ತುಳಸಿ ಗಿಡದ ಮಹತ್ವ
ಸನಾತನ ಹಿಂದೂ ಧರ್ಮದಲ್ಲಿ ತುಳಸಿಗೆ ಬಹುಮುಖ್ಯ ಸ್ಥಾನವಿದೆ ಅದರಲ್ಲೂ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇನ್ನು ಪುರಾಣಗಳಲ್ಲೂ ತುಳಸಿ ಬಗ್ಗೆ ಪ್ರಸ್ತಾಪಗಳಿದ್ದು, ಹಾಗೆಯೇ ಆಯುರ್ವೇದದಲ್ಲೂ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ ಸರ್ವ ರೋಗಕ್ಕೂ ಔಷಧಿ ತುಳಸಿ ಎಂದು ಕರೆಯುತ್ತಾರೆ ಹಾಗೆ ತುಳಸಿ ಇಲ್ಲದೆ ಯಾವ ಪೂಜೆಯು ಸಮಪ್ತಿ ಆಗುವುದಿಲ್ಲ ಎನ್ನುವ ನಂಬಿಕೆ ಕೂಡ ಇದೆ.
ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟ್ವಾ ವಪು: ಪಾವನೀ
ರೋಗಾಣಾಂ ಅಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ: ||
ತುಳಸಿಗೆ ನಮಸ್ಕರಿಸಬೇಕು – ಆ ತುಳಸಿಯು ಏನೇನು ಮಾಡತಕ್ಕಂತವಳು ಎಂಬುದನ್ನು ಈ ಶ್ಲೋಕ ಹೇಳುತ್ತದೆ –
ತನ್ನ ದರ್ಶನಮಾತ್ರದಿಂದ ಸಕಲಪಾಪಗಳ ಹಿಂಡನ್ನೇ ಪರಿಹರಿಸುತ್ತದೆ.
ತನ್ನ ಸ್ಪರ್ಶನದಿಂದ ಇಡೀ ದೇಹವನ್ನೇ ಪಾವನಗೊಳಿಸುತ್ತದೆ
ವಂದನೆ ಮಾತ್ರದಿಂದ ಸಕಲರೋಗಗಳನ್ನೂ ಗುಣಪಡಿಸುತ್ತದೆ.
ಪ್ರೋಕ್ಷಣದಿಂದ ಯಮನ ಭಯವನ್ನು ಪರಿಹರಿಸುತ್ತದೆ
ಮನೆಯಲ್ಲಿ ಬೆಳೆಸುವುದರಿಂದ ಭಗವಂತನಾದ ಶ್ರೀ ಕೃಷ್ಣನಲ್ಲಿ ಭಕ್ತಿಯನ್ನು ಕರುಣಿಸುತ್ತದೆ
ತುಳಸಿಯನ್ನು ಪರಮಾತ್ಮನ ಪಾದಕಮಲದಲ್ಲಿ ಸಮರ್ಪಣದಿಂದ ಮುಕ್ತಿ ಫಲವನ್ನು ನೀಡುತ್ತದೆ.
ತುಳಸಿಯಲ್ಲಿ 5 ವಿಧದ ತುಳಸಿಗಳು ಇದೆ
ತುಳಸಿಯಲ್ಲಿ ಒಟ್ಟು 5 ವಿಧಗಳಿವೆ. ಅವುಗಳೆಂದರೆ:
1)ಶ್ಯಾಮ ತುಳಸಿ 2)ರಾಮ ತುಳಸಿ 3)ಶ್ವೇತ ತುಳಸಿ 4)ವನ ತುಳಸಿ 5)ನಿಂಬೆ ತುಳಸಿ
ಶ್ಯಾಮ.
ಶ್ಯಾಮ ತುಳಸಿ ಎಲೆಗಳು ನೇರಳೆ ಬಣ್ಣದಲ್ಲಿ ಇರುತ್ತದೆ. ಅದಕ್ಕಾಗಿಯೇ ಇದನ್ನು ಶ್ಯಾಮ ತುಳಸಿ ಎಂದು ಕರೆಯಲಾಗುತ್ತದೆ. ತುಳಸಿಯ ಕಪ್ಪು ಬಣ್ಣದಿಂದಾಗಿ ಅದು ಶ್ರೀಕೃಷ್ಣನಿಗೆ ತುಂಬಾ ಪ್ರಿಯವಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಕೃಷ್ಣ ತುಳಸಿ ಎಂದೂ ಕೂಡ ಕರೆಯುತ್ತಾರೆ.
