ದೀಪ ಹಚ್ಚುವುದರ ಮಹತ್ವ

ದೀಪ ಹಚ್ಚುವುದರ ಮಹತ್ವ ಹಾಗೂ ವೈಜ್ಞಾನಿಕ ಆಧ್ಯಾತ್ಮಿಕ ಮಹತ್ವ

ಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ. ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ. ಇಂತಹ ಬೆಳಕು ಎಂದಾಕ್ಷಣ ನಮಗೆ ನೆನಪಾಗುವುದೇ ದೀಪ. ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ. ಬೆಳಗುವ ದೀಪ ಮನಸ್ಸಿನ  ಕತ್ತಲೆಯನ್ನು ದೂರಗೊಳಿಸುತ್ತದೆ ಮತ್ತು ಎಲ್ಲಾ ಕಲ್ಮಶಗಳನ್ನೂ ದೂರ ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ. 

ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ.. ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ. ಇಂಥಹ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.

ಸನಾತನ ಹಿಂದೂ ಧರ್ಮದಲ್ಲಿ, ಪೂಜೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ದೀಪವನ್ನು ಬೆಳಗಿಸುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಪೂಜೆ-ಪುನಸ್ಕಾರ ಅಥವಾ ಶುಭ ಕಾರ್ಯಕ್ರಮಗಳಲ್ಲಿ ದೀಪವನ್ನು ಹಚ್ಚುವುದು ಬಹಳ ಮುಖ್ಯವಾದ ಕೆಲಸವೆಂದು ಪರಿಗಣಿಸಲಾಗಿದೆ. ಋಗ್ವೇದ ಕಾಲದಿಂದಲೂ ಕಲಿಯುಗದವರೆಗೂ ದೀಪಗಳನ್ನು ಹಚ್ಚುವ ಸಂಪ್ರದಾಯ ನಡೆದುಕೊಂಡು ಬಂದಿದೆ. ವೇದಗಳಲ್ಲಿ, ಅಗ್ನಿಯನ್ನು ನೇರ ದೇವತೆ ಎಂದು ಪರಿಗಣಿಸಲಾಗಿದೆ.

ದೇವರಿಗೆ ದೀಪವನ್ನು ಹಚ್ಚದೆ ಮಾಡುವ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಧನಾತ್ಮಕ ಶಕ್ತಿಗಳ ಸಂವಹನಕ್ಕಾಗಿ, ದೇವರಿಗೆ ಗೌರವ ಮತ್ತು ಭಕ್ತಿಯ ಪ್ರತೀಕವಾಗಿ ದೀಪವನ್ನು ಹಚ್ಚಲಾಗುತ್ತದೆ. ದೇವರಿಗೆ ದೀಪ ಹಚ್ಚುವುದರ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವೇನು..? 


.ವೈಜ್ಞಾನಿಕ ಮಹತ್ವ

ದೀಪವನ್ನು ಬೆಳಗಿಸುವುದರಿಂದ ಸುತ್ತಮುತ್ತಲಿನ ಹಾನಿಕಾರಕ ವೈರಸ್‌ಗಳು ನಾಶವಾಗುತ್ತವೆ ಮತ್ತು ಮನೆಯ ವಾತಾವರಣದಲ್ಲಿ ಶುದ್ಧತೆ ಹರಡುತ್ತದೆ. ಹಸುವಿನ ತುಪ್ಪದಲ್ಲಿ ರೋಗಾಣುಗಳು ಹರಡದಂತೆ ತಡೆಯುವ ಸಾಮರ್ಥ್ಯವಿದೆ. ತುಪ್ಪವು ಬೆಂಕಿಯ ಸಂಪರ್ಕಕ್ಕೆ ಬಂದಾಗ ಸುತ್ತಮುತ್ತಲಿನ ಪರಿಸರದಲ್ಲಿ ಶುದ್ಧತೆ ಹರಡುತ್ತದೆ. ತುಪ್ಪ ಮತ್ತು ಬೆಂಕಿ ಎರಡನ್ನೂ ಸುಟ್ಟಾಗ, ತುಪ್ಪದ ಅಂಶಗಳು ನಾಶವಾಗುವುದಿಲ್ಲ, ಬದಲಿಗೆ ಅದು ಸಣ್ಣ ಅಗೋಚರ ತುಂಡುಗಳಾಗಿ ವಿಭಜನೆಯಾಗುತ್ತದೆ ಮತ್ತು ವಾತಾವರಣದಲ್ಲಿ ಹರಡುತ್ತದೆ. ಆದ್ದರಿಂದಲೇ ಬೆಂಕಿಯಿಂದ ಹರಡುವ ತುಪ್ಪವು ವಾತಾವರಣವನ್ನು ಶುದ್ಧಗೊಳಿಸುತ್ತದೆ ಎನ್ನುವುದು ವೈಜ್ಞಾನಿಕ ನಂಬಿಕೆ.

