ಮೂತ್ರಕೋಶದ ಕಲ್ಲಿನ ಸಮಸ್ಯೆ ನಿವಾರಣೆ ಹೇಗೆ?
ದೇಹದಲ್ಲಿರುವ ಕಲ್ಮಶಗಳನ್ನೆಲ್ಲ ಹೊರಹಾಕುವುದೇ ಕಿಡ್ನಿಯ ಕೆಲಸವಾಗಿದೆ. ಇದಲ್ಲದೆ ಕಿಡ್ನಿಯು ಇನ್ನೂ ಅನೇಕ ಕೆಲಸಗಳನ್ನು ಕೂಡ ನಿಭಾಯಿಸುತ್ತದೆ. ಒಂದು ದಿವಸದಲ್ಲಿ 180 ಲೀಟರ್ ಶೇಖರಿಸುವ ಸಾಮರ್ಥ್ಯ ಕಿಡ್ನಿಗಿದೆ. ಆದರೆ ಅಷ್ಟು ಸಂಗ್ರಹವಾಗಿದ್ದರಲ್ಲಿ ಅದು ಹೊರಹಾಕುವುದು 1.8 ಲೀಟರ್ ಮಾತ್ರ. ಆದ್ದರಿಂದ ದೇಹದ ಸಮತೋಲನ ಅತ್ಯಗತ್ಯವಾಗಿದೆ.
ಕಿಡ್ನಿಗಳಿಗೆ ಹಲವಾರು ವಿಧದ ಕಾಯಿಲೆಗಳು ಬರುವುದರಿಂದ ಕಿಡ್ನಿ ವಿಫಲವಾಗಬಹುದು. ನೂರಾರು ಕಾಯಿಲೆಗಳಿವೆ. ಅವುಗಳೆಲ್ಲದರ ಕೊನೆಯ ಹಂತ ಅಂದರೆ ಕಿಡ್ನಿ ತನ್ನ ಕೆಲಸ ಮಾಡುವುದನ್ನು ನಿಲ್ಲಿಸುವುದೇ ಆಗಿದೆ. ಕಿಡ್ನಿಯ ಪ್ರತಿಯೊಂದು ಕೆಲಸ ಮಾಡುವ ನೆಫ್ರಾನ್ಗೆ ಒಂದು ಸಾವಿರದಿಂದ ಒಂದು ಲಕ್ಷದಷ್ಟು ನಿದ್ರೆ ಮಾಡುವ ಯುನಿಟ್ಗಳಿವೆ. ಅಂದರೆ ಅವುಗಳೆಲ್ಲವೂ ರಿಸರ್ವ್ ಯುನಿಟ್ಗಳಾಗಿವೆ. ಆದ್ದರಿಂದ ಸಣ್ಣ ಮಟ್ಟದ ಕಿಡ್ನಿ ಕಾಯಿಲೆ ಬಂದ ತಕ್ಷಣ, ‘ನನ್ನ ಕಿಡ್ನಿ ವೈಫಲ್ಯವಾಯಿತು’ ಎಂದು ಯಾರೂ ಹೆದರಿಕೊಳ್ಳಬೇಕಾಗಿಲ್ಲ. ಇದೇ ರೀತಿ ಮನುಷ್ಯನ ಪ್ರತಿಯೊಂದು ಅಂಗಾಂಗಗಳಲ್ಲೂ ರೋಗನಿರೋಧಕ ಶಕ್ತಿ ಇರುತ್ತದೆ. ಮನುಷ್ಯ ಹಲವು ಬಾರಿ ಗಾಬರಿಯಾಗುವುದರಿಂದಲೇ ಎಡವುತ್ತಾನೆ. ದೇಹದಲ್ಲಿ ಪ್ರೋಟೀನ್ ಮಟ್ಟವು ಹೆಚ್ಚಾದ ಹಾಗೆ ಕಿಡ್ನಿಗೆ ತೊಂದರೆಯಾಗುತ್ತದೆ. ಆದ್ದರಿಂದ ಎಲ್ಲವೂ ಒಂದು ಮಿತಿಯಲ್ಲಿಯೇ ಇರಬೇಕು.
