ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗಶ್ಲೋಕ - 09

ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 09
ಶ್ಲೋಕ :
ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ ।
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ॥೯॥
 
ಅರ್ಥ:
‘ಇನ್ನೂ ಬಹಳ ಮಂದಿ ವೀರರಿದ್ದಾರೆ. ನನಗಾಗಿ ಬದುಕು ತೆರಲು ಬಂದವರು. ಬಗೆಬಗೆಯ ಆಯುಧಗಳಿಂದ ಹೋರಬಲ್ಲವರು. ಎಲ್ಲರೂ ಕಾಳಗದಲ್ಲಿ ಪಳಗಿದವರು.
 
ವಿವರ ವಿವರಣೆಗಳು : 
ಮೇಲ್ನೋಟಕ್ಕೆ ಈ ಶ್ಲೋಕವನ್ನು ನೋಡಿದರೆ ನಮಗೆ ದುರ್ಯೋಧನ ತನ್ನ ಕಡೆಯ ವೀರರ ಬಗ್ಗೆ ಹೇಳುತ್ತಿರುವಂತೆ ಕಂಡರೂ ಕೂಡಾ, ಇಲ್ಲಿ ಆತ ಹೇಳುತ್ತಿರುವ ವಿಷಯವೇ ಬೇರೆ. ಆತ ಈ ಮಾತನ್ನು ದ್ರೋಣರಲ್ಲಿ ಹೇಳುತ್ತಿದ್ದಾನೆ, ಹಾಗು ಆತ ತನ್ನ ಮಾತನ್ನು ಆರಂಭಿಸಿದ್ದು “ಪಾಂಡವರ ಆಚಾರ್ಯರೇ” ಎಂದು. ಇಲ್ಲಿ ಆತ- ನಮ್ಮ ಕಡೆ ಅನೇಕ ಶೂರರಿದ್ದಾರೆ, ‘ಎಲ್ಲರೂ ತಮ್ಮ ಪ್ರಾಣ ಕೊಡಲು ಬಂದವರು’ ಎಂದು ಕುಹಕದಿಂದ ಹೇಳುತ್ತಿದ್ದಾನೆ. ಅವರೆಲ್ಲರೂ ವಿವಿಧ ಶಸ್ತ್ರಗಳನ್ನು ಪ್ರಯೋಗಿಸಬಲ್ಲರು ಎನ್ನುವ ದುರ್ಯೋಧನ, ತನ್ನ ಪಾಲಿಗೆ ಯಾರೂ ಇಲ್ಲ ಎನ್ನುವ ಭಾವನೆಯನ್ನು ವ್ಯಕ್ತಪಡಿಸುತ್ತಾನೆ.


Comments