ಧಾರ್ಮಿಕ ಹಾಗೂ ಆಧ್ಯಾತ್ಮ ಮಹತ್ವ

ದೀಪದ ಬೆಳಕು ಜ್ಞಾನದ ಸಂಕೇತ. ಧರ್ಮಗ್ರಂಥಗಳಲ್ಲಿ, ದೀಪವು ಧನಾತ್ಮಕ ಶಕ್ತಿಯನ್ನು ಪಡೆಯುತ್ತದೆ ಮತ್ತು ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡು ಹೋಗುತ್ತದೆ  ದೀಪ ಬೆಳಗಿದಾಗ ಅಜ್ಞಾನವೆಂಬ ಕತ್ತಲು ಕಳೆದು ಜೀವನದಲ್ಲಿ ಜ್ಞಾನದ ಬೆಳಕು ಹರಡುತ್ತದೆ. ಪ್ರತಿನಿತ್ಯ ಪೂಜೆಯ ಸಮಯದಲ್ಲಿ ಮನೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ. ಇದಲ್ಲದೆ, ನಿತ್ಯವೂ ದೀಪಗಳನ್ನು ಬೆಳಗಿಸುವ ಮನೆಗಳಲ್ಲಿ ಲಕ್ಷ್ಮಿಯು ಶಾಶ್ವತವಾಗಿ ನೆಲೆಸುತ್ತಾಳೆ. ತುಪ್ಪವನ್ನು ಪಂಚಾಮೃತವೆಂದು ಪರಿಗಣಿಸಲಾಗಿದೆ. ತುಪ್ಪದ ದೀಪವನ್ನು ಯಾವುದೇ ಸಾತ್ವಿಕ ಆರಾಧನೆಯ ಸಂಪೂರ್ಣ ಫಲವನ್ನು ಮತ್ತು ಎಲ್ಲಾ ರೀತಿಯ ಮಂಗಳವನ್ನು ಪಡೆಯಲು ಬಳಸಲಾಗುತ್ತದೆ. ಆದರೆ ತಾಮಸಿಕ ಅಂದರೆ ತಾಂತ್ರಿಕ ಪೂಜೆಯ ಯಶಸ್ಸಿಗೆ ಎಣ್ಣೆ ದೀಪವನ್ನು ಬೆಳಗಿಸಲಾಗುತ್ತದೆ.


ದೀಪ್ಯತೇ ದೀಪಯತಿ  ವಾ ಸ್ವo ಪರಂ ಚೇತಿ ದೀಪಃ |

ಭಗವಂತನನ್ನು ತೋರಿಸುವ ವಸ್ತುವೇ ದೀಪ

ರವೇರಸ್ತ ಸಮಾರಭ್ಯ ಯಾವತ್ ಸೂರ್ಯೋದಯೋ ಭವೇತ್ |
ಯಸ್ಯ ತಿಷ್ಠತಿ ಗೃಹೇ ದೀಪಃ  ತಸ್ಯ ನಾಸ್ತಿ ದರಿದ್ರತಾ ||

ಸೂರ್ಯಾಸ್ತವಾದ ಕೊಡಲೆ ಗೃಹಿಣಿಯು ದೇವರ ಮುoದೆ 
ಮುoದಿನ ದಿನ ಸೂರ್ಯೋದಯವಾಗುವವರೆಗೂ
ದೀಪವು ನಂದಿಹೋಗದಂತೆ ನೋಡಿಕೊಳ್ಳಬೇಕು. ಹೀಗೆ ದೀಪ ಬೆಳಗಿದ ಮನೆಯಲ್ಲಿ ಅಲಕ್ಷ್ಮಿಯು ಸುಳಿಯಲಾರಳು. ದಾರಿದ್ರ್ಯವು ಬರಲಾರದು.

ಲಕ್ಷ್ಮೀದೇವಿಯ ಸನ್ನಿಧಾನ ವಿಶೇಷವಿರುವ ತುಳಸಿ ಕಾಷ್ಠದಿoದ ದೇವರಿಗೆ ದೀಪವನ್ನು ಹಚ್ಚಿದರೆ ಭಗವಂತನು ಹೆಚ್ಚು ಸಂತುಷ್ಟನಾಗುವನು.