ಮೂತ್ರದಲ್ಲಿ ಕಲ್ಲುಗಳು ಉಂಟಾಗಲು ದೇಹದಲ್ಲಿನ ಉಷ್ಣಾಂಶದ ಏರುವಿಕೆ ಕೂಡ ಒಂದು ಕಾರಣವಾಗಿದೆ. ದೇಹದ ಒಳಗಡೆ ನಡೆಯುವ ಪ್ರಕ್ರಿಯೆಗೆ ಹೇರಳ ಪ್ರಮಾನದಲ್ಲಿ ನೀರು ಬೇಕು. ನೀರು ಇಲ್ಲದಿದ್ದರೆ ಅಲ್ಲೇ ಜಡ್ಡುಗಟ್ಟಿ ಕಲ್ಲಾಗುತ್ತದೆ. ಆದ್ದರಿಂದ ಈ ಕಲ್ಲುಗಳನ್ನು ತಡೆಯಬೇಕಾದರೆ ನೀರಿನ ಸೇವನೆ ಅತೀ ಮುಖ್ಯ ಕಾರಣವಾಗಿದೆ. ಮನುಷ್ಯನಿಗೆ ದಿನವೊಂದಕ್ಕೆ ಎಷ್ಟು ನೀರು ಬೇಕು ಎಂಬುದು ಬಹಳ ಕೂತೂಹಲಕಾರಿಯಾದ ಪ್ರಶ್ನೆ. ನಾನು ಈ ಬಗ್ಗೆ ತುಂಬ ಸಂಶೋಧನೆ ಮಾಡಿದ್ದೇನೆ. ಆದರೆ ಎಲ್ಲೂ ಎಷ್ಟು ನೀರು ಬೇಕು ಎಂಬುದಾಗಿ ಹೇಳಿಯೇ ಇಲ್ಲ. ಆದರೆ ಸಾಮಾನ್ಯ ಅನುಭವದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಸ್ಟೋನ್ ಬರುತ್ತದೆ. ಬೇಕಾದಷ್ಟು ನೀರಿನ ಸೇವನೆಯಿಂದ ಅವನು ಆರೋಗ್ಯವಂತನಾಗುತ್ತಾನೆ. ಅಧಿಕವಾಗಿ ಅಂದರೆ ನಾಲ್ಕು-ಐದು ಲೀಟರ್ ಹೀಗೆಲ್ಲ ನೀರು ಕುಡಿದರೆ ಅದು ಅವನ ಆರೋಗ್ಯಕ್ಕೆ ಮಾರಕವಾಗುತ್ತದೆ ಎಂದು ತಿಳಿದುಬಂದಿದೆ.
ನೀರನ್ನು ಹೆಚ್ಚಾಗಿ ಕುಡಿದರೆ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ರಕ್ತವೂ ತೆಳ್ಳಗಾಗುತ್ತದೆ. ಆದ್ದರಿಂದ ಎಲ್ಲವೂ ಹಿತಮಿತವಾಗಿರಬೇಕು. ನನ್ನ ಪ್ರಕಾರ ಅಂದಾಜು ಒಬ್ಬ ಮನುಷ್ಯನ ಒಂದು ಕಿ.ಗ್ರಾಂ.ಗೆ 30 ಮಿಲಿ ಲೀಟರ್ ನೀರು ಬೇಕು. ಅದನ್ನು ಒಂದೇ ಸಲ ಕುಡಿಯಬೇಕೆಂದಿಲ್ಲ. ದಿನವೊಂದರಲ್ಲಿ ಹಂತಹಂತವಾಗಿ ಕುಡಿದರೆ ಸಾಕು. ಬೇಸಿಗೆ ಕಾಲದಲ್ಲಿ ಮಾನವ ತುಂಬ ಬೆವರಿರುತ್ತಾನೆ. ಆದ್ದರಿಂದ ಅವನ ಮೂತ್ರದ ಅಂಶವೆಲ್ಲ ಬೆವರಿನೊಂದಿಗೆ ವಿಲೀನವಾಗಿ ವಿಸರ್ಜಿಸಲ್ಪಡುತ್ತದೆ. ಮಳೆಗಾಲದಲ್ಲಿ ಬೆವರಿಲ್ಲದಿರುವುದರಿಂದ ಆಗಾಗ ಮೂತ್ರ ಬರುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ನೀರನ್ನು ಸ್ವಲ್ಪ ಹೆಚ್ಚಾಗಿಯೇ ಸೇವಿಸಬೇಕು.
