೊದಲು ಗಣಪತಿಯನ್ನು ಮತ್ತು ಶ್ರೀ ರಾಮನನ್ನು ನೆನೆಯಲೇಬೇಕು.



Comments