ಭಗವಾನ್ ವೇದವ್ಯಾಸರು ರಚಿಸಿರುವ 18 ಪುರಾಣಗಳು
ಪುರಾ (ಹಿಂದೆ) ನವಂ (ಹೊಸದು) ಎಂದು ಪುರಾಣಪದದ ವ್ಯುತ್ಪತ್ತಿಯನ್ನು ಹೇಳುವು ಪುರಾಣದ ಅಕ್ಷರಶಃ ಅರ್ಥ - ಪ್ರಾಚೀನ ನಿರೂಪಣೆ ಅಥವಾ ಹಳೆಯ ಕಥೆ. ಪ್ರಾಚೀನ ಭಾರತದ ಇತಿಹಾಸವನ್ನು ಪುರಾಣಗಳಲ್ಲಿ ದಾಖಲಿಸಲಾಗಿದೆ. ಪುರಾತನ ಕಥೆಗಳ ಜೊತೆಗೆ ಜ್ಞಾನ, ವಿಜ್ಞಾನ ಮತ್ತು ಧರ್ಮದಲವು ಆಳವಾದ ಗಂಭೀರ ವಿಷಯಗಳೂ ಇದರಲ್ಲಿ ಸೇರಿಕೊಂಡಿವೆ.
01 ಮತ್ಸ್ಯ ಪುರಾಣ
ಮತ್ಸ್ಯ ಪುರಾಣ 14000 ಶ್ಲೋಕಗಳು
ಮತ್ಸ್ಯ ಪುರಾಣ ಇದು ಪುರಾಣಗಳಲ್ಲೇ ಅತೀ ಪ್ರಾಚೀನವಾದುದು ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ.ಇದರಲ್ಲಿ ವಿಷ್ಣುವಿನ ಪ್ರಥಮ ಅವತಾರವಾದ ಮತ್ಸ್ಯಾವತಾರದ ಕಥೆ ಬರುತ್ತದೆ.ಕಚದೇವಯಾನಿ ಕಥೆ,ತ್ರಿಪುರದಹನದ ಕಥೆ ಮುಂತಾದವುಗಳು ಇದರಲ್ಲಿ ಅಡಕವಾಗಿದೆ.
02 ಮಾರ್ಕಂಡೇಯ ಪುರಾಣ
ಮಾರ್ಕಂಡೇಯ ಪುರಾಣ 9000 ಶ್ಲೋಕಗಳು ಇದು ಜೈಮಿನಿ ಹಾಗೂ ಮಾರ್ಕಂಡೇಯ ನಡುವಿನ ಸಂಭಾಷಣೆಯ ರೂಪದಲ್ಲಿದೆ.ಇದರಲ್ಲಿ ಜಗತ್ತಿನ ಸೃಷ್ಟಿ, ಅಗ್ನಿ ಸೂರ್ಯ, ಬ್ರಹ್ಮಾದಿ ದೇವತೆಗಳ ಸ್ತುತಿ ಮುಂತಾದವುಗಳು ಇದೆ. ಇದಲ್ಲದೆ ಇದರ ಮುಖ್ಯ ಭಾಗವಾಗಿ ಸುಪ್ರಸಿದ್ಧ 'ದೇವಿ ಮಹಾತ್ಮೆ' ಯ ಕಥೆ ಬರುತ್ತದೆ.
03 ಭಾಗವತ ಪುರಾಣ
ಭಾಗವತ ಪುರಾಣ 18000 ಶ್ಲೋಕಗಳು
ಭಾಗವತ ಪುರಾಣ ಹದಿನೆಂಟು ಪುರಾಣಗಳಲ್ಲೇ ತುಂಬಾ ಪ್ರಸಿದ್ಧವಾದುದು.ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಹೇಳುತ್ತಾರೆ . ಜ್ಞಾನ ಹಾಗೂ ಭಕ್ತಿ ಎರಡು ವಿಚಾರಗಳೂ ಭಾಗವತದಲ್ಲಿ ನೀಡಲಾಗಿದೆ . ಶ್ರೀ ಕೃಷ್ಣನ ಜನ್ಮ ಲೀಲೆಗಳು,ಸೃಷ್ಟಿ,ಭಗವಂತ,ಆತ್ಮ ಮುಂತಾದ ವಿಷಯಗಳು ವಿಶದವಾಗಿ ವಿವರಿಸಲ್ಪಟ್ಟಿದೆ.