ಒಬ್ಬನ ಕಿಡ್ನಿಯಲ್ಲಿ ಕಲ್ಲಿದೆ ಎಂದು ಗೋಚರಿಸಿದರೆ ತಕ್ಷಣ ಅದನ್ನು ತೆಗೆಯಲು ಮುಂದಾಗಬೇಡಿ. ಇದರಿಂದ ಕಿಡ್ನಿ ವೈಫಲ್ಯ ಸಂಭವಿಸಬಹುದು. ಬದಲಾಗಿ ಸಾವಧಾನದಿಂದ ಕರಗಿಸಲು / ತೆಗೆಯಲು ನೋಡಿ. ದೇಹದ ಯಾವುದೇ ಭಾಗಕ್ಕೆ ತೊಂದರೆಯಾದಲ್ಲಿ ಸಮಾಧಾನದಿಂದ ಪ್ರಯತ್ನಪಟ್ಟರೆ ಖಂಡಿತ ಅದು ಸರಿಯಾಗುತ್ತದೆ. ಇನ್ನು ಒಬ್ಬನಲ್ಲಿ ಸ್ಟೋನ್ ಇದೆ ಎಂದು ಖಚಿತವಾದರೆ ಮತ್ತೆ ನೀರು ಕುಡಿಯುವುದನ್ನು ಹೆಚ್ಚು ಮಾಡಬೇಕು. ಕಿಡ್ನಿ ವಿಫಲವಾದವರು ಯಾವುದೇ ಕಾರಣಕ್ಕೂ ನೋವಿನ ಮಾತ್ರೆಯನ್ನು ನುಂಗಬಾರದು. ಔಷಧ ಸೇವನೆಯಲ್ಲಿ ತುಂಬ ನಿಗಾ ವಹಿಸಬೇಕು. ಹೆಚ್ಚಿನವುಗಳು ತನ್ನಿಂದ ತಾನೇ ಗುಣವಾಗುತ್ತವೆ. ಒಬ್ಬನಿಗೆ ಸಣ್ಣ ಮಟ್ಟದಲ್ಲಿ ಕಿಡ್ನಿ ನೋವು ಅನುಭವಿಸಿದಾಗಲೇ ಗಾಬರಿಪಟ್ಟು ಡಯಾಲಿಸೀಸ್ ಮಾಡುವುದು ತರವಲ್ಲ. ಡಯಾಲಿಸಿಸ್ ಮಾಡಿಸುವುದೇ ಮದ್ದಲ್ಲ ಎಂಬುದನ್ನು ಮನವರಿಕೆ ಮಾಡಬೇಕಿದೆ. ನಿತ್ಯವೂ ಶುದ್ಧ ನೀರನ್ನು ಕುಡಿಯುವಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಸಮತೋಲನ ಹೊಂದಿರಬೇಕು .