ಆತ ಏವ ಶಲಾಕಾಂ ತತ್ರ ಸ್ಥಪಯಂತಿ |

ದೀಪದಲ್ಲಿರುವ ದೇವತೆಗಳು

ಭೂದೇವಿಯರು ಪ್ರಣತಿಯೊಳಗೆ, ಲಕ್ಷ್ಮೀದೇವಿಯರು ಎಣ್ಣೆಯೊಳಗೆ ಶೇಷದೇವರು ಬತ್ತಿಯೊಳಗೆ, ವಾಯುದೇವರು  ಪ್ರಕಾಶದೊಳಗೆ, ರುದ್ರದೇವರು ಕಪ್ಪಿನೊಳಗೆ,
ಶಚಿಪತಿ ಇಂದ್ರದೇವರು ದೀಪಕ್ಕೆ  ಅಭಿಮಾನಿ.

ದೀಪ ಹಚ್ಚುವಾಗ ಹೇಳಬೇಕಾದ ಮಂತ್ರ

ದೀಪ ದೇವಿನಮಸ್ತುಭ್ಯಂ ಮಂಗಲೇ ಪಾಪನಾಶಿನೀ |
ಆಜ್ಞಾನಾಂಧಸ್ಯ ಮೇ ನಿತ್ಯಂ ಸುಜ್ಞಾನಂದೇಹಿ ಸುಪ್ರಭೆ ||


ದೀಪದಲ್ಲಿರಬೇಕಾದ ಬತ್ತಿಯ ಸಂಖ್ಯೆ

ದೀಪದಲ್ಲಿ ಎರಡು ಬತ್ತಿ ಗಳಿರಲೇಬೇಕು. ಒಂದು ಬತ್ತಿ ಇಂದ ದೀಪ ಹಚ್ಚಬಾರದು. ಹೊಬತ್ತಿಯನ್ನು ಎರಡು ಇಟ್ಟಿರಬೇಕು.

ದೀಪಕ್ಕೆ ಉಪಯೋಗಿಸುವ ಎಣ್ಣೆ

ಗವಾಜ್ಯಂ ತಿಲತೈಲಂ ಚ ಕುಸುಮೈಶ್ಚ  ಸುವಾಸಿತಮ್ |
ಸಂಯೋಜ್ಯ ವರ್ತಿನಾ ದೀಪಂ ಭಕ್ತ್ಯಾ  ವಿಷ್ಣೋರ್ನಿವೇದಯೇತ್ ||

ಶ್ರೀವಿಷ್ಣುವಿಗೆ ದೀಪವನ್ನು  ಹಚ್ಚುವಾಗ(ತುಪ್ಪ) ತಿಲತೈಲ (ಎಳ್ಳೆಣ್ಣೆ)ವಾಗಲಿ ಹೂವುಗಳಿಂದ ಸುವಾಸಿತಗೊಳಿಸಿ ನಂತರ ಬೆಳಗಬೇಕು ಎಂಬ ಪ್ರಮಾಣ ವಾಕ್ಯವು ಘೃತದೀಪ, ತೈಲದೀಪವು ವಿಷ್ಣುಲೋಕ ಪ್ರಾಪ್ತಿಗೆ ಕಾರಣವೆನ್ನಲಾಗಿದೆ.ದೀಪಕ್ಕಾಗಿ ತುಪ್ಪ ಮತ್ತು ಎಳ್ಳೆಣ್ಣೆಯನ್ನು ಮಾತ್ರಉಪಯೋಗಿಸಬೇಕು. ಉಳಿದ ಎಣ್ಣೆಗಳು ವರ್ಜ್ಯ ಎಂದು 

‘ಅಗ್ನಿ ಪುರಾಣ’ ತಿಳಿಸಿದೆ.

ದೀಪಸ್ಥಂಭದಲ್ಲಿರುವ ದೇವತೆಗಳು

ದೀಪಸ್ಥoಭದಲ್ಲಿ 27 ನಕ್ಷತ್ರದೇವತೆಗಳು ಇದ್ದಾರೆ  ನಾಳದಲ್ಲಿ ವಾಸುಕಿ ದೇವತೆ, ಪಾದದಲ್ಲಿ ಚಂದ್ರಸೂರ್ಯರು, ದೂಪ ದೀಪ ಪಾತ್ರದಲ್ಲಿ ಅಗ್ನಿದೇವತೆ.

ದೀಪಪಾತ್ರಾದಿದೈವತ್ಯಂ ಮುಖೇ ಪಾವಕ ಮುಚ್ಯಂತೇ |
ದಂಡಮೀಶ್ವರದೈವತ್ಯಂ ಪಾದಂ ಪ್ರಜಾಪತಿಸ್ತಥಾ ||

ದೀಪಸ್ಥoಭಗಳಲ್ಲಿ ಅಗ್ರದಲ್ಲಿಯ ಅಗ್ನಿಯು, ದಂಡದಲ್ಲಿ ರುದ್ರನು, 
ಬುಡದಲ್ಲಿ ಬ್ರಹ್ಮದೇವನು ಇರುವರು.

Comments