04 ಭವಿಷ್ಯ ಪುರಾಣ
ಭವಿಷ್ಯ ಪುರಾಣವು 14500 ಶ್ಲೋಕಗಳು . ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಆಕರ್ಷಕ ಒಳನೋಟಗಳಿಂದ ತುಂಬಿದ ಪ್ರಾಚೀನ ಭಾರತೀಯ ಗ್ರಂಥವಾಗಿದೆ. ಹಿಂದೂ ಧರ್ಮದಲ್ಲಿ ಹದಿನೆಂಟು ಮಹಾಪುರಾಣಗಳಲ್ಲಿ ಒಂದು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಈ ಪುಸ್ತಕವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ, ವಿಶ್ವವಿಜ್ಞಾನ, ಪುರಾಣ, ಜ್ಯೋತಿಷ್ಯ, ಧಾರ್ಮಿಕ ಆಚರಣೆಗಳು ಮತ್ತು ನೈತಿಕ ಬೋಧನೆಗಳಂತಹ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ.
05 ಬ್ರಹ್ಮ ಪುರಾಣ 1
ಬ್ರಹ್ಮಪುರಾಣ 10000 ಶ್ಲೋಕಗಳು ಇರುವ ಆದಿಪುರಾಣವೆಂದು ಹೆಸರಾಗಿದೆ. ಉಪೋದ್ಘಾತದಲ್ಲಿ ಲೋಮಹರ್ಷಣ ಸೂತನ ನೈಮಿಷಾರಣ್ಯಕ್ಕೆ ಹೋದಾಗ ಅಲ್ಲಿದ್ದ ಋಷಿಗಳು ಪ್ರಪಂಚದ ಆದ್ಯಂತಗಳನ್ನು ವಿವರಿಸಲು ಕೇಳಿಕೊಳ್ಳಲಾಗಿ ಸೂತಪುರಾಣಿಕ ಮಾನವಕುಲದ ಮೂಲಪಿತಾಮಹರಲ್ಲಿ ಒಬ್ಬನಾದ ದಕ್ಷನಿಗೆ ಒಮ್ಮೆ ಸೃಷ್ಟಿಕರ್ತನಾದ ಬ್ರಹ್ಮ ಹೇಳಿದ ಬ್ರಹ್ಮಪುರಾಣವನ್ನು ಹೇಳಲು ಒಪ್ಪುತ್ತಾನೆ. ಅವನ ಪುರಾಣ ಪ್ರವಚನದಲ್ಲಿ ಎಲ್ಲ ಪುರಾಣಗಳಿಗೂ ಹೆಚ್ಚು ಕಡಿಮೆ ಸಾಧಾರಣವೆನ್ನಿಸುವ ವಿಶ್ವಸೃಷ್ಟಿ, ಆದಿಮಾನವನಾದ ಮನು ಮತ್ತು ಅವನ ವಂಶಜರ ಹುಟ್ಟು, ದೇವತೆಗಳ ಉತ್ಪತ್ತಿ, ಗಂಧರ್ವಾದಿಗಳ ಉದಯ, ಸೂರ್ಯ, ಚಂದ್ರವಂಶಜರ ರಾಜ ಮಹಾರಾಜರ ಪೀಳಿಗೆಯ ವೃತ್ತಾಂತ, ಭೂವಿಭಾಗ, ಸ್ವರ್ಗ, ನರಕಗಳ ವಿವರ ಬರುತ್ತವೆ. ಪುರಾಣದ ಬಹ್ವಂಶ ತೀರ್ಥ ಮಾಹಾತ್ಮ್ಯವನ್ನು ಹೇಳುತ್ತದೆ. ಒರಿಸ್ಸದ ದೇವಾಲಯ ಮತ್ತು ಸುತ್ತಮುತ್ತಲಿನ ತೀರ್ಥಕ್ಷೇತ್ರಗಳು ಗಣ್ಯವಾಗಿ ವರ್ಣಿಸಲ್ಪಟ್ಟಿವೆ. ಆದಿತ್ಯೋತ್ಪತ್ತಿ, ಶಿವಪ್ರಿಯವನ, ಉಮಾಜನನ, ಉಮಾವಿವಾಹ, ಶಿವಸ್ತೋತ್ರ, ಕಂಡುಮಹರ್ಷಿಯ ಸ್ತ್ರೀಲೋಲುಪತೆ, ವಿರಾಗ, ಕೃಷ್ಣಲೀಲೆ, ಶ್ರಾದ್ಧನಿಯಮ, ಧಾರ್ಮಿಕ ಜೀವನದ ನೀತಿ, ವರ್ಣಾಶ್ರಮ ಧರ್ಮ, ಸ್ವರ್ಗ, ನರಕ, ವಿಷ್ಣುಪುಜಾದಿಗಳು-ಇವು ಇದರ ಸಾರ. ಯುಗ, ಪ್ರಲಯ, ಸಾಂಖ್ಯಯೋಗ, ಮೋಕ್ಷೋಪಾಯಗಳ ವಿವೇಚನೆಯೂ ಕೊನೆಯಲ್ಲಿವೆ.
06 ಬ್ರಹ್ಮಾಂಡ ಪುರಾಣ
ಬ್ರಹ್ಮಾಂಡ ಪುರಾಣ 12000 ಶ್ಲೋಕಗಳನ್ನು ಇರುವ ಈ ಪುರಾಣ ಬ್ರಹ್ಮನಿಂದ ನಿರ್ಮಾಣಗೊಂಡು ಪಂಚಭೂತಾತ್ಮಕ ಪ್ರಪಂಚ. ಅದುವೇ ಅನಂತವಾದ ಈ ವಿಶ್ವ. ಬ್ರಹ್ಮಾಂಡ ಪುರಾಣದಲ್ಲಿ ಬ್ರಹ್ಮಾಂಡ ಹೇಗೆ ನಿರ್ಮಾಣವಾಯಿತು ಎಂಬ ಸಂಪೂರ್ಣ ವಿವರಣೆ ಇದೆ. ಸೃಷ್ಟಿಕರ್ತ ಬ್ರಹ್ಮನು ಈ ವಿಶ್ವವು ಒಂದು ಸುವ್ಯವಸ್ಥೆಗೆ ಒಳಪಟ್ಟು ಹೇಗೆ ಕೋಟಿ ಕೋಟಿ ಯುಗಗಳಿಂದ ನಡೆಯುತ್ತಿದೆ ಎಂಬುದನ್ನೂ, ವಿಶ್ವ ಮೂಲತತ್ವದ ದಿವ್ಯ ದರ್ಶನವನ್ನೂ ಪ್ರಕಾಶಪಡಿಸಿರುತ್ತಾನೆ.
ವಿಶ್ವದ ಸಕಲ ವ್ಯವಹಾರಗಳು ಮೂಲದಲ್ಲಿ ಬ್ರಹ್ಮ ನಿರ್ಮಿತ ಪ್ರಾರಂಭಗೊಂಡು ಹೇಗೆ ಅಂತ್ಯವಾಗುತ್ತದೆ ಎಂಬುದರ ಉಲ್ಲೇಖವಿದೆ. ಗ್ರಹ, ನಕ್ಷತ್ರ, ಧೂಮಕೇತುಗಳ ಧಾತು, ಪರಿಭ್ರಮಣಗಳಂಥ ಸಕಲ ವಿಷಯಗಳೂ ಸವಿಸ್ತಾರವಾಗಿ ಉಲ್ಲೇಖಿತವಾಗಿದೆ. ಇದು ದೈವಘೋಷಿತವೂ, ಶ್ರುತಿಸಿದ್ಧವೂ ಆದ ವಿಚಾರವೂ ಆಗಿದೆ ಎಂಬುದು ನಮ್ಮ ಪೂರ್ವಿಕರ ನಿಲುವು. ಇದರಲ್ಲಿ ವ್ಯೂಮ ಸಂಬಂಧಿತ ಸಕಲ ವಿಚಾರಗಳು ಅಡಕವಾಗಿದೆ. ಅನಂತಕಾಲದ ವಿವರಣೆ, ಯುಗಗಳು, ಕಲ್ವ, ಮನ್ವಂತರ ಮತ್ತು ಪರ ಇವುಗಳ ವರ್ಣನೆ ಇದೆ.
