ಭಗವದ್ಗೀತೆ ಅಧ್ಯಾಯ-1 ಅರ್ಜುನ ವಿಷಾದ ಯೋಗ
ಶ್ಲೋಕ - 07
ಶ್ಲೋಕ :
ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ ನಿಬೋಧ ದ್ವಿಜೋತ್ತಮ ।
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ॥೭॥
ಅರ್ಥ :
ಓ ದ್ವಿಜೋತ್ತಮ, ನಮ್ಮ ಕಡೆಯ ಹೆಚ್ಚಾಳುಗಳು, ನನ್ನ ಪಡೆಯ ಮುಂದಾಳುಗಳು ಯಾರಿದ್ದಾರೆ. ಅವರ ಬಗೆಗೆ ಕೇಳು. ನಿನ್ನ ಸನ್ನೆಗೆಂದು ಅವರನ್ನು ಹೆಸರಿಸುತ್ತಿದ್ದೇನೆ.
ವಿವರ ವಿವರಣೆಗಳು :
ಒಬ್ಬ ವೀರನಾದವನು ತನ್ನ ಶಕ್ತಿ-ಸಾಮರ್ಥ್ಯ ಕಡಿಮೆ ಇದ್ದರೂ ಕೂಡಾ ಯುದ್ಧಕಾಲದಲ್ಲಿ ಯುಕ್ತಿಯಿಂದ ಕಾರ್ಯ ನಿರ್ವಹಿಸುತ್ತಾನೆ. ಮುಂದಾಳುವಾದವನು ತನ್ನ ಸೈನ್ಯವನ್ನು, ತನ್ನ ಹಿಂಬಾಲಕರನ್ನು ಹುರಿದುಂಬಿಸುತ್ತಾನೆ. ತಾವು ಶತ್ರು ಸೈನ್ಯಕ್ಕಿಂತ ಶಕ್ತರು ಎನ್ನುವ ಆತ್ಮವಿಶ್ವಾಸವನ್ನು ತನ್ನ ಸೈನ್ಯದಲ್ಲಿ ತುಂಬುತ್ತಾನೆ. ಆದರೆ ಇಲ್ಲಿ ದುರ್ಯೋಧನ ತನ್ನ ಸೇನಾಧಿಪತಿ ಭೀಷ್ಮರಲ್ಲಿ ಪರಾಮಾರ್ಷೆ ಮಾಡುವುದನ್ನು ಬಿಟ್ಟು, ಆಚಾರ್ಯ ದ್ರೋಣರಲ್ಲಿ ಶತ್ರು ಸೈನ್ಯದ ವೀರರ ಬಗ್ಗೆ ವಿಶಿಷ್ಟವಾಗಿ ಮಾತನಾಡಿ, ‘ನಿಮ್ಮ ಸನ್ನೆಗೆಂದು ನಮ್ಮ ಸೈನ್ಯದ ಮುಂದಾಳುಗಳ ಬಗ್ಗೆ ಹೇಳುತ್ತೇನೆ’ ಎನ್ನುತ್ತಾನೆ!
ಮುಂದುವರಿಯುವುದು..
Comments