ಮೂತ್ರಕೋಶ ಅಥವಾ ಮೂತ್ರ ಹರಿಯುವ ನಾಳದಲ್ಲಿ ಈ ಕಲ್ಲುಗಳು ಸಿಕ್ಕಿಹಾಕಿಕೊಂಡು ಅಪಾರ ವೇದನೆಯನ್ನು ತಂದೊಡ್ಡಿದಾಗಲೇ ಹೆಚ್ಚಿನವರಿಗೆ ಮೂತ್ರದ ಕಲ್ಲಿನ ಅರಿವಾಗುವುದು. ಅತಿ ಚಿಕ್ಕ ಹರಳುಗಳಂಥವು ಹೆಚ್ಚು ತೊಂದರೆ ಕೊಡದೇ ಮೂತ್ರದೊಂದಿಗೆ ಹೊರಹೋಗಬಹುದು. ಮೂರು ಮಿಲಿಮೀಟರಿಗಿಂತ ಹೆಚ್ಚಿದ್ದಲ್ಲಿ ಬಾಧೆಯ ಅರಿವಾಗುತ್ತದೆ. ಮೂತ್ರದ ಕಲ್ಲಿನ ನೋವು ತುಂಬಾ ವಿಶಿಷ್ಟವಾಗಿರುತ್ತದೆ.
ಸಾಮಾನ್ಯವಾಗಿ ಇದು ಪಕ್ಕೆ ಅಥವಾ ಪಾರ್ಶ್ವ ಭಾಗದಲ್ಲಿ ಆರಂಭವಾಗಿ ಮುಂಭಾದಲ್ಲಿ ತೊಡೆಸಂಧಿನವರೆಗೂ ಹರಿದು ಬರುತ್ತದೆ. ಹಾಗೆಯೇ ಬಿಟ್ಟು ಬಿಟ್ಟು ಜೋರಾಗಿ ಅತೀವ ಪ್ರಮಾಣದಲ್ಲಿ ನೋಯಿಸುತ್ತದೆ. ಇದರೊಂದಿಗೆ ಕೆಲವೊಮ್ಮೆ ರಕ್ತ ಮಿಶ್ರಿತ/ಕೆಂಪು ಬಣ್ಣದ ಮೂತ್ರ ಕಾಣಿಸಬಹುದು.
ಕಿಡ್ನಿ ಕಲ್ಲುಗಳಿಗೆ ನೈಸರ್ಗಿಕ ಮನೆಮದ್ದುಗಳು
ತುಳಸಿ ಎಲೆಗಳು
ತುಳಸಿ ಎಲೆಗಳು (ತುಳಸಿ) ಸಾಮಾನ್ಯವಾಗಿ ಮೂತ್ರಪಿಂಡದ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ತುಳಸಿ ಎಲೆಗಳ ರಸವನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಎರಡರಿಂದ ಮೂರು ತುಳಸಿ ಎಲೆಗಳನ್ನು ಜಗಿಯುವುದರಿಂದ ಕಿಡ್ನಿ ಸ್ಟೋನ್ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಲ್ಲಂಗಡಿ
ಕಲ್ಲಂಗಡಿಯಲ್ಲಿರುವ ನೀರು ಮತ್ತು ಪೊಟ್ಯಾಸಿಯಮ್ ಅಂಶವು ಆರೋಗ್ಯಕರ ಮೂತ್ರಪಿಂಡಕ್ಕೆ ಅತ್ಯಗತ್ಯ ಅಂಶವಾಗಿದೆ. ಕಲ್ಲಂಗಡಿ ಮೂತ್ರದಲ್ಲಿ ಇರುವ ಆಮ್ಲದ ಮಟ್ಟವನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಕಲ್ಲಂಗಡಿ ತಿನ್ನುವುದು ಅಥವಾ ಅದರ ರಸವನ್ನು ಕುಡಿಯುವುದು ಮೂತ್ರಪಿಂಡದ ಕಲ್ಲುಗಳನ್ನು ನೈಸರ್ಗಿಕವಾಗಿ ಕರಗಿಸಲು ಸಹಾಯ ಮಾಡುತ್ತದೆ.