ಈ ಪುರಾಣದಲ್ಲಿ ವಿಶ್ವದ ಶಾಶ್ವತ ಸತ್ಯ ಮತ್ತು ತತ್ವ ಯಾವುದು ಎಂಬುದರ ವಿವರಣೆ ಇದೆ. ನಾವು ಇಂದು ಯಾವುದನ್ನು ಭಾರತ, ಭರತ ಖಂಡ, ಭರತ ವರ್ಷ, ಜಂಬೂದ್ವೀಪವೆಂದು ಭೌಗೋಳಿಕವಾಗಿ ಗುರುತಿಸಿರುವೆವೋ ಆ ಜಂಬೂದ್ವೀಪದ ಸಂಪೂರ್ಣ ವರ್ಣನೆ, ಸಪ್ತದ್ವೀಪಗಳ ವರ್ಣನೆ, ಸಪ್ತ ಸಮುದ್ರಗಳ ವರ್ಣನೆ ಇಲ್ಲಿದೆ.
ಇದರಲ್ಲಿ ಭರತ, ಪೃಥು ಮತ್ತು ಅಗ್ನಿ ಚಕ್ರವರ್ತಿಗಳ ವಂಶಾವಳಿಯ ವರ್ಣನೆಯುಂಟು. ಇದರಲ್ಲಿ ರಾಮಾಯಣವನ್ನು, ಅಧ್ಯಾತ್ಮ ರಾಮಾಯಣವನ್ನಾಗಿ ಏಳು ಕಾಂಡಗಳಲ್ಲಿ ವಿಭಾಗಿಸಿ ಶ್ರೀರಾಮಾವತಾರದ ಉದ್ದೇಶ, ಮಾನವನಾಗಿ ಅವತರಿಸಿದ ಶ್ರೀವಿಷ್ಣು ಲೋಕೋದ್ಧಾರಕ್ಕಾಗಿ ದೈವತ್ವ ಮರೆತು ಸಾಧಾರಣ ಮಾನವನಂತೆ ಬದುಕಿ ಉನ್ನತ ಆದರ್ಶಗಳನ್ನು ಪರಿಪಾಲಿಸಿ, ಮರ್ಯಾದ ಪುರುಷೋತ್ತಮನೆನಿಸಿಕೊಂಡವರ ವರ್ಣನೆ ಇದೆ.
ಇದರಲ್ಲಿ ಶ್ರೀಕೃಷ್ಣಾವತಾರದ ದಿವ್ಯ ಸಂದೇಶ, ಮಹಾತ್ಕಾರ್ಯಗಳ ಜಾಜ್ವಲ್ಯ ವರ್ಣನೆಯ ಜತೆಗೆ ರಾಧಾಕೃಷ್ಣರ ಪ್ರೇಮಕತ್ವದ ಭಕ್ತಿ- ರಮ್ಯತೆಗಳ ಗೂಢಾರ್ಥವೇನು, ಅದರಿಂದ ದೈವತ್ವಕ್ಕೆ ಏರುವ ಸೋಪಾನ ಯಾವುದು ಎಂಬುದರ ವಿವರಣೆ ಹುದುಗಿದೆ.