ಶ್ವೇತ
ಶ್ವೇತ ತುಳಸಿ ಅಥವಾ ಬಿಳಿ ತುಳಸಿಯನ್ನು ವಿಷ್ಣು ತುಳಸಿ ಎಂದೂ ಕೂಡ ಕರೆಯುತ್ತಾರೆ. ಬಿಳಿ ಬಣ್ಣದ ಈ ತುಳಸಿಯಲ್ಲಿ ನಾವು ಹೂವುಗಳನ್ನು ಕೂಡ ನೋಡಬಹುದು. ಈ ಕಾರಣಕ್ಕಾಗಿ ಇದನ್ನು ಬಿಳಿ ತುಳಸಿ ಎಂದು ಕರೆಯಲಾಗುತ್ತದೆ. ಇದನ್ನು ವಿಷ್ಣುವಿನ ಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ವನ ತುಳಸಿ
ನಿಂಬೆ ತುಳಸಿ
ನಿಂಬೆ ತುಳಸಿ ಬಗ್ಗೆ ಹೇಳುವುದಾದರೆ ಈ ಪವಿತ್ರ ತುಳಸಿ ಗಿಡದ ಎಲೆಗಳು ನೋಡಲು ನಿಂಬೆ ಗಿಡದ ಎಲೆಗಳಂತೇ ಇರುತ್ತದೆ. ಇದನ್ನು ಪ್ರಹ್ಲಾದ ತುಳಸಿ ಎಂದೂ ಕರೆಯುತ್ತಾರೆ.
ರಾಮ ತುಳಸಿ
ಇದರ ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ ಇದು ಹೆಚ್ಚಿನ ಮನೆಗಳಲ್ಲಿ ಹಾಗೂ ಹೆಚ್ಚಾಗಿ ಉಪಯೋಗಿಸುತ್ತಾರೆ ಅಲ್ಲದೆ, ಈ ತುಳಸಿ ಶ್ರೀ ರಾಮನಿಗೆ ತುಂಬಾ ಪ್ರಿಯವಾದ ತುಳಸಿಯಾಗಿದೆ ಆದ್ದರಿಂದ ಇದನ್ನು ರಾಮ ತುಳಸಿ ಎಂದು ಕರೆಯಲಾಗುತ್ತದೆ. ರಾಮ ತುಳಸಿ ಎಲೆಗಳು ಸಿಹಿಯಾದ ಅನುಭವವನ್ನು ನೀಡುತ್ತದೆ. ಈ ತುಳಸಿಯನ್ನು ಮನೆಯಲ್ಲಿ ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಆ ಮನೆಯಲ್ಲಿ ಪ್ರಗತಿಯಾಗುತ್ತದೆ ಎನ್ನುವ ನಂಬಿಕೆಯಿದೆ.
ಆರೋಗ್ಯ ಲಾಭಗಳು
ತುಳಸಿಯಲ್ಲಿ ಅಂಟಿ ಆಕ್ಸಿಡೆಂಟ್ಸ್ ಅಂಶಗಳು ಸಮೃದ್ದವಾಗಿರುವುದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಎಲ್ಲಾ ರೋಗಗಳ ವಿರುದ್ದ ಹೋರಾಡುತ್ತದೆ.
ಬಾಯಿ ದುರ್ವಾಸನೆಯಿಂದ ಕೂಡಿದ್ರೆ ತುಳಸಿ ಎಲೆ ಅತ್ಯುತ್ತಮ ಮನೆಮದ್ದು. ಏಕೆಂದರೆ ಇದರ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಈ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ಕೆಟ್ಟ ವಾಸನೆಯನ್ನು ದೂರ ಮಾಡಬಹುದು.
ಅಜೀರ್ಣ ಸಮಸ್ಯೆ ಇದ್ದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ತುಳಸಿ ಎಲೆಯನ್ನು ಅಗಿದು ತಿಂದರೆ ಅಜೀರ್ಣ ಸಮಸ್ಯೆ ದೂರವಾಗುತ್ತದೆ.
ಹಾಗೆ ಜ್ವರಕ್ಕೂ ಕೂಡ ತುಳಸಿ ರಾಮಬಾಣ ಜೋರಾಗಿ ಜ್ವರ ಬಂದರೆ ತುಳಸಿ ಎಲೆಗಳನ್ನು ಅರೆದು ಪಚ್ಚ ಕರ್ಪೂರದ ಜೊತೆ ಸೇರಿಸಿ ತಲೆಗೆ ಹಚ್ಚಿದರೆ ಜ್ವರ ಕಮ್ಮಿಯಾಗುತ್ತದೆ.
ಸಂಜೆ ಹೊತ್ತಿನಲ್ಲಿ ತುಳಸಿಗೆ ಯಾಕೆ ದೀಪ ಹಚ್ಚುತ್ತಾರೆ.?