ಟೊಮ್ಯಾಟೋ ರಸ
ಪ್ರತಿದಿನ ಬೆಳಿಗ್ಗೆ ಒಂದು ಲೋಟ ಟೊಮೆಟೊ ರಸವನ್ನು ಒಂದು ಚಿಟಿಕೆ ಉಪ್ಪು ಮತ್ತು ಮೆಣಸು ಸೇರಿಸಿ ಕುಡಿಯಿರಿ. ಇದು ಮೂತ್ರಪಿಂಡದಲ್ಲಿರುವ ಖನಿಜ ಲವಣಗಳನ್ನು ಕರಗಿಸಲು ಸಹಾಯ ಮಾಡುತ್ತದೆ ಮತ್ತು ಲವಣಗಳು ಮತ್ತಷ್ಟು ಕಲ್ಲುಗಳನ್ನು ರೂಪಿಸುವುದನ್ನು ತಡೆಯುತ್ತದೆ.
ಕಿಡ್ನಿ ಬೀನ್ಸ್
ಕಿಡ್ನಿ ಬೀನ್ಸ್ (ರಾಜ್ಮಾ) ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ಪರಿಣಾಮಕಾರಿ ಮನೆಮದ್ದು. ಬೀಜಗಳಿಂದ ಬೀಜಗಳನ್ನು ತೆಗೆದುಹಾಕಿ ಮತ್ತು ನಂತರ ಬೀಜಗಳನ್ನು ಶುದ್ಧೀಕರಿಸಿದ ಬಿಸಿ ನೀರಿನಲ್ಲಿ ಒಂದು ಗಂಟೆ ಕುದಿಸಿ. ದ್ರವವನ್ನು ತಗ್ಗಿಸಿ ಮತ್ತು ಅದು ತಣ್ಣಗಾಗುವವರೆಗೆ ಬಿಡಿ. ಮೂತ್ರಪಿಂಡದ ಕಲ್ಲು ನೋವನ್ನು ನಿವಾರಿಸಲು ದಿನವಿಡೀ ಹಲವಾರು ಬಾರಿ ದ್ರವವನ್ನು ಕುಡಿಯಿರಿ.
ನಿಂಬೆ ರಸ
ನಿಂಬೆ ರಸವು ಸಿಟ್ರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ, ಇದು ಕ್ಯಾಲ್ಸಿಯಂ ಆಧಾರಿತ ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಪ್ರತಿದಿನ ಎರಡರಿಂದ ಮೂರು ಲೋಟ ನಿಂಬೆ ರಸವನ್ನು ಕುಡಿಯುವುದರಿಂದ ಮೂತ್ರ ವಿಸರ್ಜನೆಯ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಮೂತ್ರದ ಮೂಲಕ ಕಲ್ಲುಗಳನ್ನು ನೈಸರ್ಗಿಕವಾಗಿ ತೆಗೆದುಹಾಕುತ್ತದೆ.
ಮೇಲೆ ಪಟ್ಟಿ ಮಾಡಲಾದ ಪರಿಹಾರಗಳು ವೈದ್ಯಕೀಯ ಆರೈಕೆಯನ್ನು ಸಂಪೂರ್ಣವಾಗಿ ಬದಲಿಸುವ ಉದ್ದೇಶವನ್ನು ಹೊಂದಿಲ್ಲ. ಅವರು ನೋವನ್ನು ಸರಾಗಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ. ನೀವು ತೀವ್ರವಾದ ನೋವನ್ನು ಅನುಭವಿಸುತ್ತಿದ್ದರೆ, ತಕ್ಷಣ ಮೂತ್ರಪಿಂಡಶಾಸ್ತ್ರಜ್ಞರನ್ನು ಸಂಪರ್ಕಿಸಿ.
Comments