07 ಬ್ರಹ್ಮವೈವರ್ತ ಪುರಾಣ
ಬ್ರಹ್ಮವೈವರ್ತ ಪುರಾಣ ಇದು 18000 ಶ್ಲೋಕಗಳು ಇರುವ ಈ ಪುರಾಣ ನಾಲ್ಕು ಭಾಗಗಳಲ್ಲಿ ಇದೆ. ಮೊದಲನೆಯ ಭಾಗದಲ್ಲಿ ಪ್ರಕೃತಿಯ ಸೃಷ್ಟಿಯ ವಿಷಯವಿದೆ.ಎರಡನೆಯ ಭಾಗದಲ್ಲಿ ಪ್ರಕೃತಿಯ ಭಾಗವಾದ ಸ್ತ್ರೀ ದೇವತೆಗಳ ಬಗ್ಗೆ ವಿವರಗಳಿವೆ.ಮೂರನೆಯ ಭಾಗದಲ್ಲಿ ಗಣೇಶ,ಶಿವ,ಪಾರ್ವತಿ ಮುಂತಾದವರ ಬಗ್ಗೆ ವಿವರಗಳಿವೆ.ನಾಲ್ಕನೆಯ ಭಾಗದಲ್ಲಿ ಕೃಷ್ನ ಜನ್ಮ ವೃತ್ತಾಂತ ಇದೆ.
08 ವಿಷ್ಣು ಪುರಾಣ
ವಿಷ್ಣು ಪುರಾಣವು 13000 ಶ್ಲೋಕಗಳು ಇರುವ ಅತ್ಯಂತ ಪ್ರಮುಖ ಪುರಾಣವಾಗಿದೆ.
ಅಷ್ಟಾದಶ ಪುರಾಣಗಳಲ್ಲಿ ಪ್ರಾಥಮಿಕ ಪುರಾಣವೆಂದು ಹೇಳಬಹುದು. ಹಿಂದುಗಳಿಗೆ, ಅದರಲ್ಲೂ ಮುಖ್ಯವಾಗಿ ವೈಷ್ಣವ ಸಂಪ್ರದಾಯವನ್ನು ಅನುಸರಿಸುವವರಿಗೆ ಇದು ಜಗತ್ತಿನ ಸೃಷ್ಟಿ-ಸ್ಠಿತಿ-ಲಯಗಳ ವಿಚಾರ ಅತ್ಯಂತ ಮಹತ್ವದ, ಪವಿತ್ರಮಯವಾದ ಗ್ರಂಥ.
09 ವರಾಹ ಪುರಾಣ
ವರಾಹ ಪುರಾಣ 14000 ಶ್ಲೋಕ ಇರುವ ಇದರಲ್ಲಿ ವಿಷ್ಣು ವರಾಹ ಅವತಾರ ಎತ್ತಿ ಹಿರಣ್ಯಾಕ್ಷ ನಿಂದ ಭೂದೇವಿ ಏನು ರಕ್ಷಿಸಿದ ವಿಷಯಗಳು
10 ವಾಮನ ಪುರಾಣ
ವಾಮನ ಪುರಾಣ 10000 ಶ್ಲೋಕಗಳಿರುವ ಈ ಪುರಾಣ ಭಗವಂತನಾದವಿಷ್ಣುವಿನ ವಾಮನ ಅವತಾರದ ಕಥೆ,ಸಾತ್ವಿಕನ ಗುಣಸ್ವರೂಪಗಳು,ದಾನದ ಮಹಿಮೆ ಮುಂತಾದ ವಿಚಾರಗಳು ಇದರಲ್ಲಿ ವಿವರಿಸಲ್ಪಟ್ಟಿದೆ.