ಸಂಜೆ ಸಮಯದಲ್ಲಿ ತುಳಸಿಕಟ್ಟೆಯಲ್ಲಿ ದೀಪ ಹಚ್ಚುವುದರಿಂದ. ಮನೆಯಲ್ಲಿ ಸುಖ ಶಾಂತಿ, ಸಂತೋಷ ಇರುತ್ತದೆ ಸದಾ. ಹಾಗೆ ದೀಪಕ್ಕೆ ವಿಶೇಷವಾದ ಶಕ್ತಿ ಇರುವುದರಿಂದ ದೀಪದ ಬೆಳಕಿನಿಂದ ಹೊರಹೊಮ್ಮುವ ದೈವಿಕ ಶಕ್ತಿಗಳು ದುಷ್ಟ ಶಕ್ತಿಗಳನ್ನ ನಾಶ ಮಾಡುತ್ತದೆ .
ನೈವೇದ್ಯಕ್ಕೆ ತುಳಸಿ ಯಾಕೆ ಉಪಯೋಗಿಸುತ್ತಾರೆ?
ಹಾಗೆ ವಿಶೇಷವಾಗಿ ದೇವರಿಗೆ ನೈವೇದ್ಯವನ್ನ ಅರ್ಪಿಸುವಾಗ ತುಳಸಿಯನ್ನ ಉಪಯೋಗಿಸುತ್ತಾರೆ ತುಳಸಿಗೆ ದೈವಿಕ ಶಕ್ತಿಗಳನ್ನ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಇದೆ ಹಾಗೆ ನೈವೇದ್ಯದಲ್ಲಿ ತುಳಸಿ ಇಡುವುದರಿಂದ ಹಾಗೂ ತುಳಸಿಯಿಂದ ನೈವೇದ್ಯವನ್ನ ತೆಗೆದು ದೇವರಿಗೆ ಪ್ರೋಕ್ಷಣೆ ಮಾಡುವುದರಿಂದ ದೈವಿಕ ಶಕ್ತಿಗಳನ್ನ ಸೆಳೆದುಕೊಂಡು ಅದು ನೈವೇದ್ಯಕ್ಕೆ ತುಂಬುತ್ತದೆ ಆಗ ಆ ನೈವೇದ್ಯಕ್ಕೂ ಕೂಡ ವಿಶೇಷ ಶಕ್ತಿ ಬರುತ್ತದೆ.
ತುಲಸೀಪ್ರದಕ್ಷಿಣೆ ಮಾಡುವಾಗ ಹೇಳಬೇಕಾದ ಮಂತ್ರ
ತುಲಸೀಲಾನನಂ ಯತ್ರ ಯತ್ರ ಪದ್ಮವನಾನಿ ಚ
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿ: |
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾ: ಸರಿತಸ್ತಥಾ |
ವಾಸುದೇವಾದಯೋ ದೇವಾ ವಸಂತಿ ತುಲಸೀವನೇ |
ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಂ |
ಮಹಾತ್ಮೆಯನ್ನು ಶ್ರುತಿವಾಕ್ಯ ರೀತ್ಯ ವರ್ಣಿಸಿದ್ದಾರೆ.
ತುಳಸಿಯ ದರ್ಶನ, ಸ್ಪರ್ಶನ, ಸ್ಮರಣೆ, ಧಾರಣ, ವಂದನ, ಉಪಾಸನೆ, ಮುಂತಾದವುಗಳಿಂದ ಶ್ರೀಹರಿಯು ಒಲಿವನೆಂದು ಹೇಳುತ್ತಾರೆ.
ವಾದಿರಾಜರು ತುಳಸಿಯ ಬಗ್ಗೆ
ಒಂದು ಪ್ರದಕ್ಷಿಣವನು ಮಾಡಿದವರ
ಹೊಂದುಪುದು ಭೂಪ್ರದಕ್ಷಿಣ ಪುಣ್ಯ
ಎಂದೆಂದಿವಳ ಸೇವಿಪ ನರರಿಗೆ
ಇಂದಿರೆಯರಸ ಕೈವಲ್ಯವೀವ ||
ವಿಜಯದಾಸರು ತುಳಸಿಯ ಬಗ್ಗೆ
ಉದಯಕಾಲದೊಳೆದ್ದು ಆವನಾದರೂ ತನ್ನ
ಹೃದಯ ನಿರ್ಮಲನಾಗಿ ಭಕುತಿ ಪೂರ್ವಕದಿಂದ
ಸದಮಲಾ ತುಳಸಿಯನು ಸ್ತೋತ್ರ ಮಾಡಿದ
ಕ್ಷಣಕೆ ಮದಗರ್ವ ಪರಿಹಾರವೂ
ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿ
ನದಿಯ ತೀರದಲ್ಲೊಬ್ಬ ಭೂಸುರ ಪದಕೆ ಪೋದ
ಪದಪದೆಗೆ ಸಿರಿ ವಿಜಯವಿಠಲಗೆ
ಪ್ರಿಯಳಾದ ಮದನತೇಜಳ ಭಜಿಸಿರಯ್ಯಾ ||
Comments