11 ವಾಯು ಪುರಾಣ
ವಾಯು ಪುರಾಣ 14000 ಶ್ಲೋಕ ಇರುವ ಇದರಲ್ಲಿ ಜಗತ್ತಿನ ಸೃಷ್ಟಿ,ಕಾಲದ ಮಾನ,ಪ್ರಾಣಿ-ಪಕ್ಷಿಗಳ ಹುಟ್ಟು ಬೆಳವಣಿಗೆ,ವೈವಸ್ವತ ಮನು ಮೊದಲಾದವರ ವಂಶಾವಳಿ ಪ್ರಮುಖವಾಗಿ ವಿವರಿಸಲ್ಪಟ್ಟಿದೆ.ಜಗತ್ತನ್ನು ಏಳು ದ್ವೀಪಗಳ ವಿಭಾಗ ಮಾಡಿ ಅದರ ವಿವರ,ಬೇರೆ ಬೇರೆ ಖಂಡಗಳಲ್ಲಿರುವ ಜನರ ಜೀವನ ವಿಚಾರ,ಏಳು ಲೋಕಗಳ ವಿವರ,ನಾಲ್ಕುಯುಗಗಳ ವಿಚಾರ,ಸಂಗೀತ ವಿದ್ಯೆ,ವೇದವಿದ್ಯೆ,ವಿವಿಧ ವರ್ಣಶ್ರಮಗಳ ಜನರ ಕರ್ತವ್ಯ ಜವಾಬ್ದಾರಿಗಳ ವಿವರ ಇತ್ಯಾದಿ ವಿಷಯಗಳು ಈ ಪುರಾಣದಲ್ಲಿ ಅಡಕವಾಗಿದೆ.
12 ಅಗ್ನಿ ಪುರಾಣ
ಅಗ್ನಿ ಪುರಾಣ10500 ಶ್ಲೋಕಗಳು ಇರುವ ಈ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು.ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ಈ ಪುರಾಣದಲ್ಲಿ ಕಾವ್ಯ,ನಾಟಕಗಳ ಲಕ್ಷಣಗಳು,ರಸವರ್ಣನೆಗಳು,ಮಂತ್ರ ಮತ್ತು ಮಂತ್ರವಿಧಾನಗಳು,ರಾಜಧರ್ಮ ಮುಂತಾದ ವಿಚಾರಗಳು ಹೇಳಲ್ಪಟ್ಟಿದೆ.
13 ನಾರದ ಪುರಾಣ
ನಾರದ ಪುರಾಣ ಅಥವಾ ನಾರದೀಯ ಪುರಾಣದಲ್ಲಿ 15000 ಶ್ಲೋಕಗಳು ಇದೆ. ವೇದಾಂಗಗಳಾದ ಶಿಕ್ಷಾ, ವ್ಯಾಕರಾಣಾದಿಗಳ ವಿಚಾರ ಇತ್ಯಾದಿಗಳು ಬರುತ್ತವೆ. ಅನೇಕ ಕಥೆಗಳು ಹಾಗೂ ಉಪಕಥೆಗಳನ್ನು ಒಳಗೊಂಡ ಇದು ಸಂಸಾರಿಗಳಿಗೆ ಉಪಯುಕ್ತವಾದ ಹಲವಾರು ವಿಷಯಗಳನ್ನು ಒಳಗೊಂಡಿದೆ.ನಾರದ ಹಾಗೂ ಸನತ್ಕುಮಾರರ ನಡುವೆ ನಡೆದ ಸಂಭಾಷಣೆಯ ರೂಪದಲ್ಲಿರುವುದರಿಂದ ನಾರದೀಯ ಪುರಾಣ ಎನ್ನುತ್ತಾರೆ.
14 ಪದ್ಮ ಪುರಾಣ
ಪದ್ಮಪುರಾಣ 55000 ಶ್ಲೋಕಗಳು
ಹದಿನೆಂಟು ಪ್ರಮುಖ ಪುರಾಣಗಳಲ್ಲಿ ಪದ್ಮ ಪುರಾಣವೂ ಒಂದು. ಪದ್ಮ ಪುರಾಣಇದರಲ್ಲಿ ಐದು ಕಾಂಡಗಳಿವೆ. ಪ್ರಥಮ ಸೃಷ್ಟಿ ಕಾಂಡದಲ್ಲಿ ಭೀಷ್ಮ ಹಾಗೂ ಮುನಿ ಪುಲಸ್ಯರ ನಡುವಿನ ಸಂಭಾಷಣೆ ಇದೆ.ಇದರಲ್ಲಿ ಗ್ರಹಗಳ ಬಗ್ಗೆ,ಪುಷ್ಕರದ ಬಗ್ಗೆ ವಿವರಗಳಿವೆ. ಎರಡನೆಯ ಭೂಮಿ ಕಾಂಡದಲ್ಲಿ ಪೃಥ್ವಿಯ ಬಗ್ಗೆ ವಿವರಗಳಿವೆ. ಇದು ಆ ಕಾಲದ ಭೂಗೋಳದ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ.ಮೂರನೆಯ ಸ್ವರ್ಗ ಕಾಂಡದಲ್ಲಿ ಅಂತರಿಕ್ಷ ಹಾಗೂ ಜಂಬೂದ್ವೀಪದ ಬಗ್ಗೆ ವಿವರಗಳಿವೆ.ನಾಲ್ಕನೆಯಪಾತಾಳ ಕಾಂಡದಲ್ಲಿ ರಾಮ ಹಾಗೂ ಕೃಷ್ಣರ ಬಗ್ಗೆ ವಿವರಗಳಿವೆ.ಕೊನೆಯ ಉತ್ತರಕಾಂಡದಲ್ಲಿ ಶಿವ ಹಾಗೂ ಪಾರ್ವತಿಯವರ ನಡುವಿನ ಸಂಭಾಷಣೆಯ ರೂಪದಲ್ಲಿ ಧರ್ಮದ ವಿವಿಧ ವಿಷಯಗಳ ಬಗ್ಗೆ ಮಾಹಿತಿಗಳಿವೆ.
15 ಲಿಂಗ ಪುರಾಣ
ಲಿಂಗ ಪುರಾಣ 11000 ಶ್ಲೋಕಗಳು ಇರುವ ಈ ಪುರಾಣವು ಶಿವನ ಮಹಾತ್ಮೆ, ಶಿವಲೀಲೆಗಳು,ಲಿಂಗದ ಮಹಿಮೆ ಮುಂತಾದವುಗಳು ಈ ಪುರಾಣದ ಮುಖ್ಯವಸ್ತು. ಲಿಂಗದಿಂದ ಉಂಟಾಗಿರುವ ಸೃಷ್ಟಿ,ಸ್ಥಿತಿ,ಲಯ ರೂಪಗಳಾದ ಭಗವಂತನ ಲೀಲೆಗಳು,ನೀತಿ ಬೋಧೆಗಳು ಈ ಪುರಾಣದಲ್ಲಿ ವಿವರಿಸಲ್ಪಟ್ಟಿದೆ
16 ಗರುಡ ಪುರಾಣ
ಗರುಡ ಪುರಾಣ 19000 ಶ್ಲೋಕಗಳು ಗರುಡ ವಿಷ್ಣುವಿನ ವಾಹನ ಗರುಡನು ಭಗವಾನ್ ವಿಷ್ಣುವಿಗೆ ಜೀವಿಗಳ ಸಾವು, ಯಮಲೋಕ ಯಾತ್ರೆ, ಸ್ವರ್ಗ - ನರಕ ಮತ್ತು ಮೋಕ್ಷದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. ಈ ಎಲ್ಲಾ ಪ್ರಶ್ನೆಗಳಿಗೂ ಭಗವಾನ್ ವಿಷ್ಣು ವಿವರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ದೀರ್ಘ ಮಾಲೆಯಿಂದ ಗರುಡ ಪುರಾಣವನ್ನು ರಚಿಸಲಾಗಿದೆ.
ಗರುಣ ಪುರಾಣದಲ್ಲಿ, ಸಾವಿನ ಮೊದಲ ಮತ್ತು ನಂತರದ ಪರಿಸ್ಥಿತಿಯನ್ನು ಹೇಳಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸಾಮಾನ್ಯವಾಗಿ ಮರಣದ ನಂತರ ಆ ವ್ಯಕ್ತಿಯ ಕುಟುಂಬದಲ್ಲಿ ಓದಲಾಗುತ್ತದೆ .
17 ಕೂರ್ಮ ಪುರಾಣ
ಕೂರ್ಮ ಪುರಾಣ 17000 ಶ್ಲೋಕಗಳು ಇದು ಅಮೃತ ಕಾಗಿ ದೇವತೆಗಳು ಮಂದಾರ ಪರ್ವತವನ್ನು ಕಡೆಯುವಾಗ ವಿಷ್ಣು ಕೂರ್ಮವತಾರ ತಾಳಿದ ವಿಷ್ಣುವಿನ ಕೂರ್ಮಾವತಾರದ ಕಥೆಯನ್ನು ಮುಖ್ಯವಾಗಿ ಹೊಂದಿದೆ. ಇದರಲ್ಲಿ ಚತುವರ್ಣದವರ ಕರ್ತವ್ಯ ಹಾಗೂ ಜವಾಬ್ದಾರಿಗಳು,ಮೋಕ್ಷವಿಚಾರಗಳು ಇತ್ಯಾದಿಗಳು ಅಡಕವಾಗಿದೆ.
18 ಸ್ಕಂದ ಪುರಾಣ
ಸ್ಕಂದ ಪುರಾಣವು 81000 ಶ್ಲೋಕಗಳು ಹಿಂದೂ ಧರ್ಮದ 18 ಪುರಾಣಗಳಲ್ಲಿ 13 ನೇ ಪುರಾಣವಾಗಿದ್ದು, ಇದನ್ನು ಮಹಾಪುರಾಣ ಎಂದೂ ಪರಿಗಣಿಸಲಾಗಿದೆ. ಶಿವ ಪುತ್ರನಾದ ಕಾರ್ತಿಕೇಯನಿಗಿರುವ ನಾನಾ ಹೆಸರುಗಳಲ್ಲಿ ಸ್ಕಂದ ಕೂಡ ಒಂದು. ಈ ಪುರಾಣಕ್ಕೆ ಅವನ ಹೆಸರನ್ನು ಇಡಲಾಗಿದೆ. ಸುಮಾರು 81 ಸಾವಿರ ಶ್ಲೋಕಗಳು ಇರುವ ಈ ಪುರಾಣದಲ್ಲಿ ಕಾಶಿಖಂಡ, ಮಹೇಶ್ವರ ಖಂಡ, ರೇವಖಂಡ, ಆವಂತಿಕಾ ಖಂಡ, ಪ್ರಭಾಸ ಖಂಡ, ಬ್ರಹ್ಮ ಖಂಡ ಮತ್ತು ವೈಷ್ಣವ ಖಂಡ ಎಂಬ ಒಟ್ಟು ಏಳು ವಿಭಾಗಗಳಿವೆ. ಕೆಲವು ವಿದ್ವಾಂಸರು ಆರು ವಿಭಾಗಗಳನ್ನು ಹೇಳುತ್ತಾರೆ. ಇದರಲ್ಲಿ ಭಾರತದ 51 ಶಕ್ತಿಪೀಠಗಳು, 27 ನಕ್ಷತ್ರಗಳು, 18 ನದಿಗಳು, 12 ಜ್ಯೋತಿರ್ಲಿಂಗಗಳು ಸೇರಿದಂತೆ ಪರ್ವತ ಶ್ರೇಣಿಗಳ ಉಲ್ಲೇಖದ ಜೊತೆಗೆ, ಧಾರ್ಮಿಕ ಜ್ಞಾನ ಮತ್ತು ನೀತಿಗಳಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿಸಲಾಗಿದೆ ಅವುಗಳು ನಮ್ಮ ಜೀವನಕ್ಕೆ ಹೆಚ್ಚು ಉಪಯುಕ್ತಕಾರಿಯಾಗಿದೆ.
Comments